ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಲೀಗ್ ಹಂತದ ಎಲ್ಲಾ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ

IPL 2020 in UAE: Full Schedule, Time Table and Venue of the Matches

ಬೆಂಗಳೂರು: ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಸೆಪ್ಟೆಂಬರ್ 19ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಆರಂಭಗೊಳ್ಳಲಿದೆ. ಭಾರತದಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ನಗದು ಶ್ರೀಮಂತ ಪಂದ್ಯಾಟ ಈ ಬಾರಿ ವಿದೇಶದಲ್ಲಿ ನಡೆಯುವುದರಲ್ಲಿದೆ. ಮಾರ್ಚ್ 29ರಿಂದ ಆರಂಭವಾಗಬೇಕಿದ್ದ ಐಪಿಎಲ್ ಕೋವಿಡ್‌-19ನಿಂದಾಗಿ ಮುಂದೂಡಲ್ಪಟ್ಟಿತ್ತು. ಸೆಪ್ಟೆಂಬರ್ 19ರಂದು ಆರಂಭಗೊಳ್ಳುವ ಐಪಿಎಲ್, ನವೆಂಬರ್ 10ರಂದು ಫೈನಲ್‌ನೊಂದಿಗೆ ಕೊನೆಗೊಳ್ಳಲಿದೆ.

IPL 2020: ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಪೂರ್ಣ ವೇಳಾಪಟ್ಟಿIPL 2020: ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಪೂರ್ಣ ವೇಳಾಪಟ್ಟಿ

13ನೇ ಐಪಿಎಲ್ ಆವೃತ್ತಿಯ ಐಪಿಎಲ್‌ಗೆ ಸಂಬಂಧಿಸಿ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ ಈ ಮೊದಲು ಆರಂಭ ಮತ್ತು ಅಂತ್ಯದ ದಿನಾಂಕ ಘೋಷಿಸಿತ್ತು. ಈಗ ಟೂರ್ನಿಯ ಎಲ್ಲಾ ಪಂದ್ಯಗಳ ವೇಳಾಪಟ್ಟಿ ಪ್ರಕಟಗೊಂಡಿದೆ.

ಐಪಿಎಲ್ ವೀಕ್ಷಿಸಬೇಕಾದ್ರೆ ನೀವು ಡಿಸ್ನಿ+ಹಾಟ್‌ಸ್ಟಾರ್ ಸಬ್ಸ್ಕ್ರೈಬ್ ಮಾಡಿರಬೇಕು!ಐಪಿಎಲ್ ವೀಕ್ಷಿಸಬೇಕಾದ್ರೆ ನೀವು ಡಿಸ್ನಿ+ಹಾಟ್‌ಸ್ಟಾರ್ ಸಬ್ಸ್ಕ್ರೈಬ್ ಮಾಡಿರಬೇಕು!

ಇಂಡಿಯನ್ ಪ್ರೀಮಿಯರ್ ಲೀಗ್ 2020ಯ ಎಲ್ಲಾ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.

ಐಪಿಎಲ್ ಉದ್ಘಾಟನಾ ಪಂದ್ಯ

ಐಪಿಎಲ್ ಉದ್ಘಾಟನಾ ಪಂದ್ಯ

ಐಪಿಎಲ್ 2020ರ ಉದ್ಘಾಟನಾ ಪಂದ್ಯ ಸೆಪ್ಟೆಂಬರ್ 19ರಂದು ಮಧ್ಯೆ ನಡೆಯಲಿದೆ. 53 ಪಂದ್ಯಗಳ ಟೂರ್ನಿ ಇದಾಗಿದ್ದು, ದಿನದಲ್ಲಿ ಎರಡು ಪಂದ್ಯಗಳಿದ್ದರೆ ಮೊದಲ ಪಂದ್ಯ ಭಾರತೀಯ ಕಾಲಮಾನ 3.30 pmಗೆ ನಡೆದರೆ, 2ನೇ ಪಂದ್ಯ ರಾತ್ರಿ 7.30ಕ್ಕೆ ಆರಂಭಗೊಳ್ಳಲಿದೆ. ದುಬೈನ ಜನಪ್ರಿಯ ತಾಣಗಳಾದ ದುಬೈ, ಅಬುದಾಬಿ ಹಾಗೂ ಶಾರ್ಜಾ ಸ್ಟೇಡಿಯಂಗಳಲ್ಲಿ ಈ ಬಾರಿಯ ಐಪಿಎಲ್ ಪಂದ್ಯಗಳು ನಡೆಯಲಿವೆ.

