ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಇತಿಹಾಸದಲ್ಲಿ ವಿಶಿಷ್ಠ ದಾಖಲೆ ಬರೆದ ಕನ್ನಡಿಗ ಕೆಎಲ್ ರಾಹುಲ್

IPL 2020: KL Rahul created unique record in IPL history

ದುಬೈ: ಕಿಂಗ್ಸ್ ಇಲೆವೆನ್ ಪಂಜಾಬ್‌ ನಾಯಕ, ಕನ್ನಡಿಗ ಕೆಎಲ್ ರಾಹುಲ್ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ವಿಶಿಷ್ಠ ದಾಖಲೆ ನಿರ್ಮಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಆರಂಭಿಕ ಪಂದ್ಯದಲ್ಲೇ ರಾಹುಲ್ ಈ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಮೂರು ಆಯಾಮದಲ್ಲಿ ಪಾತ್ರ ವಹಿಸಿದ್ದಕ್ಕಾಗಿ ರಾಹುಲ್ ಹೆಸರಿನಲ್ಲಿ ಈ ದಾಖಲೆ ಬರೆಯಲ್ಪಟ್ಟಿದೆ. ಇದೇ ಪಂದ್ಯದಲ್ಲಿ ರಾಹುಲ್ ಉತ್ತಮ ವಿಕೆಟ್‌ ಕೀಪಿಂಗ್‌ಗಾಗಿಯೂ ಗಮನ ಸೆಳೆದಿದ್ದಾರೆ.

ಐಪಿಎಲ್ 2020: ಬೇರೆ ಬೇರೆ ತಂಡಗಳಲ್ಲಿರುವ ಕನ್ನಡಿಗರ ಸಂಪೂರ್ಣ ಪಟ್ಟಿಐಪಿಎಲ್ 2020: ಬೇರೆ ಬೇರೆ ತಂಡಗಳಲ್ಲಿರುವ ಕನ್ನಡಿಗರ ಸಂಪೂರ್ಣ ಪಟ್ಟಿ

ದುಬೈಯ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ (ಸೆಪ್ಟೆಂಬರ್ 20) ನಡೆದ ಐಪಿಎಲ್ 2ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕನಾಗಿ, ವಿಕೆಟ್ ಕೀಪರ್‌ ಆಗಿ ಮತ್ತು ಆರಂಭಿಕರಾಗಿ ಆಡಿದ್ದ ರಾಹುಲ್ ವಿಶೇಷ ದಾಖಲೆಗೆ ಕಾರಣರಾಗಿದ್ದಾರೆ.

ಐಪಿಎಲ್ 2020: ವಿರಾಟ್ ಕೊಹ್ಲಿಗೆ ಬೌಲಿಂಗ್ : ರಶೀದ್ ಖಾನ್ 'ಹೆಮ್ಮೆ'ಯ ಹೇಳಿಕೆಐಪಿಎಲ್ 2020: ವಿರಾಟ್ ಕೊಹ್ಲಿಗೆ ಬೌಲಿಂಗ್ : ರಶೀದ್ ಖಾನ್ 'ಹೆಮ್ಮೆ'ಯ ಹೇಳಿಕೆ

ಐಪಿಎಲ್ ಇತಿಹಾಸದಲ್ಲಿ ಈ ವಿಶಿಷ್ಠ ದಾಖಲೆ ನಿರ್ಮಿಸಿದ ಐದನೇ ಆಟಗಾರನಾಗಿ ಕೆಎಲ್ ರಾಹುಲ್ ಗುರುತಿಸಿಕೊಂಡಿದ್ದಾರೆ.

ಐದನೇ ಆಟಗಾರನೆಂಬ ಹಿರಿಮೆ

ಐದನೇ ಆಟಗಾರನೆಂಬ ಹಿರಿಮೆ

ಐಪಿಎಲ್‌ನಲ್ಲಿ ನಾಯಕನಾಗಿ, ವಿಕೆಟ್ ಕೀಪರ್‌ ಆಗಿ ಮತ್ತು ಆರಂಭಿಕ ಬ್ಯಾಟ್ಸ್‌ಮನ್ ಆಗಿ ಆಡಿದ ದಾಖಲೆ ಈ ಮೊದಲು ಕೇವಲ 4 ಮಂದಿಯ ಹೆಸರಿನಲ್ಲಿತ್ತು. ಇದೇ ಸಾಧನೆಗಾಗಿ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕನಾಗಿ ಚೊಚ್ಚಲ ಪಂದ್ಯ ಆಡಿದ ಕೆಎಲ್ ರಾಹುಲ್ ಈಗ ಐದನೇ ಆಟಗಾರನಾಗಿ ಗುರುತಿಸಲ್ಪಟ್ಟಿದ್ದಾರೆ.

