ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚೆನ್ನೈ ವಿರುದ್ಧದ ಪಂದ್ಯಕ್ಕೆ ರಾಜಸ್ಥಾನದ ಸ್ಟಾರ್ ಕ್ರಿಕೆಟರ್ ಅಲಭ್ಯ!

ದುಬೈ, ಸೆ. 20: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 13ನೇ ಆವೃತ್ತಿಯನ್ನು ಉತ್ತಮ ಫಲಿತಾಂಶದೊಂದಿಗೆ ಕಿಕ್ ಸ್ಟಾರ್ಟ್ ಮಾಡಲು ರಾಜಸ್ಥಾನ್ ರಾಯಲ್ಸ್ ತಂಡ ಕಾತುರದಿಂದ ಕಾದಿದೆ. ಮೂರು ಬಾರಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮೊದಲ ಪಂದ್ಯವನ್ನಾಡಲಿದೆ. ಆದರೆ, ಮೊದಲ ಪಂದ್ಯಕ್ಕೆ ಸ್ಟಾರ್ ಆಟಗಾರ ಇಂಗ್ಲೆಂಡ್ ಬ್ಯಾಟ್ಸ್ ಮನ್ ಜೋಸ್ ಬಟ್ಲರ್ ಅಲಭ್ಯರಾಗಲಿದ್ದಾರೆ ಎಂಬ ಸುದ್ದಿ ಬಂದಿದೆ.

ಕೊವಿಡ್ 19 ಕ್ವಾರಂಟೈನ್ ಅವಧಿಯಲ್ಲಿರುವ ಜೋಸ್ ಬಟ್ಲರ್ ಈ ಅವಧಿ ಪೂರೈಸಿ ಬಯೋ ಬಬ್ಬಲ್ ನೊಳಗೆ ಸೇರಿಕೊಳ್ಳಬೇಕು. ನಂತರವಷ್ಟೇ ಮೈದಾನಕ್ಕಿಳಿಯಬಹುದು. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಇಂಗ್ಲೆಂಡ್ ಪರ ಆಡಿದ್ದ ಬಟ್ಲರ್ ಆ ಸರಣಿ ಮುಗಿಯುತ್ತಿದ್ದಂತೆ ಗುರುವಾರದಂದು ದುಬೈಗೆ ಬಂದಿಳಿದಿದ್ದರು.

ಇದೇನ್ ಗುರು! ಐಪಿಎಲ್ 13 ಆಟದ ನಡುವೆ ನಕಲಿ ಸೌಂಡುಇದೇನ್ ಗುರು! ಐಪಿಎಲ್ 13 ಆಟದ ನಡುವೆ ನಕಲಿ ಸೌಂಡು

ಸ್ಯಾಮ್ ಕರನ್ ಹೆಚ್ಚಿನ ಅವಧಿ ಕ್ವಾರಂಟೈನ್ ಇಲ್ಲದೆ ಕಣಕ್ಕಿಳಿಯಬಹುದಾದರೆ, ಜೋಸ್ ಬಟ್ಲರ್ ಏಕೆ ಮೈದಾನಕ್ಕಿಳಿಯಲು ತಡವಾಗುತ್ತಿದೆ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ರಾಜಸ್ಥಾನ್ ರಾಯಲ್ಸ್ ಮ್ಯಾನೇಜ್ಮೆಂಟ್ ಕೂಡಾ ಪ್ರತಿಕ್ರಿಯಿಸಿದೆ.

