ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಮೊದಲ ಓವರ್‌ನಲ್ಲಿ ವಿಕೆಟ್ ಕೀಳುವುದರಲ್ಲೂ ಮುಂಬೈ ಬೌಲರ್‌ಗಳ ದಾಖಲೆ

IPL 2020 final: Mumbai bowlers have taken 8 wickets in the 1st over of innings in this season

ಐಪಿಎಲ್ ಫೈನಲ್‌ನಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಹಣಾಹಣಿನ್ನು ನಡೆಸಿದೆ. ಟಾಸ್ ಗೆದ್ದ ಡೆಲ್ಲಿ ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತಾದರೂ ಮೊದಲ ಎಸೆತದಲ್ಲೇ ವಿಕೆಟ್ ಕಳೆದುಕೊಂಡು ಆಘಾತವನ್ನು ಅನುಭವಿಸಿತು. ಮುಂಬೈ ವೇಗಿ ಟ್ರೆಂಟ್ ಬೋಲ್ಟ್ ಪಂದ್ಯದ ಮೊದಲ ಎಸೆತದಲ್ಲೇ ಡೆಲ್ಲಿ ಆರಂಭಿಕ ಆಟಗಾರ ಮಾರ್ಕಸ್ ಸ್ಟೋಯ್ನಿಸ್ ವಿಕೆಟ್ ಕಬಳಿಸಿ ಮುಂಬೈಗೆ ಮುನ್ನಡೆ ಒದಗಿಸಿದರು.

ಮುಂಬೈ ಬೌಲರ್‌ಗಳು ಬೌಲಿಂಗ್ ಸಂದರ್ಭದಲ್ಲಿ ಮೊದಲ ಓವರ್‌ನಲ್ಲೇ ವಿಕೆಟ್ ಪಡೆಯುತ್ತಿರುವುದು ಈ ಟೂರ್ನಿಯಲ್ಲಿ 8ನೇ ಬಾರಿಯಾಗಿದೆ. ಈ ಮೂಲಕ ಮುಂಬೈ ಬೌಲಿಂಗ್ ವಿಭಾಗ ಯಾವ ರೀತಿಯಲ್ಲಿ ಎದುರಾಳಿಗಳ ಮೇಲೆ ಸವಾರಿ ಮಾಡಿದೆ ಎಂಬುದಕ್ಕೆ ದೃಷ್ಟಾಂತವಾಗಿದೆ.

ಪವರ್ ಪ್ಲೇನಲ್ಲಿ ಹೆಚ್ಚು ವಿಕೆಟ್: ಜಾನ್ಸನ್ ದಾಖಲೆ ಸರಿಗಟ್ಟಿದ ಟ್ರೆಂಟ್ ಬೋಲ್ಟ್ಪವರ್ ಪ್ಲೇನಲ್ಲಿ ಹೆಚ್ಚು ವಿಕೆಟ್: ಜಾನ್ಸನ್ ದಾಖಲೆ ಸರಿಗಟ್ಟಿದ ಟ್ರೆಂಟ್ ಬೋಲ್ಟ್

ಟ್ರೆಂಟ್ ಬೋಲ್ಟ್ ಅವರ ಪ್ರದರ್ಶನ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಆರಂಭಿಕ ಯಶಸ್ಸು ಪಡೆಯಲು ಟೂರ್ನಿಯುದ್ದಕ್ಕೂ ಸಾಧ್ಯವಾಗಿಸಿದೆ. ಇದು ಮುಂಬೈ ಇಂಡಿಯನ್ಸ್‌ಗೆ ಎದುರಾಳಿ ತಂಡಗಳಿಂದ ಮೇಲುಗೈ ಸಾಧಿಸುವುದಕ್ಕೂ ಕಾರಣವಾಗಿದೆ. ಈ ಮೂಲಕ ಮುಂಬೈ ಬೌಲರ್‌ಗಳು 8ನೇ ಬಾರಿಗೆ ಮೊದಲನೇ ಓವರ್‌ನಲ್ಲೇ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

ಇನ್ನು ಡೆಲ್ಲಿ ವಿರುದ್ಧದ ಫೈನಲ್ ಪಂದ್ಯದಲ್ಲಿ ಮೊದಲ ಎಸೆತಕ್ಕೇ ಸ್ಟೋಯ್ನಿಸ್ ವಿಕೆಟ್ ಪಡೆಯುವ ಮೂಲಕ ಐಪಿಎಲ್ ಫೈನಲ್ ಪಂದ್ಯಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ಸಾಧನೆಯನ್ನು ಮಾಡಿದ್ದಾರೆ. ಐಪಿಎಲ್ ಫೈನಲ್ ಪಂದ್ಯದಲ್ಲಿ ಮೊದಲ ಎಸೆತಕ್ಕೇ ಪಡೆದ ಮೊದಲ ತಂಡವಾಗಿದೆ ಮುಂಬೈ.

ಐಪಿಎಲ್ ಫೈನಲ್: ಮುಂಬೈಗೆ ಸಾಧಾರಣ ರನ್ ಗುರಿ ನೀಡಿದ ಡೆಲ್ಲಿಐಪಿಎಲ್ ಫೈನಲ್: ಮುಂಬೈಗೆ ಸಾಧಾರಣ ರನ್ ಗುರಿ ನೀಡಿದ ಡೆಲ್ಲಿ

ಇನ್ನು ಮೊದಲ ಓವರ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ತಂಡದ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ರಾಜಸ್ಥಾನ್ ರಾಯಲ್ಸ್ ಇದೆ. ಈ ಬಾರಿಯ ಟೂರ್ನಿಯಲ್ಲಿ ರಾಜಸ್ಥಾನ್ ಬೌಲರ್‌ಗಳು 5 ವಿಕೆಟ್‌ಗಳನ್ನು ಮೊದಲ ಓವರ್‌ನಲ್ಲೇ ಪಡೆದಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಒಮದು ಬಾರಿಯಷ್ಟೇ ಈ ಸಾಧನೆಯನ್ನು ಮಾಡಿದೆ. ಕುತೂಹಲಕಾರಿ ವಿಚಾರವೆಂದರೆ ಟೂರ್ನಿಯ ಪ್ರತಿ ತಮಡವೂ ಕೂಡ ಕನಿಷ್ಟ ಒಂದು ಬಾರಿ ಮೊದಲ ಓವರ್‌ನಲ್ಲೇ ವಿಕೆಟ್ ಪಡೆದುಕೊಂಡಿದೆ.

Story first published: Tuesday, November 10, 2020, 21:58 [IST]
Other articles published on Nov 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X