ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಸಚಿನ್ ತೆಂಡೂಲ್ಕರ್ ದಾಖಲೆ ಸರಿಗಟ್ಟಿದ ಕನ್ನಡಿಗ ಕೆಎಲ್ ರಾಹುಲ್

IPL 2020: KL Rahul breaks Sachin Tendulkar’s massive record

ದುಬೈ: ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಕೆಎಲ್ ರಾಹುಲ್ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ದಾಖಲೆ ನಿರ್ಮಿಸಿದ್ದಾರೆ. ಸೆಪ್ಟೆಂಬರ್ 24ರ ಗುರುವಾರ ನಡೆದ ಐಪಿಎಲ್ 6ನೇ ಪಂದ್ಯದಲ್ಲಿ ರಾಹುಲ್ ದಾಖಲೆಗಾಗಿ ಮಿನುಗಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ರಾಹುಲ್ ವಿಶೇಷ ದಾಖಲೆಗಾಗಿ ಗಮನ ಸೆಳೆದರು. ರಾಹುಲ್ ಬ್ಯಾಟಿಂಗ್‌ನಿಂದಾಗಿ ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ದಾಖಲೆಯೊಂದು ಮುರಿದಿದೆ.

ಸಾರಾ-ಶುಬ್‌ಮನ್ ಡೇಟಿಂಗ್ ಗುಸುಗುಸುಗೆ ಕಿಡಿ ಹಚ್ಚಿದ ಸಾರಾ ಪೋಸ್ಟ್ಸಾರಾ-ಶುಬ್‌ಮನ್ ಡೇಟಿಂಗ್ ಗುಸುಗುಸುಗೆ ಕಿಡಿ ಹಚ್ಚಿದ ಸಾರಾ ಪೋಸ್ಟ್

ಐಪಿಎಲ್‌ನಲ್ಲಿ ಅತೀ ವೇಗದಲ್ಲಿ 2000 ರನ್ ಬಾರಿಸಿದ ಆಟಗಾರರ ಸಾಲಿನಲ್ಲಿ ಕೆಎಲ್ ರಾಹುಲ್ ಕಾಣಿಸಿಕೊಂಡಿದ್ದಾರೆ. ಕಡಿಮೆ ಇನ್ನಿಂಗ್ಸ್‌ನಲ್ಲಿ 2000 ರನ್ ಬಾರಿಸಿರುವುದರಿಂದ ಸಚಿನ್ ತೆಂಡೂಲ್ಕರ್ ದಾಖಲೆ ಬದಿಗೆ ಸರಿದಿದೆ.

ಬೆಂಗಳೂರು 'ತುಂಬಾ ಸ್ಪೆಷಲ್' ಯಾಕೆಂದು ಸ್ವಾರಸ್ಯಕರ ಕಾರಣ ಹೇಳಿದ ಫಿಂಚ್!ಬೆಂಗಳೂರು 'ತುಂಬಾ ಸ್ಪೆಷಲ್' ಯಾಕೆಂದು ಸ್ವಾರಸ್ಯಕರ ಕಾರಣ ಹೇಳಿದ ಫಿಂಚ್!

ಐಪಿಎಲ್‌ನಲ್ಲಿ ವೇಗ 2000 ರನ್ ಬಾರಿಸಿದ ಎಲ್ಲಾ ಬ್ಯಾಟ್ಸ್‌ಮನ್‌ಗಳ ಪಟ್ಟಿ ಕೆಳಗಿದೆ ನೋಡಿ.

ಸಚಿನ್ ದಾಖಲೆ ಬದಿಗೆ

ಸಚಿನ್ ದಾಖಲೆ ಬದಿಗೆ

ಕೆಎಲ್ ರಾಹುಲ್ ಐಪಿಎಲ್‌ನಲ್ಲಿ 2000 ರನ್ ಬಾರಿಸಲು 60 ಇನ್ನಿಂಗ್ಸ್‌ಗಳನ್ನು ಬಳಸಿಕೊಂಡಿದ್ದಾರೆ. ಇದೇ ಸಾಧನೆಗಾಗಿ ಸಚಿನ್ ತೆಂಡೂಲ್ಕರ್ 63 ಇನ್ನಿಂಗ್ಸ್‌ ಬಳಸಿಕೊಂಡಿದ್ದರು. ಹೀಗಾಗಿ ಸಚಿನ್ ದಾಖಲೆಯೀಗ ಬದಿಗೆ ಸರಿದಿದೆ.

