ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆಕೆಆರ್‌ಗೆ ಇಂದು ಡೆಲ್ಲಿ ಕ್ಯಾಪಿಟಲ್ಸ್ ಸವಾಲು: ಪಿಚ್ ರಿಪೋರ್ಟ್, ಸಂಭಾವ್ಯ ತಂಡದ ಮಾಹಿತಿ

ಐಪಿಎಲ್ 13ನೇ ಆವೃತ್ತಿಯಲ್ಲಿ ಇಂದು ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ವಿರುದ್ಧ ಸೆಣಸಾಟ ನಡೆಸಲಿದೆ. ಕಳೆದ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಆಂಡ್ರೆ ರಸ್ಸೆಲ್ ಮತ್ತು ಸುನಿಲ್ ನರೈನ್ ಇಲ್ಲದೆ ಹೀನಾಯ ಸೋಲನ್ನ ಕಂಡಿತು. ಆದರೂ ತಂಡದಲ್ಲಿ ಲ್ಯುಕಿ ಫರ್ಗ್ಯುಸನ್ ಪ್ರಭಾವಿತನಾಗಿದ್ದರೂ, ಆತನಿಗೆ ಸಹ ಬೌಲರ್‌ಗಳ ಬೆಂಬಲ ಸ್ಪಷ್ಟವಾಗಿ ಇಲ್ಲ.

ಪ್ಯಾಟ್ ಕಮ್ಮಿನ್ಸ್ ತಂಡಕ್ಕೆ ಅದ್ಭುತ ಪ್ರಗತಿಯನ್ನು ಒದಗಿಸುವಲ್ಲಿ ವಿಫಲರಾಗಿದ್ದರಿಂದ ಭಾರಿ ನಿರಾಶೆಯಾಗಿದೆ. ಯಾವುದೇ ಭಾರತೀಯ ಬೌಲರ್‌ಗಳು ಸ್ಥಿರವಾಗಿಲ್ಲ. ಜೊತೆಗೆ ಕೆಕೆಆರ್ ಅವರ ಬ್ಯಾಟಿಂಗ್ ಕೂಡ ಉತ್ತಮವಾಗಿಲ್ಲ. ಶುಭ್ಮನ್ ಗಿಲ್ ಹೊರತುಪಡಿಸಿ ಬೇರೆ ಯಾರು ಉತ್ತಮ ಆಟ ತೋರಿಸುವಂತೆ ಕಂಡು ಬಂದಿಲ್ಲ. ಕೆಕೆಆರ್‌ ಹೆಚ್ಚಿನ ಪಂದ್ಯಗಳಲ್ಲಿ ನಿತಿಶ್ ರಾಣಾ ಮತ್ತು ದಿನೇಶ್ ಕಾರ್ತಿಕ್ ಎಡವಿದ್ದಾರೆ.

ದೇವದತ್ ಪಡಿಕ್ಕಲ್ 'ಭಾರತೀಯ ಕ್ರಿಕೆಟ್‌ನ ಭವಿಷ್ಯ' ಎಂದ ಕ್ರಿಸ್ ಮೊರಿಸ್ದೇವದತ್ ಪಡಿಕ್ಕಲ್ 'ಭಾರತೀಯ ಕ್ರಿಕೆಟ್‌ನ ಭವಿಷ್ಯ' ಎಂದ ಕ್ರಿಸ್ ಮೊರಿಸ್

ಕೆಕೆಆರ್‌ನ ಹೆಚ್ಚು ಕೆರಿಬಿಯನ್ ಜೋಡಿಗಳಾದ ಸುನಿಲ್ ನರೀನ್ ಮತ್ತು ಆಂಡ್ರೆ ರಸ್ಸೆಲ್ ಅವರ ಮೇಲೆ ಅವಲಂಬಿತವಾಗಿರುತ್ತದೆ, ಅವರು ಕೂಡ ಅತ್ಯುತ್ತಮವಾಗಿರಲಿಲ್ಲ.

