ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2020ರ ಐಪಿಎಲ್‌ನಲ್ಲಿ ಗೆಲ್ಲುವ ತಂಡ ಹೆಸರಿಸಿದ ಕೆವಿನ್ ಪೀಟರ್ಸನ್

IPL 2020: Kevin Pietersen predicts the winner of 13th IPL

ನವದೆಹಲಿ: 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಜ್ವರ ಕಾವೇರುತ್ತಿದೆ. ನಗದು ಶ್ರೀಮಂತ ಟೂರ್ನಿ ಆರಂಭವಾಗಲು ಇನ್ನು ಕೇವಲ 1 ವಾರವಷ್ಟೇ ಬಾಕಿ ಉಳಿದಿದೆ. ಸೆಪ್ಟೆಂಬರ್ 19ರಿಂದ ಆರಂಭವಾಗುವ ಐಪಿಎಲ್ ನವೆಂಬರ್ 10ರಂದು ಫೈನಲ್‌ನೊಂದಿಗೆ ಕೊನೆಗೊಳ್ಳಲಿದೆ. ಈ ಬಾರಿಯ ಐಪಿಎಲ್ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯುತ್ತಿರುವುದರಿಂದ ಇಂಗ್ಲೆಂಡ್ ಮಾಜಿ ಬ್ಯಾಟ್ಸ್‌ಮನ್ ಕೆವಿನ್ ಪೀಟರ್ಸನ್ ಕೂಡ ಪ್ರಸಾರಕದ ಭಾಗವಾಗಿ ದುಬೈನಲ್ಲಿದ್ದಾರೆ.

ಮುಂಬೈ ಇಂಡಿಯನ್ಸ್ ವೇಳಾಪಟ್ಟಿ, ತಂಡದ ಪ್ಲಸ್-ಮೈನಸ್ ಅಂಶಗಳುಮುಂಬೈ ಇಂಡಿಯನ್ಸ್ ವೇಳಾಪಟ್ಟಿ, ತಂಡದ ಪ್ಲಸ್-ಮೈನಸ್ ಅಂಶಗಳು

ಐಪಿಎಲ್ ಸಮೀಪಿಸುತ್ತಿರುವುದರಿಂದ ಸಹಜವಾಗೇ ಅಭಿಮಾನಿಗಳಲ್ಲಿ ಗೆಲ್ಲುವ ತಂಡದ ಬಗ್ಗೆ ಕುತೂಹಲವಿರುತ್ತದೆ. ಹೀಗಾಗಿ ಕ್ರಿಕೆಟ್ ಪರಿಣಿತರಲ್ಲಿ ಅಭಿಮಾನಿಗಳು ಈ ಬಾರಿಯ ಐಪಿಎಲ್ ಚಾಂಪಿಯನ್ಸ್ ಯಾರಾಗಬಹುದು ಊಹಿಸುವಂತೆ ಪ್ರಶ್ನಿಸುತ್ತಿದ್ದಾರೆ.

ಐಪಿಎಲ್‌ನಲ್ಲಿ ಪಾಕ್ ಆಟಗಾರ: ಅಲಿ ಬಗ್ಗೆ ನೀವು ತಿಳಿದಿರಬೇಕಾದ ಸಂಗತಿಗಳು!ಐಪಿಎಲ್‌ನಲ್ಲಿ ಪಾಕ್ ಆಟಗಾರ: ಅಲಿ ಬಗ್ಗೆ ನೀವು ತಿಳಿದಿರಬೇಕಾದ ಸಂಗತಿಗಳು!

ಇಂಗ್ಲೆಂಡ್ ಮಾಜಿ ಕ್ರಿಕೆಟರ್ ಕೆವಿನ್ ಪೀಟರ್ಸನ್ ಅವರಲ್ಲೂ ಇದೇ ಪ್ರಶ್ನೆಯನ್ನು ಎದುರಿಡಲಾಗಿತ್ತು. ಇದಕ್ಕೆ ಪೀಟರ್ಸನ್ ಅಚ್ಚರಿಯ ಉತ್ತರ ನೀಡಿದ್ದಾರೆ.

ಟ್ರೋಫಿಯೇ ಗೆಲ್ಲದ ತಂಡಗಳು

ಟ್ರೋಫಿಯೇ ಗೆಲ್ಲದ ತಂಡಗಳು

ಈವರೆಗೆ ಐಪಿಎಲ್ ಟ್ರೋಫಿಯೇ ಗೆಲ್ಲದ ತಂಡಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳು ಇವೆ. ಇದರಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಒಂದು ಬಾರಿಯೂ ಫೈನಲ್‌ಗೆ ಪ್ರವೇಶಿಸಿದ ಕೆಟ್ಟ ಹಣೆಪಟ್ಟಿ ಕಟ್ಟಿಕೊಂಡಿದೆ.

