ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

KKR ಬ್ಯಾಟ್ಸ್‌ಮನ್‌ಗಳನ್ನ ಪೆವಿಲಿಯನ್‌ಗೆ ಅಟ್ಟಿದ ನಂತರ ಸಿರಾಜ್ ಹೇಳಿದ್ದೇನು?

IPL 2020: I Have Been Practicing A Lot With The New Ball; Mohammed Siraj

ಬುಧವಾರ ರಾತ್ರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೌಲರ್ ಮೊಹಮ್ಮದ್ ಸಿರಾಜ್ ಅಬುಧಾಬಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. ಮೊಹಮ್ಮದ್ ಸಿರಾಜ್ ತನ್ನ ಅದ್ಭುತ ಪ್ರದರ್ಶನದೊಂದಿಗೆ ಎಲ್ಲಾ ಟೀಕಾಕಾರರಿಗೆ ಉತ್ತರಿಸಿದರು. ಜೊತೆಗೆ ಪಂದ್ಯ ಪುರುಷೋತ್ರಮ ಪ್ರಶಸ್ತಿಯನ್ನು ಸ್ವೀಕರಿಸಿದ ನಂತರ ಸರ್ವಶಕ್ತನಿಗೆ ಧನ್ಯವಾದಗಳನ್ನು ಅರ್ಪಿಸಿದರು.

ಎರಡನೇ ಓವರ್‌ನಲ್ಲಿ ಮೊಹಮ್ಮದ್ ಸಿರಾಜ್ ಅವರು ರಾಹುಲ್ ತ್ರಿಪಾಠಿ ಮತ್ತು ನಿತೀಶ್ ರಾಣಾ ಅವರನ್ನು ಸತತ ಎಸೆತಗಳಲ್ಲಿ ಪೆವಿಲಿಯನ್‌ಗೆ ಕಳುಹಿಸಿದರು. ಮೂರನೇ ಓವರ್‌ನಲ್ಲಿ, ನವದೀಪ್ ಸೈನಿ ಶುಭಮನ್ ಗಿಲ್ ವಿಕೆಟ್ ಪಡೆದರೆ, ನಾಲ್ಕನೇ ಓವರ್‌ನಲ್ಲಿ ಸಿರಾಜ್ ಮತ್ತೆ ಅಬ್ಬರಿಸಿ ಟಾಮ್ ಬ್ಯಾಂಟನ್‌ನನ್ನು ಬಲಿ ಪಡೆದರು.

KKR ವಿರುದ್ಧ ಧೂಳೆಬ್ಬಿಸಿದ ಸಿರಾಜ್ ಬದಲು, ವಾ. ಸುಂದರ್‌ಗೆ ಬೌಲಿಂಗ್‌ ಕೊಡಲು ಯೋಚಿಸಿದ್ದ ಕೊಹ್ಲಿKKR ವಿರುದ್ಧ ಧೂಳೆಬ್ಬಿಸಿದ ಸಿರಾಜ್ ಬದಲು, ವಾ. ಸುಂದರ್‌ಗೆ ಬೌಲಿಂಗ್‌ ಕೊಡಲು ಯೋಚಿಸಿದ್ದ ಕೊಹ್ಲಿ

ಐಪಿಎಲ್ ಇತಿಹಾಸದಲ್ಲಿ ಸತತ ಎರಡು ಮೇಡನ್ ಓವರ್ ಮಾಡಿದ ಮೊದಲ ಬೌಲರ್ ಎಂಬ ಸಾಧನೆ ಮಾಡಿದ ಸಿರಾಜ್ ಕೆಕೆಆರ್ ಮತ್ತೆ ಚೇತರಿಸಿಕೊಳ್ಳದಂತಹ ಆಘಾತವನ್ನು ನೀಡಿದರು. 4-2-8-3ರ ಅಂಕಿಅಂಶಗಳೊಂದಿಗೆ ತನ್ನ ಬೌಲಿಂಗ್ ಸ್ಪೆಲ್ ಮುಗಿಸಿದ ಸಿರಾಜ್‌ಗೆ ಪ್ರದರ್ಶನವು ಅಬುಧಾಬಿಯಲ್ಲಿ ಅತ್ಯುತ್ತಮವಾಗಿತ್ತು. ಪಂದ್ಯ ಮುಗಿದ ಬಳಿಕ ತನ್ನ ಪ್ರದರ್ಶನ ಕುರಿತು ಸಿರಾಜ್ ಮಾತನಾಡಿದರು.

"ಮೊದಲು ನನ್ನ ಈ ಪ್ರದರ್ಶನಕ್ಕೆ ನಾನು ಅಲ್ಲಾಹನಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನಂತರ ನನಗೆ ಹೊಸ ಚೆಂಡನ್ನು ನೀಡಿದ ವಿರಾಟ್‌ಗೆ ಧನ್ಯವಾದಗಳು. ಹೊಸ ಚೆಂಡಿನೊಂದಿಗೆ ನಾನು ಸಾಕಷ್ಟು ಅಭ್ಯಾಸ ಮಾಡುತ್ತಿದ್ದೇನೆ. ನಾನು ಆರಂಭದಲ್ಲೇ ಬೌಲಿಂಗ್ ಮಾಡುತ್ತೇನೆ ಎಂದು ನಾವು ಯೋಜಿಸಿರಲಿಲ್ಲ ಆದರೆ ನಾವು ಹೊರಗೆ ಹೋದಾಗ ವಿರಾಟ್ ಭಾಯ್ ಮಿಯಾನ್ ರೆಡಿ ಹೋ ಜಾವೊ ಎಂದು ಹೇಳಿದರು. [ಸರ್, ಸಿದ್ಧರಾಗಿ.]. ರಾಣಾಗೆ ಎಸೆದ ಚೆಂಡು ತುಂಬಾ ಚೆನ್ನಾಗಿತ್ತು. ನಾನು ಯೋಜಿಸಿದ್ದನ್ನು ನಿಖರವಾಗಿ ಕಾರ್ಯಗತಗೊಳಿಸಿದೆ "ಎಂದು ಸಿರಾಜ್ ಪಂದ್ಯದ ನಂತರದ ಸಂದರ್ಶನದಲ್ಲಿ ಹೇಳಿದರು.

ಸಿರಾಜ್ ಐಪಿಎಲ್‌ನಲ್ಲಿ ಈ ಹಿಂದೆ ನಾಲ್ಕು ವಿಕೆಟ್ ಪಡೆದಿದ್ದರೂ ಸಹ ಕೆಕೆಆರ್ ವಿರುದ್ಧ ಪಡೆದ ಮೂರು ವಿಕೆಟ್ ಮತ್ತು ಎರಡು ಮೇಡನ್ ಓವರ್‌ಗಳು ಅವರ ಅತ್ಯುತ್ತಮ ಬೌಲಿಂಗ್ ಸ್ಪೆಲ್ ಆಗಿದೆ.

Story first published: Thursday, October 22, 2020, 10:08 [IST]
Other articles published on Oct 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X