ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: "ಇದೇ ಮೊದಲು ಇದೇ ಕೊನೆ": ಮಂಕಡಿಂಗ್ ಆರ್‌ ಅಶ್ವಿನ್ ಬಹಿರಂಗ ಎಚ್ಚರಿಕೆ

IPL 2020: First and final warning for 2020: R Ashwin warning in internet ofter Aaron Finch incident

ಮಂಕಡಿಂಗ್ ಮೂಲಕ ಔಟ್ ಮಾಡುವ ಬಗ್ಗೆ ಆರ್ ‌ಅಶ್ವಿನ್ ಟ್ವಿಟ್ಟರ್‌ನಲ್ಲಿ ಬಹಿರಂಗವಾದ ಖಡಕ್ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ. ಆರ್‌ಸಿಬಿ ವಿರುದ್ದದ ಪಂದ್ಯದಲ್ಲಿ ಮಂಕಡಿಂಗ್‌ಗೆ ಅವಕಾಶವಿದ್ದರೂ ಆರ್ ಅಶ್ವಿನ್ ಔಟ್ ಮಾಡದೆ ಕೇವಲ ಎಚ್ಚರಿಕೆಯನ್ನು ನೀಡಿದ್ದರು. ಅದಾದ ಬಳಿಕ ಆರ್ ಅಶ್ವಿನ್ ಮಾಡಿರುವ ಟ್ವೀಟ್ ಎಲ್ಲಾ ತಂಡಗಳ ಬ್ಯಾಟ್ಸ್‌ಮನ್‌ಗಳಿಗೆ ಖಡಕ್ ಸಂದೇಶವನ್ನು ನೀಡುತ್ತಿದೆ.

ಕಳೆದ ಬಾರಿಯ ಆವೃತ್ತಿಯ ಐಪಿಎಲ್‌ನಲ್ಲಿ ಮಂಕಡಿಂಗ್ ಮಾಡುವ ಮೂಲಕ ವಿಕೆಟ್ ಪಡೆದು ಆರ್ ಅಶ್ವಿನ್ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದರು. ಈ ವಿಧಾನದ ಬಗ್ಗೆ ಪರ ವಿರೋಧಗಳು ಚರ್ಚೆಯಾಗಿತ್ತು. ಈ ಆವೃತ್ತಿಯ ಆರಂಭಕ್ಕೂ ಮುನ್ನ ಡೆಲ್ಲಿ ಕೋಚ್ ರಿಕಿ ಪಾಂಟಿಂಗ್ ನೀಡಿದ ಹೇಳಿಕೆಯ ನಂತರ ಮತ್ತೆ ಈ ಚರ್ಚೆ ತಾರಕಕ್ಕೇರಿತ್ತು. ಆದರೆ ಈ ಬಾರಿಯ ಟೂರ್ನಿಯಲ್ಲಿ ಆರ್ ಅಶ್ವಿನ್ ಮಂಕಡಿಂಗ್ ಮಾಡುವ ಅವಕಾಶವಿದ್ದರೂ ಕೇವಲ ವಾರ್ನಿಂಗ್ ನೀಡಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಆರ್‌ಸಿಬಿ ಸೋಲಿಗೆ ಐದು ಕಾರಣಗಳುಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಆರ್‌ಸಿಬಿ ಸೋಲಿಗೆ ಐದು ಕಾರಣಗಳು

