ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ತನ್ನ ಕಠಿಣ ನಿರ್ಧಾರಕ್ಕೆ ಸಂತುಷ್ಟನಾಗಿದ್ದೇನೆ ಎಂದ ಜೇಸನ್ ಹೋಲ್ಡರ್

IPL 2020: Jason Holder glad he made tough decision to come and play for SRH

ವೆಸ್ಟ್ ಇಂಡೀಸ್‌ನ ಟೆಸ್ಟ್ ತಂಡದ ನಾಯಕ ಜೇಸನ್ ಹೋಲ್ಡರ್ ಈ ಆವೃತ್ತಿಯಲ್ಲಿ ಸಾಕಷ್ಟು ಕಾದ ಬಳಿಕ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕಣಕ್ಕಿಳಿದರು. ಆದರೆ ಈ ಪಂದ್ಯದಲ್ಲಿ ಹೋಲ್ಡರ್ ನೀಡಿದ ಬೌಲಿಂಗ್ ಪ್ರದರ್ಶನ ಹೈದರಾಬಾದ್‌ ಗೆಲುವಿಗೆ ಕಾರಣವಾಗಿತ್ತು. ಆದರೆ ಈ ಬಾರಿಯ ಐಪಿಎಲ್ ಟೂರ್ನಿ ಆರಂಭಕ್ಕೆ ಅಂತಿಮ ಕ್ಷಣದಲ್ಲಿ ಜೇಸನ್ ಹೋಲ್ಡರ್ ಆಯ್ಕೆಯಾಗಿದ್ದರು.

ರಾಜಸ್ಥಾನ್ ವಿರುದ್ಧದ ಪಂದ್ಯ ಮುಕ್ತಾಯದ ಬಳಿಕ ಜೇಸನ್ ಹೋಲ್ಡರ್ ಐಪಿಎಲ್ ಅಧಿಕೃತ ವೆಬ್‌ಸೈಟ್‌ಗಾಗಿ ವಿಜಯ್ ಶಂಕರ್ ಜೊತೆಗೆ ಮಾತುಕತೆಯನ್ನು ನಡೆಸಿದ್ದರು. ಈ ಸಂದರ್ಭದಲ್ಲಿ ಹೋಲ್ಡರ್ ಐಪಿಎಲ್‌ಗಾಗಿ ಕರೆ ಬರುವ ಮುನ್ನ ತಾನು ಆ ಸಂದರ್ಭದಲ್ಲಿ ರಜೆಯ ಸಂದರ್ಭವನ್ನು ಕುಟುಂಬದೊಂದಿಗೆ ಕಳೆಯಲು ನಿರ್ಧರಿಸಿದ್ದಾಗಿ ಹೇಳಿದ್ದಾರೆ.

ಈ ಬೌಲರ್‌ಗಳನ್ನು ಗುರಿಯಾಗಿಸಿ ದಾಳಿ ಮಾಡಿದೆವು: ಮನೀಶ್ ಪಾಂಡೆಈ ಬೌಲರ್‌ಗಳನ್ನು ಗುರಿಯಾಗಿಸಿ ದಾಳಿ ಮಾಡಿದೆವು: ಮನೀಶ್ ಪಾಂಡೆ

ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರವಾಗಿ ಕಣಕ್ಕಿಳಿಯಬೇಕಿದ್ದ ಶಾನ್ ಮಾರ್ಶ್ ಈ ಟೂರ್ನಿಗೂ ಮುನ್ನ ಗಾಯಗೊಂಡು ಅಲಭ್ಯರಾಗಿದ್ದರು. ಆಗ ಆ ಸ್ಥಾನಕ್ಕೆ ಸನ್‌ರೈಸರ್ಸ್ ಹೈದರಾಬಾದ್ ಜೇಸನ್ ಹೋಲ್ಡರ್ ಅವರನ್ನು ಆಯ್ಕೆ ಮಾಡಿಕೊಂಡಿತ್ತು. ಆದರೆ ಹೈದರಾಬಾದ್‌ ತಂಡದ 10ನೇ ಪಂದ್ಯದಲ್ಲಿ ಹೋಲ್ಡರ್ ಕಣಕ್ಕಿಳಿದರಾದರೂ ಪಂದ್ಯದಲ್ಲಿ ತಮ್ಮ ಸಾಮರ್ಥ್ಯವನ್ನು ತೋರ್ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

"ಐಪಿಎಲ್‌ನಲ್ಲಿ ಆಡುವ ಸಲುವಾಗ ನಾನು ವೆಕೆಶನ್‌ಅನ್ನು ತಪ್ಪಿಸಿಕೊಂಡೆ, ಪತ್ನಿಯನ್ನು ಬಿಟ್ಟು ಬಂದಿದ್ದೇನೆ. ಇದು ತುಂಬಾ ಕಠಿಣ ನಿರ್ಧಾರವಾಗಿತ್ತು. ಆದರೆ ಅದರಿಂದ ಹೊರಬಂದು ಆಡುವ ನಿರ್ಧಾರವನ್ನು ತೆಗೆದುಕೊಂಡೆ. ಆದರೆ ನಾನು ಈ ನಿರ್ಧಾರವನ್ನು ತೆಗೆದುಕೊಂಡಿರುವುದಕ್ಕೆ ಸಂತಸಗೊಂಡಿದ್ದೇನೆ. ಅವಕಾಶವನ್ನು ಬಳಸಿಕೊಂಡಿರುವುದಕ್ಕೆ ಸಂತುಷ್ಟನಾಗಿದ್ದೇನೆ" ಎಂದು ಜೇಸನ್ ಹೋಲ್ಡರ್ ಪ್ರತಿಕ್ರಿಯಿಸಿದ್ದಾರೆ.

ಇದೊಂದು ಪರಿಪೂರ್ಣ ಪಂದ್ಯವಾಗಿತ್ತು: ಗೆಲುವಿನ ಬಳಿಕ ವಾರ್ನರ್ ಹೇಳಿಕೆಇದೊಂದು ಪರಿಪೂರ್ಣ ಪಂದ್ಯವಾಗಿತ್ತು: ಗೆಲುವಿನ ಬಳಿಕ ವಾರ್ನರ್ ಹೇಳಿಕೆ

ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ದದ ಪಂದ್ಯದಲ್ಲಿ ಜೇಸನ್ ಹೋಲ್ಡರ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಮೂಲಕ 2016ರ ಬಳಿಕ ಐಪಿಎಲ್‌ನಲ್ಲಿ ಮೊದಲ ಬಾರಿಗೆ ಕಣಕ್ಕಿಳಿದರು. ಈ ಪಂದ್ಯದಲ್ಲಿ ನಾಲ್ಕು ಓವರ್‌ಗಳನ್ನು ಎಸೆದ ಹೋಲ್ಡರ್ ರಾಜಸ್ಥಾನ್ ತಂಡದ ಪ್ರಮುಖ 3 ವಿಕೆಟ್ ಪಡೆದು ಮಿಂಚಿದ್ದರು.

Story first published: Friday, October 23, 2020, 17:54 [IST]
Other articles published on Oct 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X