ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಪಂದ್ಯಾವಳಿ ಮುಂದೂಡುವಂತೆ ಕರ್ನಾಟಕ ಸರ್ಕಾರದಿಂದ ಪತ್ರ

IPL 2020: Karnataka government wants to postponed the tournment at Bengaluru

ಬೆಂಗಳೂರು, ಮಾರ್ಚ್ 10: ದೇಶದೆಲ್ಲೆಡೆ ಕೊರೊನಾವೈರಸ್ ಭೀತಿ ಆವರಿಸಿದೆ. ವೈರಸ್ ಹರಡುವ ಭೀತಿಯಲ್ಲಿ ಹಬ್ಬದಾಚರಣೆಗೆ ಬ್ರೇಕ್ ಹಾಕಲಾಗಿದೆ. ಹಲವು ಕ್ರೀಡಾಕೂಟಗಳು ರದ್ದಾಗುತ್ತಿವೆ. ಆದರೆ, ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 13ನೇ ಆವೃತ್ತಿ ನಿಗದಿಯಂತೆ ನಡೆಯಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಘೋಷಿಸಿದ್ದಾರೆ.

ಈ ನಡುವೆ ಕರ್ನಾಟಕದಲ್ಲಿ ಮೊದಲ ಕೊರೊನಾವೈರಸ್ ಪ್ರಕರಣ ದಾಖಲಾಗಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಬೆಂಗಳೂರಿನಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಗಳನ್ನು ಮುಂದೂಡುವಂತೆ ಕರ್ನಾಟಕ ಸರ್ಕಾರ ಅಧಿಕೃತವಾಗಿ ಪತ್ರ ಬರೆದಿದೆ.

ಐಪಿಎಲ್ ಪ್ರಿಯರಿಗೆ ಸಕತ್ ಸುದ್ದಿ, ಯಾವುದೇ ಪಂದ್ಯ ಮುಂದೂಡುವುದಿಲ್ಲಐಪಿಎಲ್ ಪ್ರಿಯರಿಗೆ ಸಕತ್ ಸುದ್ದಿ, ಯಾವುದೇ ಪಂದ್ಯ ಮುಂದೂಡುವುದಿಲ್ಲ

ಅಮೆರಿಕಾದಿಂಡ ಬೆಂಗಳೂರಿಗೆ ಹಿಂತಿರುಗಿದ ಸಾಫ್ಟ್ವೇರ್ ಇಂಜಿನಿಯರ್ ರೊಬ್ಬರಿಗೆ ಕೊರೊನಾವೈರಸ್ ಸೋಂಕಿ ಇರುವುದು ಪತ್ತೆಯಾದ ಹಿನ್ನಲೆಯಲ್ಲಿ ಸೋಮವಾರದಂದು ಕರ್ನಾಟಕ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ ಸುದ್ದಿಗೋಷ್ಠಿ ನಡೆಸಿದರು. ಈ ಸಂದರ್ಭದಲ್ಲಿ ಐಪಿಎಲ್ ಪಂದ್ಯಾವಳಿ ಬಗ್ಗೆ ಮಾತನಾಡಿ, "ಐಪಿಎಲ್ ಪಂದ್ಯ ನಡೆಸದಂತೆ ಕೇಂದ್ರ ಸರ್ಕಾರಕ್ಕೆ ಮಹಾರಾಷ್ಟ್ರ ಸರ್ಕಾರ ಪತ್ರ ಬರೆದಿದೆ.

ಮಹಾರಾಷ್ಟ್ರ ಸರ್ಕಾರದಂತೆ ಕರ್ನಾಟಕ ಸರ್ಕಾರವು ಪತ್ರ ಬರೆದಿದ್ದು, ಐಪಿಎಲ್ ಪಂದ್ಯಗಳನ್ನು ಮುಂದೂವಂತೆ ಬಿಸಿಸಿಐಗೆ ಕೇಂಡ್ರ ಸರ್ಕಾರ ಸೂಚಿಸುವ ನಿರೀಕ್ಷಿಯಿದೆ, ರಾಜ್ಯದಲ್ಲಿ 982 ಜನ ತಪಾಸಣೆ ಗೆ ಒಳಪಡಿಸಿದ್ದೇವೆ, ಇದರಲ್ಲಿ 92 ಜನರ ಮೇಲೆ ನಿಗಾ ಇಡಲಾಗಿದೆ. ಕೊರೊನಾವೈರಸ್ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದಿದ್ದಾರೆ.

ಐಪಿಎಲ್: ಚುಟುಕು ಕದನದ ವೇಳಾಪಟ್ಟಿ ಬಿಡುಗಡೆ : ಆರ್‌ಸಿಬಿ ಪಂದ್ಯ ಯಾವಾಗ?ಐಪಿಎಲ್: ಚುಟುಕು ಕದನದ ವೇಳಾಪಟ್ಟಿ ಬಿಡುಗಡೆ : ಆರ್‌ಸಿಬಿ ಪಂದ್ಯ ಯಾವಾಗ?

ಆದರೆ, ಸೌರವ್ ಗಂಗೂಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾರ್ಚ್ 29ರಿಂದ 13ನೇ ಆವೃತ್ತಿಯ ಐಪಿಎಲ್ ಪಂದ್ಯಾವಳಿ ಆರಂಭವಾಗಲಿದೆ, ಕೊರೊನಾವೈರಸ್ ಬಗ್ಗೆ ಅಗತ್ಯ ಕ್ರಮಗಳನ್ನು ಬಿಸಿಸಿಐ ತೆಗೆದುಕೊಳ್ಳಲಿದೆ. ಕೇಂದ್ರ ಆರೋಗ್ಯ ಇಲಾಖೆ ನೀಡಿರುವ ಜಾಗೃತಿ ಪ್ರಕಟಣೆಯಂತೆ ಬಿಸಿಸಿಐ ನಡೆದುಕೊಳ್ಳಲಿದೆ. ಹೀಗಾಗಿ, ಆಟಗಾರರು ಪರಸ್ಪರ ಕೈಕುಲುಕಿಕೊಳ್ಳುವುದು, ತಬ್ಬಿಕೊಳ್ಳುವುದನ್ನು ನಿರ್ಬಂಧಿಸಲಾಗಿದೆ. ಅಭಿಮಾನಿಗಳ ಜೊತೆ ಸೆಲ್ಫಿ, ಫೋಟೊ, ಹ್ಯಾಂಡ್ ಶೇಕ್ ಕೂಡಾ ನಿರ್ಬಂಧ ಪಟ್ಟಿಯಲ್ಲಿದೆ ಎಂದಿದ್ದಾರೆ.

ದೆಹಲಿ, ಉತ್ತರಪ್ರದೇಶ, ಜಮ್ಮು ಮತ್ತು ಕಾಶ್ಮೀರದಲ್ಲಿ ಕೊರೊನಾ ಭೀತಿ ಹೆಚ್ಚಾಗಿದ್ದು, ಅಲ್ಲಿನ ಕ್ರಿಕೆಟ್ ಮಂಡಳಿಯವರು ಆತಂಕ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಮಹಾರಾಷ್ಟ್ರದ ಆರೋಗ್ಯ ಸಚಿವರು ಐಪಿಎಲ್ ಪಂದ್ಯ ಮುಂದೂಡಿಕೆಗೆ ಹೆಚ್ಚಿನ ಒತ್ತಡ ಹೇರಿದ್ದಾರೆ.

Story first published: Tuesday, March 10, 2020, 9:44 [IST]
Other articles published on Mar 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X