ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆ ತಂಡ ಖಂಡಿತಾ ಫ್ಲೇ ಆಫ್ ಹಂತಕ್ಕೇರಲಿದೆ: ಟಾಪ್ ನಾಲ್ಕರಲ್ಲಿರದ ತಂಡದ ಬಗ್ಗೆ ಸ್ವಾನ್ ವಿಶ್ವಾಸ

IPL 2020: Graeme Swann says Sunrisers Hyderabad will enter playoffs

ಐಪಿಎಲ್ ತನ್ನ ಮೊದಲಾರ್ಧವನ್ನು ಪೂರೈಸಿ ಈಗ ಎರಡನೇ ಸುತ್ತಿನ ಪಂದ್ಯಗಳಿಗೆ ಸಾಕ್ಷಿಯಾಗುತ್ತಿದೆ. ಟೂರ್ನಿ ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿದ್ದರೂ ಕೆಲ ತಂಡಗಳು ನಿರೀಕ್ಷಿತ ಪ್ರದರ್ಶನವನ್ನು ನೀಡುವಲ್ಲಿ ವಿಫಲವಾಗುತ್ತಿದೆ. ಅಂತಾ ತಂಡಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಕೂಡ ಒಂದು. ಮಂಗಳವಾರ ನಡೆದ ಚೆನ್ನೈ ವಿರುದ್ದದ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಆಡಿದ 8 ಪಂದ್ಯಗಳಲ್ಲಿ ಹೈದರಾಬಾದ್ 5ನೇ ಸೋಲನ್ನು ಕಂಡಿದೆ.

ಆದರೆ ಈ ಸೋಲಿನ ಬಳಿಕವೂ ಸನ್‌ ರೈಸರ್ಸ್ ಹೈದರಾಬಾದ್ ತಂಡ ಪ್ಲೇ-ಆಫ್ ಹಂತಕ್ಕೇರಲಿದೆ ಎಂಬ ವಿಶ್ವಾಸವನ್ನು ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ಆಟಗಾರ ಗ್ರೇಮ್ ಸ್ವಾನ್ ವ್ಯಕ್ತಪಡಿಸಿದ್ದಾರೆ. ಟೂರ್ನಿ ಈಗಷ್ಟೇ ಅರ್ಧ ಹಂತವನ್ನು ತಲುಪಿರುವುದರಿಂದ ಮುಂದಿನ ಪಂದ್ಯಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದಿಂದ ಇನ್ನಷ್ಟು ಉತ್ತಮ ಪ್ರದರ್ಶನ ಕಂಡುಬರಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

6 ವರ್ಷದ ಬಳಿಕ ಗೋಲ್ಡನ್ ಡಕ್ ಗಳಿಸಿದ ಫಾಫ್ ಡು ಪ್ಲೆಸಿಸ್
ಗ್ರೇಮ್ ಸ್ವಾನ್ ಹೈದರಾಬಾದ್ ಹಾಗೂ ರಾಜಸ್ಥಾನ್ ತಂಡದ ಅಭಿಮಾನಿಯಾಗಿದ್ದು ಎರಡೂ ತಂಡಗಳು ಪ್ಲೇ ಆಫ್ ಹಂತಕ್ಕೇರಲಿವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಮಂಗಳವಾರ ಚೆನ್ನೈ ವಿರುದ್ಧ ಹೈದರಾಬಾದ್ 20 ರನ್‌ಗಳ ಸೋಲನ್ನು ಕಂಡ ಬಳಿಕವೂ ಅಂಕಪಟ್ಟಿಯಲ್ಲಿ 5ನೇ ಸ್ಥಾನವನ್ನು ಉಳಿಸಿಕೊಂಡಿದೆ. ಸಿಎಸ್‌ಕೆ ಒಂದು ಸ್ಥಾನವನ್ನು ಮೇಲೇರಿದ್ದು ಸನ್‌ರೈಸರ್ಸ್ ಹೈದರಾಬಾದ್‌ಗಿಂತ ಒಂದು ಸ್ಥಾನ ಕೆಳಗಿದೆ.

ಸ್ಟಾರ್ ಸ್ಪೋರ್ಟ್ಸ್‌ನ ಕ್ರಿಕೆಟ್ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರೇಮ್ ಸ್ವಾನ್ ಖಂಡಿತಾ ನಾನು ಸನ್‌ರೈಸರ್ಸ್ ಹೈದರಾಬಾದ್ ಜೊತೆಗೆ ಹೋಗುತ್ತೇನೆ. ಜಾನಿ ಬೈರ್‌ಸ್ಟೋವ್ ಟೂರ್ನಿಯಲ್ಲಿ ಅತ್ಯಂತ ಚುರುಕಾಗಿ ಹಾಗೂ ಅದ್ಭುತವಾಗಿ ಕಾಣಿಸುತ್ತಾರೆ. ಮುಂಬರುವ ಪಂದ್ಯಗಳಲ್ಲಿ ಇನ್ನಷ್ಟು ಅದ್ಭುತವಾಗಿ ಅವರು ಆಡಲಿದ್ದಾರೆ. ಈ ಮೂಲಕ ಸನ್‌ರೈಸರ್ಸ್ ತಂಡವನ್ನು ಟಾಪ್4ಗೆ ತರುವಲ್ಲಿ ಯಶಸ್ವಿಯಾಗಲಿದ್ದಾರೆ ಎಂದಿದ್ದಾರೆ.

IPLನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಸ್‌: ಟಾಪ್ 10ನಲ್ಲಿ 7 ಭಾರತೀಯ ಬೌಲರ್ಸ್IPLನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಸ್‌: ಟಾಪ್ 10ನಲ್ಲಿ 7 ಭಾರತೀಯ ಬೌಲರ್ಸ್

"ಪ್ಲೇ ಆಫ್ ಹಂತಕ್ಕೇರುವ ನಾಲ್ಕನೇ ತಂಡವನ್ನು ಮೆದುಳಿಗಿಂತಲೂ ಹೆಚ್ಚಾಗಿ ಹೃದಯ ರಾಜಸ್ಥಾನ್ ರಾಯಕ್ಸ್ ಎಂದು ಹೇಳುತ್ತಿದೆ. ಒಂದು ಓಒವರ್‌ನಲ್ಲಿ ತೆವಾಟಿಯಾ ಬಾರಿಸಿದ 5 ಸಿಕ್ಸರ್‌ನ ಕಾರಣದಿಂದಾಗಿ ಆರ್‌ಆರ್ ತಂಡ ನನ್ನ ಹೃದಯ ಗೆದ್ದಿತು. ಮುಂದಿನ ಮೂರು ಪಂದ್ಯಗಳನ್ನು ಆರ್‌ಆರ್ ಸೋತರೂ ಅವರು ಕೆಟ್ಟ ಆಟವನ್ನು ನೀಡಿಲ್ಲ. ಬೆನ್ ಸ್ಟೋಕ್ಸ್ ತಂಡಕ್ಕೆ ಮರಳಿದ್ದು ಅವರು ಮುಂದಿನ ಹಂತಕ್ಕೆ ತೇರ್ಗಡೆ ಹೊಂದಲಿದ್ದಾರೆ" ಎಂದು ಸ್ಟೋಕ್ಸ್ ಹೇಳಿದ್ದಾರೆ.

Story first published: Wednesday, October 14, 2020, 12:21 [IST]
Other articles published on Oct 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X