ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಬೃಹತ್ ಸಿಕ್ಸರ್ ಹಿಂದಿನ ರಹಸ್ಯ ಬಹಿರಂಗಪಡಿಸಿದ ಇಶಾನ್ ಕಿಶನ್

IPL 2020 : Ishan Kishan credits his mother after match-winning performence

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಭರ್ಜರಿ ಗೆಲುವನ್ನು ಸಾಧಿಸಿದೆ. ಡೆಲ್ಲಿ ನೀಡಿದ 111 ರನ್‌ಗಳ ಸುಲಭ ಸವಾಲನ್ನು ಮುಂಬೈ ಇಂಡಿಯನ್ಸ್ ಕೇವಲ 1 ವಿಕೆಟ್ ಕಳೆದುಕೊಂಡು ತಲುಪಿತ್ತು. ಮುಂಬೈ ಇಂಡಿಯನ್ಸ್ ಆರಂಭಿಕ ಆಟಗಾರ ಇಶಾನ್ ಕಿಶನ್ 47 ಎಸೆತಗಳಲ್ಲಿ 72 ರನ್ ಬಾರಿಸಿ ಮಿಂಚಿದ್ದಾರೆ.

ಈ ಅದ್ಭುತ ಪ್ರದರ್ಶನದ ಬಳಿಕ ಮಾತನಾಡಿದ ಇಶಾನ್ ಕಿಶನ್ ಸಂತಸವನ್ನು ಹಂಚಿಕೊಮಡಿದ್ದಾರೆ. ಈ ಸಂದರ್ಭದಲ್ಲಿ ತನ್ನ ಬ್ಯಾಟ್‌ನಿಂದ ಬಿಗ್ ಹೊಟ್ ಸಿಡಿಯಲು ತನ್ನ ಅಮ್ಮನೇ ಕಾರಣ ಎಂದಿದ್ದಾರೆ. ಅಮ್ಮ ಮಾಡಿಕೊಡುವ ಆಹಾರಗಳ ಕಾರಣದಿಂದಲೇ ಬಲ ವೃದ್ಧಿಸಿಕೊಂಡು ಸಿಕ್ಸರ್ ಸಿಡಿಸುವುದಾಗಿ ಹೇಳಿಕೊಂಡಿದ್ದಾರೆ.

ಐಪಿಎಲ್ 2020: ಮುಂಬೈ ಇಂಡಿಯನ್ಸ್ ಮುಡಿಗೆ ಅಪರೂಪದ ದಾಖಲೆಐಪಿಎಲ್ 2020: ಮುಂಬೈ ಇಂಡಿಯನ್ಸ್ ಮುಡಿಗೆ ಅಪರೂಪದ ದಾಖಲೆ

ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಗಾಯಾಳಾಗಿರುವುದರಿಂದ ಕಲೆದ ಕೆಲ ಪಂದ್ಯಗಳ್ಲಲಿ ಕಣಕ್ಕೆ ಇಳಿಯುತ್ತಿಲ್ಲ. ಈ ಸಂದರ್ಭದಲ್ಲಿ ರೋಹಿತ್ ಶರ್ಮಾ ಅವರ ಆರಮಭಿಕ ಸ್ಥಾನದಲ್ಲಿ ಇಶಾನ್ ಕಿಶನ್ ಕಣಕ್ಕಿಳಿಯುತ್ತಿದ್ದಾರೆ. ಇದರಲ್ಲಿ ಅದ್ಭುತ ಪ್ರದರ್ಶನವನ್ನು ನೀಡುವಲ್ಲೂ ಇಶಾನ್ ಕಿಶನ್ ಸಫಲರಾಗುತ್ತಿದ್ದಾರೆ.

22ರ ಹರೆಯದ ಇಶಾನ್ ಕಿಶನ್ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ 3 ಸಿಕ್ಸರ್ ಹಾಗೂ 8 ಬೌಂಡರಿ ಸಿಡಿಸಿ ಮಿಂಚಿದ್ದರು. ಈ ಮೂಲಕ ಗೆಲುವನ್ನು ಸುಲಭವಾಗಿಸಿದ್ದರು. ಮುಂಬೈ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ 34 ಎಸೆತಗಳು ಹಾಗೂ 9 ವಿಕೆಟ್ ಉಳಿಸಿಕೊಂಡು ಗೆಲುವನ್ನು ಸಾಧಿಸಿದೆ.

ರೋಹಿತ್ ಶರ್ಮಾ ಫಿಟ್‌ನೆಸ್: ನವೆಂಬರ್ 1ರಂದು ಸ್ಪಷ್ಟವಾಗಲಿದೆ ರೋಹಿತ್ ಆಸ್ಸ್ರೇಲಿಯಾ ಪ್ರವಾಸದ ಭವಿಷ್ಯರೋಹಿತ್ ಶರ್ಮಾ ಫಿಟ್‌ನೆಸ್: ನವೆಂಬರ್ 1ರಂದು ಸ್ಪಷ್ಟವಾಗಲಿದೆ ರೋಹಿತ್ ಆಸ್ಸ್ರೇಲಿಯಾ ಪ್ರವಾಸದ ಭವಿಷ್ಯ

ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದು ಮಾತನಾಡಿದ ಕಿಶನ್ "ನನ್ನನ್ನು ಶಕ್ತಿಯುತನನ್ನಾಗಿ ಮಾಡಲು ಕಾರಣರಾದ ನನ್ನ ತಾಯಿಗೆ ಈ ಕ್ರಿಡೆಟ್ ಸಲ್ಲಲೇಬೇಕು. ಅವರು ನೀಡುವ ಉತ್ತಮ ಆಹಾರದಿಂದಾಗಿ ನಾನು ಶಕ್ತಿ ಪಡೆದು ಸಿಕ್ಸರ್ ಬಾರಿಸಲು ಸಾಧ್ಯವಾಗುತ್ತಿದೆ. ಕೆಲವೊಮ್ಮೆ ದೊಡ್ಡ ಸಿಕ್ಸರ್ ಸಿಡಿದಾಗ ನನಗೇ ಆಶ್ವರ್ಯವುಂಟಾಗುತ್ತದೆ" ಎಂದಿದ್ದಾರೆ ಇಶಾನ್ ಕಿಶನ್

Story first published: Saturday, October 31, 2020, 20:46 [IST]
Other articles published on Oct 31, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X