ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್-2020 : ಅತಿ ಹೆಚ್ಚು ಲಾಭ-ನಷ್ಟದ ತಂಡಗಳು ಯಾವುವು?

ಬೆಂಗಳೂರು, ಡಿಸೆಂಬರ್ 13: 2020 ರಲ್ಲಿ ನಡೆಯಲಿರುವ ರೋಚಕ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಾವಳಿಯ ಹರಾಜು ಪ್ರಕ್ರಿಯೆಯು ಇದೇ ಡಿಸೆಂಬರ್ 19 ರಂದು ಕೋಲ್ಕತಾದಲ್ಲಿ ಜರುಗಲಿದೆ. ಎಂಟು ಶ್ರೀಮಂತ ಐಪಿಎಲ್ ಫ್ರಾಂಚೈಸಿ ಕಂಪನಿಗಳು ಅತ್ಯಂತ ಪ್ರತಿಭಾವಂತ ಆಟಗಾರರಿಗಾಗಿ ಬಿಡ್ ಮಾಡಲಿವೆ.

ಕಿಂಗ್ಸ್ ಎಲೆವನ್ ಪಂಜಾಬ್ ತಂಡವು ಅತಿ ಹೆಚ್ಚು ಅಂದರೆ 42.70 ಕೋಟಿ ರೂ. ಮೌಲ್ಯವನ್ನು ಹೊಂದಿದ್ದರೆ, ಕಳೆದ ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಅತಿ ಕಡಿಮೆ ಮೌಲ್ಯವನ್ನು ಹೊಂದಿದೆ. ಐಪಿಎಲ್‌ನ 8 ತಂಡಗಳಲ್ಲಿ 73 ಸ್ಥಾನಗಳು ಮಾತ್ರವೇ ಖಾಲಿಯಾಗಿದ್ದು. ಸ್ಥಾನಗಳನ್ನಷ್ಟೇ ಭರ್ತಿ ಮಾಡಿಕೊಳ್ಳುವ ಅವಕಾಶ ಇದೆ.

ಆದಾಗ್ಯೂ ಐಪಿಎಲ್ ತಂಡಗಳ ಒಟ್ಟಾರೆ ಹಣಕಾಸು ಸ್ಥಿತಿಗತಿಗಳು ಅವುಗಳ ಲಾಭ ಗಳಿಸುವಿಕೆ ಹಾಗೂ ನಷ್ಟಗಳ ಆಧಾರದಲ್ಲಿ ಲೆಕ್ಕ ಹಾಕಲ್ಪಡುತ್ತವೆ. ಐಪಿಎಲ್ ತಂಡಗಳ ಹಣಕಾಸು ಸ್ಥಿತಿಗತಿಗಳ ಬಗ್ಗೆ ಮೈಖೇಲ್ ಅಧ್ಯಯನ ಮಾಡಿದ್ದು ಅದರ ವಿವರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.

