ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ರಾಜಸ್ಥಾನ ಆಟಗಾರರ ಚುರುಕುತನ ಹಿಂದಿನ ಶಕ್ತಿ

IPL 2020: Know more about Rajasthan Royals physio Anuja Dalvi

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಅತ್ಯಂತ ಚುರುಕುತನದಿಂದ ಕೂಡಿದ ತಂಡವೆಂದರೆ ರಾಜಸ್ಥಾನ ರಾಯಲ್ಸ್ ಎನ್ನಬಹುದು. ತಂಡದ ಫೀಲ್ಡಿಂಗ್, ಬ್ಯಾಟ್ಸ್ ಮನ್ ಗಳ ಚುರುಕು ರನ್ ಕದಿಯುವ ವೇಗ, ಬಿರು ಬಿಸಿಲಿನಲ್ಲಿ ಬೌಲಿಂಗ್ ಮಾಡಿದರೂ ದಣಿಯದ ವೇಗಿಗಳ ಸಾಮರ್ಥ್ಯ ಹೀಗೆ ಒಟ್ಟಾರೆ, ರಾಜಸ್ಥಾನ್ ರಾಯಲ್ಸ್ ತಂಡದ ದೈಹಿಕ ಸಾಮರ್ಥ್ಯವನ್ನು ಕಾಪಾಡುತ್ತಿರುವುದು ಯಾರು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ಆರ್ ಸಿಬಿಯ ಡಗೌಟ್ ನಲ್ಲಿ ಕಾಣಿಸಿಕೊಂಡ ಯುವತಿ ಬಗ್ಗೆ ಎಲ್ಲರಿಗೂ ಈಗ ತಿಳಿದಿದೆ. ಆರ್ ಸಿಬಿಯ ಮಸಾಜ್ ಥೆರಪಿಸ್ಟ್ ರಂತೆ ರಾಜಸ್ಥಾನ ತಂಡಕ್ಕೆ ಫಿಸಿಯೋ ಥೆರಸಿಪ್ಟ್ ಆಗಿ ಅನುಜಾ ದಳವಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದಾ ಹಸನ್ಮುಖಿ ಅನುಜಾ ತಂಡ ಪ್ರೇರಕ ಶಕ್ತಿಯಾಗಿದ್ದಾರೆ.

RCB ಡಗೌಟ್ ವಿಶೇಷ: ಅರೆ! ಯಾರಿವಳು ಯಾರಿವಳು ಚಂಗನೆದ್ದು ಕುಣಿವವಳುRCB ಡಗೌಟ್ ವಿಶೇಷ: ಅರೆ! ಯಾರಿವಳು ಯಾರಿವಳು ಚಂಗನೆದ್ದು ಕುಣಿವವಳು

ಕಳೆದ ಆಗಸ್ಟ್ ತಿಂಗಳಿನಿಂದಲೇ ತಂಡದೊಡನೆ ಇರುವ ದಳವಿ ಅವರು ಮುಖ್ಯವಾಗಿ ಯುಎಇಯ ಬಿಸಿಲಿನ ತಾಪಕ್ಕೆ ಹೊಂದಿಕೊಂಡು ದೇಹ ಸಾಮರ್ಥ್ಯವನ್ನು ಉಳಿಸಿಕೊಳ್ಳುವ ಬಗ್ಗೆ ಟಿಪ್ಸ್ ನೀಡಿದ್ದಾರೆ. ಐಪಿಎಲ್ ನಲ್ಲಿ ಮಹಿಳಾ ಸಿಬ್ಬಂದಿ ಇರುವುದು ತೀರಾ ಕಡಿಮೆ ಆರ್ ಸಿಬಿಯ ನವನೀತಾ ಬಿಟ್ಟರೆ ಅನುಜಾ ದಳವಿ ತಕ್ಕಮಟ್ಟಿನ ಜನರಿಗೆ ಗೊತ್ತಿದೆ ಅಷ್ಟೆ. ಆದರೆ, ಅನುಜಾ ಹಾಗೂ ನವನೀತಾ ಇಬ್ಬರು ಬಹುಬೇಡಿಕೆಯ ಥೆರಪಿಸ್ಟ್ ಗಳು.

