ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸತತ ಎರಡು ಮೇಡನ್, 3 ವಿಕೆಟ್ ಸಿರಾಜ್ ಜಿಂದಾಬಾದ್!

IPL 2020: First time in this IPL a bowler bowled 2 Maiden Overs back to back

ಅಬುದಾಭಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಬ್ಯಾಟ್ಸ್ ಮನ್ ಗಳು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿಗಳ ದಾಳಿಗೆ ಸಿಲುಕಿ ನಲುಗಿದ್ದಾರೆ. ಕ್ರಿಸ್ ಮೊರಿಸ್, ಉಡಾನಾ, ಸೈನಿ ಜೊತೆಗೆ ಮೊಹಮ್ಮದ್ ಸಿರಾಜ್ ಬೆಂಕಿಯುಂಡೆ ಎದುರಿಸಲಾಗದೆ ಪೆವಿಲಿಯನ್ ಸೇರಿದ್ದಾರೆ.

ಪವರ್ ಪ್ಲೇಯಲ್ಲಿ ಬೌಲ್ ಮಾಡಿದ ಅದರಲ್ಲೂ ಮೊದಲ ಸ್ಪೆಲ್ ನಲ್ಲೇ ಆರ್ ಸಿಬಿ ಬೌಲರ್ ಗಳು ಎಂದೂ ಮಾಡದ ಇತಿಹಾಸವನ್ನು ಮೊರಿಸ್ ಹಾಗೂ ಸಿರಾಜ್ ನಿರ್ಮಿಸಿದ್ದಾರೆ. ಅದರಲ್ಲೂ ಮೊಹಮ್ಮದ್ ಸಿರಾಜ್ ಅವರು ತಮ್ಮ ಸ್ಪೆಲ್ ನ ಮೊದಲ ಎರಡು ಓವರ್ ಗಳಲ್ಲಿ ಮೇಡನ್ ಎಸೆದಿದ್ದಲ್ಲದೆ 3 ವಿಕೆಟ್ ಕಿತ್ತು ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಆರಂಭಿಕ ಆಟಗಾರ ರಾಹುಲ್ ತ್ರಿಪಾಠಿ ವಿಕೆಟ್ ಕೀಪರ್ ಎಬಿ ಡಿ ವಿಲಿಯರ್ಸ್ ಅವರಿಗೆ ಕ್ಯಾಚಿತ್ತರೆ, ನಿತಿಶ್ ರಾಣಾ ಅವರ ಆಫ್ ಸ್ಟಂಪ್ ಉಡಾಯಿಸಿದ ಸಿರಾಜ್ ಮುಂದಿನ ಬೇಟೆ ಟಾಮ್ ಬಾಂಟನ್ ಆಗಿದ್ದರು.

KKR ಬ್ಯಾಟ್ಸ್‌ಮನ್‌ಗಳನ್ನ ಪೆವಿಲಿಯನ್‌ಗೆ ಅಟ್ಟಿದ ನಂತರ ಸಿರಾಜ್ ಹೇಳಿದ್ದೇನು?KKR ಬ್ಯಾಟ್ಸ್‌ಮನ್‌ಗಳನ್ನ ಪೆವಿಲಿಯನ್‌ಗೆ ಅಟ್ಟಿದ ನಂತರ ಸಿರಾಜ್ ಹೇಳಿದ್ದೇನು?

ಪವರ್ ಪ್ಲೇನಲ್ಲಿ ಆರ್ ಸಿಬಿ ಬೌಲರ್ಸ್ ಸಾಧನೆ ಹೀಗಿದೆ:
* ಐಪಿಎಲ್ ಇತಿಹಾಸದಲ್ಲಿ ಸತತ ಎರಡು ಮೇಡನ್ ಮಾಡಿದ ಮೊದಲ ಬೌಲರ್ ಮೊಹಮ್ಮದ್ ಸಿರಾಜ್(2-2-0-3)
* ಪವರ್ ಪ್ಲೇನಲ್ಲಿ ಸತತ ಎರಡು ಮೇಡನ್ ಓವರ್ ಎಸೆದ ಮೊದಲ ಬೌಲರ್ ಸಿರಾಜ್.
* ನಾಲ್ಕು ಮೇಡನ್ ಎಸೆದ ಮೊದಲ ತಂಡ ಆರ್ ಸಿಬಿ. ಸಿರಾಜ್ 2 ಹಾಗೂ ಮೊರಿಸ್ 1, ಸುಂದರ್ 1.
* ಪವರ್ ಪ್ಲೇನಲ್ಲಿ 2 ವಿಕೆಟ್ ಮೇಡನ್ ಓವರ್ ಮಾಡಿದ ಮೊದಲ ಬೌಲರ್ ಸಿರಾಜ್.
* ಐಪಿಎಲ್ 2020ರಲ್ಲಿ ಎದುರಾಳಿ ತಂಡವನ್ನು ಅತ್ಯಂತ ಕಡಿಮೆ ಮೊತ್ತಕ್ಕೆ ನಿಯಂತ್ರಿಸಿದ್ದು 17/4, ಕೆಕೆಆರ್ ವಿರುದ್ಧ ಆರ್ ಸಿಬಿ, ಅಬುದಾಭಿ.
* ಮೊದಲ ಮೂರು ವಿಕೆಟ್ ಕಡಿಮೆ ಮೊತ್ತಕ್ಕೆ ಕಿತ್ತಿದ್ದು, 2020ರಲ್ಲಿ ಸದ್ಯದ ದಾಖಲೆ, ಒಟ್ಟಾರೆ ಟಿ 20ರಲ್ಲಿ 2ನೇ ಸ್ಥಾನ 3/3.

Story first published: Thursday, October 22, 2020, 14:01 [IST]
Other articles published on Oct 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X