ಪಟ್ಟಿಯಲ್ಲಿ ಐದು ಮಂದಿ

ಪಟ್ಟಿಯಲ್ಲಿ ಐದು ಮಂದಿ

ವೇಗವಾಗಿ 2000 ರನ್ ಬಾರಿಸಿದ ಬ್ಯಾಟ್ಸ್‌ಮನ್‌ಗಳಲ್ಲಿ ವೀರೇಂದ್ರ ಸೆಹ್ವಾಗ್, ಸುರೇಶ್ ರೈನಾ, ಗೌತಮ್ ಗಂಭೀರ್, ಸಚಿನ್ ತೆಂಡೂಲ್ಕರ್ ಮತ್ತು ಕೆಎಲ್ ರಾಹುಲ್ ಇದ್ದಾರೆ. ಇದರಲ್ಲಿ ರಾಹುಲ್ ಈಗ ಮೊದಲ ಸ್ಥಾನದಲ್ಲಿದ್ದಾರೆ.

3ನೇ ಸ್ಥಾನದಲ್ಲಿ ಗಂಭೀರ್

3ನೇ ಸ್ಥಾನದಲ್ಲಿ ಗಂಭೀರ್

ಐಪಿಎಲ್‌ನಲ್ಲಿ ವೇಗದ 2000 ರನ್‌ ಪಟ್ಟಿಯಲ್ಲಿ ಕನ್ನಡಿಗ ರಾಹುಲ್ (60 ಇನ್ನಿಂಗ್ಸ್‌) ಮೊದಲ ಸ್ಥಾನದಲ್ಲಿದ್ದರೆ, 2ನೇ ಸ್ಥಾನದಲ್ಲಿ ಸಚಿನ್ ತೆಂಡೂಲ್ಕರ್ (63 ಇನ್ನಿಂಗ್ಸ್‌), 3ನೇ ಸ್ಥಾನದಲ್ಲಿ ಗೌತಮ್ ಗಂಭೀರ್ (68 ಇನ್ನಿಂಗ್ಸ್‌), 4ನೇ ಸ್ಥಾನದಲ್ಲಿ ಸುರೇಶ್ ರೈನಾ (69 ಇನ್ನಿಂಗ್ಸ್‌), 5ನೇ ಸ್ಥಾನದಲ್ಲಿ ವೀರೇಂದ್ರ ಸೆಹ್ವಾಗ್ (70 ಇನ್ನಿಂಗ್ಸ್‌) ಇದ್ದಾರೆ.

8 ವರ್ಷಗಳ ದಾಖಲೆ ಪತನ

8 ವರ್ಷಗಳ ದಾಖಲೆ ಪತನ

ಸಚಿನ್ ತೆಂಡೂಲ್ಕರ್ 63 ಇನ್ನಿಂಗ್ಸ್‌ಗಳಲ್ಲಿ 2000 ರನ್ ಬಾರಿಸಿ ಐಪಿಎಲ್‌ನಲ್ಲಿ ವೇಗದ 2000 ರನ್ ದಾಖಲೆ ನಿರ್ಮಿಸಿ, ದಾಖಲೆ ಪಟ್ಟಿಯಲ್ಲಿ ಮೊದಲಸ್ಥಾನಕ್ಕೇರಿದ್ದು 2012 ಮೇ 20ರಂದು. ಅಂದರೆ ಸುಮಾರು 8 ವರ್ಷಗಳ ಹಿಂದಿನ ದಾಖಲೆಯನ್ನು ರಾಹುಲ್ ಸರಿಗಟ್ಟಿದಂತಾಗಿದೆ.

