ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಲ್ಲಿ ಪಾಕ್ ಆಟಗಾರ: ಅಲಿ ಬಗ್ಗೆ ನೀವು ತಿಳಿದಿರಬೇಕಾದ ಸಂಗತಿಗಳು!

IPL 2020: Know all about Ali Khan, first American player in IPL

ನವದೆಹಲಿ: ಮೂಲತಃ ಪಾಕಿಸ್ತಾನದಲ್ಲಿ ಜನಿಸಿರುವ, ಸದ್ಯ ಅಮೆರಿಕಾದಲ್ಲಿ ನೆಲೆಸಿರುವ ವೇಗಿ ಅಲಿ ಖಾನ್ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡಲು ಸಜ್ಜಾಗಿದ್ದಾರೆ. ಈ ಮೂಲಕ ಅಲಿ, ಐಪಿಎಲ್‌ನಲ್ಲಿ ಪಾಲ್ಗೊಂಡ ಮೊದಲ ಅಮೆರಿಕಾದ ಆಟಗಾರನಾಗಿ ಗುರುತಿಸಿಕೊಳ್ಳಲಿದ್ದಾರೆ. ಗಾಯಕ್ಕೀಡಾಗಿರುವ ಇಂಗ್ಲೆಂಡ್ ವೇಗಿ ಹ್ಯಾರಿ ಗರ್ನಿ ಬದಲಿಗೆ ಕೆಕೆಆರ್ ಖಾನ್‌ ಅವರನ್ನು ಹೆಸರಿಸಿದೆ. ಹ್ಯಾರಿ ಗರ್ನಿ ಮುಂದಿನ ತಿಂಗಳು ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರೆ.

ಮುಂಬೈ ಇಂಡಿಯನ್ಸ್ ವೇಳಾಪಟ್ಟಿ, ತಂಡದ ಪ್ಲಸ್-ಮೈನಸ್ ಅಂಶಗಳುಮುಂಬೈ ಇಂಡಿಯನ್ಸ್ ವೇಳಾಪಟ್ಟಿ, ತಂಡದ ಪ್ಲಸ್-ಮೈನಸ್ ಅಂಶಗಳು

ಶಸ್ತ್ರ ಚಿಕಿತ್ಸೆ ನಡೆಯಬೇಕಾಗಿರುವುದರಿಂದ ಗರ್ನಿ ಕೆಲ ತಿಂಗಳವರೆಗಾದರೂ ವಿಶ್ರಾಂತಿ ಪಡೆಯಬೇಕಿದೆ. ಆದ್ದರಿಂದ ಐಪಿಎಲ್ ಗವರ್ನಿಂಗ್ ಕೌನ್ಸಿಲ್ ಅನುಮತಿ ನೀಡಿದರೆ, ಪಾಕ್-ಅಮೆರಿಕಾ ವೇಗಿ ಅಲಿ ಖಾನ್ ಐಪಿಎಲ್‌ನಲ್ಲಿ ಮೈದಾನಕ್ಕಿಳಿಯಲಿದ್ದಾರೆ. ಅಲಿ ಖಾನ್ ಜನಿಸಿದ್ದು ಪಾಕಿಸ್ತಾನದ ಭಾಗವಾಗಿದ್ದ ಪಂಜಾಬ್‌ನ ಅಟ್ಟೋಕ್‌ನಲ್ಲಿ.

ಯುವರಾಜ್ ವಿಚಾರದಲ್ಲೂ ಬಿಸಿಸಿಐ ತಾಂಬೆ ನಿಯಮ ಅನುಸರಿಸುತ್ತಾ?!ಯುವರಾಜ್ ವಿಚಾರದಲ್ಲೂ ಬಿಸಿಸಿಐ ತಾಂಬೆ ನಿಯಮ ಅನುಸರಿಸುತ್ತಾ?!

ಅಲಿ ಖಾನ್ ತಾನು 18ನೇ ವಯಸ್ಸಿನಲ್ಲಿದ್ದಾಗ ತನ್ನ ಹೆತ್ತವರ ಜೊತೆಗೆ ಯುಎಸ್ ಸ್ಟೇಟ್‌ನ ಒಹಿಯೋಗೆ ಹೋದರು. ಅಲ್ಲಿಂದ ಖಾನ್ ಬೇರೆ ಬೇರೆ ಟಿ20 ಲೀಗ್‌ಗಳಲ್ಲಿ ಪಾಲ್ಗೊಳ್ಳತೊಡಗಿದರು.

ಜಾಗತಿಕ ಲೀಗ್‌ಗಳಲ್ಲಿ ಭಾಗಿ

ಜಾಗತಿಕ ಲೀಗ್‌ಗಳಲ್ಲಿ ಭಾಗಿ

ಟಿ20 ಲೀಗ್‌ಗಳಾದ ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್), ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ಗ್ಲೋಬಲ್ ಟಿ20, ಬಿಗ್‌ ಬ್ಯಾಷ್ ಲೀಗ್ ಇಂಥ ಜಾಗತಿಕ ಲೀಗ್‌ಗಳಲ್ಲಿ ಅಲಿ ಭಾಗವಹಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ 2020ರ ಸಿಪಿಎಲ್‌ನಲ್ಲಿ ಖಾನ್ ಟ್ರಿನ್‌ಬಾಗೊ ನೈಟ್ ರೈಡರ್ಸ್ ಪ್ರತಿನಿಧಿಸಿದ್ದರು.

