ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಜೋಫ್ರಾ ಹೇಳಿದಂತೆಯೇ ನಡೆಯುತ್ತಾ?: ಆರ್ಚರ್ ಹಳೆ ಟ್ವೀಟೊಂದು ವೈರಲ್!

IPL 2020: Jofra Archer’s Old Tweet Goes Viral After He Castles Chris Gayle For 99

ದುಬೈ: ಮೂಲೆ ಗುಂಪಾಗಿದ್ದ ಸಂಗತಿಯೊಂದು ಸಾಮಾಜಿಕ ಜಾಲತಾಣದಲ್ಲಿ ಇದ್ದಕ್ಕಿದ್ದಂತೆ ಸಿಕ್ಕಾಪಟ್ಟೆ ವೈರಲ್ ಆಗಿದ್ದನ್ನು ನಾವು ನೋಡಿದ್ದೇವೆ. ತೀರಾ ಇತ್ತೀಚೆಗೆ ಸದ್ಯ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಸಂಬಂಧಿಸಿದ ಟ್ವೀಟ್ ಒಂದು ವೈರಲ್ ಆಗಿತ್ತು. ನಟ ಸಲ್ಮಾನ್ ಖಾನ್ 2014ರಲ್ಲಿ ಮಾಡಿದ್ದ ಟ್ವೀಟ್, ಈ ಬಾರಿಯ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕಿಂಗ್ಸ್ 11 ಪಂಜಾಬ್ ಗೆದ್ದ ಬಳಿಕ ಸಖತ್ ವೈರಲ್ ಆಗಿತ್ತು.

1000 ಸಿಕ್ಸರ್ ಸಿಡಿಸಿದ ಕ್ರಿಸ್‌ಗೇಲ್: ಯಾವ ತಂಡದ ಪರ ಎಷ್ಟು?1000 ಸಿಕ್ಸರ್ ಸಿಡಿಸಿದ ಕ್ರಿಸ್‌ಗೇಲ್: ಯಾವ ತಂಡದ ಪರ ಎಷ್ಟು?

ರಾಜಸ್ಥಾನ್ ರಾಯಲ್ಸ್‌ನ ವೇಗಿ ಜೋಫ್ರಾ ಆರ್ಚರ್ 2013ರಲ್ಲಿ ಮಾಡಿದ್ದ ಟ್ವೀಟೊಂದು ಈಗ ವೈರಲ್ ಆಗಿದೆ. ಶುಕ್ರವಾರ (ಅಕ್ಟೋಬರ್ 30) ಕಿಂಗ್ಸ್ ಇಲೆವೆನ್ ಪಂಜಾಬ್ vs ರಾಜಸ್ಥಾನ್ ರಾಯಲ್ಸ್ ಪಂದ್ಯದ ಬಳಿಕ ಆರ್ಚರ್ ಟ್ವೀಟ್ ಓಡಾಡತೊಡಗಿದೆ.

ಮಹಿಳಾ ಐಪಿಎಲ್: ಬಿಸಿಸಿಐನಿಂದ ತಂಡಗಳು, ಸಂಪೂರ್ಣ ವೇಳಾಪಟ್ಟಿ ಪ್ರಕಟಮಹಿಳಾ ಐಪಿಎಲ್: ಬಿಸಿಸಿಐನಿಂದ ತಂಡಗಳು, ಸಂಪೂರ್ಣ ವೇಳಾಪಟ್ಟಿ ಪ್ರಕಟ

ಸಲ್ಲೂ ಮಾಡಿದ್ದ ಟ್ವೀಟ್, ಈಗ ವೈರಲ್ ಆಗಿರುವ ಆರ್ಚರ್ ಟ್ವೀಟ್ ಬಗೆಗಿನ ಸಂಪೂರ್ಣ ವಿವರಣೆ ಇಲ್ಲಿದೆ ನೋಡಿ.

ಸಲ್ಮಾನ್ ಟ್ವೀಟ್ ವೈರಲ್

ಸಲ್ಮಾನ್ ಟ್ವೀಟ್ ವೈರಲ್

ಅಕ್ಟೋಬರ್ 15ರ ಗುರುವಾರ ನಡೆದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕಿಂಗ್ಸ್ XI ಪಂಜಾಬ್ ನಡುವಿನ ಪಂದ್ಯದಲ್ಲಿ ಪಂಜಾಬ್ 8 ವಿಕೆಟ್‌ಗಳ ಗೆಲುವು ಕಂಡಿತ್ತು. ಆಗ ಸಲ್ಮಾನ್ ಖಾನ್ ಮಾಡಿದ್ದ ಟ್ವೀಟ್ ವೈರಲ್ ಆಗಿತ್ತು. ಕಾರಣ 2014ರ ಮೇನಲ್ಲಿ ಟ್ವೀಟ್ ಮಾಡಿದ್ದ ಸಲ್ಲೂ, 'ಪ್ರೀತಿ ಝಿಂಟಾಳ ಟೀಮ್ ವಿನ್ ಆಯ್ತಾ?' ಎಂದು ಪ್ರಶ್ನಿಸಿದ್ದರು. ಹೀಗಾಗಿ ಹೌದು, ಕಡೆಗೂ ಪಂಜಾಬ್ ವಿನ್ ಆಗಿದೆ ಎಂದು ಹಲವಾರು ನೆಟ್ಟಿಗರು ಹಳೆ ಟ್ವೀಟನ್ನು ರಿ ಟ್ವೀಟ್ ಮಾಡಿದ್ದರು.