ಹೆಸರಾಂತ ಫಿಸಿಯೋಗಳ ಸಾಲಿನಲ್ಲಿ ಅನುಜಾ

ಹೆಸರಾಂತ ಫಿಸಿಯೋಗಳ ಸಾಲಿನಲ್ಲಿ ಅನುಜಾ

ಕ್ರಿಕೆಟ್ ಲೋಕದಲ್ಲಿ ಅನುಭವಿ ಫಿಸಿಯೋಥೆರಪಿಸ್ಟ್ ಗಳಾದ ಜಾನ್ ಗ್ಲೋಸ್ಟರ್, ಟೀಂ ಇಂಡಿಯಾದ ಮಾಜಿ ಥೆರಪಿಸ್ಟ್ ಗಳಾದ ಆಂಡ್ರ್ಯೂ ಲಿಪಸ್ ಅಥವಾ ಶಂಕರ್ ಅವರ ನಂತರದ ಸಾಲಿನಲ್ಲಿ ಅನುಜಾ ನಿಲ್ಲುತ್ತಿದ್ದಾರೆ. Musculoskeletal ಹಾಗೂ ಕ್ರೀಡಾ ಫಿಜಿಯೋಥೆರಪಿಯಲ್ಲಿ ಸ್ನಾತಕೋತ್ತರ ಪದವಿ ಹೊಂದಿದ್ದಾರೆ. ಆಸ್ಟ್ರೇಲಿಯಾ ಅಡಿಲೇಡ್ ವಿವಿ ಹಾಗೂ ಮುಂಬೈನ ಕೆಇಎಂ ಆಸ್ಪತ್ರೆ ಕಾಲೇಜಿನಲ್ಲಿ ವ್ಯಾಸಂಗ, ತರಬೇತಿ ಪಡೆದಿರುವ ಅನುಜಾ ವೃತ್ತಿಪರ ಫಿಸಿಯೋಥೆರಪಿಸ್ಟ್. ಅಂತಾರಾಷ್ಟ್ರೀಯ ಟೇಬಲ್ ಟೆನಿಸ್, ಬಾಡ್ಮಿಂಟನ್, ಟೆನಿಸ್, ಶೂಟಿಂಗ್, ಜಿಮ್ನಾಸ್ಟಿಕ್, ಒಲಿಂಪಿಕ್ಸ್ ಹಾಗೂ ಪ್ಯಾರಾ ಅಥ್ಲೀಟ್ಸ್ ಗಳನ್ನು ನಿರ್ವಹಿಸಿದ ಅನುಭವವನ್ನು ಅನುಜಾ ಹೊಂದಿದ್ದಾರೆ.

11 ವರ್ಷಗಳ ಅನುಭವ ಹೊಂದಿರುವ ಅನುಜಾ

11 ವರ್ಷಗಳ ಅನುಭವ ಹೊಂದಿರುವ ಅನುಜಾ

11 ವರ್ಷಗಳ ಅನುಭವ ಹೊಂದಿರುವ ಅನುಜಾ ಅವರು ಬಿಸಿಸಿಐನಿಂದ ಮೊದಲಿಗೆ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಕಾರ್ಯ ನಿರ್ವಹಿಸಿದ್ದರು ನಂತರ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಪರ ಯಶಸ್ವಿಯಾಗಿ ಟೂರ್ ಮುಗಿಸಿದ್ದಾರೆ. ಆದರೆ ಐಪಿಎಲ್ ತಮ್ಮ ವೃತ್ತಿಯಲ್ಲೇ ಅತ್ಯಂತ ಸವಾಲಿನ ಕೆಲಸ ಎಂದಿದ್ದಾರೆ.

ರಾಜಸ್ಥಾನದ ಫೀಲ್ಡಿಂಗ್ ಕೋಚ್ ಕೊವಿಡ್ ಸೋಂಕಿತ

ರಾಜಸ್ಥಾನದ ಫೀಲ್ಡಿಂಗ್ ಕೋಚ್ ಕೊವಿಡ್ ಸೋಂಕಿತ

ರಾಜಸ್ಥಾನದ ಫೀಲ್ಡಿಂಗ್ ಕೋಚ್ ದಿಶಾಂತ್ ಯಾಗ್ನಿಕ್ ಅವರಿಗೆ ಕೊವಿಡ್ ಸೋಂಕಿತ ತಗುಲಿರುವುದು ತಂಡಕ್ಕೆ ಹಿನ್ನಡೆಯಾಗಿತ್ತು. ಇಂಥ ಸಂದರ್ಭದಲ್ಲಿ ತಂಡದ ಜೊತೆಗೆ ಯುಎಇಗೆ ತೆರಳುವುದು ಅನುಜಾಗೆ ಅನಿವಾರ್ಯ ಹಾಗೂ ಜವಾಬ್ದಾರಿಯ ಕೆಲಸವಾಗಿತ್ತು. ಆದರೆ, ಸೆಪ್ಟೆಂಬರ್ ತಿಂಗಳಿನಿಂದ ಯಾಗ್ನಿಕ್ ಮತ್ತೆ ತಂಡವನ್ನು ಸೇರಿಕೊಂಡಿದ್ದು ತಂಡಕ್ಕೆ ಹೆಚ್ಚಿನ ಬಲ ತಂದಿದೆ. ಜಾನ್ ಗ್ಲೋಸ್ಟರ್ ಹಾಗೂ ನಾನು ಸದಾ ಕಾಲ ಯಾಗ್ನಿಕ್ ಅವರ ಕ್ವಾರಂಟೈನ್ ಅವಧಿಯಲ್ಲಿ ತೆಗೆದುಕೊಳ್ಳಬೇಕಾದ ದೈಹಿಕ ಸುರಕ್ಷತೆ, ವ್ಯಾಯಾಮದ ಬಗ್ಗೆ ಮಾತನಾಡುತ್ತಿದ್ದೇವೆ ಎಂದಿದ್ದಾರೆ.

