ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಾಜಸ್ಥಾನ್ ತಂಡದ ನಾಯಕತ್ವವೂ ಬದಲಾಗಲಿದೆಯಾ? ಟ್ವೀಟ್‌ನಲ್ಲಿ ಆರ್‌ಆರ್‌ ನೀಡುತ್ತಿರುವ ಸುಳಿವೇನು?

IPL 2020: Jos Buttler To Replace Steve Smith as Rajasthan Royals Captain?

ಐಪಿಎಲ್ ಟೂರ್ನಿಯ ಮೊದಲಾರ್ಧ ಮುಕ್ತಾಯವಾಗಿ ಈಗಾಲೇ ದ್ವಿತೀಯಾರ್ಧದ ಪಂದ್ಯಗಳು ಆರಂಭವಾಗಿದೆ. ಈ ಸಂದರ್ಭದಲ್ಲಿ ಕೆಕೆಆರ್ ತಂಡ ತನ್ನ ನಾಯಕನನ್ನು ಬದಲಿಸಿ ಹೊಸ ನಾಯಕನಿಗೆ ತಂಡದ ಹೊಣೆಯನ್ನು ನೀಡಿದೆ. ದಿನೇಶ್ ಕಾರ್ತಿಕ್ ಬದಲಿಗೆ ಟೂರ್ನಿಯ ಮುಂದಿನ ಹಂತದಲ್ಲಿ ಇಯಾನ್ ಮಾರ್ಗನ್ ತಂಡವನ್ನು ಮುನ್ನಡೆಸಲಿದ್ದಾರೆ. ಇದೇ ರೀತಿಯ ಬದಲಾವಣೆ ರಾಜಸ್ಥಾನ್ ರಾಯಲ್ಸ್ ತಂಡದಲ್ಲೂ ನಡೆಯಲಿದೆಯಾ?

ಈ ರೀತಿಯ ಅನುಮಾನಗಳು ಸುಮ್ಮನೆ ವ್ಯಕ್ತವಾಗುತ್ತಿಲ್ಲ. ಸ್ವತಃ ರಾಜಸ್ಥಾನ್ ರಾಯಲ್ಸ್ ತಂಡದ ಕೆಲ ಟ್ವೀಟ್‌ಗಳು ಈ ಬಗ್ಗೆ ಸುಳಿವನ್ನು ನೀಡುವಂತಿದೆ. ಇದನ್ನು ಆಧರಿಸಿ ಅಭಿಮಾನಿಗಳು ತಂಡದ ನಾಯಕ ಬದಲಾಗಲಿದ್ದಾರೆ ಎಂಬ ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಕೆಕೆಆರ್ ನಾಯಕತ್ವ ತ್ಯಜಿಸಿದ ದಿನೇಶ್ ಕಾರ್ತಿಕ್: ಇಯಾನ್ ಮಾರ್ಗನ್‌ ನೂತನ ನಾಯಕಕೆಕೆಆರ್ ನಾಯಕತ್ವ ತ್ಯಜಿಸಿದ ದಿನೇಶ್ ಕಾರ್ತಿಕ್: ಇಯಾನ್ ಮಾರ್ಗನ್‌ ನೂತನ ನಾಯಕ

ಆರ್‌ಆರ್ ಟ್ವೀಟ್‌

ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ಜೋಸ್ ಬಟ್ಲರ್ ಅವರನ್ನು ಕೇಂದ್ರೀಕರಿಸಿ ತಂಡದ ಟ್ವಿಟ್ಟರ್ ಖಾತೆಯಲ್ಲಿ ಎರಡು ಟ್ವೀಟ್‌ಗಳನ್ನು ಮಾಡಲಾಗಿದೆ. ಈ ಟ್ವೀಟ್‌ನ ಕಾರಣದಿಂದಾಗಿ ಅಭಿಮಾನಿಗಳು ಗೊಂದಲಕ್ಕೊಳಗಾಗಿದ್ದು ಆರ್‌ಆರ್‌ ತಂಡದ ನಾಯಕತ್ವ ಬದಲಾಗಲಿದ ಎಂಬ ಚರ್ಚೆಗಳು ನಡೆಯುತ್ತಿದೆ.

ಕೆಟ್ಟ ಫಲಿತಾಂಶಕ್ಕೆ ನಾಯಕ ಹೊಣೆ?

ರಾಜಸ್ಥಾನ್ ರಾಯಲ್ಸ್ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಆರಂಭಿಕ ಎರಡು ಪಂದ್ಯಗಳಲ್ಲಿ ಭರ್ಜರಿ ಗೆಲುವು ದಾಖಲಿಸಿದ ಬಳಿಕ ಸತತ ಸೋಲು ತಂಡವನ್ನು ಕಾಡಿತ್ತು. ಒಟ್ಟಾರೆ ಟೂರ್ನಿಯಲ್ಲಿ ಆಡಿದ 8 ಪಂದ್ಯಗಳಲ್ಲಿ ರಾಜಸ್ಥಾನ್ ಕೇವಲ ಮೂರು ಗೆಲುವನ್ನು ಮಾತ್ರವೇ ಕಂಡಿದೆ. ಹೀಗಾಗಿ ನಾಯಕತ್ವ ಬದಲಾವಣೆಯ ಊಹಾಪೋಹ ಆರಂಭವಾಗಿದೆ.

ಟ್ವೀಟ್‌ಮೂಲಕವೇ ಸ್ಪಷ್ಟನೆ?

ಇನ್ನು ಟ್ವೀಟ್‌ನ ಕಾರಣದಿಂದ ನಾಯಕತ್ವ ಬದಲಾವಣೆಯ ವಿಚಾರವಾಗಿ ಚರ್ಚೆಗಳು ಆರಂಭವಾಗಿರುವುದು ರಾಜಸ್ಥಾನ್ ರಾಯಲ್ಸ್ ಗಮನಕ್ಕೂ ಬಂದಿದೆ. ಈ ಬಗ್ಗೆ ತಮಾಷೆಯಾಗಿಯೇ ಮತ್ತೊಂದು ಟ್ವೀಟ್ ಮಾಡಿರುವ ಆರ್‌ಆರ್ ನಾಯಕನ ಫೋಟೋವೊಂದನ್ನೂ ಹಂಚಿಕೊಂಡಿದ್ದು ಈ ಚರ್ಚೆಗಳು ಆಧಾರ ರಹಿತ ಎಂದು ಹೇಳುವ ಪ್ರಯತ್ನ ಮಾಡಿದೆ.

Story first published: Saturday, October 17, 2020, 10:46 [IST]
Other articles published on Oct 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X