ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಭಿನ್ನ ಕೂಲಿಂಗ್ ಗ್ಲಾಸ್ ಹಾಕಿದ್ದ ಶಿಖರ್ ಧವನ್ ಕಾಲೆಳೆದ ಪೀಟರ್ಸನ್: ವಿಡಿಯೋ

IPL 2020: Kevin Pietersen jokes with Shikhar Dhawan on his ‘uber-cool’ glasses

ದುಬೈ: ಶುಕ್ರವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಗಮನ ಸೆಳೆದಿದ್ದರು. ಯಾಕೆಂದರೆ ಧವನ್ ವಿಭಿನ್ನ ಕೂಲಿಂಗ್ ಗ್ಲಾನ್ ಧರಿಸಿ ಮೈದಾನಕ್ಕಿಳಿದಿದ್ದರು. ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ಧ ಪಂದ್ಯದಲ್ಲಿ ಧವನ್ ವಿಚಿತ್ರ ಕನ್ನಡಕದೊಂದಿಗೆ ಕಾಣಿಸಿಕೊಂಡಿದ್ದರು.

ಐಪಿಎಲ್ 2020: ಸಮಗ್ರ ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳ್ಳುಳ್ಳ ವಿಶೇಷ ಪುಟ

ದುಬೈ ಇಂಟರ್‌ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 7ನೇ ಪಂದ್ಯದಲ್ಲಿ ತಮ್ಮ ಕೂಲಿಂಗ್‌ ಗ್ಲಾಸ್‌ಗಾಗಿ ಧವನ್ ಗಮನ ಸೆಳೆದರು. ನೋಡೋಕೆ ಜಾತ್ರೆಯಂತಿದ್ದ ಆ ಕೂಲಿಂಗ್ ಗ್ಲಾಸ್‌ಗೆ 'ಉಬರ್ ಕೂಲ್‌' ಎನ್ನುತ್ತಾರೆ. ರಾತ್ರಿ ಹೊತ್ತಿನಲ್ಲಿ ಬಳಸುವ ಕೂಲಿಂಗ್ ಗ್ಲಾಸ್ ಅದು.

ಐಪಿಎಲ್: ಚಿಕ್ಕ ವಯಸ್ಸಿನಲ್ಲಿ ಹೆಚ್ಚು ಅರ್ಧ ಶತಕ ಬಾರಿಸಿದ ಬ್ಯಾಟ್ಸ್‌ಮನ್‌ಗಳುಐಪಿಎಲ್: ಚಿಕ್ಕ ವಯಸ್ಸಿನಲ್ಲಿ ಹೆಚ್ಚು ಅರ್ಧ ಶತಕ ಬಾರಿಸಿದ ಬ್ಯಾಟ್ಸ್‌ಮನ್‌ಗಳು

ಆಟದ ವೇಳೆ ಧವನ್ ಧರಿಸಿದ್ದ ಈ ವಿಭಿನ್ನ ಕೂಲಿಂಗ್ ಗ್ಲಾಸ್ ಇಂಗ್ಲೆಂಡ್ ಮಾಜಿ ನಾಯಕ ಕೆವಿನ್ ಪೀಟರ್ಸನ್ ಗಮನ ಸೆಳೆದಿತ್ತು. ಕಾಮೆಂಟರಿ ನೀಡುತ್ತಿದ್ದ ಪೀಟರ್ಸನ್ ಧವನ್ ಕಾಲೆಳೆದು ನಕ್ಕಿದ್ದು ಕಂಡು ಬಂತು. ಕಾಮೆಂಟರಿ ಮಧ್ಯೆ ಧವನ್ ಅವರತ್ತ ಬೊಟ್ಟು ಮಾಡಿ ಪೀಟರ್ಸನ್, 'ಅದು ನನಗೆ ಬೇಕು. ಅದು ನಿಜಕ್ಕೂ ನನಗೆ ಬೇಕು,' ಎಂದು ನಗುತ್ತ ಹೇಳಿದ್ದರು.

 ಕಣ್ಣೆದುರೇ ಕುಸಿದು ಬಿದ್ದ ಡೀನ್ ಜೋನ್ಸ್ ಜೀವ ಉಳಿಸಲು ಉಸಿರು ನೀಡಿದ್ದ ಬ್ರೆಟ್ ಲೀ ಕಣ್ಣೆದುರೇ ಕುಸಿದು ಬಿದ್ದ ಡೀನ್ ಜೋನ್ಸ್ ಜೀವ ಉಳಿಸಲು ಉಸಿರು ನೀಡಿದ್ದ ಬ್ರೆಟ್ ಲೀ

ಪಂದ್ಯದಲ್ಲಿ ಶಿಖರ್ ಧವನ್ ಅವರು ಮತ್ತೊಬ್ಬ ಆರಂಭಿಕ ಬ್ಯಾಟ್ಸ್‌ಮನ್ ಪೃಥ್ವಿ ಶಾ ಜೊತೆಗೆ ಉತ್ತಮ ಜೊತೆಯಾಟ ನೀಡಿದ್ದರು. 27 ಎಸೆತಗಳಲ್ಲಿ 35 ರನ್ ಬಾರಿಸಿದ್ದರು. ಇನ್ನು ಶಾ ಕೂಡ 64 ರನ್ ಕೊಡುಗೆಯಿತ್ತಿದ್ದರಿಂದ ಡೆಲ್ಲಿ ಕ್ಯಾಪಿಟಲ್ಸ್ ಸಿಎಸ್‌ಕೆ ವಿರುದ್ಧ 44 ರನ್ ಜಯ ಗಳಿಸಿತ್ತು.

Story first published: Saturday, September 26, 2020, 17:35 [IST]
Other articles published on Sep 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X