99ಕ್ಕೆ ಕ್ರಿಸ್ ಗೇಲ್ ಔಟ್

99ಕ್ಕೆ ಕ್ರಿಸ್ ಗೇಲ್ ಔಟ್

ಶುಕ್ರವಾರ ನಡೆದಿದ್ದ ಪಂಜಾಬ್ vs ರಾಜಸ್ಥಾನ್ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ಮಾಡಿದ್ದ ಕ್ರಿಸ್ ಗೇಲ್, ಜೋಫ್ರಾ ಆರ್ಚರ್ ಎಸೆತಕ್ಕೆ 99 ರನ್‌ಗೆ ಔಟ್ ಆಗಿದ್ದರು. ಆರ್ಚರ್ ಅವರ 19.4ನೇ ಓವರ್‌ನಲ್ಲಿ ಗೇಲ್ ಇನ್‌ಸೈಡ್ ಎಡ್ಜ್‌ ಆ್ಯಂಡ್ ಬೌಲ್ಡ್ ಆಗಿ ನಿರ್ಗಮಿಸಿದ್ದರು. ಈಗ ಆರ್ಚರ್ ಅವರ ಹಳೇ ಟ್ವೀಟ್ ವೈರಲ್ ಆಗಿದ್ದು ಇದೇ ಕಾರಣಕ್ಕೆ

ಟ್ವೀಟ್ ವೈರಲ್‌ಗೆ ಕಾರಣ?

ಟ್ವೀಟ್ ವೈರಲ್‌ಗೆ ಕಾರಣ?

2013 ಫೆಬ್ರವರಿ 23ರಂದು ಜೋಫ್ರಾ ಆರ್ಚರ್ ಒಂದು ಟ್ವೀಟ್ ಮಾಡಿದ್ದರು. 'ನನಗೆ ಗೊತ್ತಿದೆ, ನಾನೊಂದು ವೇಳೆ ಬೌಲಿಂಗ್ ಮಾಡಿದರೆ ಆತ 100 ಗಳಿಸಲಾರ' ಎಂದು ಆ ಟ್ವೀಟ್‌ನಲ್ಲಿ ಆರ್ಚರ್ ಬರೆದುಕೊಂಡಿದ್ದರು. ಈ ಟ್ವೀಟ್‌ ಸತ್ಯವೆಂಬಂತೆ ಗೇಲ್ 99 ರನ್‌ಗೆ ಔಟ್ ಆಗಿಬಿಟ್ಟರಲ್ಲ? ಹೀಗಾಗಿ ಆರ್ಚರ್ ಹೇಳಿದಂತೆಯೇ ನಡೆಯುತ್ತದೆ ಎಂದು ಹಲವಾರು ಮಂದಿ ಆಗಿನ ಟ್ವೀಟನ್ನು ಈಗ ರೀ ಟ್ವೀಟ್ ಮಾಡುತ್ತಿದ್ದಾರೆ.

ಇತ್ತಂಡಗಳ ಸಂಕ್ಷಿಪ್ತ ಸ್ಕೋರ್

ಮೊದಲು ಬ್ಯಾಟಿಂಗ್ ಮಾಡಿದ್ದ ಕಿಂಗ್ಸ್ 11 ಪಂಜಾಬ್ ಪರ ಕೆಎಲ್ ರಾಹುಲ್ 46, ನಿಕೋಲಸ್ ಪೂರನ್ 22, ಕ್ರಿಸ್ ಗೇಲ್ 99 (63 ಎಸೆತ) ರನ್ ಸೇರ್ಪಡೆಯೊಂದಿಗೆ 20 ಓವರ್‌ಗೆ 4 ವಿಕೆಟ್ ನಷ್ಟದಲ್ಲಿ 185 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ರಾಜಸ್ಥಾನ್‌, ಸಂಜು ಸ್ಯಾಮ್ಸನ್ 48 (25 ಎಸೆತ), ರಾಬಿನ್ ಉತ್ತಪ್ಪ 30, ಬೆನ್ ಸ್ಟೋಕ್ಸ್ 50 (26 ಎಸೆತ), ಸ್ಟೀವ್ ಸ್ಮಿತ್ 31, ಜೋಸ್ ಬಟ್ಲರ್ 22 ರನ್‌ನೊಂದಿಗೆ 186 ರನ್ ಬಾರಿಸಿ ಗೆಲುವಿನ ನಗು ಬೀರಿತ್ತು.

Story first published: Saturday, October 31, 2020, 14:34 [IST]
Other articles published on Oct 31, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X