ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲೀನ ಆರ್‌ಸಿಬಿ ನಾಯಕತ್ವದಿಂದ ಕಿತ್ಹಾಕಿ: ಗೌತಮ್ ಗಂಭೀರ್

IPL 2020: Gautam Gambhir wants RCB take away captaincy from Virat Kohli

ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್‌ ಚೊಚ್ಚಲ ಟ್ರೋಫಿ ಗೆಲ್ಲುವ ಅವಕಾಶವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೊಮ್ಮೆ ಕೈ ಚೆಲ್ಲಿದೆ. ಈ ಐಪಿಎಲ್‌ನಲ್ಲಿ ಪ್ಲೇ ಆಫ್‌ಗೆ ಅರ್ಹತೆ ಪಡೆದಿದ್ದ ಆರ್‌ಸಿಬಿ ಎಲಿಮಿನೇಟರ್‌ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 6 ವಿಕೆಟ್‌ನಿಂದ ಸೋತು ಸ್ಪರ್ಧೆ ಮುಗಿಸಿದೆ. ಆರ್‌ಸಿಬಿ ಟೂರ್ನಿಯಿಂದ ಹೊರ ಬೀಳುತ್ತಲೇ ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಮತ್ತೆ ಮಾತುಗಳು ಕೇಳಿಬಂದಿವೆ. ಕೊಹ್ಲಿಯನ್ನು ಆರ್‌ಸಿಬಿ ನಾಯಕತ್ವದಿಂದ ಕೆಳಗಿಳಿಸಲು ಗೌತಮ್ ಗಂಭೀರ್ ಹೇಳಿದ್ದಾರೆ.

ಫ್ರೀ ಹಿಟ್‌ನಲ್ಲಿ ಔಟಾದ ಮೋಹಿನ್ ಅಲಿ: ಟ್ವಿಟ್ಟರ್‌ನಲ್ಲಿ ಭಾರೀ ಟ್ರೋಲ್ಫ್ರೀ ಹಿಟ್‌ನಲ್ಲಿ ಔಟಾದ ಮೋಹಿನ್ ಅಲಿ: ಟ್ವಿಟ್ಟರ್‌ನಲ್ಲಿ ಭಾರೀ ಟ್ರೋಲ್

ಶುಕ್ರವಾರ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ಆರ್‌ಸಿಬಿ ಸೋಲಿಗೆ ನೀರಸ ಬ್ಯಾಟಿಂಗ್ ಕಾರಣ. ಆ್ಯರನ್ ಫಿಂಚ್ 32, ಎಬಿ ಡಿ ವಿಲಿಯರ್ಸ್ 56, ಮೊಹಮ್ಮದ್ ಸಿರಾಜ್ 10 ರನ್ ಬಾರಿಸಿದ್ದು ಬಿಟ್ಟರೆ ಉಳಿದ ಯಾರೂ 10ಕ್ಕೂ ಹೆಚ್ಚು ರನ್ ಗಳಿಸಲಿಲ್ಲ.

ಅಭಿಮಾನಿಗಳ ಹೃದಯ ಗೆದ್ದ ರೋಹಿತ್‌ನ ಆ ನಿರ್ಧಾರ: ದುಬಾರಿ ರನ್‌ ನೀಡಿದ್ದ ರಾಹುಲ್‌ಗೆ ಹೃದಯಸ್ಪರ್ಶಿ ಗೌರವಅಭಿಮಾನಿಗಳ ಹೃದಯ ಗೆದ್ದ ರೋಹಿತ್‌ನ ಆ ನಿರ್ಧಾರ: ದುಬಾರಿ ರನ್‌ ನೀಡಿದ್ದ ರಾಹುಲ್‌ಗೆ ಹೃದಯಸ್ಪರ್ಶಿ ಗೌರವ

ಆದರೂ ಆರ್‌ಸಿಬಿ ಮತ್ತು ಎಸ್‌ಆರ್‌ಎಚ್‌ ನಡುವಿನ ಎಲಿಮಿನೇಟರ್ ಪಂದ್ಯ ರೋಚಕ ಹಂತಕ್ಕೆ ತಲುಪಿತ್ತು. ಕೊನೇ ಕ್ಷಣದಲ್ಲಿ ಹೈದರಾಬಾದ್ ಗೆದ್ದು ಬೀಗಿತು.

