ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕನ್ನಡಿಗರ ತಂಡ ಕಿಂಗ್ಸ್ XI ಪಂಜಾಬ್‌ನ ಬಲ-ದೌರ್ಬಲ್ಯ, ವೇಳಾಪಟ್ಟಿ, ವಿಶೇಷತೆ

IPL 2020: Kings XI Punjab Teams Strength, Weakness, Full Schedule

ಬೆಂಗಳೂರು: ಕನ್ನಡಿಗರ ನೆಚ್ಚಿನ ಇಂಡಿಯನ್ ಪ್ರೀಮಿಯರ್ ಲೀಗ್ ತಂಡವೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು. ಆರ್‌ಸಿಬಿಗೆ ಜಗದಗಲ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಆದರೆ ಇಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬನ್ನು ಕನ್ನಡಿಗರ ತಂಡ ಅಂದಿದ್ದೇಕೆಂದರೆ ಈ ತಂಡಲ್ಲಿ ದೊಡ್ಡ ಸಂಖ್ಯೆಯಲ್ಲಿ ಕನ್ನಡಿಗರಿದ್ದಾರೆ ಎನ್ನೋ ಕಾರಣಕ್ಕೆ. ಈ ಬಾರಿಯಂತೂ ಕೆXIಪಿ ಕನ್ನಡದ ತಂಡವೇ ಅನ್ನುವಷ್ಟರ ಮಟ್ಟಿಗೆ ಕನ್ನಡಿಗರಿಂದ ತುಂಬಿ ಹೋಗಿದೆ. ಕರ್ನಾಟಕದ ಆಟಗಾರರು ತಂಡದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವುದಷ್ಟೇ ಅಲ್ಲ, ಕೋಚ್‌ ವಿಭಾಗದಲ್ಲೂ ಕನ್ನಡಿಗರದ್ದೇ ಪಾರಮ್ಯವಾಗಿದೆ.

ಬ್ರಾಡ್ ಹಾಗ್ ನೆಚ್ಚಿನ 'ಪ್ರಿ-ಐಪಿಎಲ್ 2020 ‍XI'ನಲ್ಲಿ ಧೋನಿ, ಎಬಿಡಿ ಇಲ್ಲ!ಬ್ರಾಡ್ ಹಾಗ್ ನೆಚ್ಚಿನ 'ಪ್ರಿ-ಐಪಿಎಲ್ 2020 ‍XI'ನಲ್ಲಿ ಧೋನಿ, ಎಬಿಡಿ ಇಲ್ಲ!

ಒಂದು ಬಾರಿಯೂ ಐಪಿಎಲ್ ಚಾಂಪಿಯನ್ಸ್ ಪಟ್ಟ ಅಲಂಕರಿಸದ ತಂಡಗಳಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್‌ ಕೂಡ ಇದೆ. ಕಪ್ ಗೆಲ್ಲದ ಇನ್ನೆರಡು ತಂಡಗಳೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್. ಈ ಬಾರಿ ಟ್ರೊಫಿ ಗೆಲ್ಲಲು ಕೆXIಪಿ ಬಳಿ ಉತ್ತಮ ತಂಡವಿದೆ. ಆದರೆ ಟೂರ್ನಿ ವೇಳೆ ಉತ್ತಮ ಪ್ರದರ್ಶನ ನೀಡಬೇಕಷ್ಟೇ.

'ಇಂಗ್ಲೆಂಡ್, ಆಸ್ಟ್ರೇಲಿಯಾ ಪ್ಲೇಯರ್ಸ್ ಐಪಿಎಲ್ ಆರಂಭದಲ್ಲಿ ಆಡೋ ಖಾತ್ರಿಯಿಲ್ಲ''ಇಂಗ್ಲೆಂಡ್, ಆಸ್ಟ್ರೇಲಿಯಾ ಪ್ಲೇಯರ್ಸ್ ಐಪಿಎಲ್ ಆರಂಭದಲ್ಲಿ ಆಡೋ ಖಾತ್ರಿಯಿಲ್ಲ'

ಕನ್ನಡಿಗರ ತಂಡ ಕಿಂಗ್ಸ್ XI ಪಂಜಾಬ್‌ನ ಬಲ-ದೌರ್ಬಲ್ಯ, ವೇಳಾಪಟ್ಟಿ, ಸಂಪೂರ್ಣ ತಂಡ, ವಿಶೇಷತೆ ಕೆಳಗಿದೆ ನೋಡಿ.

