ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ಸಿಎಸ್‌ಕೆ ಪರ ಆಡೋದು ಅನುಮಾನ

IPL 2020: Harbhajan Singh Doubtful For this Season due to Covid-29 Cases in CSK Camp

ನವದೆಹಲಿ: 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಕ್ಕೆ ಇನ್ನು ಎರಡು ವಾರಗಳಷ್ಟೇ ಬಾಕಿ ಉಳಿದಿದೆ. ಅದರೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ಸಮಸ್ಯೆಗಳಿನ್ನೂ ಕೊನೆಗೊಂಡಿಲ್ಲ. ಸಿಎಸ್‌ಕೆ ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ಕೂಡ ಈ ಬಾರಿ ಸಿಎಸ್‌ಕೆ ಪರ ಆಡೋದು ಅನುಮಾನ ಎನ್ನಲಾಗುತ್ತಿದೆ.

2020ರ ಐಪಿಎಲ್‌ಗೆ ಮತ್ತೊಂದು ಹಿನ್ನಡೆ, ಟೂರ್ನಿ ಆರಂಭ ವಿಳಂಬ ಸಾಧ್ಯತೆ!2020ರ ಐಪಿಎಲ್‌ಗೆ ಮತ್ತೊಂದು ಹಿನ್ನಡೆ, ಟೂರ್ನಿ ಆರಂಭ ವಿಳಂಬ ಸಾಧ್ಯತೆ!

ಸಿಎಸ್‌ಕೆ ತಂಡದಲ್ಲಿ ಇಬ್ಬರು ಆಟಗಾರರು ಸೇರಿ 11-12 ಮಂದಿಗೆ ಕೊರೊನಾ ಈಗಾಗಲೇ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ. ಸುರೇಶ್ ರೈನಾ ಫ್ರಾಂಚೈಸಿ ಜೊತೆಗಿನ ವೈಮನಸ್ಸಿನಿಂದ ಈ ಬಾರಿ ಸಿಎಸ್‌ಕೆಯಲ್ಲಿ ಆಡುತ್ತಿಲ್ಲ ಎಂದು ಹೇಳಲಾಗುತ್ತಿದೆ. ಈ ಮಧ್ಯೆ ಭಜ್ಜಿ ಕೂಡ ಚೆನ್ನೈನಲ್ಲಿ ಆಡುವುದು ಅನುಮಾನ ಎಂದು ವರದಿಯೊಂದು ಹೇಳಿದೆ.

ವಿರಾಟ್ ಕೊಹ್ಲಿ, ಆ್ಯರನ್ ಫಿಂಚ್ ದಾಖಲೆ ಸರಿದೂಗಿಸಿದ ಬಾಬರ್ ಅಝಾಮ್ವಿರಾಟ್ ಕೊಹ್ಲಿ, ಆ್ಯರನ್ ಫಿಂಚ್ ದಾಖಲೆ ಸರಿದೂಗಿಸಿದ ಬಾಬರ್ ಅಝಾಮ್

ಇನ್‌ಸೈಡ್‌ಸ್ಪೋರ್ಟ್ ವರದಿಯ ಪ್ರಕಾರ, ಹರ್ಭಜನ್ ಸಿಂಗ್ ಐಪಿಎಲ್‌ಗಾಗಿ ಮಂಗಳವಾರ (ಸೆಪ್ಟೆಂಬರ್ 1) ದುಬೈ ವಿಮಾನಯಾನ ಕೈಗೊಳ್ಳಬೇಕಿತ್ತು. ಆದರೆ ಸಿಎಸ್‌ಕೆಯಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣದಿಂದಾಗಿ ಭಜ್ಜಿ ದುಬೈಗೆ ಪ್ರಯಾಣಿಸಲು ಹಿಂದೇಟು ಹಾಕುತ್ತಿದ್ದಾರೆ.

ರೂಮ್ ವಿಚಾರಕ್ಕೆ ಜಗಳ ತೆಗೆದು ವಾಪಾಸ್ಸಾದರಾ ಸುರೇಶ್ ರೈನಾ? ಏನಾಗುತ್ತಿದೆ ಸಿಎಸ್‌ಕೆ ಪಾಳಯದಲ್ಲಿ!ರೂಮ್ ವಿಚಾರಕ್ಕೆ ಜಗಳ ತೆಗೆದು ವಾಪಾಸ್ಸಾದರಾ ಸುರೇಶ್ ರೈನಾ? ಏನಾಗುತ್ತಿದೆ ಸಿಎಸ್‌ಕೆ ಪಾಳಯದಲ್ಲಿ!

'ಮಂಗಳವಾರ ಹರ್ಭಜನ್ ಸಿಂಗ್ ಸಿಎಸ್‌ಕೆ ತಂಡವನ್ನು ಸೇರಿಕೊಳ್ಳಬೇಕಿತ್ತು. ಆದರೆ ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿರುವ ಸದ್ಯದ ಪರಿಸ್ಥಿತಿ ಹರ್ಭಜನ್ ಅವರನ್ನು ತುಂಬಾ ಚಿಂತೆಗೀಡು ಮಾಡಿದೆ. ಈಗಾಗಿ ಭಜ್ಜಿ ಒಂದೋ ಅವರ ವೇಳಾಪಟ್ಟಿಯನ್ನು ಬದಲಿಸಬಹುದು. ಅಥವಾ ಈ ವರ್ಷದ ಐಪಿಎಲ್ ಅನ್ನು ತಪ್ಪಿಸಿಕೊಳ್ಳಬಹುದು,' ಎಂದು ಭಜ್ಜಿಗೆ ಆಪ್ತ ಮೂಲವೊಂದು ಮಾಹಿತಿ ನೀಡಿದೆ.

Story first published: Tuesday, September 1, 2020, 10:02 [IST]
Other articles published on Sep 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X