ಮುಂಬೈ vs ಚೆನ್ನೈ: ಪಂದ್ಯದ ಬಳಿಕದ ತಮಾಷೆಯ ಮೀಮ್ಸ್ ಇಲ್ಲಿವೆಮುಂಬೈ vs ಚೆನ್ನೈ: ಪಂದ್ಯದ ಬಳಿಕದ ತಮಾಷೆಯ ಮೀಮ್ಸ್ ಇಲ್ಲಿವೆ

ಮತ್ತೊಂದೆಡೆ, ದೆಹಲಿ ಕ್ಯಾಪಿಟಲ್ಸ್ (ಡಿಸಿ) ಪಂದ್ಯಾವಳಿಯ ಪ್ರಮುಖ ಭಾಗಕ್ಕೆ ಸಾಕಷ್ಟು ಅದ್ಭುತವಾಗಿದೆ. ಅವರ ಬೌಲಿಂಗ್ ತೀಕ್ಷ್ಣ ಮತ್ತು ಸಮತೋಲಿತವಾಗಿ ಕಾಣುತ್ತದೆ ಮತ್ತು ಬ್ಯಾಟಿಂಗ್ ಕೂಡ ಬಲವಾಗಿ ಕಾಣುತ್ತದೆ. ಆದರೆ, ಅವರು ಪೃಥ್ವಿ ಶಾ ಮತ್ತು ರಿಷಭ್ ಪಂತ್ ಅವರ ಫಾರ್ಮ್‌ ಬಗ್ಗೆ ಸ್ವಲ್ಪ ಚಿಂತೆಗೀಡುಮಾಡಿದೆ. ಪೃಥ್ವಿ ಶಾ ತನ್ನ ಕೊನೆಯ 4 ಪಂದ್ಯಗಳಲ್ಲಿ ಕೇವಲ 11 ರನ್ ಗಳಿಸಿದ್ದಾರೆ. ರಿಷಭ್ ಪಂತ್ ಅವರ ಸಾಮಾನ್ಯವಾದ ಸ್ಟ್ರೈಕ್ ರೇಟ್ ಕೂಡ ತಗ್ಗಿದೆ.

ಕೆಕೆಆರ್ ವರ್ಸಸ್ ಡಿಸಿ ಪಂದ್ಯದ ಮಾಹಿತಿ

ಕೆಕೆಆರ್ ವರ್ಸಸ್ ಡಿಸಿ ಪಂದ್ಯದ ಮಾಹಿತಿ

ದಿನಾಂಕ: 24 ಅಕ್ಟೋಬರ್ 2020 (ಶನಿವಾರ)

ಸಮಯ: 3:30 PM (ಭಾರತೀಯ ಕಾಲಮಾನ)

ಸ್ಥಳ: ಅಬುಧಾಬಿಯ ಶೇಕ್ ಜಾಯೆದ್ ಕ್ರೀಡಾಂಗಣ

ಅಬುಧಾಬಿಯ ಹವಾಮಾನ ಮುನ್ಸೂಚನೆ

ಅಬುಧಾಬಿಯ ಹವಾಮಾನ ಮುನ್ಸೂಚನೆ

ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಲಟ್ಸ್ ನಡುವೆ ನಡೆಯುವ ಶನಿವಾರದ ಪಂದ್ಯದಲ್ಲಿ ತಾಪಮಾನವು 33 ರಿಂದ 26 ಡಿಗ್ರಿ ಸೆಲ್ಸಿಯಸ್ ನಡುವೆ ಉಳಿಯುವ ಸಾಧ್ಯತೆಯಿದೆ.

ಕೆಕೆಆರ್ ವರ್ಸಸ್ ಡಿಸಿ ಪಿಚ್ ವರದಿ

ಕೆಕೆಆರ್ ವರ್ಸಸ್ ಡಿಸಿ ಪಿಚ್ ವರದಿ

ಆರ್‌ಸಿಬಿ ಮತ್ತು ಕೆಕೆಆರ್ ನಡುವೆ ನಡೆದ ಕೊನೆಯ ಪಂದ್ಯದಲ್ಲಿ ಏನಾಯಿತು ಎಂಬುದರ ಹೊರತಾಗಿಯೂ, ಪಿಚ್‌ನಲ್ಲಿ ಯಾವುದೇ ತೀಕ್ಷ್ಮ ಬದಲಾವಣೆ ಇಲ್ಲ. ಮೇಲ್ಮೈ ನಿಧಾನವಾಗಿದ್ದರೂ, ಬ್ಯಾಟ್ಸ್‌ಮನ್‌ಗಳಿಂದ ಕೆಲವು ರನ್‌ಗಳನ್ನು ನಿರೀಕ್ಷಿಸಬಹುದು.