ಸ್ಯಾಮ್ ಕರನ್ ಉದಾಹರಣೆ

ಸ್ಯಾಮ್ ಕರನ್ ಉದಾಹರಣೆ

ಈ ಬಗ್ಗೆ ಪ್ರತಿಕ್ರಿಯಿಸಿದ ಬಟ್ಲರ್, "ನಾನು ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಆಡಲು ಕಾತುರದಿಂದ ಕಾದಿದ್ದೇನೆ. ಇಂಗ್ಲೆಂಡ್ ನಲ್ಲಿ ಬೇಸಿಗೆ ಋತುವಿನಲ್ಲಿ ಕ್ರಿಕೆಟ್ ಆಡಿದ ಅನುಭವದೊಂದಿಗೆ ಇಲ್ಲಿಗೆ ಬಂದಿದ್ದೇನೆ. ಚೆನ್ನೈ ಪಂದ್ಯವನ್ನು ನೋಡಿದೆ. ಸ್ಯಾಮ್ ಕರನ್ ಸಿಕ್ಸ್ ಸಿಡಿಸಿದ್ದು ಚೆನ್ನಾಗಿತ್ತು. ಹೆಚ್ಚು ಕ್ವಾರಂಟೈನ್ ಅವಧಿಯಲ್ಲಿರದೇ ಮೈದಾನಕ್ಕಿಳಿದ ಕರನ್ ಆಟದ ಬಗ್ಗೆ ಬಟ್ಲರ್ ಮೆಚ್ಚುಗೆ ವ್ಯಕ್ತಪಡಿಸಿದರು''

ಇನ್ಸ್ಟಾಗ್ರಾಂ ಲೈವ್ ಚಾಟ್ ನಲ್ಲಿ ಮಾತನಾಡುತ್ತಾ, ಚೆನ್ನೈ ವಿರುದ್ಧದ ಮೊದಲ ಪಂದ್ಯದಲ್ಲಿ ನಾನು ಆಡಲು ಆಗುತ್ತಿಲ್ಲ, ನನ್ನ ಕ್ವಾರಂಟೈನ್ ಅವಧಿ ಇನ್ನೂ ಮುಗಿದಿಲ್ಲ, ನಾನು ಇನ್ನೂ ಕುಟುಂಬದ ಜೊತೆಗಿದ್ದೇನೆ. ಕುಟುಂಬದವರ ಜೊತೆಗೆ ಇರಲು ರಾಯಲ್ಸ್ ಅನುಮತಿ ನೀಡಿರುವುದು ಖುಷಿಕೊಟ್ಟಿದೆ ಎಂದರು.

ಯಾವುದೇ ಕ್ರಮಾಂಕವಾದರೂ ಓಕೆ

ಯಾವುದೇ ಕ್ರಮಾಂಕವಾದರೂ ಓಕೆ

ಬೆನ್ ಸ್ಟೋಕ್ಸ್ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ, ಕೆಲ ಪಂದ್ಯಗಳ ಬಳಿಕ ತಂಡವನ್ನು ಸೇರುವ ಸಾಧ್ಯತೆಯಿದೆ. ರಾಯಲ್ಸ್ ತಂಡದ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯಲು ಬಯಸಿದ್ದೇನೆ. ಟಿ20ಯಲ್ಲಿ ಓಪನಿಂಗ್ ಮುಖ್ಯ, ಆದರೆ, ತಂಡದ ಮ್ಯಾನೇಜ್ಮೆಂಟ್ ಬಯಸಿದ ಬ್ಯಾಟಿಂಗ್ ಕ್ರಮಾಂಕದಲ್ಲಿ ಆಡಲು ಸಿದ್ಧ ಎಂದು ಜೋಸ್ ಬಟ್ಲರ್ ಹೇಳಿದರು. ಸೆ. 22ರಂದು ಚೆನ್ನೈ ವಿರುದ್ಧ ಮೊದಲ ಪಂದ್ಯವನ್ನು ರಾಜಸ್ಥಾನ್ ರಾಯಲ್ಸ್ ಆಡಲಿದೆ.

ಗೆಲುವಿನ ಸಂತಸದ ಜೊತೆಗೆ ಕಹಿ ಸುದ್ದಿ ಕೊಟ್ಟ ಚೆನ್ನೈ ಕೋಚ್!

