ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ನಾನು ಪಡೆಯುವ ವಿಕೆಟ್‌ಗಿಂತ ಟ್ರೋಫಿ ಮುಖ್ಯ ಎಂದ ಕಗಿಸೋ ರಬಡಾ

IPL 2020: If we win the trophy, and I don’t take any wickets, I won’t mind it

ಕಗಿಸೋ ರಬಡಾ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅದ್ಭುತ್ ದಾಳಿಯನ್ನು ಸಂಘಟಿಸಿ ಮಿಂಚುತ್ತಿದ್ದಾರೆ. ಹೈದರಾಬಾದ್ ವಿರುದ್ದದ ಪಂದ್ಯದಲ್ಲಿ 4 ವಿಕೆಟ್ ಪಡೆದು ಮಿಂಚಿದ ರಬಡಾ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಕೀರ್ತಿಯನ್ನು ಮತ್ತೆ ತಮ್ಮದಾಗಿಸಿಕೊಂಡಿದ್ದಾರೆ. ಬೂಮ್ರಾ ಜೊತೆಗೆ ಹೆಚ್ಚು ವಿಕೆಟ್ ಪಡೆದ ಬೌಲರ್‌ಗೆ ನೀಡುವ ಪರ್ಪಲ್ ಕ್ಯಾಪ್‌ನ ರೇಸ್‌ನಲ್ಲಿ ಮುಂದಿದ್ದಾರೆ.

ಆದರೆ ವೈಯಕ್ತಿಕ ದಾಖಲೆಗಿಂತ ತಂಡದ ಗೆಲುವು ತನಗೆ ಮುಖ್ಯ ಎಂಬುದನ್ನು ಕಗಿಸೋ ರಬಡಾ ಹೇಳಿದ್ದಾರೆ. ನಾನು ವಿಕೆಟ್ ಪಡೆಯದಿದ್ದರೂ ತಂಡ ವಿಜೇತವಾದರೆ ನಾನು ಅದರ ಬಗ್ಗೆ ಯೋಚನೆ ಮಾಡುವುದಿಲ್ಲ ಎಂದು ರಬಡಾ ಹೇಳಿಕೆಯನ್ನು ನೀಡಿದ್ದಾರೆ.

ಐಪಿಎಲ್: ಅತಿ ಹೆಚ್ಚು ರನ್ ಗಳಿಕೆಯಲ್ಲಿ ರೋಹಿತ್ ಹಿಂದಿಕ್ಕಿದ ಧವನ್ಐಪಿಎಲ್: ಅತಿ ಹೆಚ್ಚು ರನ್ ಗಳಿಕೆಯಲ್ಲಿ ರೋಹಿತ್ ಹಿಂದಿಕ್ಕಿದ ಧವನ್

ಹೈದರಾಬಾದ್ ವಿರುದ್ದದ ಪಂದ್ಯದಲ್ಲಿ ಕಗಿಸೋ ರಬಡಾ 4 ಓವರ್‌ಗಳಲ್ಲಿ 29 ರನ್ ನೀಡಿ 4 ವಿಕೆಟ್ ಪಡೆದಿದ್ದರು. ಈ ಮೂಲಕ ಹೈದರಾಬಾದ್ ತಂಡವನ್ನು 172 ರನ್‌ಗಳಿಗೆ ನಿಯಂತ್ರಿಲಸು ಡೆಲ್ಲಿಗೆ ಸಾಧ್ಯವಾಗಿತ್ತು. ಈ ಮೂಲಕ ಡೆಲ್ಲಿ 17 ರನ್‌ಗಳ ಗೆಲುವನ್ನು ಸಾಧಿಸಿ ಫೈನಲ್‌ಗೆ ಪ್ರವೇಶ ಪಡೆಯಿತು. ಈ ಪಂದ್ಯದ ಬಳಿಕ ರಬಡಾ ಪ್ರತಿಕ್ರಿಯಿಸಿದರು.

"ಇಂದು ನನ್ನ ದಿನವಾಗಿತ್ತು. ಕೊನೆಯ ಓವರ್‌ನಲ್ಲಿ ನಾನು ವಿಶೇಷವಾಗಿ ಬೌಲಿಂಗ್ ಮಾಡಿದ್ದೇನೆ ಎಂದು ಭಾವಿಸಬೇಡಿ. ನೀವು ಉತ್ತಮವಾಗಿ ಬೌಲಿಂಗ್ ಮಾಡುವ ಸಾಕಷ್ಟು ಸಂದರ್ಭಗಳಿವೆ ಆದರೆ ಅದನ್ನು ವ್ಯಕ್ತಪಡಿಸಲು ಪ್ರತಿಫಲಗಳಿಲ್ಲ, ಆದ್ದರಿಂದ ನಾನು ಅದನ್ನು ತೆಗೆದುಕೊಳ್ಳುತ್ತೇನೆ" ಎಂದಿದ್ದಾರೆ ಕಗಿಸೋ ರಬಡಾ.

ದಾಖಲೆ: ಮೊದಲ ಬಾರಿಗೆ ಐಪಿಎಲ್ ಫೈನಲ್ ಪ್ರವೇಶಿಸಿದ ಡೆಲ್ಲಿದಾಖಲೆ: ಮೊದಲ ಬಾರಿಗೆ ಐಪಿಎಲ್ ಫೈನಲ್ ಪ್ರವೇಶಿಸಿದ ಡೆಲ್ಲಿ

"ಆದರೆ ಅದೆಲ್ಲವೂ ಎರಡನೆಯ ಸಂಗತಿ. ನಮ್ಮ ಮುಂದಿರುವ ಪ್ರಾಥಮಿಕ ಗುರಿಯೇನೆಂದರೆ ಟೂರ್ನಮೆಂಟ್‌ಅನ್ನು ಗೆಲ್ಲುವುದು. ಈ ಟೂರ್ನಮೆಂಟ್‌ಅನ್ನು ಗೆದ್ದು ನಾನು ಯಾವುದೇ ವಿಕೆಟ್ ಪಡೆಯದಿದ್ದರೆ ನಾನು ಆ ಬಗ್ಗೆ ಚಿಂತೆಯನ್ನೇ ಮಾಡುವುದಿಲ್ಲ ಎಂದಿದ್ದಾರೆ ಕಗಿಸೋ ರಬಡಾ.

Story first published: Monday, November 9, 2020, 11:57 [IST]
Other articles published on Nov 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X