ಸಿಪಿಎಲ್‌ನಲ್ಲಿ ಉತ್ತಮ ಪ್ರದರ್ಶನ

ಸಿಪಿಎಲ್‌ನಲ್ಲಿ ಉತ್ತಮ ಪ್ರದರ್ಶನ

ಸೆಪ್ಟೆಂಬರ್ 10ರ ಗುರುವಾರ ನಡೆದ ಸಿಪಿಎಲ್‌ ಫೈನಲ್ ಪಂದ್ಯದಲ್ಲಿ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡ ಸೇಂಟ್ ಲೂಸಿಯಾ ಝೌಕ್ಸ್ ವಿರುದ್ಧ 8 ವಿಕೆಟ್ ಜಯ ಗಳಿಸಿತ್ತು. ಟಿಕೆಆರ್ ಟ್ರೊಫಿ ಎತ್ತುವಲ್ಲಿ ಅಲಿ ಖಾನ್ ಕೂಡ ನೆರವಾಗಿದ್ದರು. ಫೈನಲ್ ಪಂದ್ಯದಲ್ಲಿ ಖಾನ್‌ ಎರಡು (ರೋಮನ್ ಕಾರ್ನ್‌ವಾಲ್ ಮತ್ತು ಝಹೀರ್ ಖಾನ್) ವಿಕೆಟ್ ಮುರಿದಿದ್ದರು.

ಕೆXIಪಿನಲ್ಲಿ ಆಡಿದ್ದ ಇನ್ನೊಬ್ಬ ಪಾಕ್ ಆಟಗಾರ

ಕೆXIಪಿನಲ್ಲಿ ಆಡಿದ್ದ ಇನ್ನೊಬ್ಬ ಪಾಕ್ ಆಟಗಾರ

ಪಾಕಿಸ್ತಾನ ಮೂಲದ ಅಝರ್ ಮಹಮೂದ್ ಎನ್ನುವ ಆಟಗಾರ ಈ ಹಿಂದೆ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಿದ್ದನ್ನು ನೀವು ಈ ಕ್ಷಣ ನೆನಪಿಸಿಕೊಳ್ಳಬಹುದು. ಐಪಿಎಲ್‌ನಲ್ಲಿ ಆಡಲು ಆಸೆಪಟ್ಟಿದ್ದ ಮಹಮೂದ್‌ಗೆ ಭಾರತ-ಪಾಕ್ ರಾಜಕೀಯ ಅಡ್ಡಗಾಲಿನಿಂದಾಗಿ ಐಪಿಎಲ್‌ನಲ್ಲಿ ಆಡಲಾಗಿರಲಿಲ್ಲ. ಆ ಬಳಿಕ ಮಹಮೂದ್ ಯುನೈಟೆಡ್ ಕಿಂಗ್‌ಡಮ್ ಪೌರತ್ವ ಪಡೆದು ಐಪಿಎಲ್‌ನಲ್ಲಿ ಪಾಲ್ಗೊಂಡಿದ್ದರು.

ವಾಲ್ಷ್ ಹೋಲಿಕೆಯ ಬೌಲಿಂಗ್

ವಾಲ್ಷ್ ಹೋಲಿಕೆಯ ಬೌಲಿಂಗ್

ಟಿ20 ಟೂರ್ನಿಗಳಲ್ಲಿ ಭಾಗವಹಿಸುವಾಗೆಲ್ಲ ಅಲಿ ಗಮನ ಸೆಳೆಯುತ್ತಿದ್ದಾರೆ. ಖಾನ್ ಬೌಲಿಂಗ್ ಶೈಲಿ ವೆಸ್ಟ್ ಇಂಡೀಸ್ ದಂತಕತೆ ಕರ್ಟ್ನಿ ವಾಲ್ಷ್ ಅವರನ್ನು ಹೋಲುತ್ತದೆ. ಇದೇ ಕಾರಣಕ್ಕೆ ಕೆಕೆಆರ್ 2020ರ ಸೀಸನ್‌ಗೆ ಅಲಿಯನ್ನು ತಂಡಕ್ಕೆ ಕರೆತರುವ ಯೋಚನೆ ಮಾಡಿದೆ. ಅಂದ್ಹಾಗೆ, ಟ್ರಿನ್‌ಬಾಗೋ ನೈಟ್ ರೈಡರ್ಸ್ ಫ್ರಾಂಚೈಸಿ ಕೋಲ್ಕತ್ತಾ ನೈಟ್ ರೈಡರ್ಸ್‌ನ ಸಹ ಫ್ರಾಂಚೈಸಿ.

ಖಾನ್ ವಿಕೆಟ್ ದಾಖಲೆಗಳು

ಖಾನ್ ವಿಕೆಟ್ ದಾಖಲೆಗಳು

2016ರಿಂದ ಅಮೆರಿಕಾದ ಪೌರತ್ವ ಪಡೆದಿರುವ ಅಲಿ ಖಾನ್ ಅದೇ ವರ್ಷ ಆಟಿ ಕಪ್‌ನಲ್ಲಿ ಪಾದಾರ್ಪಣೆ ಮಾಡಿದ್ದರು. ಕಳೆದ ವರ್ಷ ಪಾಪುವಾ ನ್ಯೂಗಿಯಾ ವಿರುದ್ಧ ಖಾನ್ ಯುಎಸ್‌ಎ ಪರ ಏಕದಿನದಲ್ಲಿ ಪಾದಾರ್ಪಣೆ ಮಾಡಿದ್ದರು. ಅಲಿ ಖಾನ್ 9 ಲಿಸ್ಟ್ ಎ ಪಂದ್ಯಗಳಲ್ಲಿ 23 ವಿಕೆಟ್ ಪಡೆದಿದ್ದಾರೆ. 36 ಟಿ20 ಪಂದ್ಯಗಳಲ್ಲಿ 38 ವಿಕೆಟ್ ದಾಖಲೆ ಹೊಂದಿದ್ದಾರೆ.

Story first published: Saturday, September 12, 2020, 17:55 [IST]
Other articles published on Sep 12, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X