ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಅತಿ ವೇಗದ ಎಸೆತ ಟಾಪ್ 10, ಅಗ್ರಸ್ಥಾನದಲ್ಲಿ ಆರ್ಚರ್

IPL 2020: Jofra Archer tops the list of Top Ten Fastest Deliveriers

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಎಂದರೆ ಬರಿ ಹೊಡಿ ಬಡಿ ಆಟ, ರನ್ ಮಳೆ, ಸಿಕ್ಸರ್ ಸಿಡಿತ ಎಂದೆಲ್ಲ ಅಂದುಕೊಂಡವರ ಮುಂದೆ ಎದ್ದು ಕಾಣುವಂಥ ಪ್ರದರ್ಶನ ನೀಡುತ್ತಾ ಬಂದಿರುವ ವೇಗಿ ಜೋಫ್ರಾ ಆರ್ಚರ್.

ಐಪಿಎಲ್ 2020ರಲ್ಲೂ ತಮ್ಮ ಉತ್ತಮ ಬೌಲಿಂಗ್, ಅವಕಾಶ ಸಿಕ್ಕಾಗ ಬ್ಯಾಟಿಂಗ್ ನಲ್ಲೂ ಸಿಕ್ಸ್ ಸಿಡಿಸಿ ಮಿಂಚಿದ್ದಾರೆ. ಕಳೆದ 12 ದಿನಗಳಲ್ಲಿ ವೇಗಿಗಳು ಎಸೆತದ ವೇಗ ಲೆಕ್ಕ ಹಾಕಲಾಗಿದ್ದು, ಟಾಪ್ 10 ಪಟ್ಟಿಯಲ್ಲಿ ಜೋಫ್ರಾ ಆರ್ಚರ್ ಹೆಸರೇ ಹೆಚ್ಚಾಗಿ ಕಾಣಿಸಿಕೊಂಡಿದೆ.

ಐಪಿಎಲ್: ಒಂದೇ ಓವರ್‌ನಲ್ಲಿ 4 ಸಿಕ್ಸರ್ ಚಚ್ಚಿದ ಜೋಫ್ರಾ ಆರ್ಚರ್-ವಿಡಿಯೋಐಪಿಎಲ್: ಒಂದೇ ಓವರ್‌ನಲ್ಲಿ 4 ಸಿಕ್ಸರ್ ಚಚ್ಚಿದ ಜೋಫ್ರಾ ಆರ್ಚರ್-ವಿಡಿಯೋ

ಬಾರ್ಬಡೊಸ್ ನಲ್ಲಿ ಜನಿಸಿ ಇಂಗ್ಲೆಂಡ್ ಪರ ಆಡುವ ಆರ್ಚರ್, ಸದ್ಯ ರಾಜಸ್ಥಾನ್ ರಾಯಲ್ಸ್ ಪರ ಪ್ರಮುಖ ವೇಗಿಯಾಗಿ ತಂಡಕ್ಕೆ ಆಧಾರವಾಗಿದ್ದಾರೆ. ತಮ್ಮ ಬೌಲಿಂಗ್ ಮೂಲಕವೇ ಟೀಕಾಕಾರರಿಗೆ ಸರಿಯಾದ ಉತ್ತರ ನೀಡಿದ್ದಾರೆ.

ಬಲಗೈ ವೇಗಿ ಆರ್ಚರ್ ಅವರು ಚೆನ್ನೈ ವಿರುದ್ಧದ ಪಂದ್ಯದಲ್ಲಿ 26 ರನ್ ಕೊಟ್ಟು, ಫಾಫ್ ಡುಪ್ಲೆಸಿಸ್ ವಿಕೆಟ್ ಕೂಡಾ ಕಿತ್ತಿದ್ದರು. ನಂತರದ ಪಂದ್ಯದಲ್ಲಿ ಶಾರ್ಜಾದ ಮಟ್ಟಸವಾದ ಪಿಚ್ ನಲ್ಲಿ 3 ಓವರ್ ಗಳಲ್ಲೇ 46 ರನ್ ಚೆಚ್ಚಿಸಿಕೊಂಡಿದ್ದರು. ಮೂರನೇ ಪಂದ್ಯದಲ್ಲಿ ಸಕತ್ತಾಗಿ ಕಮ್ ಬ್ಯಾಕ್ ಮಾಡಿ, ಕೆಕೆಆರ್ ವಿರುದ್ಧ 18ರನ್ನಿತ್ತು 2 ವಿಕೆಟ್ ಕಬಳಿಸಿದರು.

