ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಕೆಟ್ ಪಡೆದು ಓಡುತ್ತಾ ಮುಖ್ಯ ರಸ್ತೆಗೆ ತಲುಪಿದ್ದೆ: ಸೆಲೆಬ್ರೇಷನ್ ಬಗ್ಗೆ ಕುತೂಹಲಕಾರಿ ಸಂಗತಿ ಹಂಚಿಕೊಂಡ ತಾಹಿರ್

IPL 2020: Imran Tahir on his famous celebration with R Ashwin

ದಕ್ಷಿಣ ಆಫ್ರಿಕಾದ ಹಿರಿಯ ಸ್ಪಿನ್ನರ್ ಇಮ್ರಾನ್ ತಾಹಿರ್ ಕಳೆದ ಐಪಿಎಲ್ ಆವೃತ್ತಿಯಲ್ಲಿ ಟೂರ್ನಿಯಲ್ಲೇ ಅತಿಹೆಚ್ಚು ವಿಕೆಟ್ ಪಡೆದು ಪರ್ಪಲ್ ಕ್ಯಾಪ್‌ಅನ್ನು ಮುಡಿಗೇರಿಸಿಕೊಂಡಿದ್ದರು. ಆದರೆ ಈ ಬಾರಿಯ ಆವೃತ್ತಿಯಲ್ಲಿ ತಾಹಿತ್ ಈವರೆಗಿನ ಒಂದೇ ಒಂದು ಪಂದ್ಯದಲ್ಲಿ ಆಡುವ ಬಳಗದಲ್ಲಿ ಅವಕಾಶವನ್ನು ಪಡೆದುಕೊಳ್ಳಲು ವಿಫಲರಾಗಿದ್ದಾರೆ. ಹೀಗಾಗಿ ಅಭಿಮಾನಿಗಳು ವಿಕೆಟ್ ಪಡದ ಬಳಿಕ ಇಮ್ರಾನ್ ತಾಹಿರ್ ಅವರ ವಿಶೇಷ ರೀತಿಯ ಸಂಭ್ರಮವನ್ನು ಕಳೆದುಕೊಂಡಿದ್ದಾರೆ.

ಹೌದು, ಇಮ್ರಾನ್ ತಾಹೀರ್ ತಮ್ಮ ಬೌಲಿಂಗ್ ಕೈ ಚಳಕದ ಚೊತೆಗೆ ವಿಭಿನ್ನ ಸೆಲೆಬ್ರೇಷನ್‌ಗೂ ಸಾಕಷ್ಟು ಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಈ ಕಾರಣಕ್ಕಾಗಿಯೇ ತಾಹಿರ್ ಸಾಮಾಜಿಕ ಜಾಲತಾಣಗಳಲ್ಲಿ ತಮಾಷೆಗೂ ಒಳಗಾಗಿದ್ದಾರೆ. ಆದರೆ ಇದನ್ನು ತಾಹಿರ್ ಸಕಾರಾತ್ಮಕವಾಗಿಯೇ ಸ್ವೀಕರಿಸಿದ್ದಾರೆ.

KKR ವಿರುದ್ಧ ಧೂಳೆಬ್ಬಿಸಿದ ಸಿರಾಜ್ ಬದಲು, ವಾ. ಸುಂದರ್‌ಗೆ ಬೌಲಿಂಗ್‌ ಕೊಡಲು ಯೋಚಿಸಿದ್ದ ಕೊಹ್ಲಿKKR ವಿರುದ್ಧ ಧೂಳೆಬ್ಬಿಸಿದ ಸಿರಾಜ್ ಬದಲು, ವಾ. ಸುಂದರ್‌ಗೆ ಬೌಲಿಂಗ್‌ ಕೊಡಲು ಯೋಚಿಸಿದ್ದ ಕೊಹ್ಲಿ

ಸೆಲೆಬ್ರೇಷನ್ ಬಗ್ಗೆ ಅಶ್ವಿನ್ ಪ್ರಶ್ನೆ

ಸೆಲೆಬ್ರೇಷನ್ ಬಗ್ಗೆ ಅಶ್ವಿನ್ ಪ್ರಶ್ನೆ

ಇಮ್ರಾನ್ ತಾಹಿರ್ ಇತ್ತೀಚೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಯೂಟ್ಯೂಬ್ ಚಾನೆಲ್‌ನಲ್ಲಿ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಆರ್ ಅಶ್ವಿನ್ ಇಮ್ರಾನ್ ತಾಹಿರ್ ಬಳಿ ತಮ್ಮ ವಿಚಿತ್ರ ಸೆಲೆಬ್ರೇಷನ್ ಬಗ್ಗೆ ಪ್ರಶ್ನೆಯನ್ನು ಮಾಡಿದ್ದರು. "ವಿಕೆಟ್ ಪಡೆದ ಬಳಿಕ ನೀವು ಮೈಲ್‌ಗಳಷ್ಟು ದೂರ ಯಾಕೆ ಓಡುತ್ತೀರಿ" ಎಂದು ಅಶ್ವಿನ್ ಪ್ರಶ್ವಿಸಿದ್ದರು.