ಮುಂಬೈ ಇಂಡಿಯನ್ಸ್- ಲಾಭದಲ್ಲಿರುವ ತಂಡ

ಮುಂಬೈ ಇಂಡಿಯನ್ಸ್- ಲಾಭದಲ್ಲಿರುವ ತಂಡ

ಮುಂಬೈ ಇಂಡಿಯನ್ಸ್: ಈ ತಂಡವು ಉದ್ಯಮಿ ಮುಕೇಶ ಅಂಬಾನಿ ಹಾಗೂ ಅವರ ಪತ್ನಿ ನೀತಾ ಅಂಬಾನಿ ಅವರ ಒಡೆತನದಲ್ಲಿದ್ದು, ಕಳೆದ ನಾಲ್ಕು ಸೀಸನ್‌ಗಳಿಂದಲೂ ಉತ್ತಮ ಲಾಭ ಗಳಿಸುತ್ತಿದೆ. ಮುಂಬೈ ಇಂಡಿಯನ್ಸ್ ಆಗಾಗ ಐಪಿಎಲ್ ಟ್ರೋಫಿಯನ್ನು ಗೆಲ್ಲುತ್ತಲೇ ಬಂದಿದ್ದು, ಸಹಜವಾಗಿಯೇ ಲಾಭವನ್ನೂ ಗಳಿಸಿದೆ. ಪ್ರಸ್ತುತ ಕಂಪನಿ 809 ಕೋಟಿ ರೂ. ಮೌಲ್ಯ ಹೊಂದಿದ್ದು, ತಂಡದ ನಾಯಕ ರೋಹಿತ್ ಶರ್ಮಾ ಕೂಡ ಆಟದಲ್ಲಿ ಹಾಗೂ ಹೊರಗಡೆ ಸಾಕಷ್ಟು ಉನ್ನತ ಮಟ್ಟಕ್ಕೇರಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ -ಲಾಭದಲ್ಲಿರುವ ತಂಡ

ಚೆನ್ನೈ ಸೂಪರ್ ಕಿಂಗ್ಸ್ -ಲಾಭದಲ್ಲಿರುವ ತಂಡ

ಮೂರು ಬಾರಿ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಬೃಹತ್ ಅಭಿಮಾನಿಗಳ ಬಳಗವೇ ಇದೆ. ಎರಡು ವರ್ಷಗಳ ಕಾಲ ತಂಡವನ್ನು ಪಂದ್ಯಾವಳಿಯಿಂದ ಬ್ಯಾನ್ ಮಾಡಿದಾಗ ತಂಡದ ವರ್ಚಸ್ಸು ಬಹಳ ಕುಂದಿತ್ತು. ಆದರೆ 2018 ರಲ್ಲಿ ಐಪಿಎಲ್ ಟ್ರೋಫಿ ಗೆದ್ದಾಗ ಹಾಗೂ 2019 ರಲ್ಲಿ ಫೈನಲ್ ತಲುಪಿದಾಗ ತಂಡದ ವರ್ಚಸ್ಸು ಮತ್ತೆ ಕಳೆಗಟ್ಟಿತು. ಇನ್ನು ಭಾರತೀಯರ ಮೆಚ್ಚಿನ ಆಟಗಾರ ಎಂ.ಎಸ್. ಧೋನಿ ತಂಡದಲ್ಲಿರುವುದು ಕೂಡ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ.

ಸನ್‌ರೈಸರ್ಸ್ ಹೈದರಾಬಾದ್

ಸನ್‌ರೈಸರ್ಸ್ ಹೈದರಾಬಾದ್

ಈ ತಂಡ ಒಂದು ರೀತಿಯಲ್ಲಿ ಡಾರ್ಕ್ ಹಾರ್ಸ್ ರೀತಿಯಲ್ಲಿದೆ. ಇತರ ತಂಡಗಳಿಗೆ ಹೋಲಿಸಿದರೆ ಹೊಸ ತಂಡವಾಗಿರುವ ಸನ್‌ರೈಸರ್ಸ್ ಶೇ 9 ರಷ್ಟು ಬೆಳವಣಿಗೆ ದರವನ್ನು ದಾಖಲಿಸಿದೆ. ಒಂದು ಬಾರಿ ಚಾಂಪಿಯನ್ ಆಗಿರುವ ಈ ತಂಡ ಯಾವಾಗಲೂ ಪ್ಲೇ ಆಫ್ ಹಂತವನ್ನು ತಲುಪುತ್ತದೆ. ಹಾಗೆಯೇ ಬಿಡಿಂಗ್ ನಲ್ಲಿ ಕೂಡ ಉತ್ತಮ ಡೀಲ್ ಮಾಡಿಕೊಳ್ಳುವ ಮೂಲಕ ಲಾಭದ ತಂಡವಾಗಿದೆ.

