ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಮುಂಬೈಗೆ ಶರಣಾದ ಡೆಲ್ಲಿ, ಆಟಗಾರರನ್ನು ಹುರಿದುಂಬಿಸಿದ ನಾಯಕ

IPL 2020: Iyer calls for fearless approach as DC face must-win battle vs RCB

ಮುಂಬೈ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಹೀನಾಯವಾಗಿ ಶರಣಾಗಿದೆ. ಮುಂಬೈ ವಿರುದ್ದದ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಡೆಲ್ಲಿ ಕೇವಲ 110 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಸುಲಭ ಸವಾಲನ್ನು ಬೆನ್ನಟ್ಟಿದ ಮುಂಬೈ ಕೇವಲ 1 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಈ ಮೂಲಕ ಟೂರ್ನಿಯಲ್ಲಿ ಟಾಪ್ 2 ಸ್ಥಾನವನ್ನು ಖಚಿತಪಡಿಸಿಕೊಂಡಿತು.

ಪ್ಲೇ ಆಫ್ ಹಂತಕ್ಕೆ ಸುಲಭವಾಗಿ ಅವಕಾಶಪಡೆಯುವ ಸ್ಥಿತಿಯಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಇಂದಿನ ಸೋಲಿನ ಮೂಲಕ ತನ್ನ ಹಾದಿಯನ್ನು ದುರ್ಗಮಗೊಳಿಸಿದೆ. ಲೀಗ್‌ ಹಂತದಿಂದಲೇ ಹೊರಬೀಳುವ ಆತಂಕವೂ ಡೆಲ್ಲಿ ತಂಡಕ್ಕಿದೆ. ಆದರೆ ಡೆಲ್ಲಿ ನಾಯಕ ಶ್ರೇಯಸ್ ಅಯ್ಯರ್ ತಂಡದ ಸಹ ಸದಸ್ಯರಿಗೆ ಸ್ಪೂರ್ತಿ ನೀಡುವ ಮಾತುಗಳನ್ನು ಆಡಿದ್ದಾರೆ.

ಐಪಿಎಲ್ 2020: ಮುಂಬೈ ಇಂಡಿಯನ್ಸ್ ಮುಡಿಗೆ ಅಪರೂಪದ ದಾಖಲೆಐಪಿಎಲ್ 2020: ಮುಂಬೈ ಇಂಡಿಯನ್ಸ್ ಮುಡಿಗೆ ಅಪರೂಪದ ದಾಖಲೆ

ಡೆಲ್ಲಿ ಟೂರ್ನಿಯ ಮೊದಲಾರ್ಧದಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿ ಸುಲಭವಾಗಿ ಪ್ಲೇ ಆಫ್ ಹಂತಕ್ಕೇರುವ ಸ್ಥಿತಿಯಲ್ಲಿತ್ತು. ಆರಂಭಿಕ 9 ಪಂದ್ಯಗಳಲ್ಲಿ 7ರಲ್ಲಿ ಗೆಲುವು ಸಾಧಿಸಿ 14 ಅಂಕಗಳನ್ನು ಖಾತೆಯಲ್ಲಿ ಹೊಂದಿತ್ತು. ಆದರೆ ಬಳಿಕ ಸೋಲಿನ ಮೇಲೆ ಸೋಲು ಕಾಣಲು ಆರಂಭವಾಯಿತು. ಪ್ಲೇಆಪ್‌ ಸ್ಥಾನ ಖಚಿತಪಡಿಸಿಕೊಳ್ಳಲು ಅಗತ್ಯವಿದ್ದ 1 ಗೆಲುವು ಸಾಧಿಸಲು ಕಳೆದ ನಾಲ್ಕು ಪಂದ್ಯಗಳಲ್ಲಿ ಸಾಧ್ಯವಾಗಲಿಲ್ಲ. ಇನ್ನು ಒಂದೇ ಪಂದ್ಯ ಲೀಗ್‌ನಲ್ಲಿ ಬಾಕಿಯಿದ್ದು ಆರ್‌ಸಿಬಿ ವಿರುದ್ಧದ ಆ ಪಂದ್ಯದಲ್ಲಿ ಗೆಲುವೊಂದೇ ಅನಿವಾರ್ಯವಾಗಿದೆ.

