ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಕೆಕೆಆರ್ ತಂಡದ ವೇಗ ಹೆಚ್ಚಿಸಲು ಜೊತೆ ಸೇರಿದ ಒಲಿಂಪಿಕ್ ಓಟಗಾರ

Ipl 2020: How An Olympic Sprinter Chris Donaldson Helping Kkr Get Faster

ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ನ್ಯೂಜಿಲೆಂಡ್‌ನ ಮಾಜಿ ಒಲಿಂಪಿಕ್ಸ್ ಓಟಗಾರ ಕ್ರಿಸ್ ಡೊನಾಲ್ಡ್ಸನ್ ಅವರು ಸ್ಟ್ರೆಂತ್ ಮತ್ತು ಕಂಡಿಶನಿಂಗ್ ಕೋಚ್ ಆಗಿ ಸೇರ್ಪಡೆಗೊಂಡಿದ್ದಾರೆ. ತಂಡವನ್ನು ಕೂಡಿಕೊಮಡ ಬಳಿಕ ಮಾತನಾಡಿದ ಆವರು ವೇಗ ವರ್ಧನೆ ಕ್ರಿಕೆಟ್‌ನ ಮುಖ್ಯವಾದ ಗೇಮ್ ಚೇಂಜರ್ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಫೀಲ್ಡಿಂಗ್, ಬೌಂಡರಿಗೆ ಹೋಗುವ ಚೆಂಡನ್ನು ಬೆನ್ನಟ್ಟುವುದು, ರನ್ ಔಟ್ ಹೀಗೆ ಈ ಎಲ್ಲಾ ವಿಚಾರಗಳಲ್ಲಿ ಓಟ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ. ನೀವು ಹೇಗೆ ವೇಗವನ್ನು ಪಡೆಯುತ್ತೀರಿ ಎಂಬುದು ಆರಂಭದ ಎರಡು ಮೀಟರ್‌ಗಳಲ್ಲಿ ಸಾಕಷ್ಟು ವ್ಯತ್ಯಾಸಗಳನ್ನು ಮಾಡುವ ಸಾಧ್ಯತೆಯಿರುತ್ತದೆ. ಈ ವಿಚಾರದಲ್ಲಿ ಸಾಕಷ್ಟು ಶ್ರಮವಹಿಸಬೇಕಾಗುತ್ತದೆ ಎಂದು ಕ್ರಿಸ್ ಡೊನಾಲ್ಡ್ಸನ್ ಹೇಳಿದ್ದಾರೆ.

'ಯಾರ್ಕ್‌ಶೈರ್‌ ಕ್ರಿಕೆಟ್ ಕ್ಲಬ್‌ನಲ್ಲಿ ವರ್ಣಭೇದ ನೀತಿಗೆ ಒಳಗಾಗಿದ್ದೆ''ಯಾರ್ಕ್‌ಶೈರ್‌ ಕ್ರಿಕೆಟ್ ಕ್ಲಬ್‌ನಲ್ಲಿ ವರ್ಣಭೇದ ನೀತಿಗೆ ಒಳಗಾಗಿದ್ದೆ'

ಓಟದಲ್ಲಿನ ತನ್ನ ಪರಿಣತಿ ಕೆಕೆಆರ್ ತಂಡಕ್ಕೆ ನೆರವಾಗುವ ವಿಶ್ವಾಸವನ್ನು ಕ್ರಿಸ್ ಡೊನಾಲ್ಡ್ಸನ್ ವ್ಯಕ್ತಡಿಸಿದ್ದಾರೆ. ರನ್‌ಗಾಗಿ ವಿಕೆಟ್‌ಗಳ ನಡುವಿನ ಓಟ, ಹಾಗೂ ವೇಗದ ಬೌಲರ್‌ಗಳ ಓಟದ ವಿಚಾರವಾಗಿ ಕೆಕೆಆರ್ ವಿಶೇಷ ಪರಿಣತಿಯನ್ನು ಪಡೆದುಕೊಳ್ಳಲು ಸಾಧ್ಯವಾಗಲಿದ ಎಂದು ಅವರು ಹೇಳಿದ್ದಾರೆ.

'ಇದು ಎಲ್ಲವನ್ನೂ ಬದಲಾಯಿಸುವ ಪ್ರಯತ್ನವಲ್ಲ. ಯಾಕೆಂದರೆ ಆಟಗಾರರು ತಮ್ಮ ಜವಾಬ್ಧಾರಿಯಲ್ಲಿ ತುಂಬಾ ಪರಿಣತಿಯನ್ನು ಹೊಂದಿದವರಾಗಿದ್ದಾರೆ. ಆದರೆ ಟ್ರ್ಯಾಕ ಮತ್ತು ಫೀಲ್ಡ್‌ನಲ್ಲಿ ವಿವಿಧ ರೀತಿಯ ಚಲನೆಯ ಮಾದರಿಗಳು ಚಲಿಸುವ ಹಾಗೂ ಜಿಗಿಯುವ ವಿಚಾರದಲ್ಲಿ ಬೌಲರ್‌ಗಳು ಕೆಲ ವಿಶೇಷ ಕೌಶಲ್ಯವನ್ನು ಪಡೆಯಲು ಸಹಾಯವಾಗುತ್ತದೆ ಎಂದು ಕ್ರಿಸ್ ಡೊನಾಲ್ಡ್ಸನ್ ಹೇಳಿದ್ದಾರೆ.

ಅಲೆಕ್ಸ್ ಕ್ಯಾರಿ-ಗ್ಲೆನ್ ಮ್ಯಾಕ್ಸ್‌ವೆಲ್ ಜೊತೆಯಾಟಕ್ಕೆ ಶರಣಾದ ಇಂಗ್ಲೆಂಡ್ಅಲೆಕ್ಸ್ ಕ್ಯಾರಿ-ಗ್ಲೆನ್ ಮ್ಯಾಕ್ಸ್‌ವೆಲ್ ಜೊತೆಯಾಟಕ್ಕೆ ಶರಣಾದ ಇಂಗ್ಲೆಂಡ್

ಡೊನಾಲ್ಡ್ಸನ್ ಓಟಗಾರನಾಗಿ ಅನುಭವವನ್ನು ಹೊಂದಿರುವುದು ಮಾತ್ರವಲ್ಲದೆ ನ್ಯೂಜಿಲೆಂಡ್‌ನ ಕ್ರೀಡಾವಿಜ್ಞಾನ ಮತ್ತು ತಂತ್ರಜ್ಞಾನದ ಬೃಹತ್ ಸಂಸ್ಥೆಯಲ್ಲಿ ಕರ್ತವ್ಯವನ್ನು ನಿರ್ವಹಿಸಿದ್ದಾರೆ. ಬಳಿಕ ನ್ಯೂಜಿಲೆಂಡ್ ಕ್ರಿಕೆಟ್ ತಂಡದಲ್ಲಿ ವಿಶೇಷ ತರಬೇತುದಾರನಾಗಿ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.

Story first published: Thursday, September 17, 2020, 15:34 [IST]
Other articles published on Sep 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X