ಅದು ಶುದ್ಧ ಉತ್ಸಾಹ

ಅದು ಶುದ್ಧ ಉತ್ಸಾಹ

ಅಶ್ವಿನ್ ಕೇಳಿದ ಈ ಪ್ರಶ್ನೆಗೆ ನಾನು ಇದನ್ನು ಶುದ್ಧ ಉತ್ಸಾಹ ಎಂದು ಕರೆಯುತ್ತೇನೆ. ಇದು ಹೇಗೆ ಬಂತು ಎಂದು ನನಗೂ ತಿಳಿದಿಲ್ಲ ಎಂದು ತಾಹಿರ್ ಹೇಳಿದರು. ಈ ಸಂದರ್ಭದಲ್ಲಿ ತಾಹಿರ್ 15 ವರ್ಷಗಳ ಹಿಂದೆ ಈ ರೀತಿ ಸಂಭ್ರಮಿಸುತ್ತಾ ತಮಾಷೆಗೊಳಗಾದ ಕುತೂಹಲಕಾರಿ ಘಟನೆಯೊಂದನ್ನು ನೆನಪಿಸಿಕೊಂಡರು.

ರಸ್ತೆಯವರೆಗೆ ಓಡಿದ್ದ ತಾಹಿರ್

ರಸ್ತೆಯವರೆಗೆ ಓಡಿದ್ದ ತಾಹಿರ್

"ಇಂಗ್ಲೆಂಡ್‌ನಲ್ಲಿ 15 ವರ್ಷಗಳ ಹಿಂದೆ ಇಂಗ್ಲೆಂಡ್‌ನಲ್ಲಿ ಕ್ಲಬ್ ಕ್ರಿಕೆಟ್‌ನಲ್ಲಿ ಆಡುತ್ತಿದ್ದೆ. ಅಂದು ಅದ್ಭುತ ಕ್ಯಾಚ್‌ವೊಂದನ್ನು ಪಡೆದು ವಿಕೆಟ್ ಕಿತ್ತಿದ್ದೆ. ಬಳಿಕ ಓಡಲು ಆರಂಭಿಸಿದ್ದೆ. ಓಡುತ್ತಾ ಅಂಗಳದಾಚೆಗೆ ಹೋಗಿ, ರಸ್ತೆಯ ಬದಿಗೆ ತಲುಪಿದ್ದೆ. ಬಳಿಕ ಹಾಗೆಯೇ ನಡೆದುಕೊಂಡು ವಾಪಾಸ್ ಬಂದೆ. ನನ್ನನ್ನು ಕಂಡು ಅಲ್ಲಿದ್ದವರು ನಗಲು ಆರಂಭಿಸಿದ್ದರು. ಅದು ತಮಾಷೆಯಾಗಿತ್ತು. ಆದರೆ ನಾನು ಇರುವುದೇ ಹಾಗೆ. ಇದನ್ನು ಜನರು ಹೇಗೆ ಭಾವಿಸುತ್ತಾರೆ ಎಂದು ನನಗೆ ತಿಳಿದಿಲ್ಲ. ಈ ಸಂಭ್ರಮಕ್ಕೆ ಯೋಜನೆಗಳಿಲ್ಲ. ಪ್ರತಿ ವಿಕೆಟ್ ಕೂಡ ಮುಖ್ಯ" ಎಂದು ಇಮ್ರಾನ್ ತಾಹಿರ್ ತಮಾಷೆಯ ಸಂಗತಿಯನ್ನು ಬಿಚ್ಚಿಟ್ಟರು.

ಸಾಮಾಜಿಕ ಜಾಲತಾಣದಲ್ಲಿ ಟೀಕೆ

ಸಾಮಾಜಿಕ ಜಾಲತಾಣದಲ್ಲಿ ಟೀಕೆ

ಇಮ್ರಾನ್ ತಾಹಿರ್ ಈ ಬಾರಿಯ ಆವೃತ್ತಿಯಲ್ಲಿ ಒಂದೇ ಒಂದು ಪಂದ್ಯದಲ್ಲಿ ಅವಕಾಶ ದೊರೆಯದ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದೆ. ಕಳೆದ ಬಾರಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರನನ್ನು ಸಿಎಸ್‌ಕೆ ಬಳಸಿಕೊಳ್ಳುತ್ತಿರುವ ರೀತಿಗೆ ಟ್ವಿಟ್ಟರ್‌ನಲ್ಲಿ ನೆಟ್ಟಿಗರು ಆಕ್ರೋಶ ಹಾಗೂ ಮರುಕ ವ್ಯಕ್ತಪಡಿಸಿದ್ದರು. ಆದರೆ ತಾಹಿರ್ ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಬಗ್ಗೆ ಸಕಾರಾತ್ಮಕ ಮಾತುಗಳನ್ನಾಡುವ ಮೂಲಕ ವೃತ್ತಿಪರತೆ ಮೆರೆದಿದ್ದರು.

Story first published: Friday, October 23, 2020, 10:26 [IST]
Other articles published on Oct 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X