ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಇತಿಹಾಸದಲ್ಲಿ ಟೈ ಎನಿಸಲ್ಪಟ್ಟ ಅತ್ಯಧಿಕ ರನ್‌ ಟೋಟಲ್‌ಗಳು

IPL 2020: Highest totals in a tied match in IPL history

ದುಬೈ: ದುಬೈ ಇಂಟರ್‌ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 2020ರ 10ನೇ ಪಂದ್ಯ ರೋಚಕವೆನಿಸಿತ್ತು. ಕಾರಣ ಇದು ಐಪಿಎಲ್‌ ಇತಿಹಾಸದಲ್ಲಿ ನಡೆದಿದ್ದ 11ನೇ ಸೂಪರ್ ಓವರ್ ಪಂದ್ಯ. ಎದುರಾಳಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ನೀಡಿದ್ದ ಸವಾಲಿನ ರನ್‌ ಅನ್ನು ಮುಂಬೈ ಇಂಡಿಯನ್ಸ್ ಕೂಡ ತಲುಪಿತ್ತು. ಅಂದ್ಹಾಗೆ ಇದು ಐಪಿಎಲ್ ಇತಿಹಾಸದ 11ನೇ ಸೂಪರ್ ಓವರ್ ಪಂದ್ಯವಾಗಿತ್ತು.

 ಐಪಿಎಲ್ 2020: ಸಿಕ್ಸ್‌ನಲ್ಲಿ 'ಹಿಟ್‌ಮ್ಯಾನ್' ರೋಹಿತ್ ಶರ್ಮಾ ದಾಖಲೆ ಐಪಿಎಲ್ 2020: ಸಿಕ್ಸ್‌ನಲ್ಲಿ 'ಹಿಟ್‌ಮ್ಯಾನ್' ರೋಹಿತ್ ಶರ್ಮಾ ದಾಖಲೆ

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ವಿರಾಟ್ ಕೊಹ್ಲಿ ಪಡೆ, ದೇವದತ್ ಪಡಿಕ್ಕಲ್ 54 (40 ಎಸೆತ), ಆ್ಯರನ್ ಫಿಂಚ್ 52 (35 ಎಸೆತ), ಎಬಿ ಡಿವಿಲಿಯರ್ಸ್ 55 (24 ಎಸೆತ), ಶಿವಂ ದೂಬೆ 27 ರನ್ ಕೊಡುಗೆಯೊಂದಿಗೆ 20 ಓವರ್‌ಗೆ 3 ವಿಕೆಟ್ ಕಳೆದು 201 ರನ್ ಪೇರಿಸಿತು.

ಐಪಿಎಲ್‌ನಲ್ಲಿ 99 ರನ್ ಗಳಿಸಿ ಶತಕ ವಂಚಿತರು: ರೈನಾರಿಂದ ಇಶಾನ್ ಕಿಶಾನ್ ತನಕಐಪಿಎಲ್‌ನಲ್ಲಿ 99 ರನ್ ಗಳಿಸಿ ಶತಕ ವಂಚಿತರು: ರೈನಾರಿಂದ ಇಶಾನ್ ಕಿಶಾನ್ ತನಕ

ಐಪಿಎಲ್‌ ಇತಿಹಾಸದಲ್ಲಿ ಪಂದ್ಯವೊಂದು ಟೈ ಆದಾಗ ದಾಖಲಾಗಿದ್ದ ಅತ್ಯಧಿಕ ಟೋಟಲ್‌ ಮಾಹಿತಿ ಕೆಳಗಿದೆ ನೋಡಿ.

ಸೋಲೋ ಪಂದ್ಯ ಟೈ ಮಾಡಿದ ಮುಂಬೈ

ಸೋಲೋ ಪಂದ್ಯ ಟೈ ಮಾಡಿದ ಮುಂಬೈ

ಗುರಿ ಬೆನ್ನಟ್ಟಿದ ಮುಂಬೈ ಕೂಡ ರೋಹಿತ್ ಶರ್ಮಾ 8, ಹಾರ್ದಿಕ್ ಪಾಂಡ್ಯ 15, ಇಶಾನ್ ಕಿಶನ್ 99, ಕೀರನ್ ಪೊಲಾರ್ಡ್ 60 ರನ್ ಸೇರ್ಪಡೆಯೊಂದಿಗೆ 20 ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 201 ರನ್ ಗಳಿಸಿ ಪಂದ್ಯವನ್ನು ಟೈ ಮಾಡಿಕೊಂಡಿತು.

ಸೂಪರ್‌ ಓವರ್‌ನಲ್ಲಿ ಆರ್‌ಸಿಬಿ ಮೇಲುಗೈ

ಸೂಪರ್‌ ಓವರ್‌ನಲ್ಲಿ ಆರ್‌ಸಿಬಿ ಮೇಲುಗೈ

ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 7 ರನ್ ಗಳಿಸಲಷ್ಟೇ ಶಕ್ತವಾಯ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8 ರನ್‌ ಬಾರಿಸಿ ರೋಚಕ ಗೆಲುವು ದಾಖಲಿಸಿತು. ಐಪಿಎಲ್‌ನಲ್ಲಿ ಆರ್‌ಸಿಬಿ ಎರಡು ಬಾರಿ ಸೂಪರ್‌ ಓವರ್‌ನಲ್ಲಿ ಗೆದ್ದಂತಾಗಿದೆ.

ಅತ್ಯಧಿಕ ಟೋಟಲ್

ಅತ್ಯಧಿಕ ಟೋಟಲ್

ಸೋಮವಾರದ ಪಂದ್ಯದಲ್ಲಿ ಆರ್‌ಸಿಬಿ-ಮುಂಬೈ ಟೈ ಮಾಡಿಕೊಂಡ ಟೋಟಲ್ ರನ್ ಐಪಿಎಲ್ ಇತಿಹಾಸದಲ್ಲೇ ಪಂದ್ಯವೊಂದು ಸಮಬಲ ಅನ್ನಿಸಿದ್ದ ಅತ್ಯಧಿಕ ಒಟ್ಟು ರನ್ ಎನಿಸಿದೆ. ಟೈ ಎನಿಸಿದ ಇನ್ನುಳಿದ ಪಂದ್ಯಗಳ ಅತ್ಯಧಿಕ ಒಟ್ಟು ರನ್‌ಗಳ ಮಾಹಿತಿ ಕೆಳಗಿದೆ ನೋಡಿ.

ಅತ್ಯಧಿಕ ಟೋಟಲ್‌ ರನ್‌ಗಳು ಟೈ ಎನಿಸಿದ್ದು

ಅತ್ಯಧಿಕ ಟೋಟಲ್‌ ರನ್‌ಗಳು ಟೈ ಎನಿಸಿದ್ದು

* 201 ರನ್, ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಮುಂಬೈ ಇಂಡಿಯನ್ಸ್, ದುಬೈ, 2020*
* 191 ರನ್, ರಾಜಸ್ಥಾನ್ ರಾಯಲ್ಸ್ vs ಕಿಂಗ್ಸ್ ಇಲೆವೆನ್ ಪಂಜಾಬ್, ಅಹ್ಮದಾಬಾದ್, 2015
* 185 ರನ್, ಕೋಲ್ಕತ್ತಾ ನೈಟ್ ರೈಡರ್ಸ್ vs ಡೆಲ್ಲಿ ಕ್ಯಾಪಿಟಲ್ಸ್, ನವದೆಹಲಿ, 2019

Story first published: Wednesday, September 30, 2020, 11:45 [IST]
Other articles published on Sep 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X