ಟ್ವೀಟ್ ಮೂಲಕ ಎಚ್ಚರಿಕೆ

ಆರ್ ಅಶ್ವಿನ್ ಮಂಕಡಿಂಗ್ ಮೂಲಕ ಔಟ್ ಮಾಡುವ ಬದಲು ಎಚ್ಚರಿಕೆಯನ್ನು ನೀಡಿದ ನಂತರ ಟ್ವೀಟ್ ಮೂಲಕ ಎಲ್ಲಾ ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳಿಗೆ ಸಂದೇಶವೊಂದನ್ನು ರವಾನಿಸಿದ್ದಾರೆ. "ಇದನ್ನು ತುಂಬಾ ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಇದು ಐಪಿಎಲ್ 2020ಯ ಮೊದಲ ಹಾಗೂ ಕೊನೆಯ ಎಚ್ಚರಿಕೆ. ಇದನ್ನು ನಾನು ಅಧಿಕೃತವಾಗಿ ಹೇಳುತ್ತಿದ್ದೇನೆ. ಮುಂದೆ ನನ್ನನ್ನು ದೂಷಿಸಬೇಡಿ" ಎಂದು ಟ್ವೀಟ್‌ನಲ್ಲಿ ಹೇಳಿ ಕೋಚ್ ರಿಕಿ ಪಾಂಟಿಂಗ್ ಹಾಗೂ ನಾನ್ ಸ್ಟ್ರೈಕ್‌ನಲ್ಲಿದ್ದ ಆರೋನ್ ಫಿಂಚ್ ಅವರನ್ನು ಉಲ್ಲೇಖಿಸಿದ್ದಾರೆ.

ಆರೋನ್ ಫಿಂಚ್‌ಗೆ ಮೊದಲ ಎಚ್ಚರಿಕೆ

ಆರೋನ್ ಫಿಂಚ್‌ಗೆ ಮೊದಲ ಎಚ್ಚರಿಕೆ

ಈ ಘಟನೆ ನಡೆದಿದ್ದು ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ಸಂದರ್ಭದಲ್ಲಿ. ಡೆಲ್ಲಿ ನೀಡಿದ ಬೃಹತ್ ಟಾರ್ಗೆಟ್‌ ಬೆನ್ನತ್ತಲು ಆರ್‌ಸಿಬಿ ಆರಂಭಿಕರಾದ ಪಡಿಕ್ಕಲ್ ಹಾಗೂ ಫಿಂಚ್ ಕ್ರೀಸ್‌ಗೆ ಇಳಿದಿದ್ದರು. 3ನೇ ಓವರ್‌ನಲ್ಲಿ ಸ್ಟ್ರೈಕ್‌ನಲ್ಲಿದ್ದ ಪಡಿಕ್ಕಲ್‌ಗೆ ಆರ್ ಅಶ್ವಿನ್ ಬೌಲಿಂಗ್ ಮಾಡಿತ್ತಿದ್ದರು. ಈ ಸಂದರ್ಭದಲ್ಲಿ ಬೌಲಿಂಗ್ ಆಕ್ಷನ್ ಮಾಡುತ್ತಿದ್ದ ವೇಳೆ ನಾನ್ ಸ್ಟ್ರೈಕ್‌ನಲ್ಲಿದ್ದ ಆರೋನ್ ಫಿಂಚ್ ಮುಂದೆ ದಾಟುತ್ತಿರುವುದನ್ನು ಅಶ್ವಿನ್ ಗಮನಿಸಿ ಬೌಲಿಂಗ್ ಆಕ್ಷನ್ ನಿಲ್ಲಿಸಿದರು. ಈ ಮೂಲಕ ಕೇವಲ ವಾರ್ನಿಂಗ್ ನೀಡಿ ಫಿಂಚ್‌ಗೆ ಅವಕಾಶ ನೀಡಿದರು.

ಕಳೆದ ಆವೃತ್ತಿಯಲ್ಲಿ ಭಾರೀ ಚರ್ಚೆ

ಕಳೆದ ಆವೃತ್ತಿಯಲ್ಲಿ ಭಾರೀ ಚರ್ಚೆ

ಕಳೆದ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕನೂ ಆಗಿದ್ದ ಆರ್ ಅಶ್ವಿನ್ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಜೋಸ್ ಬಟ್ಲರ್ ಕ್ರೀಸ್ ಬಟ್ಟು ಮುಂದಕ್ಕೆ ಹೋಗುತ್ತಿರುವುದನ್ನು ಗಮನಿಸಿದ ಅಶ್ವಿನ್ ಔಟ್ ಮಾಡಿದ್ದರು. ಬಳಿಕ ಇದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಹಲವು ಕ್ರಿಕೆಟಿಗರು ಹಾಗೂ ತಜ್ಞರು ಹೀಗೆ ಮಾಡುವುದು ಕ್ರೀಡಾಸ್ಪೂರ್ತಿಯಲ್ಲ ಎಂದು ವಾದಿಸಿದರೆ ಇನ್ನೂ ಕೆಲವರು ಅಶ್ವಿನ್ ಕ್ರಮವನ್ನು ಸಮರ್ಥಿಸಿಕೊಂಡಿದ್ದರು.

