ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಬಾಯಲ್ಲಿ ನೀರು ಬಂದಿತ್ತು': ಹಾರ್ದಿಕ್ ಪಾಂಡ್ಯ ಹೇಳಿದ್ದು ಯಾವುದಕ್ಕೆ ಗೊತ್ತೇ?

ಸಾಮಾನ್ಯವಾಗಿ ನಮಗೆ ಇಷ್ಟವಾದ ತಿಂಡಿ ತಿನಿಸಿನ ಬಗ್ಗೆ ಕೇಳಿದಾಗ, ಅದನ್ನು ಕಂಡಾಗ ನಾಲಿಗೆ ಅದನ್ನು ಬಯಸುವುದು ಸಹಜ. ತಿನ್ನುವ ಆಸೆ ಹೆಚ್ಚಾದಾಗ ಬಾಯಲ್ಲಿ ನೀರು ಬರುವಂತಹ ಸಮಯವದು. ಆದರೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧ ಬ್ಯಾಟಿಂಗ್ ಮಾಡುವಾಗಲೂ ಮುಂಬೈ ಇಂಡಿಯನ್ಸ್ ತಂಡದ ಹಾರ್ದಿಕ್ ಪಾಂಡ್ಯ ಬಾಯಲ್ಲಿ ನೀರು ಬಂದಿತ್ತಂತೆ. ಅದನ್ನು ಸ್ವತಃ ಅವರು ಹೇಳಿಕೊಂಡಿದ್ದಾರೆ.

ಹಾಗೆಂದು ಪಂದ್ಯ ಮಾಡುವಾಗ ಪಾಂಡ್ಯ ಅಚ್ಚುಮೆಚ್ಚಿನ ತಿನಿಸೇನೂ ಅವರಿಗೆ ಕಂಡಿರಲಿಲ್ಲ. ಆದರೆ ಅವರಿಗೆ ಕಂಡಿದ್ದು, ಹಾಗೆ ಇಷ್ಟವಾದ ತಿನಿಸನ್ನು ತಿಂದಾಗ ಸಿಗುವ ಖುಷಿಯಷ್ಟೇ ಮುದ ನೀಡುವ ಬೌಲರ್ ಅನ್ನು. ಆ ಬೌಲರ್ ಬೇರಾರೂ ಅಲ್ಲ, ಕರ್ನಾಟಕದ ಕೃಷ್ಣಪ್ಪ ಗೌತಮ್. ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದ ಹಾರ್ದಿಕ್ ಪಾಂಡ್ಯ ಮತ್ತು ಕೀರನ್ ಪೊಲಾರ್ಡ್, ವೇಗದ ಬೌಲರ್‌ಗಳ ಎಸೆತಗಳನ್ನು ಆರಾಮಾಗಿ ಬೌಂಡರಿಗೆ ಅಟ್ಟುತ್ತಿದ್ದರು.

ಅವಕಾಶ ಪಡೆಯದ ಕ್ರಿಸ್ ಗೇಲ್: ಸ್ಫೋಟಕ ಆಟಗಾರನ ಯುಗಾಂತ್ಯ?ಅವಕಾಶ ಪಡೆಯದ ಕ್ರಿಸ್ ಗೇಲ್: ಸ್ಫೋಟಕ ಆಟಗಾರನ ಯುಗಾಂತ್ಯ?

ನಾಯಕ ಕೆಎಲ್ ರಾಹುಲ್ ಕೊನೆಯ ಓವರ್ ಎಸೆಯಲು ಆಫ್ ಸ್ಪಿನ್ನರ್ ಕೆ. ಗೌತಮ್ ಅವರಿಗೆ ಚೆಂಡು ನೀಡಿದಾಗ ಪಾಂಡ್ಯ ಮತ್ತು ಪೊಲಾರ್ಡ್ ಅವರಿಗೆ ಲಡ್ಡು ಬಂದು ಬಾಯಿಗೆ ಬಿದ್ದ ಸಂಭ್ರಮವಾಗಿತ್ತು. ಮುಂದೆ ಓದಿ...

ಬಾಯಲ್ಲಿ ನೀರು ಬಂದ ಕ್ಷಣ

ಬಾಯಲ್ಲಿ ನೀರು ಬಂದ ಕ್ಷಣ

'20ನೇ ಓವರ್ ಬೌಲಿಂಗ್ ಮಾಡಲು ಆಫ್ ಸ್ಪಿನ್ನರ್ ಬರುತ್ತಿದ್ದಾರೆ ಎಂದರೆ ನನಗೆ ಅದೊಂದು ರೀತಿ ಬಾಯಲ್ಲಿ ನೀರೂರಿಸುವಂತಹ ಕ್ಷಣ. ನನ್ನ ಹಾಗೂ ಪೊಲಾರ್ಡ್ ನಡುವೆ ಹೇಗೆಂದರೆ, ಯಾರು ಈ ಅವಕಾಶ ತಪ್ಪಿಸಿಕೊಳ್ಳುತ್ತಾರೋ ಅವರು ನಾನ್ ಸ್ಟ್ರೈಕರ್ ತುದಿಯಲ್ಲಿ ನಿಂತು ನೋಡುತ್ತಾ ಇರಬೇಕು. ನಾನು ಎರಡು ಎಸೆತಗಳನ್ನು ಮಿಸ್ ಮಾಡಿಕೊಂಡೆ. ಆದರೆ ಪೊಲಾರ್ಡ್ ಹೆಚ್ಚಿನ ಅವಕಾಶ ಗಿಟ್ಟಿಸಿದರು' ಎಂದು ಹಾರ್ದಿಕ್ ಹೇಳಿದ್ದಾರೆ.