ಸಿಎಸ್‌ಕೆ vs ಎಂಐ ಕದನ

ಸಿಎಸ್‌ಕೆ vs ಎಂಐ ಕದನ

ಈ ಬಾರಿಯ ಐಪಿಎಲ್ ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಕಾದಾಡಲಿವೆ. ಮಾರ್ಚ್ 29ರಂದು ಐಪಿಎಲ್ ಆರಂಭವಾಗುತ್ತಿದ್ದರೆ ಇದೇ ಎರಡು ತಂಡಗಳು ಮೊದಲ ಪಂದ್ಯ ಆಡುತ್ತಿದ್ದವು. ಅಂದರೆ, ಹಳೆ ವೇಳಾಪಟ್ಟಿಯಂತೆ ಸಿಎಸ್‌ಕೆ ಮತ್ತು ಎಂಐ ಈ ಬಾರಿಯ ಉದ್ಘಾಟನಾ ಪಂದ್ಯಕ್ಕೆ ಸಾಕ್ಷಿಯಾಗಲಿವೆ.

ದುಬೈನಲ್ಲಿ ಹೆಚ್ಚು ಪಂದ್ಯ

ದುಬೈನಲ್ಲಿ ಹೆಚ್ಚು ಪಂದ್ಯ

ಈ ಬಾರಿಯ ಐಪಿಎಲ್‌ನಲ್ಲಿ ಒಟ್ಟು 10 ದಿನ ಎರಡೆರಡು ಪಂದ್ಯಗಳಿರಲಿವೆ. ಪಂದ್ಯಗಳನ್ನು ನಡೆಸಲು ಉದ್ದೇಶಿಸಿರುವ ತಾಣಗಳಲ್ಲಿ ದುಬೈನಲ್ಲಿ 24 ಪಂದ್ಯಗಳು, ಅಬುಧಾಬಿಯಲ್ಲಿ 20 ಪಂದ್ಯಗಳು ಮತ್ತು ಶಾರ್ಜಾದಲ್ಲಿ 12 ಪಂದ್ಯಗಳು ನಡೆಯಲಿವೆ.

ಪ್ಲೇ ಆಫ್ ತಾಣಗಳು ತಿಳಿಸಿಲ್ಲ

ಪ್ಲೇ ಆಫ್ ತಾಣಗಳು ತಿಳಿಸಿಲ್ಲ

ಬಿಸಿಸಿಐ ಈಗ ಲೀಗ್ ಹಂತದ ಪಂದ್ಯಗಳ ವೇಳಾಪಟ್ಟಿ ಮಾತ್ರ ಪ್ರಕಟಿಸಿದೆ. ಆದರೆ ಪ್ಲೇ ಆಫ್ ಪಂದ್ಯಗಳು ಮತ್ತು ಫೈನಲ್‌ ಪಂದ್ಯದ ತಾಣಗಳ ಬಗ್ಗೆ ಮಾಹಿತಿ ನೀಡಿಲ್ಲ. ಮುಂದಕ್ಕೆ ಪ್ಲೇ ಆಫ್ ಮತ್ತು ಫೈನಲ್‌ ಪಂದ್ಯದ ತಾಣ ಪ್ರಕಟಿಸುತ್ತೇವೆ ಎಂದು ಬಿಸಿಸಿಐ ಹೇಳಿದೆ.

Story first published: Saturday, September 19, 2020, 14:21 [IST]
Other articles published on Sep 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X