ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಯುಎಇಗೆ ಬಂದಿಳಿದ ಮಿಮೆನ್ಸ್ ಚಾಲೆಂಜರ್ ತಾರೆಗಳು

IPL 2020: Harmanpreet, Smriti, Shafali arrive in UAE for Womens T20 Challenge

ಈ ಬಾರಿಯ ಐಪಿಎಲ್ ಟೂರ್ನಿಯ ಅಂತಿಮ ಹಂತವನ್ನು ತಲುಪುತ್ತಿದ್ದಂತೆಯೇ 'ವಿಮೆನ್ಸ್ ಟಿ20 ಚಾಲೆಂಜ್' ನಡೆಯಲಿದೆ. ಇದರಲ್ಲಿ ಪಾಲ್ಗೊಳ್ಳಲು ಮಹಿಳಾ ತಂಡಗಳ ಆಟಗಾರ್ತಿಯರು ಯುಎಇಗೆ ಬಂದಿಳಿದಿದ್ದಾರೆ. ಟೀಮ್ ಇಂಡಿಯಾದ ಮಹಿಳಾ ಕ್ರಿಕೆಟ್ ತಂಡದ ಪ್ರಮುಖ ಆಟಗಾರ್ತಿಯರಾದ ಹರ್ಮನ್‌ಪ್ರೀತ್ ಕೌರ್ ಸ್ಮೃತಿ ಮಂದಾನ ಹಾಗೂ ಶೆಫಾಲಿ ವರ್ಮ ಸಹಿತ ಆಟಗಾರ್ತಿಯರು ದುಬೈಗೆ ಕಾಲಿಟ್ಟಿದ್ದಾರೆ.

ಭಾರತೀಯ ಮಹಿಳಾ ಕ್ರಿಕೆಟ್‌ನ 30 ಅಗ್ರ ಆಟಗಾರ್ತಿಯರು ಮಿನಿ ಮಹಿಳಾ ಐಪಿಎಲ್ ಎಂದು ಕರೆಯಲ್ಪಡುವ ವಿಮೆನ್ಸ್ ಟಿ20 ಚಾಲೆಂಜ್‌ನಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದಾರೆ. ನವೆಂಬರ್ 4-9ರ ವರೆಗೆ ಶಾರ್ಜಾ ಕ್ರೀಡಾಂಗಣದಲ್ಲಿ ಈ ಟೂರ್ನಿ ಆಯೋಜನೆಯಾಗಲಿದೆ. ಭಾರತೀಯ ಆಟಗಾರ್ತಿಯರು ಮಾತ್ರವಲ್ಲಿದೆ ವಿದೇಶಗಳ ಕೆಲ ಪ್ರಮುಖ ಆಟಗಾರ್ತಿಯರು ಕೂಡ ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

ನಿಯಮದ ಪ್ರಕಾರ ಮುಂದಿನ ಆರುದಿನಗಳ ಕಾಲ ಮಹಿಳಾ ಆಟಗಾರ್ತಿಯರು ಕೂಡ ಕ್ವಾರಂಟೈನ್‌ಗೆ ಒಳಗಾಗಲಿದ್ದಾರೆ. ಇದರ ಜೊತೆಗೆ ಹಲವು ಕೋವಿಡ್ ಪರೀಕ್ಷೆಗೂ ಒಳಗಾಗಲಿದ್ದಾರೆ. ಬಳಿಕ ಬಯೋ ಬಬಲ್‌ಗೆ ಎಲ್ಲಾ ಆಟಗಾರ್ತಿಯರು ಸೇರಿಕೊಳ್ಳಲಿದ್ದಾರೆ.

KKR ವಿರುದ್ಧ ಧೂಳೆಬ್ಬಿಸಿದ ಸಿರಾಜ್ ಬದಲು, ವಾ. ಸುಂದರ್‌ಗೆ ಬೌಲಿಂಗ್‌ ಕೊಡಲು ಯೋಚಿಸಿದ್ದ ಕೊಹ್ಲಿKKR ವಿರುದ್ಧ ಧೂಳೆಬ್ಬಿಸಿದ ಸಿರಾಜ್ ಬದಲು, ವಾ. ಸುಂದರ್‌ಗೆ ಬೌಲಿಂಗ್‌ ಕೊಡಲು ಯೋಚಿಸಿದ್ದ ಕೊಹ್ಲಿ

ಸೂಪರ್‌ನೋವಾಸ್: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರೊಡ್ರಿಗಸ್ (ಉಪನಾಯಕಿ), ಚಮರಿ ಅತಪಟ್ಟು, ಪ್ರಿಯಾ ಪೂನಿಯಾ, ಅನುಜಾ ಪಾಟೀಲ್, ರಾಧಾ ಯಾದವ್, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಶಶಿಕಲಾ ಸಿರಿವರ್ಧನೆ, ಪೂನಂ ಯಾದವ್, ಶಕೇರಾ ಸಲ್ಮನ್, ಅರುಂಧತಿ ರೆಡ್ಡಿ, ಪೂಜಾ ವಸ್ತ್ರಕಾರ್ , ಮುಸ್ಕನ್ ಮಲಿಕ್.

ಟ್ರೈಬ್ಲೇಸರ್ಸ್: ಸ್ಮೃತಿ ಮಂಧಾನ (ನಾಯಕಿ), ದೀಪ್ತೀ ಶರ್ಮಾ (ಉಪನಾಯಕಿ), ಪೂನಂ ರಾವತ್, ರಿಚಾ ಘೋಶ್, ಡಿ ಹೇಮಲತಾ, ನೌಝತ್ ಪರ್ವೀನ್ (ವಿಕೆಟ್ ಕೀಪರ್), ರಾಜೇಶ್ವರಿ ಗಾಯಕ್ವಾಡ್, ಹರ್ಲೀನ್ ಡಿಯೋಲ್, ಜೂಲನ್ ಗೋಸ್ವಾಮಿ, ಸಿಮ್ರನ್ ದಿಲ್ ಬಹದ್ದೂರ್, ಸಲ್ಮಾ ಖತುನ್, ಸೋಫಿ ಎಕ್ಲೆಸ್ಟೋನ್, ನಥಕನ್ ಚಾಂಥಮ್, ದಿಯಾಂದ್ರ ಡೊಟಿನ್, ಕಾಶ್ವೀ ಗೌತಮ್

ವೆಲಾಸಿಟಿ: ಮಿಥಾಲಿ ರಾಜ್ (ನಾಯಕಿ), ವೇದಾ ಕೃಷ್ಣಮೂರ್ತಿ (ಉಪನಾಯಕಿ), ಶಫಾಲಿ ವರ್ಮಾ, ಸುಷ್ಮಾ ವರ್ಮಾ (ವಿಕೆಟ್ ಕೀಪರ್), ಏಕ್ತಾ ಬಿಶ್ತ್, ಮಾನ್ಸಿ ಜೋಶಿ, ಶಿಖಾ ಪಾಂಡೆ, ದೇವಿಕಾ ವೈದ್ಯ, ಸುಶ್ರೀ ದಿವ್ಯದರ್ಶಿನಿ, ಮನಾಲಿ ದಕ್ಷಿಣಿ, ಲೀ ಕಾಸ್ಪೆರೆಕ್, ಡೇನಿಯಲ್ ವ್ಯಾಟ್, ಸುನ್ ಲೂಸ್, ಜಹನಾರಾ ಆಲಂ, ಎಂ. ಅನಘಾ.

Story first published: Friday, October 23, 2020, 10:20 [IST]
Other articles published on Oct 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X