ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020 ಫೈನಲ್: ನಾಯಕನನ್ನು ರಕ್ಷಿಸಲು ರನ್‌ಔಟ್ ಆದ ಸೂರ್ಯಕುಮಾರ್‌ಗೆ ಟ್ವಿಟ್ಟರ್‌ನಲ್ಲಿ ಪ್ರಶಂಸೆ

IPL 2020 FINAL: Twitter praises Suryakumars Selfless Act of Sacrificing his Wicket To Save Skipper

ಸೂರ್ಯಕುಮಾರ್ ಯಾದವ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಹೆಚ್ಚಾಗಿ ಚರ್ಚೆಗೆ ಒಳಗಾದ ಆಟಗಾರ. ಮುಂಬೈ ಇಂಡಿಯನ್ಸ್ ಪರವಾಗಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾದರು. ಅಷ್ಟಾಗಿಯೂ ಟೀಮ್ ಇಂಡಿಯಾಗೆ ಆಯ್ಕೆಯಾಗದ ಕಾರಣ ಸೂರ್ಯಕುಮಾರ್ ಯಾದವ್ ಪರವಾಗಿ ಸಾಕಷ್ಟು ಧ್ವನಿ ಕೇಳಿ ಬಂದಿತ್ತು.

ಡೆಲ್ಲಿ ವಿರುದ್ಧದ ಫೈನಲ್ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಮತ್ತೊಮ್ಮೆ ಅಭಿಮಾನಿಗಳ ಹೃದಯಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಈ ಬಾರಿ ಸೂರ್ಯಕುಮಾರ್ ರನ್ ಬಾರಿಸುವ ಮೂಲಕ ಮನಗೆಲ್ಲುವ ಬದಲಾಗಿ ಔಟ್ ಆಗುವ ಮೂಲಕ ಪ್ರೀತಿ ಸಂಪಾದಿಸಿದ್ದಾರೆ.

ಐಪಿಎಲ್ 2020: ವಿನ್ನರ್, ರನ್ನರ್ ಹಾಗೂ ಪ್ರಶಸ್ತಿ ಪಡೆದ ಆಟಗಾರರಿಗೆ ದೊರೆತ ಪ್ರಶಸ್ತಿ ಮೊತ್ತವೆಷ್ಟು?ಐಪಿಎಲ್ 2020: ವಿನ್ನರ್, ರನ್ನರ್ ಹಾಗೂ ಪ್ರಶಸ್ತಿ ಪಡೆದ ಆಟಗಾರರಿಗೆ ದೊರೆತ ಪ್ರಶಸ್ತಿ ಮೊತ್ತವೆಷ್ಟು?

ರೋಹಿತ್ ರನ್‌ಔಟ್ ಸಾಧ್ಯತೆ

ತನ್ನ ನಿಸ್ವಾರ್ಥದ ವರ್ತನೆಗಾಗಿ ಸೂರ್ಯಕುಮಾರ್ ಯಾದವ್ ಟ್ವಿಟ್ಟರ್‌ನಲ್ಲಿ ಮತ್ತೊಮ್ಮೆ ಸದ್ದು ಮಾಡಿದ್ದಾರೆ. ಡೆಲ್ಲಿ ವಿರುದ್ಧದ ಪಂದ್ಯದಲ್ಲಿರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ನಡೆಸುತ್ತಿದ್ದ ವೇಳೆ ರೋಹಿತ್ ರನ್‌ಔಟ್ ಆಗುವ ಸಂಭವ ಇತ್ತು. ಆದರೆ ಆಗ ನಾಯಕನ ಬದಲಾಗಿ ಸೂರ್ಯಕುಮಾರ್ ವಿಕೆಟ್ ಒಪ್ಪಿಸಿ ಫೆವಿಲಿಯನ್‌ಗೆ ಸಾಗಿದರು.

ಇಲ್ಲದ ರನ್ ಕದಿಯಲು ಮುಂದಾದ ರೋಹಿತ್

ಡೆಲ್ಲಿ ನೀಡಿದ ಗುರಿಯನ್ನು ಉತ್ತಮವಾಗಿ ಬೆನ್ನಟ್ಟುತ್ತಿದ್ದ ವೇಳೆ ಇಲ್ಲದ ರನ್ ಕದಿಯಲು ನಾಯಕ ರೋಹಿತ್ ಶರ್ಮಾ ಮುಂದಾಗಿದ್ದರು. ಆದರೆ ಸೂರ್ಯಕುಮಾರ್ ಯಾದವ್ ಇನ್ನೂ ಕ್ರೀಸ್ ಬಿಟ್ಟಿರಲಿಲ್ಲ. ಈ ಸಂದರ್ಭದಲ್ಲಿ ಸೂರ್ಯಕುಮಾರ್ ಉತ್ತಮವಾಗಿ ಆಡುತ್ತಿದ್ದ ನಾಯಕ ರೋಹಿತ್ ಔಟಾಗುವುದನ್ನು ತಪ್ಪಿಸಲು ಕ್ರೀಸ್ ಬಿಟ್ಟು ಓಡಿದರು. ಹಾಗಾಗಿ ತಾವೇ ವಿಕೆಟ್ ಒಪ್ಪಿಸಿದರು.

SKY ನಿಸ್ವಾರ್ಥ ವರ್ತನೆ

ಈ ಬಗ್ಗೆ ಪ್ರತಿಕ್ರಿಯಿಸಿದ ಸೂರ್ಯಕುಮಾರ್ ನಾಯಕ ಆ ಸಂದರ್ಭದಲ್ಲಿ ಉತ್ತಮವಾಗಿ ಆಡುತ್ತಿದ್ದರು. ಹಾಗಾಗಿ ಅವರ ವಿಕೆಟ್ ಕಳೆದುಕೊಳ್ಳುವ ಬದಲಾಗಿ ನಾವೇ ಔಟಾಗಲು ತೀರ್ಮಾನಿಸಿದೆ ಎಂದರು. ಇದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.

500+ ಗಳಿಸುವ ಅವಕಾಶ ಕಳೆದುಕೊಂಡ ಯಾದವ್

ಸೂರ್ಯ ಕುಮಾರ್ ಈ ಹೀಗೆ ವಿಕೆಟ್ ಒಪ್ಪಿಸುವ ಮೂಲಕ ಮಹತ್ವದ ಮೈಲಿಗಲ್ಲೊಂದನ್ನು ಕೂಡ ತಪ್ಪಿಸಿಕೊಂಡಿದ್ದಾರೆ. ಐಪಿಎಲ್‌ನ ಈ ಬಾರಿಯ ಆವೃತ್ತಿಯಲ್ಲಿ 500+ ರನ್ ಗಳಿಸುವ ಅವಕಾಶ ಸೂರ್ಯಕುಮಾರ್ ಯಾದವ್ ಮುಂದಿತ್ತು. ಆದರೆ ಕೇವಲ 20 ರನ್‌ಗಳಿಂದ ಇದನ್ನು ತಪ್ಪಿಸಿಕೊಂಡರು.

Story first published: Wednesday, November 11, 2020, 11:48 [IST]
Other articles published on Nov 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X