ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಯುನೈಟೆಡ್ ಕಿಂಗ್ಡಮ್‌ನಲ್ಲಿ ಇಪಿಎಲ್‌ಗಿಂತಲೂ ಐಪಿಎಲ್ ವೀಕ್ಷಕರು ಜಾಸ್ತಿ!

IPL 2020: IPL Viewership in the UK Higher Than EPL

ಲಂಡನ್: ಭಾರತದ ಅದ್ದೂರಿ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಟೂರ್ನಿ ಮುಕ್ತಾಯ ಹಂತಕ್ಕೂ ಬರುತ್ತಿದೆ. ಐಪಿಎಲ್‌ ಅನ್ನು ಈ ಬಾರಿ ದೊಡ್ಡ ಸಂಖ್ಯೆಯ ವೀಕ್ಷಕರು ವೀಕ್ಷಿಸಿದ್ದರು. ಸ್ಟೇಡಿಯಂಗೆ ಹೋಗಿ ಪಂದ್ಯ ವೀಕ್ಷಿಸಲು ಸಾಧ್ಯವಾಗದಿದ್ದರೂ ಡಿಜಿಟಲ್ ವೀಕ್ಷಣೆಯಲ್ಲಿ ಐಪಿಎಲ್ ದಾಖಲೆಯ ವೀಕ್ಷಣೆಗೆ ಪಾತ್ರವಾಗಿತ್ತು.

ಐಪಿಎಲ್ 2020: ಹೈದರಾಬಾದ್‌ಗೆ ಮುಂದೆ ಮುಗ್ಗರಿಸಿದ ವಿರಾಟ್ ಪಡೆಐಪಿಎಲ್ 2020: ಹೈದರಾಬಾದ್‌ಗೆ ಮುಂದೆ ಮುಗ್ಗರಿಸಿದ ವಿರಾಟ್ ಪಡೆ

ವಿಶ್ವದ ಪ್ರಮುಖ ತಂಡಗಳಾದ ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಪ್ರಿಕಾ, ವೆಸ್ಟ್ ಇಂಡೀಸ್, ಅಫ್ಘಾನಿಸ್ತಾನ, ಶ್ರೀಲಂಕಾದಿಂದ ಪ್ರತಿಭಾನ್ವಿತ ಆಟಗಾರರು ಟೂರ್ನಿಯಲ್ಲಿ ಭಾಗವಹಿಸುತ್ತಿರುವುದರಿಂದ ಐಪಿಎಲ್‌ಗೆ ವಿಶ್ವದುದ್ದಕ್ಕೂ ಅಭಿಮಾನಿಗಳಿದ್ದಾರೆ. ಐಪಿಎಲ್‌ಗೆ ಮತ್ತೊಂದು ಖುಷಿಯ ಸಂಗತಿ ಕೇಳಿ ಬಂದಿದೆ.

ಯುನೈಟೆಡ್ ಕಿಂಗ್ಡಮ್‌ನಲ್ಲಿ ನಡೆಯುವ ಜನಪ್ರಿಯ ಫುಟ್ಬಾಲ್ ಟೂರ್ನಿ ಇಂಗ್ಲಿಷ್ ಪ್ರೀಮಿಯರ್ ಲೀಗ್‌ಗಿಂತಲೂ ಐಪಿಎಲ್ ವೀಕ್ಷಕರ ಸಂಖ್ಯೆ ದೊಡ್ಡದಿದೆ ಎಂದು ಪ್ರಸಾರಕರ ಪ್ರೇಕ್ಷಕರ ಸಂಶೋಧನಾ ಮಂಡಳಿ ಮಾಹಿತಿ ನೀಡಿದೆ. 2020ರ ಐಪಿಎಲ್ ಭಾರತದಲ್ಲಷ್ಟೇ ಅಲ್ಲ, ಯುಕೆನಲ್ಲೂ ದೊಡ್ಡ ಮಟ್ಟದಲ್ಲಿ ವೀಕ್ಷಿಸಲ್ಪಡುತ್ತಿದೆ ಎಂದು ಬಿಎಆರ್‌ಬಿ ಹೇಳಿದೆ.

ಆರ್‌ಸಿಬಿ ಆಟಗಾರರಿಂದ ರಾಜ್ಯೋತ್ಸವದ ಶುಭಾಶಯ ಕೇಳೋದೇ ಖುಷಿ: ವಿಡಿಯೋಆರ್‌ಸಿಬಿ ಆಟಗಾರರಿಂದ ರಾಜ್ಯೋತ್ಸವದ ಶುಭಾಶಯ ಕೇಳೋದೇ ಖುಷಿ: ವಿಡಿಯೋ

ಕಳೆದ ಕೆಲ ವಾರಗಳಲ್ಲಿ ಯುಕೆಯಲ್ಲಿರುವ ಸುಮಾರು 2,50,000 ಮಂದಿ ಐಪಿಎಲ್ ಟೂರ್ನಿ ವೀಕ್ಷಿಸಿದ್ದಾರೆ ಎಂದು ಬಿಎಆರ್‌ಬಿ ತಿಳಿಸಿದೆ. ಯುಕೆಯಲ್ಲಿ ಅಕ್ಟೋಬರ್ 12ರಿಂದ 18ರ ವರೆಗೆ ಐಪಿಎಲ್‌ಗೆ 17 ಲಕ್ಷ ಲೈವ್ ವೀಕ್ಷಕರು ದೊರೆತಿದ್ದರೆ, ಇಪಿಎಲ್‌ನ ಲಿವರ್‌ಪೂಲ್ vs ಶೆಫೀಲ್ಡ್ ಯುನೈಟೆಡ್ ಮತ್ತು ಆರ್ಸೆನಲ್ vs ಲೀಸೆಸ್ಟರ್ ಪಂದ್ಯಗಳಿಗೆ ಕ್ರಮವಾಗಿ 110,000 ಮತ್ತು 140,000 ವೀಕ್ಷಣೆ ಲಭಿಸಿದೆ.

Story first published: Sunday, November 1, 2020, 11:40 [IST]
Other articles published on Nov 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X