ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

6 ವರ್ಷದ ಬಳಿಕ ಗೋಲ್ಡನ್ ಡಕ್ ಗಳಿಸಿದ ಫಾಫ್ ಡು ಪ್ಲೆಸಿಸ್

IPL 2020: Faf du Plessis out for a Golden duck for first time since 2014

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಉತ್ತಮ ಆಟಕ್ಕೆ ಹೆಸರಾಗಿರುವ ದಕ್ಷಿಣ ಆಫ್ರಿಕಾ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರ ಫಾಫ್ ಡು ಪ್ಲೆಸಿಸ್ ಅವರು ಇಂದು ಬೇಡದ ಅಂಕಿ ಅಂಶವನ್ನು ದಾಖಲಿಸಿದ್ದಾರೆ.

ಐಪಿಎಲ್ 2020 ರಲ್ಲಿ ಶೇನ್ ವಾಟ್ಸನ್ ಹಾಗೂ ಫಾಫ್ ಡು ಪ್ಲೆಸಿಸ್ ಅವರು ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಚೆನ್ನೈ ತಂಡ ಗೆಲುವಿನ ಹಾದಿಗೆ ಮರಳಲು ತಿಣುಕಾಡುತ್ತಿದೆ. 7 ಪಂದ್ಯಗಳಲ್ಲಿ 2 ಪಂದ್ಯಗಳನ್ನು ಮಾತ್ರ ಗೆದ್ದಿರುವ ಚೆನ್ನೈ ತಂಡಕ್ಕೆ ಅಕ್ಟೋಬರ್ 13ರಂದು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಶಾರ್ಜಾದಲ್ಲಿ ಗೆಲುವು ಸಾಧಿಸುವುದು ಅನಿವಾರ್ಯವಾಗಿತ್ತು. ಅದರಂತೆ ಚೆನ್ನೈ ತಂಡ 20 ರನ್ ಗಳಿಂದ ಗೆಲುವು ಸಾಧಿಸಿದೆ.

ಚೆನ್ನೈಗೆ Mid season Transferನಲ್ಲಿ ಬೇಕಿರುವ 4 ಕ್ರಿಕೆಟರ್ಸ್ಚೆನ್ನೈಗೆ Mid season Transferನಲ್ಲಿ ಬೇಕಿರುವ 4 ಕ್ರಿಕೆಟರ್ಸ್

ಇದೇ ಮೊದಲ ಬಾರಿಗೆ ಸ್ಯಾಮ್ ಕರನ್ ಜೊತೆಗೆ ಕಣಕ್ಕಿಳಿದ ಫಾಫ್ ಡುಪ್ಲೆಸಿಸ್ ಪಂದ್ಯದ ಮೊದಲ ಎಸೆತದಲ್ಲೇ ಶೂನ್ಯ ಸುತ್ತಿ ಪೆವಿಲಿಯನ್ ಗೆ ತೆರಳಿದರು. ಸಂದೀಪ್ ಶರ್ಮ ಮೊದಲ ಎಸೆತದಲ್ಲಿ ಫಾಫ್ ಅವರು ವಿಕೆಟ್ ಕೀಪರ್ ಜಾನಿ ಬೈರ್ಸ್ಟೋಗೆ ಕ್ಯಾಚಿತ್ತು ಔಟಾದರು.

ಗೋಲ್ಡನ್ ಡಕ್
ಫಾಫ್ ಡುಪ್ಲೆಸಿಸ್ ಅವರು ಇಲ್ಲಿ ತನಕ ಐಪಿಎಲ್ ಇತಿಹಾಸದಲ್ಲಿ ಕೇವಲ ಮೂರು ಬಾರಿ ಮಾತ್ರ ಡಕ್ ಔಟ್ ಆಗಿದ್ದಾರೆ. 2014ರ ನಂತರ 2020ರಲ್ಲೇ ಸೊನ್ನೆ ಸುತ್ತಿ ಔಟಾಗಿದ್ದಾರೆ.

ಐಪಿಎಲ್ 2020ರಲ್ಲಿ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಕಾಣಿಸಿಕೊಂಡ ಚೆನ್ನೈ ತಂಡದ ಏಕೈಕ ಆಟಗಾರರಾಗಿದ್ದಾರೆ. 8 ಪಂದ್ಯಗಳಲ್ಲಿ 3 ಅರ್ಧಶತಕದೊಂದಿಗೆ 307 ರನ್ ಗಳಿಸಿದ್ದು 51.16 ರನ್ ಸರಾಸರಿ ಹಾಗೂ 146.88 ಸ್ಟ್ರೈಕ್ ರೇಟ್ ಹೊಂದಿದ್ದಾರೆ.

ಐಪಿಎಲ್ ನಲ್ಲಿ ಒಟ್ಟು 31ಡಕ್ ದಾಖಲಾಗಿದ್ದು, ಈ ಪೈಕಿ 1 ಡೈಮೆಂಡ್ ಡಕ್(ಒಂದು ಎಸೆತ ಎದುರಿಸದೆ ಡಕ್ ಔಟ್), 11 ಗೋಲ್ಡನ್ ಡಕ್, 11 ಸಿಲ್ವರ್ ಡಕ್, 7 ಬ್ರೌಂಜ್ ಡಕ್, 1- 5ನೇ ಎಸೆತದಲ್ಲಿ ಔಟ್ ದಾಖಲಾಗಿದೆ. ಅತಿ ಹೆಚ್ಚು ಡಕ್ ಹರ್ಭಜನ್ ಸಿಂಗ್(13) ಹಾಗೂ ಪಾರ್ಥೀವ್ ಪಟೇಲ್ (13) ಹೆಸರಿನಲ್ಲಿದೆ. ದಾಖಲಿಸಿದ್ದಾರೆ.

Story first published: Wednesday, October 14, 2020, 10:26 [IST]
Other articles published on Oct 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X