ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಇಂದು ಮುಂಬೈ ಇಂಡಿಯನ್ಸ್‌ಗೆ ಪಂಜಾಬ್ ಹುಡುಗರ ಸವಾಲ್

Ipl 2020: Kings Xi Punjab, Mumbai Indians Look To Move On After Painful Losses

ಐಪಿಎಲ್ ಅಂಗಳದಲ್ಲಿ ಇಂದು ಮತ್ತೊಂದು ಬೃಹತ್ ಕಾದಾಟ ನಡೆಯಲಿದೆ. ಹಾಲಿ ಚಾಂಪಿಯನ್ ಮುಂಬೈ ಟೂರ್ನಿಯಲ್ಲಿ ಅಬ್ಬರದ ಆಟವನ್ನು ಪ್ರದರ್ಶಿಸುತ್ತಿರುವ ಕೆಎಲ್ ರಾಹುಲ್ ನೇತೃತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸವಾಲನ್ನು ಎದುರಿಸಲಿದೆ. ಈ ಪಂದ್ಯ ಅಬುದಾಭಿಯ ಶೇಕ್ ಝಾಯೇದ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಎರಡೂ ತಂಡಗಳು ತಲಾ ಮೂರು ಪಂದ್ಯಗಳನ್ನು ಆಡಿದ್ದು ಒಂದರಲ್ಲಷ್ಟೇ ಗೆಲುವನ್ನು ಸಾಧಿಸಿದೆ. ಹೀಗಾಗಿ ಅಂಕಪಟ್ಟಿಯಲ್ಲಿ ಪಂಜಾಬ್ 5ನೇ ಸ್ಥಾನದಲ್ಲಿದ್ದರೆ ಮುಂಬೈ 6ನೇ ಸ್ಥಾನದಲ್ಲಿದೆ. ಈ ಎರಡೂ ತಂಡಗಳು ಒಂದು ಸೂಪರ್ ಓವರ್‌ ಸೋಲನ್ನು ಕಂಡಿರುವುದು ಮತ್ತೊಂದು ಗಮನಾರ್ಹ ವಿಚಾರ. ಮುಂಬೈ ಆರ್‌ಸಿಬಿ ವಿರುದ್ಧ ಸೂಪರ್ ಓವರ್‌ನಲ್ಲಿ ಸೋಲುಕಂಡಿದ್ದರೆ ಡೆಲ್ಲಿ ವಿರುದ್ಧ ನಡೆ ಪಂದ್ಯದಲ್ಲಿ ಕಿಂಗ್ಸ್ ಇಲವೆನ್ ಪಂಜಾಬ್ ಆಘಾತಕಾರಿಯಾಗಿ ಸೂಪರ್ ಓವರ್‌ನಲ್ಲಿ ಮಣಿದಿತ್ತು.

vಐಪಿಎಲ್: ಪಾಯಿಂಟ್ಸ್ ಟೇಬಲ್‌ನಲ್ಲಿ ಬದಲಾವಣೆ, ಅಗ್ರ ಸ್ಥಾನಕ್ಕೆ ಡೆಲ್ಲಿvಐಪಿಎಲ್: ಪಾಯಿಂಟ್ಸ್ ಟೇಬಲ್‌ನಲ್ಲಿ ಬದಲಾವಣೆ, ಅಗ್ರ ಸ್ಥಾನಕ್ಕೆ ಡೆಲ್ಲಿ

