ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಶಿಖರ್ ಧವನ್ ಪ್ರದರ್ಶನಕ್ಕೆ ಪ್ರಶಂಸೆ ವ್ಯಕ್ತಪಡಿಸಿದ ಗೌತಮ್ ಗಂಭೀರ್

IPL 2020: Gautam Gambhir in awe of Shikhar Dhawan performence in IPL

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಆಟಗಾರ ಶಿಖರ್ ಧವನ್ ಈ ಬಾರಿಯ ಆವೃತ್ತಿಯ ಆರಂಭದಲ್ಲಿ ನಿರಾಸೆಯ ಪ್ರದರ್ಶನವನ್ನು ನೀಡಿದ್ದರು. ಆದರೆ ಬಳಿಕ ಮಿಂಚಲು ಆರಂಭಿಸಿದ ಧವನ್ ಸತತ ಎರಡು ಶತಕವನ್ನೂ ದಾಖಲಿಸಿ ಇತಿಹಾಸ ಬರೆದರು. ಈ ಮೂಲಕ ಡೆಲ್ಲಿ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದಾರೆ. ಡೆಲ್ಲಿ ಆರಂಭಿಕ ಆಟಗಾರನ ಈ ಪ್ರದರ್ಶನಕ್ಕೆ ಟೀಮ್ ಇಮಡಿಯಾದ ಮಾಜಿ ಆರಂಭಿಕ ಆಟಗಾರ ಹಾಲಿ ಸಂಸದ ಗೌತಮ್ ಗಂಭೀರ್ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಸ್ಟಾರ್ ಸ್ಪೋರ್ಟ್ಸ್‌ನ ಕಾರ್ಯಕ್ತಮದಲ್ಲಿ ಪಾಲ್ಗೊಂಡು ಮಾತನಾಡಿದ ಗೌತಮ್ ಗಂಭೀರ್, "ಮೊದಲಿಗೆ ಈ ದಾಖಲೆ ದೊಡ್ಡ ಸಾಧನೆಯಾಗಿದೆ. ಯಾವುದೇ ಇತರ ಭಾರತೀಯ ಆಟಗಾರ ಈ ಸಾಧನೆಯನ್ನು ಮಾಡಿಲ್ಲ. ಮಾತ್ರವಲ್ಲ ಯಾವುದೇ ಕ್ರಿಕೆಟಿಗನಿಂದಲೂ ಐಪಿಎಲ್‌ನಲ್ಲಿ ಈ ಸಾಧನೆ ದಾಖಲಾಗಿಲ್ಲ. ಸತತ ಎರಡು ಶತಕ ಅದು ಕೂಡ ಟಿ20 ಮಾದರಿಯಲ್ಲಿ" ಎಂದು ಗೌತಮ್ ಗಂಭೀರ್ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ.

ಕೆಕೆಆರ್ ಪ್ಲೇ ಆಫ್‌ಗೆ ಅರ್ಹತೆ ಗಿಟ್ಟಿಸಲಿದೆ: ಶುಭ್‌ಮನ್ ಗಿಲ್ ವಿಶ್ವಾಸಕೆಕೆಆರ್ ಪ್ಲೇ ಆಫ್‌ಗೆ ಅರ್ಹತೆ ಗಿಟ್ಟಿಸಲಿದೆ: ಶುಭ್‌ಮನ್ ಗಿಲ್ ವಿಶ್ವಾಸ

ಶಿಖರ್ ಧವನ್ ಸತತ ಎರಡು ಶತಕವನ್ನು ದಾಖಲಿಸುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಈ ಸಾಧನರ ಮಾಡಿದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇನ್ನು ಐಪಿಎಲ್ ಟೂರ್ನಿಯಲ್ಲಿ ಧವನ್ 5000ರನ್‌ಗಳ ಮಹತ್ವದ ಮೈಲಿಗಲ್ಲನ್ನು ಪೂರೈಸಿದ್ದು ಈ ದಾಖಲೆ ಮಾಡಿದ ಐದನೇ ಆಟಗಾರ ಎನಿಸಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಶಿಖರ್ ಧವನ್ 101 ರನ್ ಬಾರಿಸಿದ್ದರು. ಬಳಿಕ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ನಡೆದ ಪಂದ್ಯದಲ್ಲಿ ಶಿಖರ್ 106 ರನ್‌ಗಳನ್ನು ಬಾರಿಸುವಲ್ಲಿ ಯಶಸ್ವಿಯಾಗಿದ್ದರು. ಈ ಮೂಲಕ ಟೂರ್ನಿಯಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ. ಈ ಪಟ್ಟಿಯಲ್ಲಿ ಕೆಎಲ್ ರಾಹುಲ್ ಮೊದಲಿಗನಾಗಿದ್ದಾರೆ.

ಸೂರ್ಯಕುಮಾರ್ ಯಾದವ್, ಅಕ್ಷರ್ ಪಟೇಲ್ ತಪ್ಪಾದ ಯುಗದಲ್ಲಿ ಆಡಿದ್ದಾರೆ: ಮನೋಜ್ ತಿವಾರಿ ಟ್ವೀಟ್ಸೂರ್ಯಕುಮಾರ್ ಯಾದವ್, ಅಕ್ಷರ್ ಪಟೇಲ್ ತಪ್ಪಾದ ಯುಗದಲ್ಲಿ ಆಡಿದ್ದಾರೆ: ಮನೋಜ್ ತಿವಾರಿ ಟ್ವೀಟ್

ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಈವರೆಗೆ 11 ಪಂದ್ಯಗಳನ್ನಾಡಿದ್ದು 14 ಅಂಕಗಳನ್ನು ಗಳಿಸಿಕೊಂಡಿದೆ. ಈ ಮೂಲಕ ಪ್ಲೇ ಆಫ್ ಹಂತಕ್ಕೇರುವ ತಂಡಗಳ ಪಟ್ಟಿಯಲ್ಲಿ ಮುನ್ನಡೆಯಲ್ಲಿದೆ. ಮಂಗಳವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ತಂಡ ಹೈದರಾಬಾದ್ ತಂಡವನ್ನು ಎದುರಿಸಲಿದೆ.

Story first published: Tuesday, October 27, 2020, 17:37 [IST]
Other articles published on Oct 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X