ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

8 ವರ್ಷಗಳ ಬಳಿಕ ಮೊದಲ ಬಾರಿಗೆ ನರೈನ್, ರಸ್ಸೆಲ್ ಇಲ್ಲದೆ ಕಣಕ್ಕಿಳಿದ ಕೆಕೆಆರ್

IPL 2020: KKR play without Narine or Russell for 1st time since 2012

ಆರ್‌ಸಿಬಿ ವಿರುದ್ಧ ಅಬುಧಾಬಿಯ ಶೇಕ್ ಜಾಯೇದ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಕೆಕೆಆರ್ ಎರಡು ಬದಲಾವಣೆಯನ್ನು ಮಾಡಿಕೊಂಡು ಕಣಕ್ಕಿಳಿದಿತ್ತು. ಈ ಬಾರಿಯ ಐಪಿಎಲ್‌ನಲ್ಲಿ ಕಳಪೆ ಪ್ರದರ್ಶನವನ್ನು ನೀಡುತ್ತಿರುವ ಆಂಡ್ರೆ ರಸ್ಸೆಲ್‌ ಅವರನ್ನು ಆರ್‌ಸಿಬಿ ವಿರುದ್ದದ ಪಂದ್ಯದಿಂದ ಕೈ ಬಿಡಲಾಗಿತ್ತು. ಈ ಮೂಲಕ ಕೆಕೆಆರ್ ತಂಡದಲ್ಲಿ ಸುದೀರ್ಘ ಕಾಲದ ನಂತರ ಇಬ್ಬರು ವೆಸ್ಟ್ ಇಂಡೀಸ್‌ನ ಪ್ರಮುಖ ಆಟಗಾರರು ಆಡುವ ಬಳಗದಿಂದ ಹೊರ ಬಿದ್ದಂತಾಗಿದೆ.

ವೆಸ್ಟ್ ಇಂಡೀಸ್‌ನ ಇಬ್ಬರು ಆಲ್‌ರೌಂಡರ್‌ಗಳು ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯದ ಹಿನ್ನೆಲೆಯಲ್ಲಿ ಕುತೂಹಲಕಾರಿ ಸಂಗತಿ ಬಹಿರಂಗವಾಗಿದೆ. 2012ರ ಏಪ್ರಿಲ್ ತಿಂಗಳ ಬಳಿಕ ಇದೇ ಮೊದಲ ಬಾರಿಗೆ ನರೈನ್ ಹಾಗೂ ರಸ್ಸೆಲ್ ಇಬ್ಬರೂ ಆಡುವ ಬಳಗದಲ್ಲಿ ಕಾಣಿಸಿಕೊಳ್ಳದಂತಾಗಿದೆ.

ಐಪಿಎಲ್‌ನಲ್ಲಿ ಕೆಟ್ಟ ದಾಖಲೆ ನಿರ್ಮಿಸಿದ ಕೋಲ್ಕತ್ತಾ ನೈಟ್ ರೈಡರ್ಸ್ಐಪಿಎಲ್‌ನಲ್ಲಿ ಕೆಟ್ಟ ದಾಖಲೆ ನಿರ್ಮಿಸಿದ ಕೋಲ್ಕತ್ತಾ ನೈಟ್ ರೈಡರ್ಸ್

2012ರ ಏಪ್ರಿಲ್ 10ರಂದು ಕೊನೆಯ ಬಾರಿಗೆ ರಸ್ಸೆಲ್ ಹಾಗೂ ನರೈನ್ ಇಬ್ಬರೂ ಆಡುವ ಬಳಗದಲ್ಲಿ ಕಾಣಿಸಿಕೊಂಡಿರಲಿಲ್ಲ. ಮತ್ತೊಂದು ಕಾಕತಾಳೀಯವೆಂದರೆ ಅಂದಿನ ಪಂದ್ಯದಲ್ಲೂ ಆರ್‌ಸಿಬಿಯೆ ಎದುರಾಳಿಯಾಗಿತ್ತು. ಅಂದು ಕೆಕೆಆರ್ ತಂಡದ ನಾಯಕನಾಗಿ ಗೌತಮ್ ಗಂಭೀರ್ ಮುನ್ನಡೆಸುತ್ತಿದ್ದರು. ಆ ಆವೃತ್ತಿಯಲ್ಲಿ ಕೆಕೆಆರ್ ಮೊಟ್ಟ ಮೊದಲ ಬಾರಿಗೆ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿತ್ತು.

ಅದಾದ ಬಳಿಕ ಕೊಲ್ಕತಾ ನೈಟ್ ರೈಡರ್ಸ್ ತಂಡ 129 ಪಂದ್ಯಗಳನ್ನು ಆಡಿದೆ. ಇವುಗಳಲ್ಲಿ ಸುನಿಲ್ ನರೈನ್ ಅಥವಾ ಆಂಡ್ರೆ ರಸ್ಸೆಲ್ ಇಬ್ರಲ್ಲಿ ಕನಿಷ್ಠ ಒಬ್ಬರಾದರೂ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಕಳೆದ ಕೆಲ ಪಂದ್ಯಗಳಿಂದ ಆಡುವ ಬಳಗದಿಂದ ದೂರ ಉಳಿದಿದ್ದ ನರೈನ್ ಜೊತೆಗೆ ಇಂದಿನ ಪಂದ್ಯದಲ್ಲಿ ರಸೆಲ್ ಕೂಡ ಹೊರಬಿದ್ದರು.

Story first published: Thursday, October 22, 2020, 10:14 [IST]
Other articles published on Oct 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X