ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಯುಎಇನಲ್ಲಿನ ಕೆಟ್ಟ ಇತಿಹಾಸವನ್ನು ಅಳಿಸಿ ಹಾಕುತ್ತಾ ರೋಹಿತ್ ಪಡೆ

Ipl 2020: Is Mumbai Indians Able To Change Their Bad History In Uae

ಕ್ರಿಕೆಟ್ ಹಬ್ಬ ಐಪಿಎಲ್‌ನ ಈ ವರ್ಷದ ಆವೃತ್ತಿ ಶನಿವಾರದಿಂದ ಚಾಲನೆ ಪಡೆದುಕೊಳ್ಳಲಿದೆ. ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ ತಂಡವನ್ನು ಎದುರಿಸಲಿದೆ. ಮುಂಬೈ ಇಂಡಿಯನ್ಸ್ ಈ ಬಾರಿಯ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿಯುತ್ತಿದೆ. ಆದರೆ ಈ ಟೂರ್ನಿ ಮುಂಬೈ ಪಾಲಿಗೆ ದೊಡ್ಡ ಸವಾಲಾಗಿದೆ.

ಈ ಬಾರಿಯ ಐಪಿಎಲ್ ಟೂರ್ನಿ ಸಂಪೂರ್ಣವಾಗಿ ಯುಎಇನಲ್ಲಿ ನಡೆಯುತ್ತಿದೆ. ಆದರೆ ಯುಎಇನಲ್ಲಿ ನಡೆದ ಐಪಿಎಲ್ ಪಂದ್ಯಗಳು ಮುಂಬೈ ಪಾಲಿಗೆ ಅತ್ಯಂತ ಕರಾಳವಾಗಿದೆ. ಹೀಗಾಗಿ ಚಾಂಪಿಯನ್ ಆಗಿದ್ದರೂ ಮುಂಬೈಗೆ ಕರಾಳ ಇತಿಹಾಸ ಕಾಡಲಿದೆ. ಆ ಇತಿಹಾಸದ ನೆನಪನ್ನು ಅಳಿಸಿ ಹಾಕುವ ಗುರಿ ರೊಹಿತ್ ಶರ್ಮಾ ಪಡೆಯ ಮುಂದಿದೆ.

ಐಪಿಎಲ್: ದಾಖಲೆಯ ಸಮೀಪದಲ್ಲಿದ್ದಾರೆ ಆಲ್ ರೌಂಡರ್ ರವೀಂದ್ರ ಜಡೇಜಾಐಪಿಎಲ್: ದಾಖಲೆಯ ಸಮೀಪದಲ್ಲಿದ್ದಾರೆ ಆಲ್ ರೌಂಡರ್ ರವೀಂದ್ರ ಜಡೇಜಾ

ಶನಿವಾರ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯಲಿರುವ ಮುಂಬೈ ಇಂಡಿಯನ್ಸ್‌ಗೆ ಕಾಡುತ್ತಿರುವ ಇರಿಹಾಸದ ಕೆಟ್ಟ ನೆನಪು ಯಾವುದು? ಈ ಬಾರಿಯ ಟೂರ್ನಿಯಲ್ಲಿ ಆ ನೆನಪನ್ನು ಅಳಿಸಿ ಹಾಕಲಿದೆಯಾ ಮುಂಬೈ ಇಂಡಿಯನ್ಸ್? ಮುಂದೆ ಓದಿ..

ಯುಎಇನಲ್ಲಿ ಹಿಂದೆ ನಡೆದಿತ್ತು ಐಪಿಎಲ್

ಯುಎಇನಲ್ಲಿ ಹಿಂದೆ ನಡೆದಿತ್ತು ಐಪಿಎಲ್

ಯುಎಇ ಈ ಹಿಂದೆ ಏಳನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಮೊದಲ ಬಾರಿಗೆ ಆತಿಥ್ಯವನ್ನು ವಹಿಸಿಕೊಂಡಿತ್ತು. ಮೊದಲ ಹಂತದ 20 ಪಂದ್ಯಗಳಲ್ಲಿ ಶಾರ್ಜಾ, ದುಬೈ ಹಾಗೂ ಅಬುದಾಬಿ ಕ್ರೀಡಾಂಗಣಗಳಲ್ಲಿ ಆಯೋಜನೆ ಮಾಡಲಾಗಿತ್ತು. ಪ್ರತಿ ತಂಡವೂ ಇಲ್ಲಿ ತಲಾ ಐದು ಪಂದ್ಯಗಳನ್ನು ಆಡಿದ ಅನುಭವ ಹೊಂದಿದೆ.