ತಂಡದ ಪ್ಲಸ್ ಪಾಯಿಂಟ್

ತಂಡದ ಪ್ಲಸ್ ಪಾಯಿಂಟ್

ಈ ಬಾರಿ ಕಿಂಗ್ಸ್ ಇಲೆವೆನ್ ಪಂಜಾಬ್‌ನಲ್ಲಿ ನಿಜಕ್ಕೂ ಅತ್ಯುತ್ತಮ ಆಟಗಾರರಿದ್ದಾರೆ. ಚತುರ ಆಟ ಆಡಿದರೆ ಪಂಜಾಬ್‌ಗೆ ಕಪ್‌ ಗೆಲ್ಲುವ ಅವಕಾಶವಿದೆ. ಕ್ರಿಸ್ ಗೇಲ್, ಕರುಣ್ ನಾಯರ್, ಕೆಎಲ್ ರಾಹುಲ್, ಮೊಹಮ್ಮದ್ ಶಮಿ, ಗ್ಲೆನ್ ಮ್ಯಾಕ್ಸ್‌ವೆಲ್, ಶೆಲ್ಡನ್ ಕಾಟ್ರೆಲ್, ನಿಕೋಲಸ್ ಪೂರನ್, ಕೃಷ್ಣಪ್ಪ ಗೌತಮ್ ಹೀಗೆ ಪ್ರತಿಭಾನ್ವಿತ ಆಟಗಾರರು ತಂಡದಲ್ಲಿದ್ದಾರೆ. ಪ್ಲೇಯಿಂಗ್ XI ಆರಿಸುವಾಗ ಎಚ್ಚರಿಕೆ ವಹಿಸಿದರೆ ಖಂಡಿತಾ ಪಂಜಾಬ್ ಒಂದು ಅದ್ಭುತ ತಂಡ.

ಮೈನಸ್ ಪಾಯಿಂಟ್ಸ್

ಮೈನಸ್ ಪಾಯಿಂಟ್ಸ್

ಕಿಂಗ್ಸ್ ಇಲೆವೆನ್ ಪಂಜಾಬ್ ಬಳಿ ಬಲಿಷ್ಠ ತಂಡವಿದೆ ನಿಜ. ಆದರೆ ಅದು ಎಷ್ಟರ ಮಟ್ಟಿಗೆ ಬಳಕೆಯಾಗುತ್ತದೆ, ಕೆಲಸಕ್ಕೆ ಬರುತ್ತದೆ ಎನ್ನಲಾಗೋಲ್ಲ. ಕ್ರೀಸಿಗಂಟಿ ನಿಂತರೆ ಕ್ರಿಸ್ ಗೇಲ್ ನಿಜಕ್ಕೂ ಅಪಾಯಕಾರಿ ಬ್ಯಾಟ್ಸ್‌ಮನ್. ಆದರೆ ಗೇಲ್ ಈಚೆಗೇಕೋ ಅಂಥ ಅದ್ಭುತ ಪ್ರದರ್ಶನ ನೀಡುತ್ತಿಲ್ಲ. ಇತ್ತ ಗ್ಲೆನ್ ಮ್ಯಾಕ್ಸ್‌ವೆಲ್‌ದೂ ಇದೇ ಕತೆ. 2014ರಲ್ಲಿ ಪಂಜಾಬ್‌ ಫೈನಲ್‌ಗೆ ಪ್ರವೇಶಿಸಿತ್ತಾದರೂ ಪ್ರಶಸ್ತಿ ಪಡೆಯುವಲ್ಲಿ ವಿಫಲವಾಗಿತ್ತು. ಪಂಜಾಬ್‌ನಲ್ಲಿ ಎಚ್ಚರಿಕೆಯ ಆಟ ಆಡುವವರಿಗಿಂತ ದೊಡ್ಡ ಹೊಡೆತಗಳಿಗೆ ಮುಂದಾಗಿ ದುಡುಕುವ ಬ್ಯಾಟ್ಸ್‌ಮನ್‌ಗಳ ಸಂಖ್ಯೆ ಹೆಚ್ಚಿದೆ.