ಹೀಗೆ ಹಲವು ಬಾರಿ ಆಡಿದ್ದೇವೆ

ಹೀಗೆ ಹಲವು ಬಾರಿ ಆಡಿದ್ದೇವೆ

ಕೊನೆಯ ಆರು ಓವರ್‌ಗಳಲ್ಲಿ ಮುಂಬೈ ಇಂಡಿಯನ್ಸ್ ತಂಡ 104 ರನ್‌ಗಳನ್ನು ಬಾರಿಸಿತ್ತು. ಪೊಲಾರ್ಡ್ 20 ಎಸೆತಗಳಲ್ಲಿ ಅಜೇಯ 47 ರನ್ ಬಾರಿಸಿದರೆ, ಹಾರ್ದಿಕ್ ಪಾಂಡ್ಯ ಕೇವಲ 11 ಎಸೆತಗಳಲ್ಲಿ 30 ರನ್ ಗಳಿಸಿದ್ದರು. ಈ ರೀತಿ ನಾನು ಮತ್ತು ಪೊಲಾರ್ಡ್ ಹಲವು ಬಾರಿ ಅಮೋಘವಾಗಿ ಆಡಿದ್ದೇವೆ. ನಾನು ಮೈದಾನ ಪ್ರವೇಶಿಸುವಾಗ ಇದ್ದ ಸ್ಪಷ್ಟ ಸಂದೇಶ ಏನೆಂದರೆ ಬೌಲರ್‌ಗಳ ಮೇಲೆ ಸವಾರಿ ಮಾಡಬೇಕೆಂದು ಎಂದಿದ್ದಾರೆ ಪಾಂಡ್ಯ.

ಐಪಿಎಲ್ 2020: ಗಮನ ಸೆಳೆದ ಭಾರತದ 5 ಯುವ ಪ್ರತಿಭೆಗಳು

ನಮಗೆ ಹೆಮ್ಮೆ ಇದೆ

ನಮಗೆ ಹೆಮ್ಮೆ ಇದೆ

'ನಮಗೆ ಇದ್ದದ್ದು ಕೊನೆಯಲ್ಲಿ ದೊಡ್ಡ ಮೊತ್ತ ಸೇರಿಸಬೇಕು ಎಂದು. ಕಿಂಗ್ಸ್ ತಂಡಕ್ಕೆ ಚೇಸಿಂಗ್‌ಗೆ ಕಷ್ಟವಾಗುವಷ್ಟು ರನ್ ಪೇರಿಸಬೇಕಿತ್ತು. 192ರಷ್ಟು ರನ್ ಆಗುತ್ತದೆ ಎಂದು ಊಹಿಸಿರಲಿಲ್ಲ. ಆದರೆ ಅದೃಷ್ಟ ನಮ್ಮ ಜತೆಗಿತ್ತು. ಆ ದೊಡ್ಡ ಮನುಷ್ಯ (ಕೀರನ್ ಪೊಲಾರ್ಡ್) ಮತ್ತೆ ಅದನ್ನು ಸಾಧಿಸಿದರು. ನಾವು ಬ್ಯಾಟಿಂಗ್ ಮಾಡಿದ ರೀತಿ ಬಗ್ಗೆ ನಮಗೆ ಹೆಮ್ಮೆ ಇದೆ' ಎಂದು ತಿಳಿಸಿದ್ದಾರೆ.

ಕೊನೆಗೂ ವಿಕೆಟ್ ಪಡೆದ ಗೌತಮ್

ಕೊನೆಗೂ ವಿಕೆಟ್ ಪಡೆದ ಗೌತಮ್

ಕೃಷ್ಣಪ್ಪ ಗೌತಮ್ ಮೊದಲ 3 ಓವರ್‌ಗಳಲ್ಲಿ 20 ರನ್ ನೀಡಿ ಒಂದು ವಿಕೆಟ್ ಪಡೆದಿದ್ದರು. ಆದರೆ ಮುಂಬೈ ಇನ್ನಿಂಗ್ಸ್‌ನ ಕೊನೆಯ ಓವರ್‌ನಲ್ಲಿ 25 ರನ್ ನೀಡಿದರು. ಅದರಲ್ಲಿ ನಾಲ್ಕು ಭರ್ಜರಿ ಸಿಕ್ಸರ್‌ಗಳಿದ್ದವು. ಹಾರ್ದಿಕ್ ಪಾಂಡ್ಯ ಒಂದು ಹಾಗೂ ಕೀರನ್ ಪೊಲಾರ್ಡ್ ಕೊನೆಯ ಮೂರೂ ಎಸೆತಗಳನ್ನು ಸಿಕ್ಸರ್ ಬಾರಿಸಿದ್ದರು. ಈ ಪಂದ್ಯದಲ್ಲಿ ಗೌತಮ್, ಇಶಾನ್ ಕಿಶನ್ ವಿಕೆಟ್ ಪಡೆದಿದ್ದರು. ಕಳೆದ ಎಂಟು ಐಪಿಎಲ್ ಪಂದ್ಯಗಳಲ್ಲಿ ಇದು ಅವರ ಮೊದಲ ವಿಕೆಟ್.

Story first published: Saturday, October 3, 2020, 9:25 [IST]
Other articles published on Oct 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X