ಆರ್‌ಸಿಬಿಯಿಂದ ಉತ್ತಮ ಬೌಲಿಂಗ್

ಆರ್‌ಸಿಬಿಯಿಂದ ಉತ್ತಮ ಬೌಲಿಂಗ್

ಸುಲಭವಾಗಿ ಪಂದ್ಯ ಗೆಲ್ಲಬಹುದು ಅಂದುಕೊಂಡಿದ್ದ ಹೈದರಾಬಾದ್ ಅನ್ನು ಆರ್‌ಸಿಬಿ ಬೌಲರ್‌ ಗಳಾದ ಮೊಹಮ್ಮದ್ ಸಿರಾಜ್ (2 ವಿಕೆಟ್‌), ಆ್ಯಡಂ ಜಂಪಾ 1 ಮತ್ತು ಯುಜುವೇಂದ್ರ ಚಾಹಲ್ 1 ವಿಕೆಟ್‌ ಪಡೆದು ಕಟ್ಟಿ ಹಾಕಿದ್ದರು. ಆದರೆ ಜೇಸನ್ ಹೋಲ್ಡರ್ (24 ರನ್), ಕೇನ್ ವಿಲಿಯಮ್ಸನ್ (50) ಆಟ ಎಸ್‌ಆರ್‌ಎಚ್‌ಗೆ ಗೆಲುವನ್ನು ಬರೆಯಿತು.

ಕೊಹ್ಲಿ ನಾಯಕತ್ವ ಸರಿಯಿಲ್ವಾ?

ಕೊಹ್ಲಿ ನಾಯಕತ್ವ ಸರಿಯಿಲ್ವಾ?

ಆರ್‌ಸಿಬಿ ಸೋತಾಗೆಲ್ಲಾ ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಮಾತುಗಳು ಕೇಳಿಬರುತ್ತದೆ. ಅದರಲ್ಲೂ ಭಾರತದ ಮಾಜಿ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಅಂತೂ ಕೊಹ್ಲಿಯನ್ನು ನಾಯಕತ್ವದಿಂದ ಇಳಿಸಿ ಎನ್ನುತ್ತಿರುತ್ತಾರೆ. ಈ ಬಾರಿಯೂ ಆರ್‌ಸಿಬಿ ಟೂರ್ನಿಯಿಂದ ಹೊರ ಬಿದ್ದ ಬಳಿಕ ಕೊಹ್ಲಿಯನ್ನು ಕ್ಯಾಪ್ಟನ್ಸಿಯಿಂದ ಕೆಳಗಿಳಿಸಿ ಎಂದು ಗಂಭೀರ್ ಹೇಳಿದ್ದಾರೆ.

8 ವರ್ಷಗಳು ಬೇಕಾದಷ್ಟು ಸಾಕಾಯ್ತು

8 ವರ್ಷಗಳು ಬೇಕಾದಷ್ಟು ಸಾಕಾಯ್ತು

'8 ವರ್ಷಗಳು ಬೇಕಾದಷ್ಟು ಸಾಕಾಯ್ತು. ಆರ್ ಅಶ್ವಿನ್ ಕಡೆಗೆ ನೋಡಿ. ಕಿಂಗ್ಸ್ 11 ಪಂಜಾಬ್‌ಗೆ 2 ವರ್ಷ ಕ್ಯಾಪ್ಟನ್ ಆಗಿದ್ದರು. ಅಶ್ವಿನ್ ತಂಡಕ್ಕೆ ಚಾಂಪಿಯನ್ಸ್ ಪಟ್ಟ ತರಲಿಲ್ಲ. ಅವರನ್ನು ಕಿತ್ತು ಹಾಕಲಾಯ್ತು,' ಎಂದು ಇಎಸ್‌ಪಿಎನ್‌ ಕ್ರಿಕ್‌ಇನ್ಫೋ ಜೊತೆ ಮಾತನಾಡಿದ ಗಂಭೀರ್ ಹೇಳಿದ್ದಾರೆ.

ಕೊಹ್ಲಿಯನ್ನು ಸೋಲಿಗಾಗಿ ನೆನಪಿಸುತ್ತೇವೆ

ನಾವು ಎಂಎಸ್ ಧೋನಿ ಬಗ್ಗೆ ಮಾತನಾಡುತ್ತೇವೆ, ರೋಹಿತ್ ಶರ್ಮಾ ಬಗ್ಗೆ ಮಾತನಾಡುತ್ತೇವೆ. ವಿರಾಟ್ ಕೊಹ್ಲಿ ಬಗ್ಗೆ ಮಾತನಾಡುತ್ತೇವೆ. ಆದರೆ ಧೋನಿ, ರೋಹಿತ್‌ ಬಗ್ಗೆ ಯಶಸ್ವಿಗಾಗಿ ಮಾತನಾಡಿದರೆ ಕೊಹ್ಲಿಯನ್ನು ನಾವು ಸೋಲಿಗಾಗಿ ನೆನಪಿಸಿಕೊಳ್ಳುತ್ತೇವೆ. ರೋಹಿತ್ 8 ವರ್ಷಗಳಲ್ಲಿ ಟ್ರೋಫಿ ಗೆಲ್ಲದಿದ್ದರೆ ಅವರನ್ನೂ ನಾಯಕತ್ವದಿಂದ ಕೆಳಗಿಸಲು ಹೇಳಬೇಕಾಗುತ್ತದೆ,' ಎಂದು ಗಂಭೀರ್ ಹೇಳಿದ್ದಾರೆ.

Story first published: Saturday, November 7, 2020, 11:38 [IST]
Other articles published on Nov 7, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X