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ

ಕ್ರಿಸ್ ಗೇಲ್ (ಬ್ಯಾಟ್ಸ್‌ಮನ್, ವೆಸ್ಟ್ ಇಂಡೀಸ್), ಕರುಣ್ ನಾಯರ್ (ಬ್ಯಾಟ್ಸ್‌ಮನ್, ಕನ್ನಡಿಗ), ಕೆಎಲ್ ರಾಹುಲ್ (ಬ್ಯಾಟ್ಸ್‌ಮನ್-ವಿಕೆಟ್ ಕೀಪರ್-ನಾಯಕ, ಕನ್ನಡಿಗ), ಮನ್‌ದೀಪ್ ಸಿಂಗ್ (ಬ್ಯಾಟ್ಸ್‌ಮನ್), ಮಯಾಂಕ್ ಅಗರ್ವಾಲ್ (ಬ್ಯಾಟ್ಸ್‌ಮನ್, ಕನ್ನಡಿಗ), ಸರ್ಫರಾಜ್ ಖಾನ್ (ಬ್ಯಾಟ್ಸ್‌ಮನ್), ಆಕಾಶ್‌ದೀಪ್ ಸಿಂಗ್ (ಬೌಲರ್), ಕ್ರಿಸ್ ಜೋರ್ಡನ್ (ಬೌಲರ್, ಇಂಗ್ಲೆಂಡ್), ದರ್ಶನ್ ನಾಲ್ಕಂಡೆ (ಬೌಲರ್), ಹಾರ್ಡಸ್ ವಿಲ್ಜೋಯಿನ್ (ಬೌಲರ್, ದಕ್ಷಿಣ ಆಫ್ರಿಕಾ), ಹರ್ಪ್ರೀತ್ ಬ್ರಾರ್ (ಬೌಲರ್), ಇಶಾನ್ ಪೊರೇಲ್ (ಬೌಲರ್), ಜಗದೀಶ ಸುಚಿತ್ (ಬೌಲರ್, ಕನ್ನಡಿಗ), ಮೊಹಮ್ಮದ್ ಶಮಿ (ಬೌಲರ್), ಮುಜೀಬ್ ಉರ್ ರಹ್ಮಾನ್ (ಬೌಲರ್, ಅಫ್ಘಾನಿಸ್ತಾನ), ಮುರುಗನ್ ಅಶ್ವಿನ್ (ಬೌಲರ್), ರವಿ ವಿಶ್ನೋಯ್ (ಬೌಲರ್), ಶೆಲ್ಡನ್ ಕಾಟ್ರೆಲ್ (ಬೌಲರ್, ವೆಸ್ಟ್ ಇಂಡೀಸ್), ಹೀಪಕ್ ಹೂಡ (ಆಲ್ ರೌಂಡರ್), ಗ್ಲೆನ್ ಮ್ಯಾಕ್ಸ್‌ವೆಲ್ (ಆಲ್ ರೌಂಡರ್, ಆಸ್ಟ್ರೇಲಿಯಾ), ಜೇಮ್ಸ್ ನೀಶಮ್ (ಆಲ್ ರೌಂಡರ್, ನ್ಯೂಜಿಲೆಂಡ್), ಕೃಷ್ಣಪ್ಪ ಗೌತಮ್ (ಆಲ್ ರೌಂಡರ್, ಕನ್ನಡಿಗ), ತೇಜೀಂದರ್ ಸಿಂಗ್ (ಆಲ್ ರೌಂಡರ್), ನಿಕೋಲಸ್ ಪೂರನ್ (ವಿಕೆಟ್ ಕೀಪರ್, ವೆಸ್ಟ್ ಇಂಡೀಸ್), ಪ್ರಭ್‌ಸಿಮ್ರನ್ ಸಿಂಗ್ (ವಿಕೆಟ್ ಕೀಪರ್).