ಎಚ್ಚರಿಕೆ ನೀಡಿದ್ದ ರಿಕಿ ಪಾಂಟಿಂಗ್

ಎಚ್ಚರಿಕೆ ನೀಡಿದ್ದ ರಿಕಿ ಪಾಂಟಿಂಗ್

ಇನ್ನು ಆರ್‌ ಅಶ್ವಿನ್ ಈ ಬಾರಿಯ ಐಪಿಎಲ್‌ನಲ್ಲಿ ಡೆಲ್ಲಿ ಪಾಲಾದ ಬಳಿಕ ಟೂರ್ನಿಯ ಆರಂಭಕ್ಕು ಮುನ್ನ ಡೆಲ್ಲಿ ತಂಡದ ಕೊಚ್ ರಿಕಿ ಪಾಂಟಿಂಗ್ ಆರ್ ಅಶ್ವಿನ್‌ಗೆ ಮಂಕಡ್ ಔಟ್ ಮಾಡುವ ಬಗ್ಗೆ ಎಚ್ಚರಿಕೆಯನ್ನು ನೀಡಿದ್ದರು. ಅದಕ್ಕೆ ಅವಕಾಶವಿಲ್ಲ ಎಂಬರ್ಥದಲ್ಲಿ ಮಾತನಾಡಿದ್ದರು. ಆದರೆ ಬಳಿಕ ಅಶ್ವಿನ್ ತನ್ನ ಕ್ರಮವನ್ನು ಸಮರ್ಥನೆ ಮಾಡಿಕೊಂಡಿದ್ದು ಮಾತ್ರವಲ್ಲದೆ ಕೋಚ್ ಜೊತೆಗೆ ಈ ಬಗ್ಗೆ ಚರ್ಚೆಯನ್ನು ನಡೆಸುತ್ತೇನೆ ಎಂದು ಹೇಳಿಕೊಂಡಿದ್ದರು.

ಏನಿದು ಮಂಕಡಿಂಗ್

ಏನಿದು ಮಂಕಡಿಂಗ್

ಬೌಲಿಂಗ್ ಆ್ಯಕ್ಷನ್ ಮಾಡುವ ಬೌಲರ್ ರನ್‌ಗೆ ಮುಂದಾಗುವ ನಾನ್ ಸ್ಟ್ರೈಕರ್ ಬ್ಯಾಟ್ಸ್‌ಮನ್ ಅನ್ನು ರನ್ ಔಟ್ ಮಾಡುವ ವಿಧಾನಕ್ಕೆ ಮಂಕಡ್ ಎಂದು ಕರೆಯಲಾಗುತ್ತದೆ. 1947ರಲ್ಲಿ ಭಾರತದ ಮಾಜಿ ಸ್ಪಿನ್ನರ್ ವಿನೋದ್ ಮಂಕಡ್ ಅವರು ಆಸ್ಟ್ರೇಲಿಯಾದ ಬಿಲ್ ಬ್ರೌನ್ ಅವರನ್ನು ಈ ವಿಧಾನದ ಮೂಲಕ ಮೊದಲ ಬಾರಿ ಔಟ್ ಮಾಡಿದ್ದರು. ಆ ಬಳಿಕ ಇದಕ್ಕೆ ಮಂಕಡ್ ಎಂಬ ಹೆಸರು ಬಂತು. ಐಸಿಸಿ ನಿಯಮದ ಪ್ರಕಾರ ಇದು ಕಾನೂನುಬದ್ಧವೂ ಆಗಿದೆ.

Story first published: Tuesday, October 6, 2020, 11:42 [IST]
Other articles published on Oct 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X