2000 ರನ್ ಸಾಧಕರ ಪಟ್ಟಿ

2000 ರನ್ ಸಾಧಕರ ಪಟ್ಟಿ

1. ಸುರೇಶ್ ರೈನಾ-ಏಪ್ರಿಲ್ 30, 2012 vs ಕೆಕೆಆರ್, 69ನೇ ಇನ್ನಿಂಗ್ಸ್.
2. ಗೌತಮ್ ಗಂಭೀರ್-ಮೇ 16, 2012 vs ಎಂಐ, 68ನೇ ಇನ್ನಿಂಗ್ಸ್
3. ಸಚಿನ್ ತೆಂಡೂಲ್ಕರ್ - ಮೇ 20, 2012 vs ಆರ್ಆರ್, 63ನೇ ಇನ್ನಿಂಗ್
4. ರೋಹಿತ್ ಶರ್ಮಾ-ಏಪ್ರಿಲ್ 9, 2013 vs ಡಿಡಿ, 77ನೇ ಇನ್ನಿಂಗ್ಸ್
5. ಜಾಕ್ ಕಾಲಿಸ್ -ಅಪ್ರಿಲ್ 11, 2013 vs ಆರ್‌ಸಿಬಿ, 76ನೇ ಇನ್ನಿಂಗ್ಸ್
6. ಕ್ರಿಸ್ ಗೇಲ್-ಏಪ್ರಿಲ್ 16, 2013 vs ಡಿಡಿ, 48ನೇ ಇನ್ನಿಂಗ್ಸ್
7. ವೀರೇಂದ್ರ ಸೆಹ್ವಾಗ್ -ಅಪ್ರಿಲ್ 21, ವರ್ಸಸ್ ಎಂಐ, 70 ನೇ ಇನ್ನಿಂಗ್ಸ್
8. ಎಂ.ಎಸ್.ಧೋನಿ -ಅಪ್ರಿಲ್ 25, 2013 vs ಎಸ್‌ಆರ್‌ಹೆಚ್, 75ನೇ ಇನ್ನಿಂಗ್ಸ್
9. ವಿರಾಟ್ ಕೊಹ್ಲಿ-ಏಪ್ರಿಲ್ 29, 2013 vs ಆರ್.ಆರ್, 79ನೇ ಇನ್ನಿಂಗ್ಸ್
10. ರಾಹುಲ್ ದ್ರಾವಿಡ್ -ಮೇ 5, 2013 vs ಪಿಡಬ್ಲ್ಯುಐ, 75ನೇ ಇನ್ನಿಂಗ್ಸ್
11. ಆಡಮ್ ಗಿಲ್‌ಕ್ರಿಸ್ಟ್ - ಮೇ 14, 2013 vs ಆರ್‌ಸಿಬಿ, 78ನೇ ಇನ್ನಿಂಗ್ಸ್
12. ರಾಬಿನ್ ಉತ್ತಪ್ಪ-ಏಪ್ರಿಲ್ 19, 2014 vs ಡಿಡಿ, 88ನೇ ಇನ್ನಿಂಗ್ಸ್
13. ಶಿಖರ್ ಧವನ್ -ಮೇ 8, 2014 vs ಆರ್.ಆರ್, 74ನೇ ಇನ್ನಿಂಗ್ಸ್
14. ಶೇನ್ ವ್ಯಾಟ್ಸನ್ -ಮೇ 13, 2014 vs ಸಿಎಸ್ಕೆ, 64ನೇ ಇನ್ನಿಂಗ್ಸ್
15. ಎಬಿ ಡಿವಿಲಿಯರ್ಸ್-ಮೇ 18, 2014 vs ಸಿಎಸ್ಕೆ, 76ನೇ ಇನ್ನಿಂಗ್ಸ್
16. ದಿನೇಶ್ ಕಾರ್ತಿಕ್ -ಮೇ 19, 2014 vs ಕೆಎಕ್ಸ್‌ಐಪಿ, 93ನೇ ಇನ್ನಿಂಗ್ಸ್

Story first published: Friday, September 25, 2020, 9:54 [IST]
Other articles published on Sep 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X