ಕೊವಿಡ್ ಟಾಸ್ಕ್ ಫೋರ್ಸ್

ಕೊವಿಡ್ ಟಾಸ್ಕ್ ಫೋರ್ಸ್

ಯಾಗ್ನಿಕ್ ಅವರ ಪ್ರಕರಣದ ನಂತರ ರಾಜಸ್ಥಾನ್ ರಾಯಲ್ಸ್ ತಂಡವನ್ನು ಕೋವಿಡ್ ನಿಂದ ರಕ್ಷಿಸುವ ಕೋವಿಡ್ ಟಾಸ್ಕ್ ಫೋರ್ಸ್ ಜವಾಬ್ದಾರಿಯನ್ನು ನಾನೇ ಹೊತ್ತುಕೊಳ್ಳಬೇಕಾಯಿತು. ಐಎಂಜಿ ಪಿಎಲ್, ಪ್ರೊ ಕಬಡ್ಡಿ ಲೀಗ್ ನಲ್ಲಿ ಇಂಥ ಕ್ವಾರಂಟೈನ್ ವ್ಯವಸ್ಥೆಯನ್ನು ನಿಭಾಯಿಸಿದ್ದೆ. ಆದರೆ ಕೊವಿಡ್ ಸಂದರ್ಭದಲ್ಲಿ ಬಯೋ ಬಬ್ಬಲ್, ಕ್ರಿಕೆಟರ್ ಗಳನ್ನು ನಿಭಾಯಿಸುವುದು ಸುಲಭವಾಗಿರಲಿಲ್ಲ, ಟೀಂ ಫಿಸಿಯೋ, ಕೊವಿಡ್ ಟಾಸ್ಕ್ ಫೋರ್ಸ್ ಹೊಣೆ ನಿಭಾಯಿಸಲು ನನ್ನ ಪತಿ ನಿರಂಜನ್ ಪಂಡಿತ್, ರಾಯಲ್ಸ್ ತಂಡದ ಡಾ. ರಾಬರ್ಟ್ ಯಂಗ್ ಕೂಡಾ ನೆರವಾದರು ಎಂದು 34ವರ್ಷ ವಯಸ್ಸಿನ ಅನುಜಾ ವಿವರಿಸಿದ್ದಾರೆ.

ಲಿಂಗ ತಾರತಮ್ಯ ಸಮಸ್ಯೆ ಎದುರಿಸಿದ್ರಾ?

ಲಿಂಗ ತಾರತಮ್ಯ ಸಮಸ್ಯೆ ಎದುರಿಸಿದ್ರಾ?

ಕ್ರೀಡಾ ಲೋಕದಲ್ಲಿ ಕ್ರಿಕೆಟ್ ನಲ್ಲಿ ಮಾತ್ರ ಮಹಿಳಾ ಫಿಸಿಯೋ ಥೆರಪಿಸ್ಟ್ ಗಳು ವಿರಳ. ಮಿಕ್ಕಂತೆ ಬೇರೆ ಕ್ರೀಡೆಗಳಲ್ಲಿ ಕಾಮನ್. ಹೀಗಾಗಿ ಹೆಚ್ಚು ವ್ಯತ್ಯಾಸ ಎನಿಸಲಿಲ್ಲ. ಕ್ರಿಕೆಟ್ ವೃತ್ತಿಪರ ಕ್ರೀಡೆಯಾಗಿದ್ದು, ಎಲ್ಲರಿಗೂ ತಮ್ಮ ಜವಾಬ್ದಾರಿ ಬಗ್ಗೆ ಅರಿವಿದೆ. ವೃತ್ತಿಪರತೆ ಇದ್ದರೆ ಯಾವ ಸಮಸ್ಯೆಯೂ ಇರುವುದಿಲ್ಲ. ರಾಯಲ್ಸ್ ತಂಡದಲ್ಲಿ ಇಲ್ಲಿ ತನಕ ಯಾವುದೇ ಸಮಸ್ಯೆಯಾಗಿಲ್ಲ, ಎನ್ ಸಿಎ, ಬಿಸಿಸಿಐ, ಎಂಸಿಎ ಜೊತೆ ಕಾರ್ಯ ನಿರ್ವಹಿಸಿದ್ದರಿಂದ ಇಲ್ಲಿ ಆಡುವ ಅನೇಕ ಮಂದಿಯನ್ನು ಚೆನ್ನಾಗಿ ಬಲ್ಲೆ ಎಂದು ಅನುಜಾ ಹೇಳಿದರು.

Story first published: Tuesday, October 6, 2020, 14:52 [IST]
Other articles published on Oct 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X