ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಲ್ಲಿ ಹೊಸ ದಾಖಲೆ ಬರೆದ ಡೆಲ್ಲಿ ಕ್ಯಾಪಿಟಲ್ಸ್ ವೇಗಿ ಕಗಿಸೋ ರಬಾಡ

Ipl 2020: Kagiso Rabada Sets New Ipl Record

ಡೆಲ್ಲಿ ಕ್ಯಾಪಿಟಲ್ಸ್ ತಂಡದ ವೇಗಿ ಕಗಿಸೋ ರಬಾಡ ಮಂಗಳವಾರ ನಡೆದ ಪಂದ್ಯದಲ್ಲಿ ಮಹತ್ವದ ದಾಖಲೆಯೊಂದನ್ನು ಬರೆದಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೋತರೂ ಕೂಡ ಬೌಲಿಂಗ್‌ನಲ್ಲಿ ಮಿಂಚಿದ ಕಗಿಸೋ ರಬಾಡ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿ ಪರ್ಪನ್ ಕ್ಯಾಪ್ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ಆದರೆ ಡೆಲ್ಲಿ ವೇಗಿ ಕಗಿಸೋ ರಬಾಡ ದಾಖಲೆ ಮಾಡಿದ್ದು ಪರ್ಪಲ್ ಕ್ಯಾಪ್ ವಿಚಾರವಾಗಿ ಅಲ್ಲ. ನಾಲ್ಕು ಓವರ್‌ಗಳನ್ನು ಎಸೆದ ರಬಡ ನಿನ್ನೆಯ ಪಂದ್ಯದಲ್ಲಿ 2 ವಿಕೆಟ್ ಕಿತ್ತು ಮಿಂಚಿದ್ದಾರೆ. ಈ ಎರಡು ವಿಕೆಟ್‌ಗಳ ಸಾಧನೆಯ ಮೂಲಕ ಐಪಿಎಲ್‌ನಲ್ಲಿ ಯಾರೂ ಈವರೆಗೆ ಮಾಡದ ಸಾಧನೆಯನ್ನು ಮಾಡಿ ಬೀಗಿದ್ದಾರೆ ದಕ್ಷಿಣ ಆಫ್ರಿಕಾದ ಯುವ ವೇಗದ ಬೌಲರ್.

ಅಂಬಾಟಿ ರಾಯುಡು, ಡ್ವೇಯ್ನ್ ಬ್ರಾವೋ ಮರಳುವಿಕೆ ಬಗ್ಗೆ ಅಪ್‌ಡೇಟ್ ಕೊಟ್ಟ ಸಿಎಸ್‌ಕೆ ಸಿಇಒಅಂಬಾಟಿ ರಾಯುಡು, ಡ್ವೇಯ್ನ್ ಬ್ರಾವೋ ಮರಳುವಿಕೆ ಬಗ್ಗೆ ಅಪ್‌ಡೇಟ್ ಕೊಟ್ಟ ಸಿಎಸ್‌ಕೆ ಸಿಇಒ

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಮಾಡಿದ ಸಾಧನೆಯೊಂದಿಗೆ ರಬಾಡ ಸತತ 10 ಪಂದ್ಯಗಳಲ್ಲಿ 2 ಅಥವಾ ಅದಕ್ಕೂ ಹೆಚ್ಚು ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ. ಈ ಸಾಧನೆಯನ್ನು ಈವರೆಗೂ ಯಾವುದೇ ಬೌಲರ್ ಐಪಿಎಲ್ ಇತಿಹಾಸದಲ್ಲಿ ಮಾಡಿಲ್ಲ. ಈ ಮೂಲಕ ವಿಶೇಷ ಗೌರವಕ್ಕೆ ಕಗಿಸೋ ರಬಾಡ ಪಾತ್ರರಾಗಿದ್ದರೆ.

ಈ ಹಿಂದೆ ಅತಿ ಹೆಚ್ಚು ಪಂದ್ಯಗಳಲ್ಲಿ 2ಕ್ಕಿಂತ ಹೆಚ್ಚು ವಿಕೆಟ್‌ ಪಡೆದ ದಾಖಲೆಯನ್ನು ಲಸಿತ್ ಮಲಿಂಗ ಅವರು ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದರು. ಮಲಿಂಗ ಸತತ 8 ಪಂದ್ಯಗಳಲ್ಲಿ ಈ ಸಾಧನೆಯನ್ನು ಮಾಡಿದ್ದಾರೆ. ಆದರೆ ಇದನ್ನು ಈಗಾಗಲೇ ಮೀರಿಸಿರುವ ಕಗಿಸೋ ರಬಾಡ 10 ಪಂದ್ಯಗಳಿಗೆ ಈ ದಾಖಲೆಯನ್ನು ವಿಸ್ತರಿಸಿಕೊಂಡಿದ್ದಾರೆ.

ಐಪಿಎಲ್‌ನಲ್ಲಿ ಕಣಕ್ಕಿಳಿದ ಹೊಸ ಪ್ರತಿಭೆ: ಯಾರಿದು ಅಬ್ದುಲ್ ಸಮದ್?ಐಪಿಎಲ್‌ನಲ್ಲಿ ಕಣಕ್ಕಿಳಿದ ಹೊಸ ಪ್ರತಿಭೆ: ಯಾರಿದು ಅಬ್ದುಲ್ ಸಮದ್?

ಈ ಟೂರ್ನಿಯಲ್ಲಿ ರಬಡ 3 ಪಂದ್ಯಗಳಲ್ಲಿ 7 ವಿಕೆಟ್ ಕಿತ್ತಿದ್ದಾರೆ. 10.71ರ ಸರಾಸರಿಯಲ್ಲಿ ಬೌಲಿಂಗ್ ಮಾಡಿರುವ ರಬಾಡ 26 ರನ್‌ನೀಡಿ 3 ವಿಕೆಟ್ ಪಡೆದಿರುವುದು ಈ ಟೂರ್ನಿಯ ಉತ್ತಮ ಪ್ರದರ್ಶನವಾಗಿದೆ. ಈ ಮೂಲಕ ಮೊಹಮದ್ ಶಮಿ ವಶದಲ್ಲಿದ್ದ ಪರ್ಪಲ್ ಕ್ಯಾಪ್‌ಅನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ ಕಗಿಸೋ ರಬಾಡ.

Story first published: Wednesday, September 30, 2020, 15:30 [IST]
Other articles published on Sep 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X