ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪ್ರೇಕ್ಷಕರಿಲ್ಲದೆ ಎಂಎಸ್ ಧೋನಿ ಆಟವನ್ನು ಅಂತ್ಯಗೊಳಿಸ ಬಾರದು: ಮೈಕಲ್ ವಾನ್

IPL 2020: He cannot finish in front of no crowd says Michael Vaughan on MS Dhoni

ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಈ ಬಾರಿಯ ಐಪಿಎಲ್ ಟೂರ್ನಿಯ ಅಂತಿಮ ಪಂದ್ಯದಲ್ಲಿ ಕಣಕ್ಕಿಳಿಯುವ ಮುನ್ನ ಇದು ತನ್ನ ಕೊನೆಯ ಐಪಿಎಲ್ ಅಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ಇದಾದ ಬಳಿಕ ಧೋನಿ ಹೇಳಿಕೆ ಬಗ್ಗೆ ಸಾಕಷ್ಟು ಅಭಿಪ್ರಾಯಗಳು ಕೇಳಿ ಬಂದಿದೆ. ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ತನ್ನ ಅಂತಿಮ ಪಂದ್ಯವನ್ನು ತುಂಬಿದ ಪ್ರೇಕ್ಷಕರ ಮಧ್ಯೆ ಆಡಿ ವಿದಾಯ ಹೇಳುತ್ತಾರೆ ಎಂದು ನಂಬಿಕೊಳ್ಳುತ್ತೇನೆ ಎಂದು ಮೈಕಲ್ ವಾನ್ ಹೇಳಿದ್ದಾರೆ. ಈ ಮೂಲಕ ಐಪಿಎಲ್ ವಿದಾಯದ ಬಗ್ಗೆ ಧೋನಿ ಹೇಳಿಕೆಗೆ ಪೂರಕವಾಗಿ ಅಭಿಪ್ರಾಯ ತಿಳಿಸಿದ್ದಾರೆ.

ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಆರ್‌ಸಿಬಿ, ಡೆಲ್ಲಿ: ಪ್ಲೇಆಫ್‌ಗೆ ಕೊನೆಯ ಅವಕಾಶ!ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಆರ್‌ಸಿಬಿ, ಡೆಲ್ಲಿ: ಪ್ಲೇಆಫ್‌ಗೆ ಕೊನೆಯ ಅವಕಾಶ!

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಹೆಚ್ಚಾಗಿ ನಿರಾಸೆಯನ್ನೇ ಕಂಡ ಚೆನ್ನೈ ಸೂಪರ್ ಕಿಂಗ್ಸ್ ಅಂತಿಮ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡಿತ್ತು. ಕೊನೆಯ ಪಂದ್ಯವನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 9 ವಿಕೆಟ್‌ಗಳ ಜಯವನ್ನು ಸಾಧಿಸುವ ಮೂಲಕ ಟೂರ್ನಿಯನ್ನು ಅಂತ್ಯಗೊಳಿಸಿತು. ಈ ಮೂಲಕ ಕೊನೆಯ ಮುರು ಪಂದ್ಯಗಳಲ್ಲಿ ಸತತ ಗೆಲುವನ್ನು ಸಾಧಿಸಿದೆ.

ಈ ಪಂದ್ಯದ ಆರಂಭಕ್ಕೂ ಮುನ್ನ ಟಾಸ್ ಸಂದರ್ಭದಲ್ಲಿ ಎಂಎಸ್ ಧೋನಿಯ ಐಪಿಎಲ್ ವಿದಾಯದ ಬಗ್ಗೆ ಡ್ಯಾನ್ ಮಾರಿಸನ್ ಕೇಳಿದ ಪ್ರಶ್ನೆಗೆ "ಖಂಡಿತವಾಗಿಯೂ ಇಲ್ಲ" ಎಂದು ಸ್ಪಷ್ಟ ಮಾತುಗಳಲ್ಲಿ ಧೋನಿ ಮುಂದಿನ ಐಪಿಎಲ್ ಆವೃತ್ತಿಯಲ್ಲಿ ಪಾಲ್ಗೊಳ್ಳುವ ಬಗ್ಗೆ ಖಚಿತ ಸಂದೇಶ ರವಾನಿಸಿದರು.

ಐಪಿಎಲ್ ಅಂಕಪಟ್ಟಿ: ಅತಿ ಹೆಚ್ಚು ಬಾರಿ ಕೊನೆ ಸ್ಥಾನಕ್ಕೆ ಕುಸಿದ ತಂಡ ಯಾವ್ದು?ಐಪಿಎಲ್ ಅಂಕಪಟ್ಟಿ: ಅತಿ ಹೆಚ್ಚು ಬಾರಿ ಕೊನೆ ಸ್ಥಾನಕ್ಕೆ ಕುಸಿದ ತಂಡ ಯಾವ್ದು?

"ಮುಂದಿನ ವರ್ಷವೂ ಐಪಿಎಲ್ ಯುಎಇನಲ್ಲ ನಡೆಯಬಹುದು ಎಂಬ ಪಿಸುಮಾತುಗಳು ಕೇಳಿ ಬರುತ್ತಿದೆ. ಅದು ನಿಜವೇ ಆದಲ್ಲಿ ಧೋನಿ ಮತ್ತೊಂದು ವರ್ಷವೂ ಕಣಕ್ಕಿಳಿಯಬೇಕು. ಅವರು ಐಪಿಎಲ್ ವೃತ್ತಿಜೀವನವನ್ನು ಪ್ರೇಕ್ಷಕರಿಲ್ಲದೆ ಅಂತ್ಯಗೊಳಿಸಲು ಸಾಧ್ಯವಿಲ್ಲ" ಎಂದು ಮೈಕಲ್ ವಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ

Story first published: Monday, November 2, 2020, 13:39 [IST]
Other articles published on Nov 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X