ಐಪಿಎಲ್ 2020: ರಾಜಸ್ಥಾನ ಆಟಗಾರರ ಚುರುಕುತನ ಹಿಂದಿನ ಶಕ್ತಿಐಪಿಎಲ್ 2020: ರಾಜಸ್ಥಾನ ಆಟಗಾರರ ಚುರುಕುತನ ಹಿಂದಿನ ಶಕ್ತಿ

ದುಬಾರಿ ವೇಗಿ ಪ್ಯಾಟ್ ಕಮಿನ್ಸ್, ಕಾಗಿಸೋ ರಬಾಡಾ, ಯಾರ್ಕರ್ ಸ್ಪೆಷಲಿಸ್ಟ್ ಜಸ್ ಪ್ರೀತ್ ಬೂಮ್ರಾ, ನವದೀಪ್ ಸೈನಿ ನಡುವೆ ಆರ್ಚರ್ ಅತ್ಯಂತ ವೇಗದ ಎಸೆತವನ್ನು ಹಾಕಿದ್ದಾರೆ.

ಟಾಪ್ 10 ವೇಗದ ಎಸೆತ ಪಟ್ಟಿ:
1. ಜೋಫ್ರಾ ಆರ್ಚರ್( ಆರ್ ಆರ್): 152.13
2. ಜೋಫ್ರಾ ಆರ್ಚರ್( ಆರ್ ಆರ್): 150.82
3. ಜೋಫ್ರಾ ಆರ್ಚರ್( ಆರ್ ಆರ್): 150.75
4. ಜೋಫ್ರಾ ಆರ್ಚರ್( ಆರ್ ಆರ್): 149.91
5. ಜೋಫ್ರಾ ಆರ್ಚರ್( ಆರ್ ಆರ್): 149.82
6. ಜೋಫ್ರಾ ಆರ್ಚರ್( ಆರ್ ಆರ್): 149.82
7. ಜೋಫ್ರಾ ಆರ್ಚರ್( ಆರ್ ಆರ್): 149.48
8. ಅಂರಿಚ್ ನೊರ್ಜೆ(ಡಿಸಿ): 148.92
9. ಜೋಫ್ರಾ ಆರ್ಚರ್( ಆರ್ ಆರ್): 148.80
10. ಜೋಫ್ರಾ ಆರ್ಚರ್( ಆರ್ ಆರ್): 148.75

ಆರ್ಚರ್ 152.13 ಕಿಲೋ ಮೀಟರ್ ಪ್ರತಿ ಗಂಟೆ ವೇಗದಲ್ಲಿ ಚೆಂಡು ಎಸೆದಿದ್ದು ಇಲ್ಲಿ ತನಕದ ವೇಗದ ಎಸೆತವಾಗಿದೆ. ಟಾಪ್ ಟೆನ್ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ನ ಆಂರಿಚ್ ನೊರ್ಜೆ ಅವರು 8ನೇ ಸ್ಥಾನದಲ್ಲಿದ್ದಾರೆ. ಮಿಕ್ಕಂತೆ ಎಲ್ಲವೂ ಆರ್ಚರ್ ಎಸೆತ ವೇಗದ ಚೆಂಡುಗಳಾಗಿವೆ.

Story first published: Friday, October 2, 2020, 13:54 [IST]
Other articles published on Oct 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X