ಡೆಲ್ಲಿ ತಂಡ ಚೆನ್ನಾಗಿದೆ

ಡೆಲ್ಲಿ ತಂಡ ಚೆನ್ನಾಗಿದೆ

ತಾನು ಆಡುತ್ತಿದ್ದ ದಿನಗಳಲ್ಲಿ ಪೀಟರ್ಸನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಡೇರ್ ಡೆವಿಲ್ಸ್ (ಈಗಿನ ಡೆಲ್ಲಿ ಕ್ಯಾಪಿಟಲ್ಸ್) ಮತ್ತು ರೈಸಿಂಗ್ ಪೂಣೆ ವಾರಿಯರ್ಸ್ ತಂಡಗಳನ್ನು ಐಪಿಎಲ್‌ನಲ್ಲಿ ಪ್ರತಿನಿಧಿಸಿದ್ದರು. ಈ ಬಾರಿ ಡೆಲ್ಲಿ ತಂಡ ಚೆನ್ನಾಗಿರುವುದರಿಂದ ಡೆಲ್ಲಿ ಗೆಲ್ಲುವ ಸಾಧ್ಯತೆಯಿದೆ ಎಂದು ಕೆವಿನ್ ಊಹಿಸಿದ್ದಾರೆ.

2020ರ ಚಾಂಪಿಯನ್ಸ್ ತಂಡ

2020ರ ಚಾಂಪಿಯನ್ಸ್ ತಂಡ

ಐಪಿಎಲ್ ಭಾಗವಾಗಿ ಸದ್ಯ ದುಬೈನಲ್ಲಿರುವ ಕೆವಿನ್ ಪೀಟರ್ಸನ್ ಅವರಲ್ಲಿ ಈ ಬಾರಿಯ ಐಪಿಎಲ್ ವಿಜೇತರು ಯಾರಾಗಬಹುದು ಎಂದು ಪ್ರಶ್ನಿಸಲಾಯಿತು. ಇನ್‌ಸ್ಟಾಗ್ರಾಮ್‌ ಮೂಲಕ ಪೀಟರ್ಸನ್‌ಗೆ ಹೀಗೆ ಪ್ರಶ್ನಿಸಲಾಯ್ತು. ಇದಕ್ಕೆ ಪೀಟರ್ಸನ್, 'ನಾನು ಡೆಲ್ಲಿ ಎಂದು ಭಾವಿಸುತ್ತೇನೆ' ಎಂದು ಉತ್ತರಿಸಿದ್ದಾರೆ.

ನಿಜಕ್ಕೂ ಡೆಲ್ಲಿ ಗೆಲ್ಲಬಲ್ಲದೇ?

ನಿಜಕ್ಕೂ ಡೆಲ್ಲಿ ಗೆಲ್ಲಬಲ್ಲದೇ?

ಎಚ್ಚರಿಕೆ ಆಟ ಆಡಿದರೆ, ಪ್ರಮುಖ ಆಟಗಾರರೆಲ್ಲ ಉತ್ತಮ ಪ್ರದರ್ಶನ ನೀಡಿದರೆ ಗೆಲ್ಲಿಯೂ ಗೆಲ್ಲಬಲ್ಲದು. ಯಾಕೆಂದರೆ ತಂಡದಲ್ಲಿ ಶಿಖರ್ ಧವನ್, ಇಶಾಂತ್ ಶರ್ಮಾ, ಕಾಗಿಸೊ ರಬಾಡ, ನಾಯಕ ಶ್ರೇಯಸ್ ಐಯ್ಯರ್, ಶಿಮ್ರನ್ ಹಿಟ್ಮೈಯರ್, ಪೃಥ್ವಿ ಶಾ, ರವಿಚಂದ್ರನ್ ಅಶ್ವಿನ್, ಮಾರ್ಕಸ್ ಸ್ಟೋಯ್ನಿಸ್, ರಿಷಭ್ ಪಂತ್ ಇಂಥ ಒಳ್ಳೆಯ ಆಟಗಾರರು ಸಾಕಷ್ಟು ಮಂದಿಯಿದ್ದಾರೆ. ಜೊತೆಗೆ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ತಂಡದ ಮುಖ್ಯ ಕೋಚ್ ಜವಾಬ್ದಾರಿಯಲ್ಲಿದ್ದಾರೆ.

Story first published: Saturday, September 12, 2020, 22:46 [IST]
Other articles published on Sep 12, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X