ಕೋಲ್ಕತಾ ನೈಟ್ ರೈಡರ್ಸ್- ನಷ್ಟದಲ್ಲಿರುವ ತಂಡ

ಕೋಲ್ಕತಾ ನೈಟ್ ರೈಡರ್ಸ್- ನಷ್ಟದಲ್ಲಿರುವ ತಂಡ

ಬಾಲಿವುಡ್ ಬಾದಶಾ ಶಾರುಖ್ ಖಾನ್ ಒಡೆತನದ ಕೋಲ್ಕತಾ ನೈಟ್ ರೈಡರ್ಸ್ ತಂಡ ಎರಡು ಬಾರಿ ಚಾಂಪಿಯನ್ ಆಗಿದೆ. ಆದರೆ ಗೌತಮ್ ಗಂಭೀರ್ ಅವರ ನಂತರದ ಅವಧಿಯಲ್ಲಿ ಈ ತಂಡವು ತನ್ನ ಉನ್ನತ ಸ್ಥಾನವನ್ನು ಕಳೆದುಕೊಂಡಿದೆ. ಇದರಿಂದ ಮಾರುಕಟ್ಟೆಯಲ್ಲಿಯೂ ತಂಡದ ಮೌಲ್ಯದ ಮೇಲೆ ಪರಿಣಾಮ ಬೀರಿದೆ. ಶೇ 8 ರಷ್ಟು ಬ್ರಾಂಡ್ ವ್ಯಾಲ್ಯೂ ಕಳೆದುಕೊಂಡಿರುವ ಕೆಕೆಆರ್ ತಂಡದ ಪ್ರಸ್ತುತ ಮೌಲ್ಯ 630 ಕೋಟಿ ರೂ. ಗಳಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು-ನಷ್ಟದಲ್ಲಿರುವ ತಂಡ

ರಾಯಲ್ ಚಾಲೆಂಜರ್ಸ್ ಬೆಂಗಳೂರು-ನಷ್ಟದಲ್ಲಿರುವ ತಂಡ

ಸೀಸನ್ ನಿಂದ ಸೀಸನ್ ಗೆ ತೀರಾ ಕಳಪೆ ಆಟವನ್ನು ಪ್ರದರ್ಶಿಸುತ್ತಿರುವ ರಾಯಲ್ ಚಾಲೆಂಜರ್ಸ್ ತಂಡದ ಈ ರೀತಿಯ ಆಟವನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಒಟ್ಟು 12 ಸೀಸನ್‌ಗಳಲ್ಲಿ ಒಂದು ಬಾರಿಯೂ ಚಾಂಪಿಯನ್ ಆಗಲಾರದ ರಾಯಲ್ ಚಾಲೆಂಜರ್ಸ್ ನಿರಾಸೆ ಮೂಡಿಸಿದೆ. ಅತ್ಯಂತ ಪ್ರತಿಭಾವಂತ ಆಟಗಾರರು ತಂಡದಲ್ಲಿದ್ದರೂ ಅದ್ಯಾಕೋ ಗೆಲುವು ಮಾತ್ರ ತಂಡಕ್ಕೆ ಮರೀಚಿಕೆಯೇ ಆಗಿದೆ. ಹೇಗೋ ವಿರಾಟ್ ಕೊಹ್ಲಿ ಅವರ ಉತ್ತಮ ಆಟದಿಂದ ತಂಡವು ಇನ್ನೂ ಒಂದಿಷ್ಟು ವಿಶ್ವಾಸವನ್ನು ಉಳಿಸಿಕೊಂಡಿದೆ ಎಂದು ಹೇಳಬಹುದು. ಪ್ರಸ್ತುತ ಮಾರುಕಟ್ಟೆಯಲ್ಲಿ ತಂಡದ ಬ್ರಾಂಡ್ ವ್ಯಾಲ್ಯೂ 595 ಕೋಟಿ ರೂ. ಗಳಾಗಿದೆ.

Story first published: Friday, December 13, 2019, 18:04 [IST]
Other articles published on Dec 13, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X