ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಚೆನ್ನೈ ಸೂಪರ್ ಕಿಂಗ್ಸ್ ನೆಟ್ ಬೌಲರ್ ಆಗಿದ್ದ ಯುವಕ ಧೋನಿ ವಿಕೆಟ್ ಪಡೆದ!

IPL 2020: From CSK net bowler to dismissing MS Dhoni

ಐಪಿಎಲ್ ಅಂದ್ರೆನೆ ಹಾಗೆ ಅದೆಷ್ಟೋ ಪ್ರತಿಭಾವಂತ ಕ್ರಿಕೆಟಿಗರ ಬದುಕನ್ನು ಬದಲಿಸಿದೆ. ಕಳೆದ ಮೂರು ವರ್ಷಗಳ ಹಿಂದೆ ಆ ಯುವಕ ಚೆನ್ನೈ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಐಪಿಎಲ್ ಪಂದ್ಯಗಳಿಗೆ ಸಾಮಾನ್ಯ ಪ್ರೇಕ್ಷಕನಾಗಿ ಹಾಜರಾಗಿ ಸಿಎಸ್‌ಕೆ ತಂಡಕ್ಕೆ ಬೆಂಬಲಿಸುತ್ತಿದ್ದ. ಆದರೆ ಈ ಬಾರಿಯ ಐಪಿಎಲ್‌ನಲ್ಲಿ ಅದೇ ಯುವಕ ಚೆನ್ನೈ ತಂಡದ ವಿರುದ್ಧ ಕಣಕ್ಕಿಳಿದು ನಾಯಕ ಧೋನಿಯ ವಿಕೆಟ್ ಕಬಳಿಸಿ ಸೈ ಎನಿಸಿಕೊಂಡಿದ್ದಾನೆ.

ಯಸ್, ಇದು ಕೊಲ್ಕತಾ ನೈಟ್ ರೈಡರ್ಸ್ ತಂಡದ ಆಟಗಾರ ವರುಣ್ ಚಕ್ರವರ್ತಿಯ ರೋಚಕ ಕಥನ. ಚೆನ್ನೈ ವಿರುದ್ಧದ ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನವನ್ನು ನೀಡಿದ ಬಳಿಕ ವರುಣ್ ಚಕ್ರವರ್ತಿ ರಾಹುಲ್ ತ್ರಿಪಾಠಿ ಜೊತೆಗೆ ವಿಡಿಯೋ ಸಂದರ್ಶನದಲ್ಲಿ ಪಾಲ್ಗೊಂಡು ತಮ್ಮ ಕ್ರಿಕೆಟ್ ಬದುಕಿನ ರೋಚಕ ಹಂತಗಳನ್ನು ವೀಕ್ಷಕರ ಮುಂದೆ ತೆರೆದಿಟ್ಟಿದ್ದಾರೆ.

ಐಪಿಎಲ್: ಹೈದರಾಬಾದ್ vs ಪಂಜಾಬ್, ಎರಡರಲ್ಲಿ ಬಲಿಷ್ಠ ಯಾವುದು?ಐಪಿಎಲ್: ಹೈದರಾಬಾದ್ vs ಪಂಜಾಬ್, ಎರಡರಲ್ಲಿ ಬಲಿಷ್ಠ ಯಾವುದು?

ಹಾಗಾದರೆ ಈ ಸಂದರ್ಶನದಲ್ಲಿ ವರುಣ್ ಚಕ್ರವರ್ತಿ ಹೇಳಿದ್ದೇನು? ವರುಣ್ ಹಾದಿ ಹೇಗಿತ್ತು? ಮುಂದೆ ಓದಿ..

ಚೆನ್ನೈ ತಂಡದ ನೆಟ್ ಬೌಲರ್ ಆಗಿದ್ದ ವರುಣ್

ಚೆನ್ನೈ ತಂಡದ ನೆಟ್ ಬೌಲರ್ ಆಗಿದ್ದ ವರುಣ್

ಚೆನ್ನೈ ತಂಡದ ಅಭಿಮಾನಿಯಾಗಿದ್ದ ವರುಣ್ ಚಕ್ರವರ್ತಿಯ ಪ್ರತಿಭೆಗೆ ಮೊದಲು ಅವಕಾಶ ಸಿಕ್ಕಿದ್ದು ಚೆನ್ನೈ ತಂಡದಲ್ಲಿ. ಆದರೆ ನೆಟ್ ಬೌಲರ್ ಆಗಿ. ಚೆಪಾಕ್‌ನಲ್ಲಿ ಸಿಎಸ್‌ಕೆ ತಂಡ ನೆಟ್ ಅಭ್ಯಾಸದಲ್ಲಿ ತೊಡಗಿದ್ದ ವೇಳೆ ವರುಣ್ ನೆಟ್ ಬೌಲರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ತಂಡದ ನಾಯಕ ಧೋನಿಗೂ ನೆಟ್‌ನಲ್ಲಿ ಸಾಕಷ್ಟು ಎಸೆತಗಳನ್ನು ಹಾಕಿದ್ದಾರೆ ವರುಣ್ ಚಕ್ರವರ್ತಿ.

