ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಬಿಸಿಸಿಐ ವಿರುದ್ಧ ಪ್ರತಿಭಟನೆಗೆ ಸಿದ್ಧವಾಗಿವೆ ಫ್ರಾಂಚೈಸಿಗಳು

IPL 2020: Franchises to protest to BCCI over additional staging fees

ಬೆಂಗಳೂರು, ಮಾರ್ಚ್ 5: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನ ಎಲ್ಲಾ ಎಂಟು ಫ್ರಾಂಚೈಸಿಗಳು ಬಿಸಿಸಿಐ ನಿಲುವಿನ ವಿರುದ್ಧ ಪ್ರತಿಭಟನೆಗೆ ಮುಂದಾಗಿವೆ. ಐಪಿಎಲ್ ಆಡಳಿತ ಮಂಡಳಿಯ ಏಕಪಕ್ಷೀಯ ನಿರ್ಧಾರದಿಂದಾಗಿ ನಮ್ಮ ಆದಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಫ್ರಾಂಚೈಸಿಗಳು ಬಿಸಿಸಿಐಗೆ ಪತ್ರ ಬರೆಯಲು ನಿರ್ಧರಿಸಿವೆ.

ಭಾರತದಲ್ಲಿ ಕ್ರಿಕೆಟ್‌ ದಿಗ್ಗಜರ ಕುತೂಹಲಕಾರಿ ಟೂರ್ನಿ: ಸಂಪೂರ್ಣ ಮಾಹಿತಿಭಾರತದಲ್ಲಿ ಕ್ರಿಕೆಟ್‌ ದಿಗ್ಗಜರ ಕುತೂಹಲಕಾರಿ ಟೂರ್ನಿ: ಸಂಪೂರ್ಣ ಮಾಹಿತಿ

ಐಪಿಎಲ್ 2020ರಲ್ಲಿ ಅಗ್ರ ನಾಲ್ಕರಲ್ಲಿ ಉಳಿಯುವ ತಂಡಗಳಿಗೆ ವಿತರಿಸಬೇಕಾದ 50 ಕೋಟಿ ರೂ.ಗಳ 'ಪ್ಲೇಆಫ್ ಸ್ಟ್ಯಾಂಡಿಂಗ್ ಫಂಡ್' ಅನ್ನು ಬಿಸಿಸಿಐಯು ಅರ್ಧದಷ್ಟು ಕಡಿಮೆ ಮಾಡಿದೆ. ಅಲ್ಲದೆ ಫ್ರಾಂಚೈಸಿಗಳು ಪ್ರತಿ ಪಂದ್ಯಗಳಿಗೂ ಪಂದ್ಯ ನಡೆಯುವ ತಾಣದ ಸ್ಟೇಟ್ ಅಸೋಸಿಯೇಷನ್‌ಗೆ 20 ಲಕ್ಷ ರೂ. ಹೆಚ್ಚುವರಿ ಹಣ ನೀಡಬೇಕಿದೆ. ಇದು ಫ್ರಾಂಚೈಸಿಗಳಿಗೆ ಬೇಸರ ತಂದಿದೆ.

ಬಿಸಿಸಿಐ ಆಯ್ಕೆ ಸಮಿತಿ: ಐವರು ಅಭ್ಯರ್ಥಿಗಳಿಗೆ ಸಂದರ್ಶನದಲ್ಲಿ ಕೇಳಿದ್ದು ಈ ಒಂದು ಪ್ರಶ್ನೆಯನ್ನುಬಿಸಿಸಿಐ ಆಯ್ಕೆ ಸಮಿತಿ: ಐವರು ಅಭ್ಯರ್ಥಿಗಳಿಗೆ ಸಂದರ್ಶನದಲ್ಲಿ ಕೇಳಿದ್ದು ಈ ಒಂದು ಪ್ರಶ್ನೆಯನ್ನು

ಈ ಬಗ್ಗೆ ಮಾತನಾಡಿರುವ ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್, ಹಣಕಾಸಿನ ಕುರಿತಂತೆ ಕೈಗೊಳ್ಳಲಾಗಿರುವ ಈ ನಿಲುವು ಫ್ರಾಂಚೈಸಿಗಳಿಗೆ ಹಣದ ನಷ್ಟವನ್ನುಂಟು ಮಾಡಲಿವೆ. ಇದು ಫ್ರಾಂಚೈಸಿಗಳ ಮಟ್ಟಿಗೆ ಒಳ್ಳೆದೂ ಅಲ್ಲ ಎಂದು ಅಭಿಪ್ರಾಯಿಸಿದ್ದಾರೆ.

ಬ್ರೆಜಿಲ್ ಫುಟ್ಬಾಲ್ ದಂತಕತೆ ರೊನಾಲ್ಡಿನೊ ಮತ್ತು ಸಹೋದರ ಬಂಧನಬ್ರೆಜಿಲ್ ಫುಟ್ಬಾಲ್ ದಂತಕತೆ ರೊನಾಲ್ಡಿನೊ ಮತ್ತು ಸಹೋದರ ಬಂಧನ

'ಕಡೇಪಕ್ಷ ಇಂಥ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಬಿಸಿಸಿಐ ನಮ್ಮ ಜೊತೆ ಚರ್ಚೆಯಾದರೂ ನಡೆಸಬೇಕಿತ್ತು. ಈ ಮೇಲ್ ಕಳಿಸಬೇಕಿತ್ತು. ಪ್ರತೀ ಪಂದ್ಯಕ್ಕೆ ಬರೀ 20 ಲಕ್ಷ ಕೊಡಬಹುದು ಅಂದುಕೊಳ್ಳೋಣ. ಆ ಲೆಕ್ಕದಲ್ಲಿ ಸೀಸನ್‌ನ ಏಳು ಪಂದ್ಯಗಳಿಗೆ ಆ ಮೊತ್ತ 1.4 ಕೋ.ರೂ. ಆಗುತ್ತದೆ ಎಂದು ಮುಂಚೂಣಿ ಫ್ರಾಂಚೈಸಿ ಒಂದರ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಗಂಗೆಯಲ್ಲಿ ಮಿಂದೆದ್ದ ಜಾಂಟಿ ರೋಡ್ಸ್: ಭಜ್ಜಿ ಮಾಡಿದ್ರು ವಿಶೇಷ ಮನವಿಗಂಗೆಯಲ್ಲಿ ಮಿಂದೆದ್ದ ಜಾಂಟಿ ರೋಡ್ಸ್: ಭಜ್ಜಿ ಮಾಡಿದ್ರು ವಿಶೇಷ ಮನವಿ

ಮಾತು ಮುಂದುವರೆಸಿದ ಅಧಿಕಾರಿ, 'ಒಟ್ಟಾರೆ ಐಪಿಎಲ್‌ ಎಲ್ಲಾ ಮೂಲಗಳಿಂದ ಬಿಸಿಸಿಐಯು 2000 ಕೋ.ರೂ. ಗಳಿಸಲಿದೆ. ಫ್ರಾಂಚೈಸಿಗಳಿಗೆ ಅದರ ಒಂದು ಭಾಗವೂ ಸಿಗುವುದಿಲ್ಲ,' ಎಂದು ಬೇಸರ ವ್ಯಕ್ತಿಪಡಿಸಿದ್ದಾರೆ. ಮಾರ್ಚ್ 29ರಿಂದ ಐಪಿಎಲ್ ಟೂರ್ನಿ ಮುಂಬೈಯಲ್ಲಿ ಆರಂಭಗೊಳ್ಳಲಿದೆ.

Story first published: Thursday, March 5, 2020, 22:02 [IST]
Other articles published on Mar 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X