ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆರ್‌ಸಿಬಿ ಗೆಲುವಿಗಾಗಿ ಧಾರವಾಡದಲ್ಲಿ ಅಭಿಮಾನಿಯಿಂದ ವಿಶೇಷ ಪೂಜೆ!

IPL 2020: Fans Offered Special Puja at Durgadevi Temple in Dharwad for RCB Victory

ಬೆಂಗಳೂರು: ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವಿನ ಲಯಕ್ಕೆ ಬಂದಿದೆ. ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿ ಉತ್ತಮ ಪ್ರದರ್ಶನ ನೀಡುತ್ತಿದೆ. ಒಂದು ಸಾರಿಯೂ ಕಪ್‌ ಗೆಲ್ಲದ ತಂಡಗಳ ಸಾಲಿನಲ್ಲಿ ಗುರುತಿಸಿಕೊಂಡಿದ್ದ ಆರ್‌ಸಿಬಿ ಈ ಬಾರಿ ಕಪ್‌ ಗೆಲ್ಲುವ ಆಸೆ ಮೂಡಿಸಿದೆ. ತಂಡದ ಪ್ರಮುಖ ಆಟಗಾರರಾದ ಕೊಹ್ಲಿ, ಎಬಿ ಡಿ ವಿಲಿಯರ್ಸ್, ಕ್ರಿಸ್ ಮೋರಿಸ್, ದೇವದತ್ ಪಡಿಕ್ಕಲ್, ಯುಜುವೇಂದ್ರ ಚಾಹಲ್ ಉತ್ತಮ ಪ್ರದರ್ಶನ ನೀಡುತ್ತಿರುವುದು ಅಭಿಮಾನಿಗಳಿಗೆ ಖುಷಿ ತಂದಿದೆ.

ಐಪಿಎಲ್ ಫೈನಲ್ ತಂಡಗಳ ಹೆಸರಿಸಿದ ಯುವಿಗೆ ಚಾಹಲ್ ತರ್ಲೆ ಟ್ವೀಟ್ಐಪಿಎಲ್ ಫೈನಲ್ ತಂಡಗಳ ಹೆಸರಿಸಿದ ಯುವಿಗೆ ಚಾಹಲ್ ತರ್ಲೆ ಟ್ವೀಟ್

ವಿಶ್ವ ಮಟ್ಟದ ಕ್ರೀಡೆಯನ್ನು ತೆಗೆದುಕೊಂಡರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬಲು ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಸೆಪ್ಟೆಂಬರ್ ತಿಂಗಳ ಯೂಟ್ಯೂಬ್ ವೀಕ್ಷಕರ ಅಂಕಿ-ಅಂಶಗಳ ಪ್ರಕಾರ ಆರ್‌ಸಿಬಿ ವೀಕ್ಷಕರ ಸಂಖ್ಯೆ 69.4 ಮಿಲಿಯನ್‌ಗೂ ಹೆಚ್ಚು.

ಸೂಪರ್ ಓವರ್ ಟೈ ಆದ್ರೆ?!: 2020ರ ಸೂಪರ್ ಓವರ್ ನಿಯಮಗಳಿವು!ಸೂಪರ್ ಓವರ್ ಟೈ ಆದ್ರೆ?!: 2020ರ ಸೂಪರ್ ಓವರ್ ನಿಯಮಗಳಿವು!

ಸೆಪ್ಟೆಂಬರ್‌ನಲ್ಲಿ ಯೂಟ್ಯೂಬ್‌ ವೀಕ್ಷಕರ ಅಂಕಿ-ಅಂಶಗಳಲ್ಲಿ ದ್ವಿತೀಯ ಸ್ಥಾನದಲ್ಲಿರುವ ಎಫ್‌ಸಿ ಬಾರ್ಸಿಲೋನಾಕ್ಕೆ 58.3 ಮಿಲಿಯನ್ ವೀಕ್ಷಕರಿದ್ದರು.

ದುರ್ಗಾದೇವಿ ದೇವಸ್ಥಾನದಲ್ಲಿ ಪೂಜೆ

ದುರ್ಗಾದೇವಿ ದೇವಸ್ಥಾನದಲ್ಲಿ ಪೂಜೆ

ಕರ್ನಾಟಕದ ತಂಡ ಆರ್‌ಸಿಬಿ ಈ ಬಾರಿಯ ಐಪಿಎಲ್‌ನಲ್ಲಿ ಕಪ್ ಗೆಲ್ಲುವಂತೆ ಅಭಿಮಾನಿಯೊಬ್ಬರು ವಿಶೇಷ ಪೂಜೆ ಮಾಡಿಸಿದ್ದಾರೆ. ಧಾರವಾಡದ ದುರ್ಗಾದೇವಿ ದೇವಸ್ಥಾನದಲ್ಲಿ ಅಭಿಮಾನಿಯೊಬ್ಬರು ಆರ್‌ಸಿಬಿ ಗೆಲುವಿಗಾಗಿ ಪೂಜೆ ಮಾಡಿಸಿರುವ ರಶೀದಿ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ.