ಧೋನಿ ವಿರುದ್ಧ ಆಡುವ ಊಹೆಯೂ ಇರಲಿಲ್ಲ

ಧೋನಿ ವಿರುದ್ಧ ಆಡುವ ಊಹೆಯೂ ಇರಲಿಲ್ಲ

ತಮಿಳುನಾಡು ಮೂಲದ ವರುಣ್ ಚಕ್ರವರ್ತಿ ಕ್ರಿಕೆಟ್‌ ಬಗ್ಗೆ ಸಾಕಷ್ಟು ಕನಸು ಕಟ್ಟಿಕೊಂಡಿದ್ದ ಆಟಗಾರ. ಚೆನ್ನೈ ತಂಡದ ನಾಯಕ ಎಂಎಸ್ ಧೋನಿ ಬಗ್ಗೆ ಅಪಾರವಾದ ಅಭಿಮಾನ ಹಾಗೂ ಗೌರವವನ್ನು ಹೊಂದಿರುವ ಕ್ರಿಕೆಟಿಗ. ನೆಟ್‌ನಲ್ಲಿ ಹಲವು ಬಾರಿ ಧೋನಿಗೆ ಬೌಲಿಂಗ್ ಮಾಡಿದ್ದರಾದರೂ ತಾನು ಮುಂದೊಂದು ದಿನ ಧೋನಿಯ ಎದುರಾಳಿಯಾಗಿ ಕಣಕ್ಕಿಳಿಯಲಿದ್ದೇನೆ ಎಂಬ ಒಂದು ಸಣ್ಣ ಊಹೆಯು ವರುಣ್ ಚಕ್ರವರ್ತಿಗೆ ಇರಲಿಲ್ಲ. ವರುಣ್ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಪರವಾಗಿ ಆಡಲು ಸಾಧ್ಯವಾಗದಿದ್ದರೂ ಸಿಎಸ್‌ಕೆ ಎದುರಾಳಿಯಾಗಿ ಕಣಕ್ಕಿಳಿದು ತಮ್ಮ ಕನಸನ್ನು ಪೂರೈಸಿಕೊಂಡಿದ್ದಾರೆ.

ಧೋನಿಗೆ ಬೌಲಿಂಗ್ ಮಾಡುವಾಗ ಒತ್ತಡವಿತ್ತು

ಧೋನಿಗೆ ಬೌಲಿಂಗ್ ಮಾಡುವಾಗ ಒತ್ತಡವಿತ್ತು

"ನಿಜ, ಧೋನಿ ಸರ್‌ಗೆ ಬೌಲಿಂಗ್ ಮಾಡುವ ವೇಳೆ ನಾನು ಒತ್ತಡದಲ್ಲಿದ್ದೆ. ಮೂರು ವರ್ಷಗಳ ಹಿಂದೆ ನಾನು ಅಭಿಮಾನಿಯಾಗಿ ಚೆಪಾಕ್ ಅಂಗಳಕ್ಕೆ ಬಂದು ಪ್ರೇಕ್ಷಕರ ಜೊತೆ ಕುಳಿತು ಆನಂದಿಸುತ್ತಿದ್ದೆ. ನಾನು ಕೇವಲ ಧೋನಿ ಬ್ಯಾಟಿಂಗ್ ಆನಂದಿಸಬೇಕು ಎಂಬ ಒಂದೇ ಕಾರಣಕ್ಕೆ ಆಗಮಿಸುತ್ತಿದ್ದೆ. ಈಗ ಅವರ ಎದುರಾಳಿಯಾಗಿ ಬೌಲಿಂಗ್ ಮಾಡುತ್ತಿದ್ದೇನೆ. ಇದು ನನ್ನ ಪಾಲಿಗೆ ಶ್ರೇಷ್ಠ ಸಂದರ್ಭ" ಎಂದು ವರುಣ್ ಚಕ್ರವರ್ತಿ ಹೇಳಿಕೊಂಡಿದ್ದಾರೆ.

ಧೋನಿ ಜೊತೆ ಫೋಟೋ ತೆಗೆಸಿಕೊಂಡ ವರುಣ್

ಧೋನಿ ಜೊತೆ ಫೋಟೋ ತೆಗೆಸಿಕೊಂಡ ವರುಣ್

ಪಂದ್ಯದ ಬಳಿಕ ವರುಣ್ ಚಕ್ರವರ್ತಿ ತನ್ನ ನೆಚ್ಚಿನ ಆಟಗಾರ ವರುಣ್ ಚಕ್ರವರ್ತಿ ಜೊತೆಗೆ ಪೋಟೋವನ್ನು ತೆಗೆದುಕೊಂಡರು. ಈ ಬಗ್ಗೆ ಮಾತನಾಡಿದ ವರುಣ್, "ಹೌದು ಧೋನಿ ಸರ್ ಜೊತೆಗೆ ಪಂದ್ಯದ ಮುಕ್ತಾಯದ ಬಳಿಕ ನಾನು ಪೋಟೋವನ್ನು ತೆಗೆಸಿಕೊಂಡೆ. ನಾನು ಒಂದು ವಿಚಾರವನ್ನು ಮಾತ್ರ ಹೇಳಲು ಬಯಸುತ್ತೇನೆ. ತಾಲ ಯಾವಾಗಲೂ ತಾಲಾನೆ" ಎಂದು ತಮಿಳಿನಲ್ಲಿ ಧೋನಿ ಬಗೆಗಿನ ತನ್ನ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.

Story first published: Thursday, October 8, 2020, 15:32 [IST]
Other articles published on Oct 8, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X