ಮುಂಬೈ ಇಂಡಿಯನ್ಸ್ ಪಾಲಿಗೆ ಕರಾಳ ನೆನಪು

ಮುಂಬೈ ಇಂಡಿಯನ್ಸ್ ಪಾಲಿಗೆ ಕರಾಳ ನೆನಪು

ಈ ಬಾರಿಯ ಐಪಿಎಲ್ ಯುಎಇಗೆ ಶಿಫ್ಟ್ ಆಗುತ್ತಿದ್ದಂತೆಯೇ ಮುಂಬೈ ಇಂಡಿಯನ್ಸ್ ತಂಡದ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದರು. ಅದಕ್ಕೆ ಕಾರಣ ಯುಎಇನಲ್ಲಿ ನಡೆದ ಐಪಿಎಲ್ ಪಂದ್ಯಾವಳಿಯಲ್ಲಿ ಮುಂಬೈ ಇಂಡಿಯನ್ಸ್ ತೋರಿದ ಪ್ರದರ್ಶನ. ಒಂದೂ ಗೆಲುವು ಕಾಣದೆ ಮುಂಬೈ ಇಂಡಿಯನ್ಸ್ ನಿರಾಸೆಯಿಂದ ವಾಪಾಸಾಗಿತ್ತು.

ರೋಹಿತ್ ನಾಯಕತ್ವದಲ್ಲಿ ಭಾರೀ ಹಿನ್ನೆಡೆ

ರೋಹಿತ್ ನಾಯಕತ್ವದಲ್ಲಿ ಭಾರೀ ಹಿನ್ನೆಡೆ

2012ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದ ರೋಹಿತ್ ಶರ್ಮಾ 2013ರಲ್ಲಿ ಚೊಚ್ಚಲ ಟ್ರೋಫಿ ಗೆಲ್ಲಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು. ಇದೇ ಯಶಸ್ಸಿನ ನೆನಪಿನಲ್ಲೇ ಮುಂಬೈ ಇಂಡಿಯನ್ಸ್ ಯುಎಇಗೆ ಕಾಲಿಟ್ಟಿತ್ತು. ಆದರೆ ಯುಎಇನಲ್ಲಿ ಆಡಿದ ಐದು ಪಂದ್ಯಗಳಲ್ಲಿ ಕನಿಷ್ಟ ಒಂದು ಗೆಲುವನ್ನು ಕಾಣಲೂ ಮುಂಬೈ ಇಂಡಿಯನ್ಸ್‌ಗೆ ಸಾಧ್ಯವಾಗಲೇ ಇಲ್ಲ. ಈ ನಿರಾಸೆಯೊಂದಿಗೆ ಭಾರತಕ್ಕೆ ಮರಳಿತ್ತು ರೋಹಿತ್ ಪಡೆ.

ಕೆಟ್ಟ ದಾಖಲೆ ಅಳಿಸಿ ಹಾಕುತ್ತಾ ಎಂಐ

ಕೆಟ್ಟ ದಾಖಲೆ ಅಳಿಸಿ ಹಾಕುತ್ತಾ ಎಂಐ

ಹಾಲಿ ಚಾಂಪಿಯನ್ ಎನಿಸಿರುವ ಮುಂಬೈ ಇಂಡಿಯನ್ಸ್ ಯುಎಇನಲ್ಲಿರುವ ಈ ಕೆಟ್ಟ ದಾಖಲೆ ನಿಜಕ್ಕೂ ಕಹಿ ಅನುಭವ. ಹೀಗಾಗಿ ಈ ಕರಾಳ ನೆನಪನ್ನು ಅಳಿಸಿಹಾಕಲು ಮುಂಬೈ ಇಂಡಿಯನ್ಸ್ ಸಜ್ಜಾಗಿದೆ. 2014ರ ಮುಂಬೈ ಇಂಡಿಯನ್ಸ್ ತಂಡಕ್ಕೂ ಈಗಿನ ತಂಡಕ್ಕೂ ಸಾಕಷ್ಟು ಬದಲಾವಣೆಯಿದೆ. ನಾಯಕ ರೋಹಿತ್ ಶರ್ಮಾ ಕೂಡ ಬ್ಯಾಟಿಂಗ್ ಹಾಗೂ ನಾಯಕತ್ವ ಎರಡಲ್ಲೂ ಸಾಕಷ್ಟು ಅನುಭವ ಪಡೆದುಕೊಂಡಿದ್ದಾರೆ. ಈ ಅನುಭವ ಮುಂಬೈ ಇಂಡಿಯನ್ಸ್ ಪಾಲಿಗೆ ಖಂಡಿತಾ ವರದಾನವಾಗುವ ನಿರೀಕ್ಷೆಯಿದೆ.

Story first published: Friday, September 18, 2020, 20:50 [IST]
Other articles published on Sep 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X