ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆಕೆಆರ್‌ ನಾಯಕತ್ವ ಮಾರ್ಗನ್‌ಗೆ ನೀಡಬಾರದೇಕೆ?: ಹಾಗ್ ವಿವರಣೆ

IPL 2020: Former KKR spinner Brad Hogg explains importance of Dinesh Karthik as captain

ದುಬೈ: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ದಿನೇಶ್ ಕಾರ್ತಿಕ್ ಈವರೆಗೆ ಉತ್ತಮ ಪ್ರದರ್ಶನವನ್ನೇ ನೀಡಿಲ್ಲ. ಆಡಿರುವ ಐದು ಪಂದ್ಯಗಳಲ್ಲಿ ಕ್ರಮವಾಗಿ 30, ೦, 1, 6 ರನ್ ಗಳಿಸಿದ್ದಾರೆ. ಕಾರ್ತಿಕ್ ಗಿಂತ ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

ಇದು ಸಾಧ್ಯ! RCB ಉಮೇಶ್ ಬಿಟ್ಟು ಗೇಲ್ ಖರೀದಿಸಬಹುದು!ಇದು ಸಾಧ್ಯ! RCB ಉಮೇಶ್ ಬಿಟ್ಟು ಗೇಲ್ ಖರೀದಿಸಬಹುದು!

ಕೋಲ್ಕತ್ತಾ ನೈಟ್ ರೈಡರ್ಸ್ ಈವರೆಗೆ ಆಡಿರುವ ನಾಲ್ಕು ಪಂದ್ಯಗಳಲ್ಲಿ 2ರಲ್ಲಿ ಗೆದ್ದು 2ರಲ್ಲಿ ಸೋತಿದೆ. ಇತ್ತ ದಿನೇಶ್ ಕಾರ್ತಿಕ್‌ಗಿಂತ ಇಯಾನ್ ಮಾರ್ಗನ್ ಉತ್ತಮ ಪ್ರದರ್ಶನ ಬೇರೆ ನೀಡುತ್ತಿದ್ದಾರೆ. ಹೀಗಾಗಿ ಕೆಕೆಆರ್ ನಾಯಕತ್ವದಿಂದ ಕಾರ್ತಿಕ್ ಕೆಳಗಿಳಿಸಿ ಮಾರ್ಗನ್‌ಗೆ ನಾಯಕತ್ವ ನೀಡುವಂತೆ ಮಾತುಗಳು ಕೇಳಿ ಬಂದಿದ್ದವು.

ಐಪಿಎಲ್: ಕೋಲ್ಕತ್ತಾ vs ಚೆನ್ನೈ, ಮುಖಾಮುಖಿಯ ಅಂಕಿ-ಅಂಶಗಳುಐಪಿಎಲ್: ಕೋಲ್ಕತ್ತಾ vs ಚೆನ್ನೈ, ಮುಖಾಮುಖಿಯ ಅಂಕಿ-ಅಂಶಗಳು

ಆದರೆ ದಿನೇಶ್ ಕಾರ್ತಿಕ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಬಾರದು ಎಂದು ಆಸ್ಟ್ರೇಲಿಯಾ ಮಾಜಿ ಆಟಗಾರ, ಕೆಕೆಆರ್ ಮಾಜಿ ಸ್ಪಿನ್ನರ್ ಬ್ರಾಡ್‌ ಹಾಗ್ ಹೇಳಿದ್ದಾರೆ. 'ನೋಡಿ, ನನಗೂ ಇಯಾನ್ ಮಾರ್ಗನ್ ಅವರನ್ನು ನಾಯಕರನ್ನಾಗಿ ಮಾಡೋದು ಖುಷಿಯಿದೆ. ಯಾಕೆಂದರೆ ಮಾರ್ಗನ್ ಒಳ್ಳೆಯ ನಾಯಕ. ಆದರೆ ದಿನೇಶ್ ಕಾರ್ತಿಕ್ ಕೂಡ ಒಳ್ಳೆಯ ಕರ್ತವ್ಯ ನಿರ್ವಹಿಸುತ್ತಿದ್ದಾರೆ,' ಎಂದಿದ್ದಾರೆ.

 'ನಿಮಗೆ ಶಾರ್ಜಾವೊಂದೇ ಗತಿ': ಸತತ ಸೋಲಿನ ಬಳಿಕ ಟ್ರೋಲ್ ಆದ ರಾಜಸ್ಥಾನ ರಾಯಲ್ಸ್ 'ನಿಮಗೆ ಶಾರ್ಜಾವೊಂದೇ ಗತಿ': ಸತತ ಸೋಲಿನ ಬಳಿಕ ಟ್ರೋಲ್ ಆದ ರಾಜಸ್ಥಾನ ರಾಯಲ್ಸ್

ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಹಾಗ್, 'ಐಪಿಎಲ್ ಟೀಮಿನಲ್ಲಿ ಕೇವಲ 4 ವಿದೇಶಿ ಆಟಗಾರರ ಮಾತ್ರ ಇರಬೇಕು ಎನ್ನುವ ವಿಚಾರ ನಿಮಗೆ ಗೊತ್ತಿರಬಹುದು. ಒಂದು ವೇಳೆ ಮಾರ್ಗನ್ ದುರದೃಷ್ಟವಶಾತ್ ಫಾರ್ಮ್ ಕಳೆದುಕೊಂಡರೆ ತಂಡಕ್ಕೆ ಟಾಮ್ ಬ್ಯಾಂಟನ್ ಅವರನ್ನು ಕರೆತರಬೇಕಾಗುತ್ತದೆ,' ಎಂದರು.

ಹೀಗಾದಾಗ ನಾಯಕನಾಗಿರುವ ಮಾರ್ಗನ್ ಅವರನ್ನು ತಂಡದಿಂದ ಕೈ ಬಿಡೋದು ಕಷ್ಟವಾಗುತ್ತದೆ. ಆದ್ದರಿಂದ ನಾನು ದಿನೇಶ್ ಕಾರ್ತಿಕ್ ನಾಯಕನಾಗಿರೋದೆ ಸರಿ ಎನ್ನುತ್ತೇನೆ. ಹಾಗಂತ ಮಾರ್ಗನ್ ಅವರ ಅನುಭವವನ್ನು ಕೆಕೆಅರ್ ತಂಡದ ಪ್ರದರ್ಶನಕ್ಕೆ ಬಳಸಿಕೊಳ್ಳಬಹುದು,' ಎಂದು ವಿವರಿಸಿದರು.

Story first published: Thursday, October 8, 2020, 9:59 [IST]
Other articles published on Oct 8, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X