ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆಕೆಆರ್ vs ಡೆಲ್ಲಿ ಕ್ಯಾಪಿಟಲ್ಸ್ : ಹೆಡ್ To ಹೆಡ್ ರೆಕಾರ್ಡ್ ಇಲ್ಲಿದೆ

ಶೇಕ್ ಜಾಯೆದ್ ಸ್ಟೇಡಿಯಂನಲ್ಲಿ ಇಂದು ಕೆಕೆಆರ್‌ಗೆ ಬಲಿಷ್ಟ ಡೆಲ್ಲಿ ಕ್ಯಾಪಿಟಲ್ಸ್ ಸವಾಲು ಹಾಕಲಿದೆ. ಐಪಿಎಲ್ 13ನೇ ಆವೃತ್ತಿಯ 42 ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದು, ಕೆಕೆಆರ್‌ಗೆ ಮಾಡು ಇಲ್ಲವೆ ಮಡಿ ಪಂದ್ಯವಾಗಿದೆ. ಡೆಲ್ಲಿ ಕ್ಯಾಪಿಟಲ್ಸ್‌ಗೆ ಮತ್ತೆ ಅಗ್ರಸ್ಥಾನಕ್ಕೇರುವ ತನಕ.

ಪ್ರಮುಖ ಆಟಗಾರರ ಅನುಪಸ್ಥಿತಿ ಹಾಗೂ ನಾಯಕತ್ವ ಬದಲಾವಣೆ ಕೆಕೆಆರ್‌ ತಂಡವನ್ನು ಒತ್ತಡಕ್ಕೆ ಸಿಲುಕಿಸಿದಂತಿದೆ. ಟಾಪ್ ಆರ್ಡರ್ ಬ್ಯಾಟಿಂಗ್ ವೈಫಲ್ಯವು ಬಿಟ್ಟು ಬಿಡದೆ ಕಾಡಿದೆ. ಬೌಲಿಂಗ್ ಕೂಡ ಪರಿಣಾಮಕಾರಿಯಾಗಿಲ್ಲ.

ಕೆಕೆಆರ್‌ಗೆ ಇಂದು ಡೆಲ್ಲಿ ಕ್ಯಾಪಿಟಲ್ಸ್ ಸವಾಲು: ಪಿಚ್ ರಿಪೋರ್ಟ್, ಸಂಭಾವ್ಯ ತಂಡದ ಮಾಹಿತಿಕೆಕೆಆರ್‌ಗೆ ಇಂದು ಡೆಲ್ಲಿ ಕ್ಯಾಪಿಟಲ್ಸ್ ಸವಾಲು: ಪಿಚ್ ರಿಪೋರ್ಟ್, ಸಂಭಾವ್ಯ ತಂಡದ ಮಾಹಿತಿ

ಅತ್ತ ಡೆಲ್ಲಿ ಎಲ್ಲಾ ವಿಭಾಗದಲ್ಲಿ ಬಲಿಷ್ಠವಾಗಿದ್ದು, ಓಪನರ್ ಪೃಥ್ವಿ ಶಾ ಮತ್ತು ರಿಷಭ್ ಪಂತ್ಯ ವೈಫಲ್ಯವು ತಂಡವನ್ನ ಚಿಂತೆಗೀಡುಮಾಡಿದೆ.

ಹೆಡ್‌ ಟು ಹೆಡ್ ಪಂದ್ಯಗಳು

ಹೆಡ್‌ ಟು ಹೆಡ್ ಪಂದ್ಯಗಳು

ಐಪಿಎಲ್‌ನಲ್ಲಿ ಈವರೆಗೆ ಉಭಯ ತಂಡಗಳು 24 ಬಾರಿ ಪರಸ್ಪರ ಮುಖಾಮುಖಿಯಾಗಿವೆ ಮತ್ತು ಕೆಕೆಆರ್ 13 ಪಂದ್ಯಗಳಲ್ಲಿ ಜಯಗಳಿಸಿದರೆ, ಡೆಲ್ಲಿ ಕ್ಯಾಪಿಟಲ್ಸ್ 11ರಲ್ಲಿ ಗೆದ್ದಿದೆ.

 ಕೊನೆಯ ಐಪಿಎಲ್ ಮುಖಾಮುಖಿ

ಕೊನೆಯ ಐಪಿಎಲ್ ಮುಖಾಮುಖಿ

ಡೆಲ್ಲಿ ಕ್ಯಾಪಿಟಲ್ಸ್ (20 ಓವರ್‌ಗಳಲ್ಲಿ 228/4) ಕೆಕೆಆರ್‌ (20 ಓವರ್‌ಗಳಲ್ಲಿ 210/8) ತಂಡವನ್ನು 18 ರನ್‌ಗಳಿಂದ ಸೋಲಿಸಿದರು.