ಬೆಂಬಲ ಸಿಬ್ಬಂದಿ

ಬೆಂಬಲ ಸಿಬ್ಬಂದಿ

* ತಂಡದ ವ್ಯವಸ್ಥಾಪಕ: ಅವಿನಾಶ್ ವೈದ್ಯ
* ಕ್ರಿಕೆಟ್ ಕಾರ್ಯಾಚರಣೆಗಳ ನಿರ್ದೇಶಕ ಮತ್ತು ಮುಖ್ಯ ತರಬೇತುದಾರ: ಅನಿಲ್ ಕುಂಬ್ಳೆ, ಕನ್ನಡಿಗ
* ಸಹಾಯಕ ಕೋಚ್: ಆ್ಯಂಡಿ ಫ್ಲವರ್
* ಬ್ಯಾಟಿಂಗ್ ಕೋಚ್: ವಾಸಿಮ್ ಜಾಫರ್
* ಬೌಲಿಂಗ್ ತರಬೇತುದಾರ: ಚಾರ್ಲ್ ಲ್ಯಾಂಗ್ವೆಲ್ಡ್
* ಫೀಲ್ಡಿಂಗ್ ಕೋಚ್: ಜಾಂಟಿ ರೋಡ್ಸ್
* ತಂಡದ ಫಿಸಿಯೋ: ಆ್ಯಂಡ್ರ್ಯೂ ಲೈಪಸ್
* ಸಹಾಯಕ ಫಿಸಿಯೋ: ಅಭಿಜಿತ್ ಕರ್
* ತರಬೇತುದಾರ ದಕ್ಷಿಣ ಆಫ್ರಿಕಾ: ಆಡ್ರಿಯನ್ ಲೆ ರೂಕ್ಸ್