ಅಭಿಮಾನಿಯ ಹುಚ್ಚುತನ

ಧಾರವಾಡದ ಕಿಲ್ಲಾದಲ್ಲಿರುವ ದುರ್ಗಾದೇವಿ ದೇವಸ್ಥಾನದಲ್ಲಿ ಆರ್‌ಸಿಬಿ ಜಯಕ್ಕಾಗಿ ಪ್ರಾರ್ಥಿಸಿ ಅಭಿಮಾನಿಯೊಬ್ಬರು 101 ರೂ.ಗಳ ಅಭಿಷೇಕ ಮಾಡಿಸಿದ್ದಾರೆ. ಪೂಜೆಯ ರಶೀದಿ ಈ ಟ್ವಿಟರ್‌ನಲ್ಲಿ ಓಡಾಡುತ್ತಿದೆ. ಆರ್‌ಸಿಬಿ ಅಭಿಮಾನಿ ಪೂಜೆಗಾಗಿ ವ್ಯಯಿಸಿದ್ದು 101 ರೂ. ಇರಬಹುದು. ಇದೊಂಥರಾ ಹುಚ್ಚುತನ ಅನ್ನಿಸಲೂಬಹುದು. ಆದರೆ ಆ ಪ್ರೀತಿಗೆ-ಅಭಿಮಾನಕ್ಕೆ ಬೆಲೆ ಕಟ್ಟಲಾದೀತೆ?

ಅಗ್ರ 3ನೇ ಸ್ಥಾನದಲ್ಲಿ ಆರ್‌ಸಿಬಿ

ಅಗ್ರ 3ನೇ ಸ್ಥಾನದಲ್ಲಿ ಆರ್‌ಸಿಬಿ

ಯುನೈಟೆಡ್ ಅರಬ್‌ನಲ್ಲಿ ನಡೆಯುತ್ತಿರುವ 13ನೇ ಆವೃತ್ತಿಯ ಐಪಿಎಲ್‌ಯ ಆರಂಭದಲ್ಲಿ ಆರ್‌ಸಿಬಿ ತಂಡ, ಕನ್ನಡಿಗರು ಹೆಚ್ಚಿರುವ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಹೀನಾಯ ಸೀಲು ಕಂಡು ಹಿನ್ನಡೆ ಕಂಡಿತ್ತಾದರೂ ಮತ್ತೆ ಗೆಲುವಿನ ದಾರಿಗೆ ಬಂದಿದೆ. ಆರ್‌ಸಿಬಿ ಈಗ ಐಪಿಎಲ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಈವರೆಗೆ ಆಡಿರುವ 9 ಪಂದ್ಯಗಳಲ್ಲಿ 6 ಪಂದ್ಯಗಳನ್ನು ಗೆದ್ದು 12 ಅಂಕ ಕಲೆ ಹಾಕಿದೆ.

ಆರ್‌ಸಿಬಿಗಿನ್ನು 5 ಪಂದ್ಯಗಳು ಬಾಕಿ!

ಆರ್‌ಸಿಬಿಗಿನ್ನು 5 ಪಂದ್ಯಗಳು ಬಾಕಿ!

ಐಪಿಎಲ್ ಲೀಗ್ ಹಂತಗಳಲ್ಲಿ ಪ್ರತೀ ತಂಡಗಳಿಗೂ ಒಟ್ಟು 14 ಪಂದ್ಯಗಳಿರುತ್ತದೆ. ಆರ್‌ಸಿಬಿ ಈಗಾಗಲೇ 9 ಪಂದ್ಯಗಳು ಆಡಿರುವುದರಿಂದ 5 ಪಂದ್ಯಗಳು ಬಾಕಿ ಉಳಿದಿದೆ. 21ರ ಅಕ್ಟೋಬರ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ, 25 ಅಕ್ಟೋಬರ್‌ಗೆ ಚೆನ್ನೈ ಸೂಪರ್ ಕಿಂಗ್ಸ್, ಅಕ್ಟೋಬರ್ 28ಕ್ಕೆ ಮುಂಬೈ ಇಂಡಿಯನ್ಸ್, ಅಕ್ಟೋಬರ್ 31ಕ್ಕೆ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ, ನವೆಂಬರ್ 2ಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್‌ಸಿಬಿ ಸ್ಪರ್ಧಿಸಲಿದೆ.

Story first published: Wednesday, October 21, 2020, 14:32 [IST]
Other articles published on Oct 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X