ದುಬೈನಲ್ಲಿ ಯುಜವೇಂದ್ರ ಚಹಾಲ್‌ಗೆ ಸಪ್ರೈಸ್ ನೀಡಿದ ಭಾವೀ ಪತ್ನಿ ಧನಶ್ರೀ ವರ್ಮಾ

ಈ ಸೀಸನ್‌ನ ಆರಂಭದಲ್ಲಿ, ಅಕ್ಟೋಬರ್ 3, ಶನಿವಾರದಂದು ಶಾರ್ಜಾದಲ್ಲಿ ತಂಡಗಳು ಎದುರಾಗಿದ್ದವು. ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಅಜೇಯ 38 ಎಸೆತದಲ್ಲಿ 88 ರನ್ ಮತ್ತು ಪೃಥ್ವಿ ಶಾ ಅವರ ಅರ್ಧಶತಕ ಹಿನ್ನಲೆಯಲ್ಲಿ ದೆಹಲಿ ಕೋಲ್ಕತ್ತಾವನ್ನು 18 ರನ್ಗಳಿಂದ ಸೋಲಿಸಿತು. ಕ್ಯಾಪಿಟಲ್ಸ್ ಬೌಲರ್ ಅನ್ರಿಕ್ ನೊರ್ಕಿಯಾ ಅವರು ನೈಟ್ ರೈಡರ್ಸ್ ವಿರುದ್ಧ ಮೂರು ವಿಕೆಟ್ ಗಳಿಸಿದರು.

 ಪಾಯಿಂಟ್ಸ್‌ ಟೇಬಲ್ ಲೆಕ್ಕಚಾರ

ಪಾಯಿಂಟ್ಸ್‌ ಟೇಬಲ್ ಲೆಕ್ಕಚಾರ

ಡಿಸಿ ಪ್ರಸ್ತುತ 2020ರ ಐಪಿಎಲ್ ಪಾಯಿಂಟ್ಸ್‌ ಟೇಬಲ್‌ನಲ್ಲಿ ಹತ್ತು ಪಂದ್ಯಗಳಲ್ಲಿ 14 ಅಂಕಗಳೊಂದಿಗೆ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಇದರಲ್ಲಿ ಏಳು ಗೆಲುವುಗಳು ಮತ್ತು ಮೂರು ಸೋಲುಗಳಿವೆ. ಏತನ್ಮಧ್ಯೆ, ಕೆಕೆಆರ್ 10 ಪಂದ್ಯಗಳನ್ನ ಆಡಿ ನಾಲ್ಕನೇ ಸ್ಥಾನದಲ್ಲಿದೆ, ಐದು ಪಂದ್ಯಗಳನ್ನು ಗೆದ್ದಿದೆ ಮತ್ತು ಐದು ಪಂದ್ಯಗಳನ್ನು ಕಳೆದುಕೊಂಡಿದೆ.

ಕೊನೆಯ ಐದು ಪಂದ್ಯಗಳ ಫಲಿತಾಂಶ

ಕೊನೆಯ ಐದು ಪಂದ್ಯಗಳ ಫಲಿತಾಂಶ

ಕೆಕೆಆರ್ -ತನ್ನ ಕೊನೆಯ ಐದು ಪಂದ್ಯಗಳಿಂದ ಎರಡು ಗೆಲುವನ್ನು ಪಡೆದಿದೆ. (2: 3)

ಡಿಸಿ - ತಂಡವು ತನ್ನ ಕೊನೆಯ ಐದು ಪಂದ್ಯಗಳಿಂದ ಮೂರು ಗೆಲುವುಗಳನ್ನು ಹೊಂದಿದೆ (3: 2)

ಒಟ್ಟಾರೆಯಾಗಿ, ಕೆಕೆಆರ್ ಎರಡು ಬಾರಿ ಐಪಿಎಲ್ ಟ್ರೋಫಿಯನ್ನು ಗೆದ್ದಿದ್ದರೆ, ದೆಹಲಿ ಇನ್ನೂ ಫೈನಲ್‌ಗೂ ತಲುಪಿಲ್ಲ.

 ಹೆಚ್ಚು ರನ್‌ಗಳಿಸಿದ ಬ್ಯಾಟ್ಸ್‌ಮನ್ಸ್‌/ ಬೌಲರ್ಸ್

ಹೆಚ್ಚು ರನ್‌ಗಳಿಸಿದ ಬ್ಯಾಟ್ಸ್‌ಮನ್ಸ್‌/ ಬೌಲರ್ಸ್

1) ಶಿಖರ್ ಧವನ್ (ಡಿಸಿ) - 465

2) ಶ್ರೇಯಸ್ ಅಯ್ಯರ್ (ಡಿಸಿ) - 335

3) ಶುಬ್ಮನ್ ಗಿಲ್ (ಕೆಕೆಆರ್) - 312

4) ಇಯಾನ್ ಮಾರ್ಗನ್ (ಕೆಕೆಆರ್) - 278

5) ಮಾರ್ಕಸ್ ಸ್ಟೋಯ್ನಿಸ್ (ಡಿಸಿ) - 226

ಹೆಚ್ಚು ವಿಕೆಟ್‌ ಗಳಿಸಿದ ಬೌಲರ್ಸ್

1) ಕಗಿಸೊ ರಬಾಡ (ಡಿಸಿ) - 21

2) ಅನ್ರಿಕ್ ನೊರ್ಕಿಯಾ(ಡಿಸಿ) - 12

3) ಶಿವಂ ಮಾವಿ (ಕೆಕೆಆರ್) - 7

Story first published: Saturday, October 24, 2020, 13:51 [IST]
Other articles published on Oct 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X