ಪಂಜಾಬ್‌ ಸಂಪೂರ್ಣ ವೇಳಾಪಟ್ಟಿ

ಪಂಜಾಬ್‌ ಸಂಪೂರ್ಣ ವೇಳಾಪಟ್ಟಿ

* ದೆಹಲಿ ಕ್ಯಾಪಿಟಲ್ಸ್ (ಡಿಸಿ) Vs ಕಿಂಗ್ಸ್ ಇಲೆವೆನ್ ಪಂಜಾಬ್ (ಕೆಎಕ್ಸ್‌ಐಪಿ), 20 ಸೆಪ್ಟೆಂಬರ್ 2020, ಭಾನುವಾರ, 7:30 PM IST
* ಕಿಂಗ್ಸ್ ಇಲೆವೆನ್ ಪಂಜಾಬ್ (ಕೆಎಕ್ಸ್‌ಐಪಿ) Vs ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ,) 24 ಸೆಪ್ಟೆಂಬರ್ 2020, ಗುರುವಾರ, 7:30 PM IST
* ರಾಜಸ್ಥಾನ್ ರಾಯಲ್ಸ್ (ಆರ್ಆರ್) Vs ಕಿಂಗ್ಸ್ ಇಲೆವೆನ್ ಪಂಜಾಬ್ (ಕೆಎಕ್ಸ್‌ಐಪಿ), 27 ಸೆಪ್ಟೆಂಬರ್ 2020, ಭಾನುವಾರ, 7:30 PM IST
* ಕಿಂಗ್ಸ್ ಇಲೆವೆನ್ ಪಂಜಾಬ್ (ಕೆಎಕ್ಸ್‌ಐಪಿ) Vs ಮುಂಬೈ ಇಂಡಿಯನ್ಸ್ (ಎಂಐ), 01 ಅಕ್ಟೋಬರ್ 2020, ಗುರುವಾರ, 7:30 PM IST
* ಕಿಂಗ್ಸ್ ಇಲೆವೆನ್ ಪಂಜಾಬ್ (ಕೆಎಕ್ಸ್‌ಐಪಿ) Vs ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ), 04 ಅಕ್ಟೋಬರ್ 2020, ಭಾನುವಾರ, 7:30 PM IST
* ಸನ್ ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) Vs ಕಿಂಗ್ಸ್ ಇಲೆವೆನ್ ಪಂಜಾಬ್ (ಕೆಎಕ್ಸ್‌ಐಪಿ), 08 ಅಕ್ಟೋಬರ್ 2020, ಗುರುವಾರ, 7:30 PM IST
* ಕಿಂಗ್ಸ್ ಇಲೆವೆನ್ ಪಂಜಾಬ್ (ಕೆಎಕ್ಸ್‌ಐಪಿ) Vs ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್), 10 ಅಕ್ಟೋಬರ್ 2020, ಶನಿವಾರ, 3:30 PM IST
* ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) Vs ಕಿಂಗ್ಸ್ ಇಲೆವೆನ್ ಪಂಜಾಬ್ (ಕೆಎಕ್ಸ್‌ಐಪಿ), 15 ಅಕ್ಟೋಬರ್ 2020, ಗುರುವಾರ, 7:30 PM IST
* ಮುಂಬೈ ಇಂಡಿಯನ್ಸ್ (ಎಂಐ) Vs ಕಿಂಗ್ಸ್ ಇಲೆವೆನ್ ಪಂಜಾಬ್ (ಕೆಎಕ್ಸ್‌ಐಪಿ), 18 ಅಕ್ಟೋಬರ್ 2020, ಭಾನುವಾರ, 7:30 PM IST
* ಕಿಂಗ್ಸ್ ಇಲೆವೆನ್ ಪಂಜಾಬ್ (ಕೆಎಕ್ಸ್‌ಐಪಿ) Vs ದೆಹಲಿ ಕ್ಯಾಪಿಟಲ್ಸ್ (ಡಿಸಿ), 20 ಅಕ್ಟೋಬರ್ 2020, ಮಂಗಳವಾರ, 7:30 PM IST
* ಕಿಂಗ್ಸ್ ಇಲೆವೆನ್ ಪಂಜಾಬ್ (ಕೆಎಕ್ಸ್‌ಐಪಿ) Vs ಸನ್ ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್), 24 ಅಕ್ಟೋಬರ್ 2020, ಶನಿವಾರ, 7:30 PM IST
* ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) Vs ಕಿಂಗ್ಸ್ ಇಲೆವೆನ್ ಪಂಜಾಬ್ (ಕೆಎಕ್ಸ್‌ಐಪಿ), 26 ಅಕ್ಟೋಬರ್ 2020, ಸೋಮವಾರ, 7:30 PM IST
* ಕಿಂಗ್ಸ್ ಇಲೆವೆನ್ ಪಂಜಾಬ್ (ಕೆಎಕ್ಸ್‌ಐಪಿ) Vs ರಾಜಸ್ಥಾನ್ ರಾಯಲ್ಸ್ (ಆರ್ಆರ್), 30 ಅಕ್ಟೋಬರ್ 2020, ಶುಕ್ರವಾರ, 7:30 PM IST
* ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) Vs ಕಿಂಗ್ಸ್ ಇಲೆವೆನ್ ಪಂಜಾಬ್ (ಕೆಎಕ್ಸ್‌ಐಪಿ), 01 ನವೆಂಬರ್ 2020, ಭಾನುವಾರ, 3:30 PM IST

Story first published: Tuesday, September 15, 2020, 17:29 [IST]
Other articles published on Sep 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X