ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಲ್ಲಿ ವಿಶೇಷ ಸಾಧನೆ ಮಾಡಿ ಕೊಹ್ಲಿ ಸಾಧನೆ ಸರಿಗಟ್ಟಿದ ಕೆಎಲ್ ರಾಹುಲ್

IPL 2020: KL Rahul joins Virat Kohli in elite IPL list

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕೆಎಲ್ ರಾಹುಲ್ ಈ ಬಾರಿಯ ಐಪಿಎಲ್‌ನಲ್ಲೂ ಶ್ರೇಷ್ಠ ಪ್ರದರ್ಶನವನ್ನು ನೀಡುತ್ತಿದ್ದಾರೆ. ರಾಜಸ್ಥಾನ್ ವಿರುದ್ಧದ ಪಂದ್ಯದಲ್ಲೂ ರಾಹುಲ್ 46 ರನ್‌ಗಳನ್ನು ಸಿಡಿಸಿ ಕ್ರಿಸ್ ಗೇಲ್ ಜೊತೆಗೆ ಶತಕದ ಜೊತೆಯಾಟವನ್ನು ನೀಡಿದರು. ಈ ಮೂಲಕ ಕೆಎಲ್ ರಾಹುಲ್ ಈ ಟೂರ್ನಿಯಲ್ಲಿ 641 ರನ್‌ಗಳಿಸಿ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದಾರೆ. ಮಾತ್ರವಲ್ಲ ಸಮೀಪದ ಪ್ರತಿಸ್ಪರ್ಧಿಗಿಂತ ಭಾರೀ ಅಂತರವನ್ನು ಕಾಯ್ದುಕೊಂಡಿದ್ದಾರೆ.

ಈ ಬಾರಿಯ ಐಪಿಎಲ್‌ನಲ್ಲಿ 600ಕ್ಕೂ ಅಧಿಕ ರನ್ ಗಳಿಸುವ ಮೂಲಕ ಕೆಎಲ್ ರಾಹುಲ್ ವಿಶೇಷ ಸಾಧನೆಯೊಂದನ್ನು ಮಾಡಿದ್ದಾರೆ. ಎರಡು ಪ್ರತ್ಯೇಕ ಐಪಿಎಲ್ ಆವೃತ್ತಿಗಳಲ್ಲಿ 600ಕ್ಕೂ ಅಧಿಕ ರನ್ ಗಳಿಸಿದ ಎರಬೇ ಭಾರತೀಯ ಎಂಬ ಸಾಧನೆಯನ್ನು ಮಾಡಿದ್ದಾರೆ ಕೆಎಲ್ ರಾಹುಲ್. ಒಟ್ಟಾರೆ ಆಟಗಾರರ ಪೈಕಿ ಈ ಸಾಧನೆ ಮಾಡಿದ ನಾಲ್ಕನೇ ಆಟಗಾರ ಎಂಬ ಖ್ಯಾತಿಗೂ ಒಳಗಾಗಿದ್ದಾರೆ.

99 ರನ್‌ಗೆ ಔಟಾದ ಕ್ರಿಸ್‌ಗೇಲ್ : ಕೊಹ್ಲಿ, ಪೃಥ್ವಿ ಶಾ, ಇಶನ್ ಕಿಶನ್‌ ಲಿಸ್ಟ್‌ಗೆ ಸೇರಿದ ಯೂನಿವರ್ಸಲ್ ಬಾಸ್99 ರನ್‌ಗೆ ಔಟಾದ ಕ್ರಿಸ್‌ಗೇಲ್ : ಕೊಹ್ಲಿ, ಪೃಥ್ವಿ ಶಾ, ಇಶನ್ ಕಿಶನ್‌ ಲಿಸ್ಟ್‌ಗೆ ಸೇರಿದ ಯೂನಿವರ್ಸಲ್ ಬಾಸ್

ಭಾರತೀಯ ಆಟಗಾರರ ಪೈಕಿ ಇದಕ್ಕೂ ಮೊದಲು ವಿರಾಟ್ ಕೊಹ್ಲಿ ಮಾತ್ರವೇ ಈ ಸಾಧನೆಯನ್ನು ಮಾಡಿದ್ದರು. ಕೊಹ್ಲಿ 2013ರ ಐಪಿಎಲ್ ಆವೃತ್ತಿಯಲ್ಲಿ ಹಾಗೂ 2018ರ ಆವೃತ್ತಿಯಲ್ಲಿ ಈ ಸಾಧನೆ ಮಾಡಿದ್ದಾರೆ. ಈ ಸಾಧನೆಯನ್ನು ಅತಿ ಹೆಚ್ಚು ಮಾಡಿದ ಆಟಗಾರರು ಎಂಬ ದಾಖಲೆ ಡೇವಿಡ್ ವಾರ್ನರ್‌ ಹಾಗೂ ಕ್ರಿಸ್ ಗೇಲ್ ಹೆಸರಿನಲ್ಲಿದೆ.

ಡೇವಿಡ್ ವಾರ್ನರ್ ಹಾಗೂ ಕ್ರಿಸ್ ಗೇಲ್ ಮೂರು ಬಾರಿ ಈ ಸಾಧನೆಯನ್ನು ಮಾಡಿದ್ದಾರೆ. ಆರ್‌ಸಿಬಿ ಪರವಾಗಿ ಕಣಕ್ಕಿಳಿಯುತ್ತಿದ್ದ ಗೇಲ್ 2011, 2012 ಹಾಗೂ 2013ರಲ್ಲಿ ಸತತವಾಗಿ ಈ ಸಾಧನೆಯನ್ನು ಮಾಡಿದ್ದಾರೆ. ಡೇವಿಡ್ ವಾರ್ನರ್ 2016, 2017 ಹಾಗೂ 2018ರಲ್ಲಿ ಈ ಸಾಧನೆಯನ್ನು ಮಾಡಿದ್ದಾರೆ.

'ಇಂಡಿಯಾ ಸಿಮೆಂಟ್ಸ್‌' ಹೆಸರು ತೋರಿಸಿ ಟ್ರೋಲ್‌ಗೆ ಗುರಿಯಾದ ಜಡೇಜಾ'ಇಂಡಿಯಾ ಸಿಮೆಂಟ್ಸ್‌' ಹೆಸರು ತೋರಿಸಿ ಟ್ರೋಲ್‌ಗೆ ಗುರಿಯಾದ ಜಡೇಜಾ

ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಕೆಎಲ್ ರಾಹುಲ್ ಈ ಆವೃತ್ತಿಯಲ್ಲಿ ಶ್ರೇಷ್ಠ ಪ್ರದರ್ಶನವನ್ನು ನೀಡಿಕೊಂಡು ಬಂದಿದ್ದಾರೆ. ಟೂರ್ನಿಯಲ್ಲಿ ಎಲ್ಲಾ 13 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ರಾಹುಲ್ ಈ ರೀತಿಯಾಗಿ ರನ್ ಗಳಿಸಿದ್ದಾರೆ. 21, 132*, 69, 17, 63, 11, 74, 61*, 77, 15, 27, 28 ಹಾಗೂ 46. ಲೀಗ್‌ನಲ್ಲಿ ಇನ್ನೂ ಒಂದು ಪಂದ್ಯ ಪಂಜಾಬ್ ಪಾಲಿಗೆ ಉಳಿದುಕೊಂಡಿದೆ.

Story first published: Saturday, October 31, 2020, 9:42 [IST]
Other articles published on Oct 31, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X