ಮುಂಚೂಣಿಯಲ್ಲಿ ಗಿಲ್‌ಕ್ರಿಸ್ಟ್

ಮುಂಚೂಣಿಯಲ್ಲಿ ಗಿಲ್‌ಕ್ರಿಸ್ಟ್

ರಾಹುಲ್‌ಗಿಂತ ಮೊದಲು ಈ ವಿಶೇಷ ಸಾಧನೆಗಾಗಿ ಗುರುತಿಸಿಕೊಂಡಿದ್ದವರೆಂದರೆ ಆ್ಯಡಂ ಗಿಲ್‌ಕ್ರಿಸ್ಟ್, ಬ್ರೆಂಡನ್ ಮೆಕಲಮ್, ಕುಮಾರ ಸಂಗಕ್ಕಾರ ಮತ್ತು ಪಾರ್ಥಿವ್ ಪಟೇಲ್. ಈ ಪಟ್ಟಿಯಲ್ಲಿ ಗಿಲ್‌ಕ್ರಿಸ್ಟ್ ಮುಂಚೂಣಿಯಲ್ಲಿದ್ದಾರೆ. ಭಾನುವಾರದ ಪಂದ್ಯದಲ್ಲಿ ಕೀಪರ್ ರಾಹುಲ್ ಎದುರಾಳಿ ತಂಡದ ಶಿಖರ್ ಧವನ್ ಮತ್ತು ನಿಕೋಲಸ್ ಪೂರನ್ ರನ್‌ ಔಟ್‌ಗೂ ಕಾರಣರಾಗಿದ್ದರು.

ಮೆಕಲಮ್ ದಾಖಲೆ ಬದಿಗೆ

ಮೆಕಲಮ್ ದಾಖಲೆ ಬದಿಗೆ

ಆ್ಯಡಂ ಗಿಲ್‌ಕ್ರಿಸ್ಟ್ 74, ಬ್ರೆಂಡನ್ ಮೆಕಲಮ್ 4, ಕುಮಾರ ಸಂಗಕ್ಕಾರ 2, ಪಾರ್ಥಿವ್ ಪಾರ್ಥಿವ್ 1 ಪಂದ್ಯಗಳಲ್ಲಿ ತಂಡದ ನಾಯಕನಾಗಿ, ವಿಕೆಟ್ ಕೀಪರ್ ಆಗಿ ಮತ್ತು ಓಪನಿಂಗ್ ಬ್ಯಾಟ್ಸ್‌ಮನ್ ಆಗಿ ಆಡಿದ್ದರು. ಕೆಎಲ್ ರಾಹುಲ್ ಟೂರ್ನಿಯುದ್ದಕ್ಕೂ ಇದೇ ಪಾತ್ರಗಳನ್ನು ನಿಭಾಯಿಸಲಿರುವುದರಿಂದ ಮೆಕಲಮ್ ಅವರನ್ನು ರಾಹುಲ್ ಹಿಂದಿಕ್ಕಲಿದ್ದಾರೆ.

ಸಂಕ್ಷಿಪ್ತ ಸ್ಕೋರ್/ಸೂಪರ್ ಓಪರ್

ಸಂಕ್ಷಿಪ್ತ ಸ್ಕೋರ್/ಸೂಪರ್ ಓಪರ್

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಡೆಲ್ಲಿ ಕ್ಯಾಪಿಟಲ್ಸ್, ಮಾರ್ಕಸ್ ಸ್ಟೋಯ್ನಿಸ್ ಅದ್ಭುತ ಬ್ಯಾಟಿಂಗ್‌ನೊಂದಿಗೆ (21 ಎಸತಕ್ಕೆ 53 ರನ್) 20 ಓವರ್‌ಗೆ 8 ವಿಕೆಟ್ ಕಳೆದು 157 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಕಿಂಗ್ಸ್ ಇಲೆವೆನ್ ಪಂಜಾಬ್, ಮಯಾಂಕ್ ಅಗರ್ವಾಲ್ 89 (60 ಎಸತ) ರನ್‌ನೊಂದಿಗೆ 20 ಓವರ್‌ಗೆ 8 ವಿಕೆಟ್ ಕಳೆದು 157 ರನ್ ಬಾರಿಸಿ ಪಂದ್ಯ ಸರಿದೂಗಿಸಿತ್ತು. ಸೂಪರ್‌ ಓವರ್‌ನಲ್ಲಿ ಕೆXIಪಿ 2 ರನ್ ಬಾರಿಸಿದ್ದರಿಂದ ಡೆಲ್ಲಿ 3 ರನ್ ಬಾರಿಸಿ ಪಂದ್ಯ ಗೆದ್ದಿತು.

Story first published: Monday, September 21, 2020, 11:18 [IST]
Other articles published on Sep 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X