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಬ್ಯಾಟಿಂಗ್‌ನಲ್ಲಿ ಅದ್ಭುತ ಪ್ರದರ್ಶನವನ್ನು ನೀಡುತ್ತಾ ಬಂದಿದೆ. ತಂಡದಲ್ಲಿ ಆರಂಭಿಕ ಆಟಗಾರರಾದ ನಾಯಕ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಅದ್ಭುತ ಫಾರ್ಮ್‌ನಲ್ಲಿದ್ದು ಇಬ್ಬರೂ ತಲಾ ಒಂದು ಶತಕ ಹಾಗೂ ಒಂದು ಅರ್ಧ ಶತಕವನ್ನು ಗಳಿಸಿದ್ದಾರೆ. ಮಾತ್ರವಲ್ಲ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸದ ಆಟಗಾರರ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನದಲ್ಲಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದಲ್ಲಿ ರೋಹಿತ್ ಶರ್ಮಾ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ 80 ರನ್ ಗಳಿಸಿ ಮಿಂಚಿದ್ದಾರೆ. ಆರಂಭಿಕ ಆಟಗಾರ ಇಶಾನ್ ಕಿಶನ್ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಸಾಬೀತಿಪಡಿಸಿದ್ದಾರೆ. ಸಂಕಷ್ಟದ ಸಂದರ್ಭದಲ್ಲಿ ವಿಕೆಟ್ ಕಳೆದುಕೊಳ್ಳದಂತೆ ನೋಡಿಕೊಂಡಿದ್ದಲ್ಲದೆ ಸ್ಪೋಟಕ ಬ್ಯಾಟಿಂಗ್ ಮಾಡಿ 1 ರನ್‌ನಿಂದ ಶತಕ ತಪ್ಪಿಸಿಕೊಂಡು ನಿರಾಸೆ ಅನುಭವಿಸಿದರು. ಮಾತ್ರವಲ್ಲ ಪಂದ್ಯ ಟೈ ಆಗಲು ಪ್ರಮುಖ ಕಾರಣರಾದರು. ಇನ್ನು ಕಿರಾನ್ ಪೊಲಾರ್ಡ್ ಮುಂಬೈ ಪಾಲಿಗೆ ಕೆಳ ಕ್ರಮಾಂಕದಲ್ಲಿ ನೆರವಾಗಲು ಸದಾ ಸಿದ್ಧ ಎಂದು ಕಳೆದ ಪಂದ್ಯದಲ್ಲೂ ಸಾಭೀತುಪಡಿಸಿದರು.

ಐಪಿಎಲ್ 2020 ಕಪ್ ಗೆಲ್ಲುವ ನೆಚ್ಚಿನ ತಂಡ RCB ಎಂದ ಬ್ಯಾಟಿಂಗ್ ದಿಗ್ಗಜಐಪಿಎಲ್ 2020 ಕಪ್ ಗೆಲ್ಲುವ ನೆಚ್ಚಿನ ತಂಡ RCB ಎಂದ ಬ್ಯಾಟಿಂಗ್ ದಿಗ್ಗಜ

ಎರಡು ತಂಡಗಳಲ್ಲೂ ಬೌಲಿಂಗ್ ಪಡೆಯೂ ಬಲಿಷ್ಠವಾಗಿದೆ. ಪಂಜಾಬ್ ತಂಡದ ಮೊಹಮದ್ ಶಮಿ ವಿಕೆಟ್ ಗಳಿಕೆಯ ರೇಸ್‌ನಲ್ಲಿ ಮುಂದಿದ್ದಾರೆ. ಶೆಲ್ಡನ್ ಕಾಟ್ರೆಲ್ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ರನ್ ಬಿಟ್ಟುಕೊಟ್ಟರಾದರೂ ಆರ್‌ಸಿಬಿ ವಿರುದ್ಧ ಯಶಸ್ಸು ಕಂಡಿದ್ದಾರೆ. ಮುಂಬೈ ತಂಡದಲ್ಲಿ ವೇಗಿಗಳೇ ಹೆಚ್ಚಿದ್ದು ಬೂಮ್ರಾ, ಟ್ರೆಂಟ್ ಬೋಲ್ಟ್, ಚಾಹರ್ ಮಿಂಚಲು ಸಿದ್ಧರಾಗಿದ್ದಾರೆ.

Story first published: Thursday, October 1, 2020, 14:51 [IST]
Other articles published on Oct 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X