ಕ್ವಾರಂಟೈನ್ ಗೊಂದಲದ ಬಗ್ಗೆ ರಾಯಲ್ಸ್ ಸ್ಪಷ್ಟನೆ

ಕ್ವಾರಂಟೈನ್ ಗೊಂದಲದ ಬಗ್ಗೆ ರಾಯಲ್ಸ್ ಸ್ಪಷ್ಟನೆ

ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಏಕದಿನ ಸರಣಿಯಲ್ಲಿ ಆಡಿದ್ದ ಆಟಗಾರರು ಐಪಿಎಲ್ ನಲ್ಲಿ ಆಡಲು ದುಬೈಗೆ ಬಂದಿಳಿದರೆ ಅವರಿಗೆ 36 ಗಂಟೆಗಳ ಕಡ್ಡಾಯ ಕ್ವಾರಂಟೈನ್ ವಿಧಿಸಲಾಗುತ್ತಿದೆ. ಆದರೆ, ಬಯೋ ಬಬ್ಬಲ್ ಭಾಗದಲ್ಲಿ ಬಟ್ಲರ್ ಸೇರಿಸಿರಲಿಲ್ಲ. ಬಟ್ಲರ್ ನಂತರ ತಮ್ಮ ಕುಟುಂಬದ ಜೊತೆಗೆ ಬೇರೆ ವಿಮಾನದಲ್ಲಿ ಬಂದಿದ್ದಾರೆ. ಹೀಗಾಗಿ, ಪೂರ್ತಿ 6 ದಿನಗಳ ಕ್ವಾರಂಟೈನ್ ಅವಧಿ ಪೂರೈಸಬೇಕು. ಇದಾದ ಬಳಿಕ ನೇರವಾಗಿ ಮೈದಾನಕ್ಕಿಳಿಯಬಹುದು ಎಂದು ರಾಜಸ್ಥಾನ ತಂಡದ ವಕ್ತಾರರು ಸ್ಪಷ್ಟಪಡಿಸಿದ್ದಾರೆ.

ಒತ್ತಡದಲ್ಲಿ ಆರ್ ಆರ್ ನಾಯಕ ಸ್ಟೀವ್ ಸ್ಮಿತ್

ಒತ್ತಡದಲ್ಲಿ ಆರ್ ಆರ್ ನಾಯಕ ಸ್ಟೀವ್ ಸ್ಮಿತ್

ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸ್ಟೀವ್ ಸ್ಮಿತ್, ಆಲ್ ರೌಂಡರ್ ಟಾಮ್ ಕರನ್, ಜೋಫ್ರಾ ಆರ್ಚರ್ ಮೊದಲ ಪಂದ್ಯಕ್ಕೆ ಲಭ್ಯರಾಗಿದ್ದು ಮೂವರು ಮೊದಲ ಹಂತದ ಬಬ್ಬಲ್ ನಲ್ಲಿದ್ದರು. ಸೆ.22ರಂದು ಚೆನ್ನೈ ವಿರುದ್ಧದ ಪಂದ್ಯದಲ್ಲಿ ಗೆಲುವಿನ ಮೂಲಕ ಶುಭಾರಂಭ ಮಾಡಲು ರಾಜಸ್ಥಾನ ಬಯಸಿದೆ. ಈ ನಡುವೆ ತಂಡದ ಆಯ್ಕೆ ಸ್ಮಿತ್ ಗೆ ಸಮಸ್ಯೆ ಆಗುವ ಸಾಧ್ಯತೆಯಿದೆ.

ಈ ಸಲ ಕಪ್ ಈ ತಂಡಕ್ಕೆ-ಕ್ರಿಕೆಟ್ ಬುಕ್ಕಿಗಳ ಭವಿಷ್ಯ ಬಹಿರಂಗ

Story first published: Monday, September 21, 2020, 11:20 [IST]
Other articles published on Sep 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X