ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಭಿಮಾನಿಗೆ ಧೋನಿ ಬಗ್ಗೆ ಕೆಎಲ್ ರಾಹುಲ್ ಕೊಟ್ಟ ಉತ್ತರ ವಾಹ್!

IPL 2020: KL Rahul responds to a fan for comparing him with MS Dhoni

ಕಿಂಗ್ಸ್ ಎಲೆವನ್ ಪಂಜಾಬ್ ನಾಯಕ ಕೆಎಲ್ ರಾಹುಲ್ ಐಪಿಎಲ್ 2020ರಲ್ಲಿ ಏಳು ಬೀಳು ಕಂಡಿದ್ದು, ಆರಂಭದಿಂದಲೂ ಟ್ರೆಂಡ್ ನಲ್ಲಿದ್ದಾರೆ. ಕ್ರಿಕೆಟ್ ಫ್ಯಾನ್ಸ್ ಜೊತೆಗೂ ಸಮಯ ಸಿಕ್ಕಾಗಲೆಲ್ಲ ಟ್ವಿಟ್ಟರ್, ಇನ್ಸ್ಟಾಗ್ರಾಂ ಮೂಲಕ ಸಂವಹನ ನಡೆಸುತ್ತಾ ಬಂದಿದ್ದಾರೆ.

ಸತತ ಸೋಲಿನ ಬಳಿಕ ಕಿಂಗ್ಸ್ ಎಲೆವನ್ ಪಂಜಾಬ್ ತಂಡವನ್ನು ಗೆಲುವಿನ ದಡಕ್ಕೆ ತಂದಿರುವ ರಾಹುಲ್ ಅವರು ಬ್ಯಾಟ್ಸ್ ಮನ್, ವಿಕೆಟ್ ಕೀಪರ್, ನಾಯಕರಾಗಿ ಮಿಂಚುತ್ತಿದ್ದಾರೆ. ನಾಲ್ಕು ಬಾರಿ ಚಾಂಪಿಯನ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಎರಡು ಸೂಪರ್ ಓವರ್ ಆಡಿ ಗೆದ್ದಿರುವ ಸಂಭ್ರಮದಲ್ಲಿರುವ ರಾಹುಲ್ ಅವರು ಗೆಲುವಿನಿಂದ ಬೀಗಿಲ್ಲ, ಬಲಿಷ್ಠ ತಂಡವನ್ನು ಸೋಲಿಸಿದ್ದಕ್ಕೆ ಗರ್ವ ಪಟ್ಟಿಲ್ಲ.

ಪಾಪ! ಟೀಂ ಓನರ್ ಪ್ರೀತಿ ಜಿಂಟಾಗೆ ಎಷ್ಟು ಟೆನ್ಶನ್ ಕೊಡ್ತಿರೋ! ಪಾಪ! ಟೀಂ ಓನರ್ ಪ್ರೀತಿ ಜಿಂಟಾಗೆ ಎಷ್ಟು ಟೆನ್ಶನ್ ಕೊಡ್ತಿರೋ!

IPL 2020: KL Rahul responds to a fan for comparing him with MS Dhoni

9 ಪಂದ್ಯಗಳಿಂದ 525 ರನ್ ಗಳಿಸಿ ಆರೆಂಜ್ ಕ್ಯಾಪ್ ಧರಿಸಿರುವ ಕೆಎಲ್ ರಾಹುಲ್ ಅವರು ಮುಂಬೈ ವಿರುದ್ಧದ ಮೊದಲ ಸೂಪರ್ ಓವರ್ ಕೊನೆಗೆ ರನೌಟ್ ಮಾಡಿದ ರೀತಿ ನೋಡಿ ಹಲವಾರು ಫ್ಯಾನ್ಸ್ ನೀವು ನಮ್ಮ ತಲಾ(ಧೋನಿಗೆ ಹೋಲಿಸಿ) ನಾಯಕ ಎಂದು ಹೊಗಳಿದ್ದಾರೆ. ಆದರೆ, ಹೊಗಳಿಕೆಯನ್ನು ನಯವಾಗಿ ನಿರಾಕರಿಸಿ, ತಲಾ ಎಂದಿದ್ದರೂ ಒಬ್ಬರೇ ಎಂದು ರಾಹುಲ್ ಪ್ರತಿಕ್ರಿಯಿಸಿದ್ದಾರೆ.

 ರೋಮಾಂಚಕ ಪಂದ್ಯದಲ್ಲಿ ಕಂಡ ಸೂಪರ್ ಓವರ್ ಗರ್ಲ್ ಯಾರು? ರೋಮಾಂಚಕ ಪಂದ್ಯದಲ್ಲಿ ಕಂಡ ಸೂಪರ್ ಓವರ್ ಗರ್ಲ್ ಯಾರು?

''ಒಬ್ಬರೇ ತಲಾ ಇರೋದು, ಅದು ಯಾರು ಎಂಬುದು ಎಲ್ಲರಿಗೂ ತಿಳಿದಿದೆ'' ಎಂದು ರಾಹುಲ್ ತಮ್ಮ ಮಹಿಳಾ ಅಭಿಮಾನಿಯೊಬ್ಬರ ಟ್ವೀಟಿಗೆ ಉತ್ತರಿಸಿದ್ದಾರೆ.

ಐಪಿಎಲ್ 500+ ರನ್: ಕ್ರಿಸ್ ಗೇಲ್ ಸಮಕ್ಕೆ ನಿಂತ ಕೆಎಲ್ ರಾಹುಲ್ ಐಪಿಎಲ್ 500+ ರನ್: ಕ್ರಿಸ್ ಗೇಲ್ ಸಮಕ್ಕೆ ನಿಂತ ಕೆಎಲ್ ರಾಹುಲ್

ಡಿಕಾಕ್ ರನೌಟ್ ಪಂದ್ಯದ ಹೈಲೇಟ್ ಆಗಿದ್ದು, ಇದೇ ರನೌಟ್ ಏನಾದರೂ ಧೋನಿ ಮಾಡಿದ್ದರೆ ಅವರ ಫ್ಯಾನ್ಸ್ ಕೊಂಡಾಡುತ್ತಿದ್ದರು ಎಂದು ರಾಹುಲ್ ವಿಕೆಟ್ ಕೀಪಿಂಗ್ ಬಗ್ಗೆ ಹೆಚ್ಚಿನ ಪ್ರಶಂಸೆ ಸಿಕ್ಕಿಲ್ಲ ಎಂದು ಅಭಿಮಾನಿಯೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು ರಾಹುಲ್ ಅವರು ಧೋನಿಯಂತೆ ಸಕತ್ ಕೂಲ್ ಹೀಗಾಗಿ, ಅಭಿಮಾನಿಗೆ ಪ್ರತಿಕ್ರಿಯಿಸಿದ್ದಾರೆ ಎಂದಿದ್ದಾರೆ.

ಈ ಪಂದ್ಯದಲ್ಲಿ 51 ಎಸೆತಗಳಲ್ಲಿ 77ರನ್ ಬಾರಿಸಿದ್ದ ಕೆಎಲ್ ರಾಹುಲ್ ಅವರು ಸತತವಾಗಿ ಮೂರು ಸೀಸನ್ ನಲ್ಲಿ 500 ಪ್ಲಸ್ ರನ್ ಗಳಿಸಿದ ಏಕೈಕ ಆಟಗಾರ ಎಂಬ ಸಾಧನೆ ಮಾಡಿದ್ದಾರೆ.

Story first published: Tuesday, October 20, 2020, 17:35 [IST]
Other articles published on Oct 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X