ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ವಿಕ್ ರನ್ ಬದಲಿಗೆ ಜಾಗಿಂಗ್ ಮಾಡುತ್ತಿದ್ದ ರಾಯುಡು ವಿರುದ್ಧ ಕೆವಿನ್ ಕಿಡಿ

IPL 2020: Kevin Pietersen Slams Ambati Rayudu For Poor Running Against RCB

ಇಂಗ್ಲೆಂಡ್‌ನ ಮಾಜಿ ನಾಯಕ ಮತ್ತು ಕಾಮೆಂಟೆಟರ್ ಕೆವಿನ್ ಪೀಟರ್ಸನ್ ಅವರು ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟ್ಸ್‌ಮನ್ ಅಂಬಾಟಿ ರಾಯುಡು ವಿರುದ್ಧ ಕಿಡಿಕಾರಿದ್ದಾರೆ. ವಿಕೆಟ್‌ಗಳ ನಡುವೆ ಬಹಳ ನಿಧಾನವಾಗಿ ಓಡುತ್ತಿದ್ದಾರೆ ಇಲ್ಲಾ ಓಡುವ ಬದಲು ಜಾಗಿಂಗ್ ಮಾಡುತ್ತಿದ್ದಾರೆ ಏಕೆ ಅರ್ಥವಾಗುತ್ತಿಲ್ಲ, ಇದು ಯಾವ ರನ್ ಚೇಸ್ ಮಾಡಲು ನೆರವಾಗುತ್ತೆ ಎಂದು ಪ್ರಶ್ನಿಸಿದ್ದಾರೆ.

ತ್ವರಿತವಾಗಿ ಮೊದಲ ರನ್ ಓಡಿ ನಂತರ ಎರಡನೇ ರನ್ ಕದಿಯುವ ಉತ್ಸಾಹ, ಚುರುಕುತನ ಎಲ್ಲಾ ಆಟಗಾರರಲ್ಲೂ ಕಾಣಬಹುದು. ಆದರೆ, ರಾಯುಡು ಮೊದಲ ರನ್ ವೇಗವಾಗಿ ತೆಗೆದುಕೊಳ್ಳುತ್ತಿಲ್ಲ ಇದರಿಂದಾಗಿ ಡಬಲ್ಸ್ ಬರುತ್ತಿಲ್ಲ.

ಐಪಿಎಲ್ 2020: ಚೆನ್ನೈ ಸೋಲಿಸಿ 4ನೇ ಸ್ಥಾನಕ್ಕೇರಿದ ಬೆಂಗಳೂರುಐಪಿಎಲ್ 2020: ಚೆನ್ನೈ ಸೋಲಿಸಿ 4ನೇ ಸ್ಥಾನಕ್ಕೇರಿದ ಬೆಂಗಳೂರು

ವಿರಾಟ್ ಕೊಹ್ಲಿ, ಡಿವಿಲಿಯರ್ಸ್, ಡುಪ್ಲೆಸಿಸ್, ವಾರ್ನರ್, ಬೈರ್‌ಸ್ಟೋವ್ ನೋಡಿ ರನ್ ಕದಿಯುವುದನ್ನು ಕಲಿಯಬೇಕಿದೆ ಎಂದು ರಾಯುಡುಗೆ ಸಲಹೆ ನೀಡಿದ್ದಾರೆ. ನಿಮ್ಮದೇ ತಂಡದಲ್ಲಿ ವೇಗವಾಗಿ ಓಡುವ ಧೋನಿ ಇರುವಾಗ ಇಂಥ ನಿಧಾನಗತಿ ರನ್ ಪಡೆಯುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

 ಐಪಿಎಲ್ 2020: ರಾಜಸ್ಥಾನ ಆಟಗಾರರ ಚುರುಕುತನ ಹಿಂದಿನ ಶಕ್ತಿ ಐಪಿಎಲ್ 2020: ರಾಜಸ್ಥಾನ ಆಟಗಾರರ ಚುರುಕುತನ ಹಿಂದಿನ ಶಕ್ತಿ

ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) 37 ರನ್‌ಗಳಿಂದ ಸೋಲಿಸಿತು. ಈ ಪಂದ್ಯದ ನಾಲ್ಕನೇ ಓವರ್‌ನಲ್ಲಿ ಕ್ರೀಸ್‌ಗೆ ಬಂದ ರಾಯುಡು 18 ನೇ ಓವರ್‌ನಲ್ಲಿ ಔಟಾದರು. 40 ಎಸೆತಗಳಲ್ಲಿ ಕೇವಲ 42 ರನ್ ಗಳಿಸಿದರು. ಮತ್ತೊಮ್ಮೆ ನಿಧಾನಗತಿಯ ಬ್ಯಾಟಿಂಗ್‌ನಿಂದ ಚೆನ್ನೈ ಬೆಲೆ ತೆರಬೇಕಾಯಿತು. ತಮಿಳುನಾಡು ತಂಡದ ಆಟಗಾರ ಜಗದೀಶನ್ ಇದೇ ಮೊದಲ ಬಾರಿಗೆ ಆಡಲು ಅವಕಾಶ ಪಡೆದರು. ರಾಯುಡು ಜೊತೆ ಆಡುವಾಗ ಜಗದೀಶನ್ ಮೊದಲ ರನ್ ಪೂರ್ಣಗೊಳಿಸಿ ಎರಡನೇ ಓಟಕ್ಕೆ ಸಿದ್ಧರಾದರೆ, ರಾಯುಡು ಇನ್ನೂ ಸಿಂಗಲ್ ಪೂರ್ಣಗೊಳಿಸೆ ನಿಧಾನವಾಗಿ ಹೆಜ್ಜೆ ಹಾಕುತ್ತಿದ್ದರು. ಇನ್ನೊಂದು ಅಚ್ಚರಿ ಸಂಗತಿಯೆಂದರೆ ಜಗದೀಶನ್ ಕೂಡಾ ರನ್ ಕದಿಯುವ ಯತ್ನದಲ್ಲೇ ಸರಿಯಾಗಿ ಓಡದೆ ರನೌಟ್ ಆದರು.

ಐಪಿಎಲ್ 2020: ಸಮಗ್ರ ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳ್ಳುಳ್ಳ ವಿಶೇಷ ಪುಟ

ನೀವು ಯಾರು ಏನು ಎಂಬುದರ ಬಗ್ಗೆ ನಾನು ಕೇರ್ ಮಾಡುವುದಿಲ್ಲ. ಮೈದಾನದಲ್ಲಿ ಆಡುವಾಗ ನಿಮ್ಮ 100% ಪರಿಶ್ರಮ ನೀಡುವುದು ಅಗತ್ಯ. ಇದರಿಂದ ಇತರೆ ಆಟಗಾರರಿಗೂ ಸ್ಪೂರ್ತಿಯಾಗಬಲ್ಲಿರಿ, ಅದ್ರಲ್ಲೂ ರನ್ ಚೇಸ್ ಮಾಡುವಾಗ ಇಂಥ ಸೋಮಾರಿಯಾಟ ಸಹಿಸಲು ಸಾಧ್ಯವಿಲ್ಲ, ಇದು ಅಂತಾರಾಷ್ಟ್ರೀಯ ಕ್ರಿಕೆಟ್ ಗುಣಮಟ್ಟವನ್ನು ತಗ್ಗಿಸುತ್ತದೆ. ಇತರೆ ಆಟಗಾರರನ್ನು ನೋಡಿ ಕಲಿಯುವುದು ಬಹಳಷ್ಟಿದೆ ಎಂದು ಕೆವಿನ್ ಹೇಳಿದ್ದಾರೆ.

Story first published: Sunday, October 11, 2020, 15:58 [IST]
Other articles published on Oct 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X