ಸೋಲಿನ ಬಳಿಕ ಮಾತನಾಡಿದ ಶ್ರೇಯಸ್ ಅಯ್ಯರ್ "ಗಮನಿಸಲು ಸಾಕಷ್ಟು ನ್ಯೂನ್ಯತೆಗಳು ನಮ್ಮ ಮುಂದಿದೆ. ಆದರೆ ನಮಗೆ ನಮ್ಮ ಮೇಲೆ ನಂಬಿಕೆಯಿದೆ. ನಾವು ಬಲಿಷ್ಠರಾಗಿದ್ದು ಸಕಾರಾತ್ಮಕವಾಗಿದ್ದೇವೆ. ಉತ್ತಮ ಆರಂಭ ಮುಖ್ಯವಾಗಿತ್ತು. ಒಂದು ಬಾರಿ ಅದನ್ನು ಕಳೆದುಕೊಂಡರೆ ನಿಧಾನವಾಗಿ ಮೇಲೆತ್ತಬೇಕಾಗುತ್ತದೆ. ಈ ಪಿಚ್‌ನಲ್ಲಿ 150ರಿಂದ 160 ರನ್‌ಗಳು ಉತ್ತಮ ಮೊತ್ತವಾಗಬಹುದು ಎಂದುಕೊಂಡಿದ್ದೆ" ಎಂದಿದ್ದಾರೆ.

ರೋಹಿತ್ ಶರ್ಮಾ ಫಿಟ್‌ನೆಸ್: ನವೆಂಬರ್ 1ರಂದು ಸ್ಪಷ್ಟವಾಗಲಿದೆ ರೋಹಿತ್ ಆಸ್ಸ್ರೇಲಿಯಾ ಪ್ರವಾಸದ ಭವಿಷ್ಯರೋಹಿತ್ ಶರ್ಮಾ ಫಿಟ್‌ನೆಸ್: ನವೆಂಬರ್ 1ರಂದು ಸ್ಪಷ್ಟವಾಗಲಿದೆ ರೋಹಿತ್ ಆಸ್ಸ್ರೇಲಿಯಾ ಪ್ರವಾಸದ ಭವಿಷ್ಯ

"ನಾವು ನಮ್ಮಲ್ಲಿ ಬದಲಾವಣೆಯನ್ನು ಮಾಡಿಕೊಳ್ಳಬೇಕಿದೆ. ನಿರ್ಭೀತ ಆಟವನ್ನು ನಾವು ಪ್ರದರ್ಶಿಸಬೇಕು. ಸಂಗತಿಗಳನ್ನು ಸುಲಭವಾಗಿಸಿಕೊಳ್ಳಬೇಕು. ಅದರತ್ತ ಹೆಚ್ಚಿನ ಆತಂಕ ಪಡೆದಂತೆ ನೋಡಿಕೊಳ್ಳಬೇಕಿದೆ. ಹೈದರಾಬಾದ್ ವಿರುದ್ಧದ ಪಂದ್ಯದ ಫಲಿಯತಾಂಶದ ಆಧಾರದ ಮೇಲೆ ಆ ಪಂದ್ಯ ಂಆಡು ಇಲ್ಲವೇ ಮಡಿ ಪಮದ್ಯವಾಗುವ ಸಾಧ್ಯತೆಯಿದೆ" ಎಂದಿದ್ದಾರೆ ಶ್ರೇಯಸ್ ಐಯ್ಯರ್

Story first published: Saturday, October 31, 2020, 19:53 [IST]
Other articles published on Oct 31, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X