ಕೆಕೆಆರ್ ಸಂಭಾವ್ಯ ತಂಡ

ಕೆಕೆಆರ್ ಸಂಭಾವ್ಯ ತಂಡ

ಗೆಲ್ಲಲೇಬೇಕಾದ ನಿರ್ಣಾಯಕ ಆಟದಲ್ಲಿರುವ ಕೆಕೆಆರ್‌ಗೆ ಸುನಿಲ್ ನರೈನ್ ಮತ್ತು ಆಂಡ್ರೆ ರಸ್ಸೆಲ್ ಅವರು ಆಡುವ ಇಲೆವೆನ್‌ನಲ್ಲಿ ಮರಳಬೇಕಾಗಿದೆ. ಇವರಿಬ್ಬರ ಸಾಮರ್ಥ್ಯದ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೂ, ಅವರು ಆಡುವ ಇಲೆವೆನ್‌ಗೆ ಪ್ರವೇಶಿಸಿದರೆ, ಪ್ಯಾಟ್ ಕಮ್ಮಿನ್ಸ್ ಮತ್ತು ಟಾಮ್ ಬ್ಯಾಂಟನ್ ಹೊರಬೀಳಬೇಕಾಗುತ್ತದೆ.

ಸಂಭಾವ್ಯ ತಂಡ: ಶುಭ್ಮನ್ ಗಿಲ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ದಿನೇಶ್ ಕಾರ್ತಿಕ್ (W), ಇಯೊನ್ ಮಾರ್ಗಾನ್ (C), ಆಂಡ್ರೆ ರಸ್ಸೆಲ್, ಸುನಿಲ್ ನರೇನ್, ಲ್ಯುಕಿ ಫರ್ಗ್ಯುಸನ್, ಸಿ.ವಿ. ವರುಣ್, ಕುಲದೀಪ್ ಯಾದವ್, ಪ್ರಸಿದ್ ಕೃಷ್ಣ

ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ತಂಡ

ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ತಂಡ

ಕಳಪೆ ಸ್ಕೋರ್‌ಗಳ ಹೊರತಾಗಿಯೂ, ಡೆಲ್ಲಿ ಕ್ಯಾಪಿಟಲ್ಸ್‌ ಪೃಥ್ವಿ ಶಾರೊಂದಿಗೆ ಮುಂದುವರಿಯಬಹುದು. ಅನ್ರಿಕ್ ನೊರ್ಕಿಯಾರನ್ನ ಡೇನಿಯಲ್ ಸ್ಯಾಮ್ಸ್ ಬದಲಿಗೆ ಆಡುವ 11ರ ಬಳಗಕ್ಕೆ ಸೇರಿಸಿಕೊಳ್ಳಬಹುದು. ಕೊನೆಯ ಪಂದ್ಯದಲ್ಲಿ ಕ್ರಿಸ್ ಗೇಲ್ ಅವರ ವಿಕೆಟ್ ಪಡೆದ ತುಷಾರ್ ದೇಶಪಾಂಡೆ, ತಮ್ಮ ಸ್ಥಾನವನ್ನು ಉಳಿಸಿಕೊಳ್ಳಬಹುದು.

ಸಂಭಾವ್ಯ ತಂಡ: ಶಿಖರ್ ಧವನ್, ಪೃಥ್ವಿ ಶಾ, ಶ್ರೇಯಸ್ ಅಯ್ಯರ್ (C), ರಿಷಭ್ ಪಂತ್ (W), ಮಾರ್ಕಸ್ ಸ್ಟೋಯ್ನಿಸ್, ಶಿಮ್ರಾನ್ ಹೆಟ್ಮಾಯರ್, ಆಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಗಿಸೊ ರಬಾಡಾ, ಅನ್ರಿಕ್ ನೊರ್ಕಿಯಾ, ತುಷಾರ್ ದೇಶಪಾಂಡ

Story first published: Saturday, October 24, 2020, 12:01 [IST]
Other articles published on Oct 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X