ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020 ಫೈನಲ್: ಮಹತ್ವದ ಮೈಲಿಗಲ್ಲಿನ ಸನಿಹದಲ್ಲಿ ಕಿರಾನ್ ಪೊಲಾರ್ಡ್

IPL 2020: Kieron Pollard closes in on milestones for sixes

ಮುಂಬೈ ಇಂಡಿಯನ್ಸ್ ತಂಡದ ಆಲ್‌ರೌಂಡರ್ ಕಿರಾನ್ ಪೊಲಾರ್ಡ್ ಐಪಿಎಲ್‌ನಲ್ಲಿ ಸಾಕಷ್ಟು ದಾಖಲೆಗಳನ್ನು ಮೈಲಿಗಲ್ಲುಗಳನ್ನು ಸ್ಥಾಪಿಸಿದ್ದಾರೆ. ಡೆಲ್ಲಿ ವಿರುದ್ಧದ ಫೈನಲ್‌ನಲ್ಲಿ ಐಪಿಎಲ್ ಇತಿಹಾಸದಲ್ಲಿ ಮೈಲಿಗಲ್ಲೊಂದನ್ನು ದಾಟುವ ಅವಕಾಶವನ್ನು ಹೊಂದಿದ್ದಾರೆ. ಇದಕ್ಕಾಗಿ ಪೊಲಾರ್ಡ್ ಎರಡು ಸಿಕ್ಸರ್ ಸಿಡಿಸಿದರೆ ಸಾಕು.

ಕಿರಾನ್ ಪೊಲಾರ್ಡ್ ಈ ಟೂರ್ನಿಯಲ್ಲಿ 11 ಇನ್ನಿಂಗ್ಸ್‌ಗಳಲ್ಲಿ ಕಣಕ್ಕಿಳಿದು 259 ರನ್ ಗಳಿಸಿದ್ದಾರೆ. ಇದರಲ್ಲಿ 22 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪೈನಲ್ ಪಂದ್ಯದಲ್ಲಿ ಸಿಕ್ಸರ್ 2 ಸಿಡಿಸಿದರೆ ಐಪಿಎಲ್‌ನಲ್ಲಿ ಪೊಲಾರ್ಡ್ ಸಿಕ್ಸರ್‌ ಪೂರೈಸಿದ ಸಾಧನೆಯನ್ನು ಮಾಡಲಿದ್ದಾರೆ.

ಫೈನಲ್ ಪ್ರವೇಶ ನಮ್ಮ ಸಂಪಾದನೆ, ಈಗ ನಮ್ಮ ಗುರಿ ಟ್ರೋಫಿ ಗೆಲ್ಲುವುದು: ಡೆಲ್ಲಿ ಕೋಚ್ ರಿಕಿ ಪಾಂಟಿಂಗ್ಫೈನಲ್ ಪ್ರವೇಶ ನಮ್ಮ ಸಂಪಾದನೆ, ಈಗ ನಮ್ಮ ಗುರಿ ಟ್ರೋಫಿ ಗೆಲ್ಲುವುದು: ಡೆಲ್ಲಿ ಕೋಚ್ ರಿಕಿ ಪಾಂಟಿಂಗ್

ಐಪಿಎಲ್ ಇತಿಹಾಸದಲ್ಲಿ 200 ಸಿಕ್ಸರ್ ಸಿಡಿಸಿದ ಸಾಧನೆಯನ್ನು ಈವರೆಗೆ 5 ಕ್ರಿಕೆಟಿಗರು ಮಾತ್ರವೇ ಮಾಡಿದ್ದಾರೆ. ಪೊಲಾರ್ಡ್ ಆರನೇಯವರಾಗಿ ಈ ಸಾಲಿಗೆ ಸೇರಿಕೊಳ್ಳುವ ಅವಕಾಶವಿದೆ. ಐಪಿಎಲ್‌ನಲ್ಲಿ ಸಿಕ್ಸರ್‌ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಕ್ರಿಸ್ ಗೇಲ್ ಮುಂದಿದ್ದಾರೆ. 349 ಸಿಕ್ಸರ್ ಗೇಲ್ ಖಾತೆಯಲ್ಲಿದೆ. ಬಳಿಕ ಎಬಿ ಡಿವಿಲಿಯರ್ಸ್(235) ಎಂಎಸ್ ಧೋನಿ(216), ರೋಹಿತ್ ಶರ್ಮಾ(209) ಹಾಗೂ ವಿರಾಟ್ ಕೊಹ್ಲಿ (201) ಇದ್ದಾರೆ.

ವಿಶ್ವಾದ್ಯಂತ ನಡೆಯುವ ಟಿ20 ಕ್ರಿಕೆಟ್ ಲೀಗ್‌ನಲ್ಲಿ ಪಾಲ್ಗೊಳ್ಳುವ ಕಿರಾನ್ ಪೊಲಾರ್ಡ್ ಟಿ20 ಕ್ರಿಕೆಟ್‌ನಲ್ಲಿ ಎರಡನೇ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಹಾಗೂ ಎರಡನೇ ಅತಿ ಹೆಚ್ಚು ಟಿo20 ರನ್ ಗಳಿಸಿದ ಆಟಗಾರನಾಗಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಪೊಲಾರ್ಡ್ 10466 ರನ್ ಗಳಿಸಿದ್ದಾರೆ. ಈ ಸಾಧನೆಯಲ್ಲೂ ಗೇಲ್ ಮೊದಲನೆಯವರಾಗಿದ್ದು 13584 ರನ್ ಗಳಿಸಿದ್ದಾರೆ.

ಮುಂಬೈ vs ಡೆಲ್ಲಿ ಫೈನಲ್‌ ಹಣಾಹಣಿ: 5 ಅಚ್ಚರಿಯ ಸತ್ಯ ಸಂಗತಿಗಳು!ಮುಂಬೈ vs ಡೆಲ್ಲಿ ಫೈನಲ್‌ ಹಣಾಹಣಿ: 5 ಅಚ್ಚರಿಯ ಸತ್ಯ ಸಂಗತಿಗಳು!

ಟ್ರೆನಿಡಾಡ್ ಮೂಲಕ 33ರ ಹರೆಯದ ಪೊಲಾರ್ಡ್ 2006ರಲ್ಲಿ ಟಿ20 ಕ್ರಿಕೆಟ್‌ ವೃತ್ತಿ ಜೀವನ ಆರಂಭಿಸಿದರು. ಸದ್ಯ ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ 700 ಸಿಕ್ಸರ್ ಬಾರಿಸಲು 6 ಸಿಕ್ಸರ್‌ಗಳ ಕೊರತೆಯನ್ನು ಅನುಭವಿಸುತ್ತಿದ್ದಾರೆ. ಜೊತೆಗೆ ಐಪಿಎಲ್‌ನಲ್ಲಿ 200ನೇ ಬೌಂಡರಿಯನ್ನು ಬಾರಿಸಲು ಪೊಲಾರ್ಡ್‌ಗೆ 6 ಬೌಂಡರಿಗಳ ಅವಶ್ಯಕತೆಯಿದೆ.

Story first published: Tuesday, November 10, 2020, 11:45 [IST]
Other articles published on Nov 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X