ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಕೆಕೆಆರ್‌ಗೆ ಶುಬ್ಮನ್ ಗಿಲ್ ನಾಯಕನಾಗಲಿ ಎಂದ ಕೆವಿನ್ ಪೀಟರ್‌ಸನ್

Ipl 2020: Kevin Pietersen Suggests Talented Shubman Gill Be Made the Captain of Kkr

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯವನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಭರ್ಜರಿಯಾಗಿ ಗೆದ್ದುಕೊಂಡಿದೆ. ಕೆಕೆಆರ್ ತಂಡದ ಯುವ ಬ್ಯಾಟ್ಸ್‌ಮನ್ ಶುಬ್ಮನ್ ಗಿಲ್ ಈ ಪಂದ್ಯದಲ್ಲಿ ಹೈದರಾಬಾದ್‌ನ ಶ್ರೇಷ್ಠಮಟ್ಟದ ಬೌಲಿಂಗ್ ದಾಳಿಯ ವಿರುದ್ಧ ಜವಾಬ್ಧಾರಿಯುತ ಮ್ಯಾಚ್ ವಿನ್ನಿಂಗ್ ಪ್ರದರ್ಶನವನ್ನು ನೀಡಿ ಗಮನ ಸೆಳೆದರು. ಗಿಲ್ ನೀಡಿದ ಪ್ರದರ್ಶನಕ್ಕೆ ಇಂಗ್ಲೆಂಡ್‌ನ ಮಾಜಿ ನಾಯಕ ಕೆವಿನ್ ಪೀಟರ್ಸನ್ ಪ್ರಭಾವಿತರಾಗಿ ಹೇಳಿಕೆಯೊಂದನ್ನು ನೀಡಿದ್ದಾರೆ.

ಯುವ ಆಟಗಾರ ಶುಬ್ಮನ್ ಗಿಲ್ ಎಸ್‌ಹೆಚ್‌ಆರ್ ವಿರುದ್ಧದ ಪಂದ್ಯದಲ್ಲಿ 62 ಎಸೆತಗಳಲ್ಲಿ ಅಜೇಯ 70 ರನ್‌ಗಳಿಸಿದರು. ಇದು ಕೆಕೆಆರ್ ತಂಡ ಈ ಟೂರ್ನಿಯ ಎರಡನೇ ಪಂದ್ಯದಲ್ಲಿ 7 ವಿಕೆಟ್‌ಗಳ ಗೆಲುವು ಸಾಧಿಸಲು ನೆರವಾಗಿತ್ತು. ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಜೊತೆ ಗಿಲ್ ಜವಾಬ್ಧಾರಿಯುತ ಪ್ರದರ್ಶನವನ್ನು ನೀಡಿ ಗಮನ ಸೆಳೆಯುವಲ್ಲಿ ಯಶಸ್ವಿಯಾದರು.

ಗಿಲ್ ಅರ್ಧ ಶತಕ, ಹೈದರಾಬಾದ್ ವಿರುದ್ಧ ಕೋಲ್ಕತ್ತಾಕ್ಕೆ ಭರ್ಜರಿ ಜಯಗಿಲ್ ಅರ್ಧ ಶತಕ, ಹೈದರಾಬಾದ್ ವಿರುದ್ಧ ಕೋಲ್ಕತ್ತಾಕ್ಕೆ ಭರ್ಜರಿ ಜಯ

ಅಲ್‌ ಜಾಯೆದ್ ಕ್ರೀಡಾಂಗಣದಲ್ಲಿ ನಡೆದ ಅದ್ಭುತ ಪಂದ್ಯದ ಬಳಿಕ ಕೆವಿನ್ ಪೀಟರ್‌ಸನ್ ಟ್ವೀಟ್ ಮಾಡಿದ್ದಾರೆ. "ಕೆಕೆಆರ್ ತಂಡಕ್ಕೆ ಯುವ ಆಟಗಾರ ಶುಬ್ಮನ್ ಗಿಲ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಲಿ" ಎಂದು ಹೇಳಿಕೆಯನ್ನು ನೀಡಿದ್ದಾರೆ.

ಕೆಕೆಆರ್ ತಂಡದಲ್ಲಿ ವಿಶ್ವಕಪ್ ವಿಜೇತ ತಂಡದ ನಾಯಕ ಇಯಾನ್ ಮಾರ್ಗನ್ ಇರುವುದರಿಂದ ನಾಯಕತ್ವ ದಿನೇಶ್ ಕಾರ್ತಿಕ್ ಬದಲಿಗೆ ಇಯಾನ್ ಮಾರ್ಗನ್‌ಗೆ ನೀಡಲಿ ಎಂಬ ಮಾತನ್ನು ಕೆಲ ಕ್ರಿಕೆಟ್ ಪಮಡಿತರು ವ್ಯಕ್ತಪಡಿಸಿದ್ದರು. ಆದರೆ ಕೆಕೆಆರ್ ಫ್ರಾಂಚೈಸಿ ಭಾರತೀಯ ಆಟಗಾರನ ಮೇಲೆ ನಂಬಿಕೆಯಿಟ್ಟು ದಿನೇಶ್ ಕಾರ್ತಿಕ್ ಅವರನ್ನೇ ನಾಯಕತ್ವದಲ್ಲಿ ಮುಂದಿವರಿಸಿದೆ.

ಆತ ಬ್ಯಾಟಿಂಗ್‌ಗೆ ಹೋಗೋದು ನೋಡಲು ಭಯಾನಕವಾಗಿರುತ್ತೆ: ಡಿಕೆಆತ ಬ್ಯಾಟಿಂಗ್‌ಗೆ ಹೋಗೋದು ನೋಡಲು ಭಯಾನಕವಾಗಿರುತ್ತೆ: ಡಿಕೆ

ಈ ಮಧ್ಯೆ ಕೆಕೆಆರ್ ನಾಯಕತ್ವದ ವಿಚಾರದಲ್ಲಿ ಕೆವಿನ್ ಪೀಟರ್‌ಸನ್ ಹೊಸ ಹೆಸರನ್ನು ತೇಲಿಬಿಟ್ಟಿದ್ದಾರೆ. 21 ಹರೆಯದ ಶುಬ್ಮನ್ ಗಿಲ್ ಪ್ರತಿಭಾವಂತ ಕ್ರಿಕೆಟಿಗ ಹಾಗೂ ಭವಿಷ್ಯದ ತಾರೆಯಾಗಿ ಮಿಂಚುವ ಭರವಸೆಯನ್ನು ಉಂಟು ಮಾಡಿದ್ದು ನಿಜ. ಆದರೆ ದೊಡ್ಡ ವೇದಿಕೆಗಳಲ್ಲಿ ಇನ್ನೂ ಹೆಚ್ಚಿನ ಕ್ರಿಕೆಟ್ ಆಡಿದ ಅನುಭವ ಹೊಂದಿಲ್ಲದ ಕಾರಣ ಈ ಬೇಡಿಕೆ ಎಷ್ಟರ ಮಟ್ಟಿಕೆ ಸೂಕ್ತ ಎಂಬುದು ಕೂಡ ಪ್ರಶ್ನೆಯಾಗಿದೆ.

Story first published: Sunday, September 27, 2020, 9:34 [IST]
Other articles published on Sep 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X